• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • No Airports: ಈ ದೇಶಗಳಲ್ಲಿ ವಿಮಾನ ನಿಲ್ದಾಣಗಳೇ ಇಲ್ವಂತೆ! ಅವು ಯಾವ ದೇಶಗಳು ಅನ್ನೋದನ್ನು ತಿಳಿದುಕೊಳ್ಳಿ

No Airports: ಈ ದೇಶಗಳಲ್ಲಿ ವಿಮಾನ ನಿಲ್ದಾಣಗಳೇ ಇಲ್ವಂತೆ! ಅವು ಯಾವ ದೇಶಗಳು ಅನ್ನೋದನ್ನು ತಿಳಿದುಕೊಳ್ಳಿ

ವಿಮಾನ

ವಿಮಾನ

ಭಾರತದಲ್ಲಿ ರಾಜ್ಯ ಮಾತ್ರವಲ್ಲ, ಕೆಲವೊಂದು ಕಡೆಗಳಲ್ಲಿ ಜಿಲ್ಲಾ ಕೇಂದ್ರದಲ್ಲೂ ವಿಮಾನ ನಿಲ್ದಾಣಗಳಿವೆ. ಆದರೆ ಜಗತ್ತಿನಲ್ಲಿ ಇನ್ನೂ ಸಹ ಕೆಲವು ದೇಶಗಳಲ್ಲಿ ವಿಮಾನ ನಿಲ್ದಾಣವೇ ಇಲ್ವಂತೆ. ಹೌದು. ಆಶ್ಚರ್ಯ ಎನಿಸಿದರೂ ಇದು ಸತ್ಯ ಸಂಗತಿ.

  • Trending Desk
  • 3-MIN READ
  • Last Updated :
  • Share this:

    ಈಗಂತೂ ಬಹುತೇಕ ದೇಶಗಳಲ್ಲಿರುವ ನಗರಗಳು ತಮ್ಮದೇ ಆದಂತಹ ವಿಮಾನ ನಿಲ್ದಾಣವನ್ನು (Airport) ಹೊಂದಿರುತ್ತವೆ. ಅಷ್ಟೇ ಏಕೆ ಭಾರತದಲ್ಲಿ (India) ರಾಜ್ಯ ಮಾತ್ರವಲ್ಲ, ಕೆಲವೊಂದು ಕಡೆ ಜಿಲ್ಲಾ ಕೇಂದ್ರದಲ್ಲೂ ವಿಮಾನ ನಿಲ್ದಾಣಗಳಿವೆ. ಆದರೆ ಜಗತ್ತಿನಲ್ಲಿ ಇನ್ನೂ ಸಹ ಕೆಲವು ದೇಶಗಳಲ್ಲಿ ವಿಮಾನ ನಿಲ್ದಾಣವೇ (No Airport) ಇಲ್ವಂತೆ. ಹೌದು. ಆಶ್ಚರ್ಯ ಎನಿಸಿದರೂ ಇದು ಸತ್ಯ ಸಂಗತಿ.


    ಎಸ್‌.. ವಿಶ್ವದ ಕೆಲವು ದೇಶಗಳು ಇವತ್ತಿಗೂ ವಿಮಾನ ನಿಲ್ದಾಣಗಳನ್ನು ಹೊಂದಿಲ್ಲವಂತೆ. ವಿಮಾನ ನಿಲ್ದಾಣವನ್ನು ಹೊಂದಿರಲೇಬೇಕೆಂಬ ಅಗತ್ಯ ಏನಿಲ್ಲ ಬಿಡಿ. ಆದರೆ ತಮ್ಮ ನೆರೆಹೊರೆಯ ದೇಶಗಳೊಂದಿಗೆ ಸಂಪನ್ಮೂಲಗಳನ್ನು ಹೇಗೆ ಹಂಚಿಕೊಳ್ಳಬೇಕೆಂದು ಅವರು ಕಲಿತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಕೆಲವೊಮ್ಮೆ ವಿಮಾನದ ಹೊರತಾಗಿ ಅನೇಕರಿಗೆ ಈ ಆಯ್ಕೆಯೂ ಇರುವುದಿಲ್ಲ, ಏಕೆಂದರೆ ವಾಸ್ತವವಾಗಿ ಒಂದು ದೇಶದಿಂದ ಇನ್ನೊಂದು ದೂರದ ದೇಶಕ್ಕೆ ಸಂಪರ್ಕ ಕಲ್ಪಿಸಬೇಕೆಂದರೆ ವಿಮಾನ ನಿಲ್ದಾಣ ಅಥವಾ ವಿಮಾನದ ಅಗತ್ಯ ಇದ್ದೇ ಇದೆ. ಹಾಗಾದರೆ ಯಾವ ಯಾವ ದೇಶಗಳಲ್ಲಿ ವಿಮಾನ ನಿಲ್ದಾಣಗಳಿಲ್ಲ? ಇಲ್ಲಿ ಕೊಡಲಾಗಿದೆ ನೋಡಿ.


    ಇದನ್ನೂ ಓದಿ: UK Work Visa: ಭಾರತೀಯರಿಗೆ ಗುಡ್​ನ್ಯೂಸ್​; ಉದ್ಯೋಗ ಇಲ್ಲದೆಯೂ ಯುಕೆ ವರ್ಕ್ ವೀಸಾ ಪಡೆಯಬಹುದು


    ವ್ಯಾಟಿಕನ್ ಸಿಟಿ


    ವ್ಯಾಟಿಕನ್ ಸಿಟಿಯ ಜನಸಂಖ್ಯೆ ಕೇವಲ 800 ಆಗಿದ್ದು, ಇದು ವಿಶ್ವದ ಅತ್ಯಂತ ಚಿಕ್ಕ ದೇಶವಾಗಿದೆ. ವಿಮಾನವು ಇಲ್ಲಿ ಬಂದು ಇಳಿಯಲು ಹೆಚ್ಚಿನ ಸ್ಥಳವಿಲ್ಲ ಮತ್ತು ಪರ್ಯಾಯ ಸಾರಿಗೆಗೆ ಯಾವುದೇ ನದಿ ಅಥವಾ ಸಮುದ್ರ ಸಹ ಇಲ್ಲ. ಕಾಲ್ನಡಿಗೆಯಲ್ಲಿ ಮಾತ್ರ ಕ್ರಮಿಸಬಹುದಾದ ಕೆಲವೇ ದೇಶಗಳಲ್ಲಿ ಇದೂ ಒಂದಾಗಿದೆ. ಆದಾಗ್ಯೂ, ಸಿಯಾಂಪಿನೊ ಮತ್ತು ಫಿಯುಮಿಸಿನೊ ಸೇರಿದಂತೆ ಇತರ ವಿಮಾನ ನಿಲ್ದಾಣಗಳು ಈ ದೇಶವನ್ನು ಸುತ್ತುವರೆದಿರುವುದರಿಂದ ಇಲ್ಲಿನ ಜನರು ಅಷ್ಟೊಂದು ಚಿಂತಿಸಬೇಕಿಲ್ಲ. ಈ ಎರಡು ಸ್ಥಳಗಳು ರೈಲಿನಲ್ಲಿ ಪ್ರಯಾಣಿಸಿದರೆ 30 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತವೆ.


    ಮೊನಾಕೊ


    ವ್ಯಾಟಿಕನ್ ಸಿಟಿಯ ನಂತರ ಮೊನಾಕೊ ವಿಶ್ವದ ಎರಡನೇ ಚಿಕ್ಕ ದೇಶವಾಗಿದೆ, ಈ ದೇಶದ ಮೂರು ದಿಕ್ಕುಗಳು ಫ್ರಾನ್ಸ್ ನಿಂದ ಸುತ್ತುವರೆದಿದೆ. ತನ್ನದೇ ಆದ ವಿಮಾನ ನಿಲ್ದಾಣ ಸೌಲಭ್ಯವನ್ನು ಈ ಪುಟ್ಟ ದೇಶ ಹೊಂದಿಲ್ಲ. ಮೊನಾಕೊವನ್ನು ನೋಡಲು ಬರುವವರು ಫ್ರಾನ್ಸ್ ನ ನೈಸ್ ಕೋಟ್ ಡಿ ಅಜೂರ್ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಕ್ಯಾಬ್ ಅಥವಾ ಹಡಗಿನಲ್ಲಿ ಬರುತ್ತಾರೆ.


    ಸ್ಯಾನ್ ಮಾರಿನೊ


    ವ್ಯಾಟಿಕನ್ ಸಿಟಿಯಿಂದ ಬಹಳ ದೂರ ಏನಲ್ಲ ಈ ಸ್ಯಾನ್ ಮೆರಿನೊ ದೇಶ. ವಿಶ್ವದ ಅತ್ಯಂತ ಹಳೆಯ ದೇಶಗಳಲ್ಲಿ ಇದೂ ಒಂದಾಗಿದೆ. ಸಂಪೂರ್ಣವಾಗಿ ಇಟಲಿಯಿಂದ ಸುತ್ತುವರೆದಿರುವ ಸ್ಯಾನ್ ಮರಿನೊ ಸಮುದ್ರಕ್ಕೆ ಪ್ರವೇಶವನ್ನು ಹೊಂದಿಲ್ಲ. ಇದು ತುಂಬಾ ಚಿಕ್ಕದಾದ ದೇಶವಾಗಿರುವುದರಿಂದ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಇಡೀ ಸ್ಯಾನ್ ಮೆರಿನೊ ಸಮತಟ್ಟಾಗಿದ್ದು ಮತ್ತು ದಟ್ಟವಾದ ರಸ್ತೆ ಜಾಲವನ್ನು ಹೊಂದಿದೆ. ಜನರು ರಸ್ತೆಯ ಮೂಲಕ ಸ್ಯಾನ್ ಮೆರಿನೊದಿಂದ ಇಟಲಿಗೆ ಹೋಗಬಹುದು.


    ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಇಟಲಿಯ ರಿಮಿನಿ ವಿಮಾನ ನಿಲ್ದಾಣ ಅಂತ ಹೇಳಬಹುದು. ಇದಕ್ಕೆ ಹತ್ತಿರದಲ್ಲಿ ಫ್ಲಾರೆನ್ಸ್, ಬೊಲೊಗ್ನಾ, ವೆನಿಸ್ ಮತ್ತು ಪೀಸಾದಂತಹ ಹಲವಾರು ಇತರ ವಿಮಾನ ನಿಲ್ದಾಣಗಳನ್ನು ಹೊಂದಿದೆ, ಇವುಗಳನ್ನು ಸ್ಥಳೀಯರು ಮತ್ತು ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ಹೆಚ್ಚಾಗಿ ಬಳಸುತ್ತಾರೆ.


    ಇದನ್ನೂ ಓದಿ: No Visa Tour: ಗುಡ್‌ನ್ಯೂಸ್‌, 2023ರಲ್ಲಿ ವೀಸಾ ಇಲ್ಲದೇ ನೀವು ಈ 10 ದೇಶಗಳಿಗೆ ಪ್ರಯಾಣ ಮಾಡಬಹುದು!


    ಲಿಚ್ಟೆನ್‌ಸ್ಟೈನ್


    ಇದು ಹೆಚ್ಚು ಬೆಟ್ಟಗಳನ್ನು ಹೊಂದಿರುವ ಮತ್ತೊಂದು ಸ್ಥಳವಾಗಿದೆ. ಲಿಚ್ಟೆನ್‌ಸ್ಟೈನ್ ಕೂಡ ಒಂದು ಸಣ್ಣ ರಾಷ್ಟ್ರವಾಗಿದೆ ಮತ್ತು ಅದರ ಸಂಪೂರ್ಣ ಪರಿಧಿ ಕೇವಲ 75 ಕಿಲೋ ಮೀಟರ್ ಆಗಿದೆ.


    ಲಿಚ್ಟೆನ್‌ಸ್ಟೈನ್ ವಿಮಾನ ನಿಲ್ದಾಣವನ್ನು ಹೊಂದಲು ಬಯಸಿದ್ದರೂ ಸಹ, ಅದು ಪೂರ್ವಕ್ಕೆ ರೈನ್, ಮತ್ತು ಪಶ್ಚಿಮದಲ್ಲಿ ಆಸ್ಟ್ರಿಯಾದ ಪರ್ವತಗಳ ಭಾಗವನ್ನು ಹಂಚಿಕೊಂಡಿರುವುದರಿಂದ ಮತ್ತು ನೆರೆಯ ರಾಷ್ಟ್ರಗಳೊಂದಿಗೆ ಸಂಭಾವ್ಯ ರಾಜತಾಂತ್ರಿಕ ಜಗಳದಲ್ಲಿ ತೊಡಗದಿರಲು, ಲಿಚ್ಟೆನ್‌ಸ್ಟೈನ್ ಯಾವುದೇ ವಿಮಾನ ನಿಲ್ದಾಣಗಳಿಲ್ಲದೆ ಉಳಿದರು. ಸ್ಥಳೀಯರು ಸುಮಾರು 120 ಕಿಲೋ ಮೀಟರ್ ದೂರದಲ್ಲಿರುವ ಜುರಿಕ್ ವಿಮಾನ ನಿಲ್ದಾಣವನ್ನು ತಲುಪಲು ಕಾರು ಅಥವಾ ಬಸ್ ಅನ್ನು ಬಳಸುತ್ತಾರೆ.


    ಅಂಡೋರ


    ಇತರ ದೇಶಗಳಂತೆ ಚಿಕ್ಕದಾಗಿಲ್ಲದಿದ್ದರೂ, ಅಂಡೋರಾ ದೇಶವು ದೊಡ್ಡ ಮೇಲ್ಮೈ ಪ್ರದೇಶವನ್ನು ಹೊಂದಿದೆ ಮತ್ತು ಅದು ಹಲವಾರು ವಿಮಾನ ನಿಲ್ದಾಣಗಳನ್ನು ಹೊಂದಬಹುದು. ಆದರೆ ಇಲ್ಲಿನ ದೊಡ್ಡ ಸಮಸ್ಯೆ ಎಂದರೆ ಸುತ್ತಲೂ ಇರುವ ದೊಡ್ಡ ದೊಡ್ಡ ಪರ್ವತಗಳು ಅಂತ ಹೇಳಬಹುದು. ಈ ದೇಶವು ಫ್ರಾನ್ಸ್ ಮತ್ತು ಸ್ಪೇನ್ ನಡುವೆ ನೆಲೆಗೊಂಡಿದೆ. ಸುಮಾರು 3000 ಮೀಟರ್ ಎತ್ತರದ ಶಿಖರಗಳಿವೆ ಮತ್ತು ಅಂತಹ ಎತ್ತರದಲ್ಲಿ ವಿಮಾನವನ್ನು ಹಾರಿಸುವುದು ಸ್ವಲ್ಪ ಅಪಾಯಕಾರಿ ಮತ್ತು ಕಷ್ಟಕರವಾಗುತ್ತದೆ. 200 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಬಾರ್ಸಿಲೋನಾ, ಲೆರಿಡಾ ಅಥವಾ ಗಿರೋನಾದಂತಹ ನಗರಗಳಲ್ಲಿ ವಿಮಾನ ನಿಲ್ದಾಣಗಳಿವೆ.

    Published by:Avinash K
    First published: