• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಕೊರೊನಾ ಸಾಂಕ್ರಾಮಿಕದ ಬಳಿಕ ಅಗತ್ಯವಾಗಿ ಇರಲೇಬೇಕಾದ 4 ವಿಧದ ಇನ್ಶೂರೆನ್ಸ್​​ಗಳಿವು!

ಕೊರೊನಾ ಸಾಂಕ್ರಾಮಿಕದ ಬಳಿಕ ಅಗತ್ಯವಾಗಿ ಇರಲೇಬೇಕಾದ 4 ವಿಧದ ಇನ್ಶೂರೆನ್ಸ್​​ಗಳಿವು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದುಬಾರಿ ಚಿಕಿತ್ಸಾ ವೆಚ್ಚದ ಕಾರಣ ಖಾಸಗಿ ಆರೋಗ್ಯ ವಿಮೆಯನ್ನು ಹೆಚ್ಚಾಗಿ ಜನರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೇವಲ ಆರೋಗ್ಯವಷ್ಟೇ ಅಲ್ಲದೇ ಇತರೆ ವಿಮಾ ಪಾಲಿಸಿಗಳು ಮತ್ತು ಬೇರೆ ಬೇರೆ ರೀತಿಯ ಕವರೇಜ್​ಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಅಷ್ಟೇ ಅಲ್ಲದೇ ವ್ಯಾಪಾರದಲ್ಲಿ ನಷ್ಟ, ಆಸ್ತಿ ವಿಮಾ ಪಾಲಿಸಿ ಸೇರಿದಂತೆ ಇನ್ನಿತರ ಪಾಲಿಸಿಗಳ ಬಗ್ಗೆಯೂ ಜನರು ಇಂದು ಕಾಳಜಿವಹಿಸುತ್ತಿದ್ದಾರೆ.

ಮುಂದೆ ಓದಿ ...
  • Share this:

ಕೊರೊನಾ ಎಲ್ಲರ ಬದುಕನ್ನು ಬದಲಿಸಿದೆ. ಹಿಂದೆಂದಿಗಿಂತಲೂ ಈಗ ಭವಿಷ್ಯದ ಭದ್ರತೆಯ ಬಗ್ಗೆ ಜನರು ಹೆಚ್ಚು ಯೋಚಿಸತೊಡಗಿದ್ದಾರೆ. ಆರೋಗ್ಯ ವಿಮೆಯನ್ನು ಕಡೆಗಣಿಸಿದ್ದ ಬಹುತೇಕರು ಇಂದು ದುಂಬಾಲು ಬಿದ್ದು ವಿಮಾ ಪಾಲಿಸಿ ತೆಗೆದುಕೊಳ್ಳುತ್ತಿದ್ದಾರೆ.


ಕೋವಿಡ್19 ಸಾಂಕ್ರಾಮಿಕ ರೋಗವು ಭಾರತದ ಆರೋಗ್ಯ ವಿಮಾ ಉದ್ಯಮಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ಕೋವಿಡ್19 ಕಾರಣದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುವುದು ಸಾಮಾನ್ಯವಾಗಿದೆ. ಅಲ್ಲಿನ ದುಬಾರಿ ಚಿಕಿತ್ಸಾ ವೆಚ್ಚದ ಕಾರಣ ಖಾಸಗಿ ಆರೋಗ್ಯ ವಿಮೆಯನ್ನು ಹೆಚ್ಚಾಗಿ ಜನರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೇವಲ ಆರೋಗ್ಯವಷ್ಟೇ ಅಲ್ಲದೇ ಇತರೆ ವಿಮಾ ಪಾಲಿಸಿಗಳು ಮತ್ತು ಬೇರೆ ಬೇರೆ ರೀತಿಯ ಕವರೇಜ್​ಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಅಷ್ಟೇ ಅಲ್ಲದೇ ವ್ಯಾಪಾರದಲ್ಲಿ ನಷ್ಟ, ಆಸ್ತಿ ವಿಮಾ ಪಾಲಿಸಿ ಸೇರಿದಂತೆ ಇನ್ನಿತರ ಪಾಲಿಸಿಗಳ ಬಗ್ಗೆಯೂ ಜನರು ಇಂದು ಕಾಳಜಿವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೋವಿಡ್ 19 ಸಾಂಕ್ರಾಮಿಕದ ನಂತರ ಹೆಚ್ಚು ಪ್ರಚಲಿತದಲ್ಲಿರುವ ವಿಮಾ ಪಾಲಿಸಿಗಳ ವಿವರ ಇಲ್ಲಿದೆ ನೋಡಿ.


ಗೃಹ ವಿಮೆ


ವಿಪತ್ತು ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಗ್ರಾಹಕರು ಆಕಸ್ಮಿಕವಾಗಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ನಷ್ಟದಿಂದ ತಮ್ಮನ್ನು ಕಾಪಾಡಿಕೊಳ್ಳಲು ಗೃಹ ವಿಮೆ ಮೊರೆ ಹೋಗುತ್ತಿದ್ದಾರೆ. ತಜ್ಞರ ಪ್ರಕಾರ, ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಾಕೃತಿ ವಿಪತ್ತುಗಳು ಹೆಚ್ಚಾಗುತ್ತಿದೆ. ಇದರಿಂದ ಜನರು ಸಾಕಷ್ಟು ಅನಿಶ್ಚಿತತೆ ಜೊತೆಗೆ ನಷ್ಟವನ್ನು ಕೂಡ ಅನುಭವಿಸುತ್ತಿದ್ದಾರೆ.


ಬಳಕೆ ಆಧಾರಿತ ವಿಮಾ ಪಾಲಿಸಿ


ಕೊರೊನಾ ವೈರಸ್​ನ ಬೆಳವಣಿಗೆಯ ನಂತರ ವಿಮಾ ಕಂಪನಿಗಳು ಗ್ರಾಹಕರಿಗೆ ಮೋಟಾರ್​ ವಿಮೆ ಆಧರಿಸಿ ‘ಪೇ ಆ್ಯಸ್ ಯು ಡ್ರೈವ್’ ಎನ್ನುವ ನೀತಿಗಳನ್ನು ಪರಿಚಯಿಸುತ್ತಿವೆ. ಕಾರುಗಳನ್ನು ಎಷ್ಟು ಕಿ.ಮೀ ತನಕ ಓಡಿಸಲಾಗಿದೆ ಎನ್ನುವುದನ್ನು ಆಧರಿಸಿ ಗ್ರಾಹಕರಿಗೆ ಪ್ರೀಮಿಯಂ ಪಾವತಿಸಲು ಅನುವು ಮಾಡಿಕೊಡುತ್ತದೆ.


ಇದು ಹೆಚ್ಚು ವಾಹನ ಹೊಂದಿರುವ ಮತ್ತು ನಿತ್ಯ ವಾಹನ ಬಳಸದಿರುವ ಮಾಲೀಕರಿಗೆ ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ಅವರು ದೊಡ್ಡ ಪ್ರೀಮಿಯಂ ಹಣವನ್ನು ಕಟ್ಟಬೇಕಾಗಿಲ್ಲ. ಒಂದು ವೇಳೆ ನೀವು ಹೆಚ್ಚಾಗಿ ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿದ್ದರೆ, ವೈದ್ಯಕೀಯ ಕಾರಣಗಳಿಗಾಗಿ ನಿಮ್ಮ ವಾಹವನ್ನು ಕಡಿಮೆ ಬಳಸುತ್ತಿದ್ದರೆ, ಈ ಯೋಜನೆ ನಿಮ್ಮ ವಾಹನ ವಿಮೆಯ ವೆಚ್ಚವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಜನರು ಈಗ ಸೋಂಕಿನ ಭಯದಿಂದ ಸಾರ್ವಜನಿಕ ಸಾರಿಗೆಯನ್ನು ಆರಿಸಿಕೊಳ್ಳುವ ಬದಲು ತಮ್ಮ ವಾಹನದಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಿದ್ದಾರೆ. ಇದರ ಅನ್ವಯ ವಿಮೆಯನ್ನು ಆರಿಸಿಕೊಳ್ಳುತ್ತಿದ್ದಾರೆ.


ಬೈಟ್ ಸೈಜ್ ವಿಮೆ


ಮ್ಯೂಟ್ ಸೇಲ್ಸ್ ಮತ್ತು ಕಡಿಮೆ ಪ್ರೀಮಿಯಂ ವಿಮಾ ಕಂಪನಿಗಳು ಎಫ್‌ಎಂಸಿಜಿ ಪ್ಲೇ ಬುಕ್‌ನಿಂದ ಹೆಚ್ಚಿನ ಜನರನ್ನು ಸೆಳೆಯಲು ಕಡಿಮೆ ಪ್ರೀಮಿಯಂಗಳಲ್ಲಿ ಸ್ಯಾಚೆಟ್ ಗಾತ್ರದ ವಿಮಾ ಪಾಲಿಸಿ ಪರಿಚಯಿಸುತ್ತಿವೆ. ಈಗಾಗಲೇ ಕಂಪನಿಯು ವೆಕ್ಟರ್‌ನಿಂದ ಹರಡುವ ಡೆಂಗ್ಯೂ ಮತ್ತು ಮಲೇರಿಯಾ ರೋಗಗಳನ್ನು ಕವರ್ ಮಾಡುತ್ತಿದೆ.


ಕ್ರೆಡಿಟ್ ಕಾರ್ಡ್ ರಕ್ಷಣೆ, ವಿಮಾನ ವಿಳಂಬ, ಕ್ರೀಡೆಯಲ್ಲಿ ಭಾಗಿಯಾಗಿದ್ದಾಗ ಉಂಟಾಗುವ ಅಪಘಾತ, ಜಿಮ್‌, ಪಟಾಕಿ ಅಪಘಾತ, ತುರ್ತು ಆಸ್ಪತ್ರೆಯ ನಗದು, ಸೈಬರ್ ಭದ್ರತೆಗಾಗಿ ಕಂಪನಿಗಳು ಯಶಸ್ವಿಯಾಗಿ ನಾನಾ ರೀತಿಯ ಕವರೇಜ್​ಗಳನ್ನು 200 ರೂ. ಗಿಂತ ಕಡಿಮೆ ಪ್ರೀಮಿಯಂನಲ್ಲಿ​​ ಮಾರಾಟ ಮಾಡುತ್ತಿವೆ. ಸಮಗ್ರ ವಿಮಾ ರಕ್ಷಣೆಗೆ ಹೋಲಿಸಿದರೆ, ಈ ಪಾಲಿಸಿಗಳು ಕೆಲವು ನಿರ್ದಿಷ್ಟ ಆಗತ್ಯ ಮತ್ತು ಪರಿಸ್ಥಿತಿಗಳಿಗಾಗಿ ಮಾಡಲಾಗಿದ್ದು, ಕವರೇಜ್​ ಕಡಿಮೆ ಇರುತ್ತದೆ.


ಸೈಬರ್ ವಿಮೆ
ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಕಚೇರಿ ಕಾರ್ಯವನ್ನು ಮಾಡುತ್ತಿರುವುದು ಈಗ ಸಾಮಾನ್ಯವಾಗಿದೆ. ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು ಸೈಬರ್​​ ಕಳ್ಳತನದ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ. ಹೆಚ್ಚಿನವರು ಡೇಟಾ ಸಮಸ್ಯೆ ಮತ್ತು ಡೇಟಾ ಹ್ಯಾಕ್​ನಂತಹ ಅಪಾಯವನ್ನು ತಡೆಗಟ್ಟಲು ಸೈಬರ್ ವಿಮೆಯ ಮೊರೆ ಹೋಗುತ್ತಿದ್ದಾರೆ.


ಸೈಬರ್​ ಖದೀಮರು ಡೇಟಾ ಖದಿಯಲು ಮತ್ತು ಕಂಪನಿಯ ಹಣವನ್ನು ಸುಲಿಗೆ ಮಾಡಲು ಕೆಲವು ಸೂಕ್ಷ್ಮ ಮಾಹಿತಿಯನ್ನು ಪಡೆದು ಹಣ ಕೊಳ್ಳೆ ಹೊಡೆಯುವ ಆಲೋಚನೆಯಲ್ಲಿದ್ದಾರೆ ಎಂದು ಉದ್ಯಮದ ತಜ್ಞರು ಹೇಳುತ್ತಾರೆ. ಇನ್ನು ಲಾಕ್​ಡೌನ್​ ಸಮಯದಲ್ಲಿ ದೊಡ್ಡ ದೊಡ್ಡ ಕಾರ್ಪೊರೇಟ್​ ಕಂಪನಿಗಳನ್ನು ಈ ವಿಷಯಕ್ಕಾಗಿ ಟಾರ್ಗೆಟ್​ ಮಾಡಲಾಗಿತ್ತು ಎಂದು ಉದ್ಯಮದ ಟ್ರ್ಯಾಕರ್ಸ್​ ಹೇಳುತ್ತಾರೆ. ಐಡೆಂಟಿಟಿ ಥೆಫ್ಟ್​, ಮಾಲ್​ವೇರ್ ದಾಳಿ ಮತ್ತು ಸೈಬರ್ ಆಕ್ರಮಣ, ಇ- ಮೇಲ್ ವಂಚನೆ ಪ್ರಕರಣ, ಐಟಿ ಕಳ್ಳತನ ಇದರಿಂದ ಉಂಟಾಗುವ ನಷ್ಟವನ್ನು ಭರಿಸಲು ಸೈಬರ್​ ಇನ್ಶೂರೆನ್ಸ್​ ಈಗ ಹೆಚ್ಚು ಚಾಲ್ತಿಯಲ್ಲಿದೆ.

Published by:Soumya KN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು