Death Stalker Scorpion: ಈ ಮನೆಯೊಳಗೆ ಸಾವಿರಾರು ವಿಷಕಾರಿ ಚೇಳುಗಳು ಸೇರಿಕೊಂಡಿವೆ, ಮೈ ಜುಂ ಎನಿಸೋ ವಿಡಿಯೋ ನೋಡಿ!

ಸಾವಿರಾರು ಚೇಳುಗಳಿಂದ ತುಂಬಿದ ಮನೆಯನ್ನು ತೋರಿಸುವ ಈ ವೀಡಿಯೋ ಈಗ ಇಂಟರ್ನೆಟ್ ನಲ್ಲಿ ದೊಡ್ಡ ಬಿರುಗಾಳಿಯನ್ನೆ ಎಬ್ಬಿಸಿದೆ ಎಂದು ಹೇಳಬಹುದು. ಸಾಮಾಜಿಕ ಮಾಧ್ಯಮವಾದ ರೆಡ್ಡಿಟ್ ನಲ್ಲಿ ಹಂಚಿ ಕೊಳ್ಳಲಾದ 16 ಸೆಕೆಂಡಿನ ಕ್ಲಿಪ್ ನಲ್ಲಿ ಸಾವಿರಾರು ಅಕಶೇರುಕಗಳು ಮನೆಯ ಒಳಗಡೆ ಸ್ವಲ್ಪವೂ ಜಾಗ ಬಿಡದೆ ತೆವಳುತ್ತಿರುವುದನ್ನು ಇದರಲ್ಲಿ ನೋಡಬಹುದು

ಚೇಳು

ಚೇಳು

  • Share this:
ನಾವು ಚಿಕ್ಕವರಾಗಿದ್ದಾಗ ಏನಾದರೂ ಭಯ ಬೀಳುವಂತಹ ಕತೆಗಳನ್ನು ಓದಿದರೆ ಅಥವಾ ದಿನದಲ್ಲಿ ನಾವು ಯಾವುದಾದರೂ ಭಯಾನಕವಾದ ಚಲನಚಿತ್ರವನ್ನು (Movie) ನೋಡಿದರೆ, ನಮಗೆ ರಾತ್ರಿ (Night) ಮಲಗಿದ್ದಾಗ ಅದೇ ಕಥೆಯ ಮತ್ತು ಚಿತ್ರದ ದೃಶ್ಯಗಳು ಭಯಾನಕ ಕನಸಿನ (Dream) ರೂಪದಲ್ಲಿ ಬಿದ್ದು, ಒಂದು ಕ್ಷಣ ಬೆಚ್ಚಿ ಬೀಳುತ್ತೇವೆ. ಆ ಭಯಾನಕ ಕನಸಿನಲ್ಲಿ ನಮಗೆ ಯಾವುದೋ ನಿರ್ಜನ ಪ್ರದೇಶದಲ್ಲಿ ಯಾರೋ ಬಂದ ಹಾಗೆ, ಪ್ರಾಣಿಗಳೆಲ್ಲಾ (Animal) ನಮ್ಮ ಕಡೆಗೆ ಜೋರಾಗಿ ನಮ್ಮ ಮೇಲೆ ದಾಳಿ ಮಾಡಲು ಬರುವ ಹಾಗೆ, ಹಾವುಗಳ ಗುಂಪೊಂದು ನಮ್ಮ ಕಣ್ಣು ಮುಂದೆ ಬಂದ ಹಾಗೆ ಅಥವಾ ಯಾವುದೋ ಚಲನಚಿತ್ರದ ಭಯಾನಕ (Horrible) ದೃಶ್ಯದಲ್ಲಿ ನಾವು ಅಪಾಯದಲ್ಲಿರುವಂತೆ ಹೀಗೆ ಹತ್ತು ಹಲವು ಭಯಾನಕ ಕನಸುಗಳು ನಮಗೆ ಚಿಕ್ಕವರಾಗಿದ್ದಾಗ ಬೀಳುವುದನ್ನು ನಾವು ನೋಡಿರುತ್ತೇವೆ.

ಭಯಾನಕವಾದ ಮತ್ತು ಬೆಚ್ಚಿ ಬೀಳಿಸುವಂತಹ ದೃಶ್ಯ
ಇದೆಲ್ಲಾ ಈಗೇಕೆ ನಿಮಗೆ ಹೇಳುತ್ತಿದ್ದೇವೆ ನಾವು ಅಂತ ನಿಮಗೆ ಸ್ವಲ್ಪ ಆಶ್ಚರ್ಯ ಆಗುವುದುಂಟು. ಇಲ್ಲಿ ಒಂದು ವೀಡಿಯೋದಲ್ಲಿ ಒಂದು ಭಯಾನಕವಾದ ಮತ್ತು ಬೆಚ್ಚಿ ಬೀಳಿಸುವಂತಹ ದೃಶ್ಯವೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದು ನಿಜಕ್ಕೂ ನಡೆದಿರುವುದೇ ಅಥವಾ ಯಾವುದಾದರೂ ವ್ಯಕ್ತಿಗೆ ರಾತ್ರಿ ಮಲಗಿದ್ದಾಗ ಬಿದ್ದ ಭಯಾನಕ ದುಃಸ್ವಪ್ನವೇ ಎಂದು ನಿಮಗೆ ಗೊಂದಲವಾಗುವುದಂತೂ ನಿಜ.

ಹೌದು.. ಸಾವಿರಾರು ಚೇಳುಗಳಿಂದ ತುಂಬಿದ ಮನೆಯನ್ನು ತೋರಿಸುವ ಈ ವೀಡಿಯೋ ಈಗ ಇಂಟರ್ನೆಟ್ ನಲ್ಲಿ ದೊಡ್ಡ ಬಿರುಗಾಳಿಯನ್ನೆ ಎಬ್ಬಿಸಿದೆ ಎಂದು ಹೇಳಬಹುದು. ಸಾಮಾಜಿಕ ಮಾಧ್ಯಮವಾದ ರೆಡ್ಡಿಟ್ ನಲ್ಲಿ ಹಂಚಿ ಕೊಳ್ಳಲಾದ 16 ಸೆಕೆಂಡಿನ ಕ್ಲಿಪ್ ನಲ್ಲಿ ಸಾವಿರಾರು ಅಕಶೇರುಕಗಳು ಮನೆಯ ಒಳಗಡೆ ಸ್ವಲ್ಪವೂ ಜಾಗ ಬಿಡದೆ ತೆವಳುತ್ತಿರುವುದನ್ನು ಇದರಲ್ಲಿ ನೋಡಬಹುದು.

ಇದನ್ನೂ ಓದಿ: Viral Photo: ಇದು ಕೊಚ್ಚೆ ಅಂಟಿಕೊಂಡ ಹರಿದ ಶೂ ಅಲ್ಲ! ಲಕ್ಷ ಬೆಲೆ ಬಾಳುವ ಬ್ರಾಂಡೆಡ್​ ಶೂ

ಈ ಭಯಾನಕ ವೀಡಿಯೋದ ಮೂಲ ಅಥವಾ ಅದನ್ನು ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಕ್ಲಿಪ್ ಖಂಡಿತವಾಗಿಯೂ ಇಂಟರ್ನೆಟ್ ಬಳಕೆದಾರರನ್ನು ಭಯ ಭೀತರನ್ನಾಗಿಸಿದಂತೂ ಸುಳ್ಳಲ್ಲ. ಈ ಪೋಸ್ಟ್ 33,000ಕ್ಕೂ ಹೆಚ್ಚು ಅಪ್ ವೋಟ್ಸ್ ಗಳನ್ನು ಪಡೆದಿದೆ ಮತ್ತು 1,900ಕ್ಕೂ ಹೆಚ್ಚು ಕಾಮೆಂಟ್ ಗಳು ಬಂದಿವೆ. ಒಟ್ಟಿನಲ್ಲಿ ನೆಟ್ಟಿಗರು ಈ ದೃಶ್ಯವನ್ನು ನೋಡಿ ಇದು "ದುಃಸ್ವಪ್ನದ ವಿಷಯ" ಎಂದು ಹೇಳಿದ್ದಾರೆ.

ಬ್ರೆಜಿಲ್ ಮೂಲದ ಟಿಟಿಯಸ್ ಸೆರುಲಾಟಸ್
ವೀಡಿಯೋದಲ್ಲಿರುವ ಚೇಳಿನ ಪ್ರಭೇದವು ಬ್ರೆಜಿಲ್ ಮೂಲದ ಟಿಟಿಯಸ್ ಸೆರುಲಾಟಸ್ ಎಂದು ಇಂಟರ್ನೆಟ್ ಬಳಕೆದಾರರು ವಿವರಿಸಿದ್ದಾರೆ. "ಅವು ಪಾರ್ಥೆನೋಜೆನಿಕ್, ಅಂದರೆ ಅವು ಮಿಲನವಿಲ್ಲದೆಯೇ ಜನ್ಮ ನೀಡಬಹುದು, ಆದ್ದರಿಂದ ಇಲ್ಲಿರುವ ಭಾರಿ ಸಂಖ್ಯೆಯೇ ಇದಕ್ಕೆ ಸಾಕ್ಷಿ ಎಂದು ಹೇಳಬಹುದು" ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು. ಈ ಚೇಳುಗಳು ಹೊಳೆಯುವಂತೆ ಮಾಡಲು ನೇರಳಾತೀತ ಬೆಳಕನ್ನು ಬಳಸುವಂತೆ ಒಬ್ಬ ರೆಡ್ಡಿಟರ್ ಸಹ ಹಾಸ್ಯ ಭರಿತವಾಗಿ ಸಲಹೆ ನೀಡಿದರು.

ಏತನ್ಮಧ್ಯೆ, ಒಂದು ಸುದ್ದಿ ಮಾಧ್ಯಮದ ಪ್ರಕಾರ, ಚೇಳುಗಳು ಅರಾಚ್ನಿಡಾ ವರ್ಗದ ಭಾಗವಾಗಿವೆ ಮತ್ತು ಜೇಡಗಳು, ಹುಳಗಳು ಮತ್ತು ಉಣ್ಣೆ ಹುಳಗಳೊಂದಿಗೆ ನಿಕಟ ಸಂಬಂಧ ಹೊಂದಿವೆ ಎಂದು ಉಲ್ಲೇಖಿಸಿದ್ದು ಚೇಳುಗಳಲ್ಲಿ ಸುಮಾರು 2,000 ಪ್ರಭೇದಗಳಿವೆ, ಆದರೆ ಅವುಗಳಲ್ಲಿ ಕೇವಲ 30 ರಿಂದ 40 ಮಾತ್ರ ಮನುಷ್ಯರನ್ನು ಕೊಲ್ಲುವಷ್ಟು ಬಲವಾದ ವಿಷವನ್ನು ಹೊಂದಿರುತ್ತವೆ ಎಂದು ಹೇಳಿದೆ.

ಡೆತ್ ಸ್ಟಾಕರ್ ಚೇಳು
ಸಣ್ಣ ಮಕ್ಕಳು ಮತ್ತು ವಯಸ್ಸಾದ ಜನರು ಚೇಳಿನ ವಿಷದ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತಾರೆ ಮತ್ತು ವೈದ್ಯಕೀಯ ಆರೈಕೆಗೆ ಪ್ರವೇಶವು ಸೀಮಿತವಾಗಿರುವ ಪ್ರದೇಶಗಳಲ್ಲಿ ಇದರ ಕಚ್ಚುವಿಕೆಯಿಂದ ಉಂಟಾಗುವ ಸಾವುಗಳು ಗಮನಾರ್ಹ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ ಎಂದು ವರದಿ ಮಾಡಿದೆ.

ಇದನ್ನೂ ಓದಿ:  Pregnant Women: ಭೋರ್ಗೆರೆವ ಅಲೆಗಳ ನಡುವೆ ಸಮುದ್ರದ ಮಧ್ಯದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ವಿಷದಿಂದ ತುಂಬಿದ ಬಾಲದಿಂದಾಗಿ ಡೆತ್ ಸ್ಟಾಕರ್ ಚೇಳು ವಿಶ್ವದ ಮಾರಣಾಂತಿಕ ಚೇಳುಗಳಲ್ಲಿ ಒಂದಾಗಿದೆ ಎಂದು ವರ್ಣಿಸಲಾಗಿದೆ. ಆದರೆ ತೊಗಟೆ ಚೇಳು ತೀವ್ರ ರೋಗಲಕ್ಷಣಗಳನ್ನು ಉಂಟು ಮಾಡುವಷ್ಟು ಪ್ರಬಲವಾದ ವಿಷವನ್ನು ಹೊಂದಿರುವ ಏಕೈಕ ಸಾಕು ಪ್ರಭೇದ ಎಂದು ವಿವರಿಸಲಾಗಿದೆ.
Published by:Ashwini Prabhu
First published: