World's Biggest Lips: ಈ ಥರ ತುಟಿ ಪಡೆಯೋಕೆ ಈಕೆ ಖರ್ಚು ಮಾಡಿರೋದು 8 ಲಕ್ಷ, ಯಾಕ್​ ಬೇಕಿತ್ತೂ ಹೇಳಿ!

ವಿಶ್ವದ ಅತಿದೊಡ್ಡ ತುಟಿ ಹೊಂದಿರುವ ಮಹಿಳೆ

ವಿಶ್ವದ ಅತಿದೊಡ್ಡ ತುಟಿ ಹೊಂದಿರುವ ಮಹಿಳೆ

Biggest Lips: ಇಲ್ಲೊಬ್ಬರು ಬಲ್ಗೇರಿಯಾದ ಮಹಿಳೆ ವಿಶ್ವದಲ್ಲೇ ಅತೀ ದೊಡ್ಡ ತುಟಿಯನ್ನು ಪಡೆಯುವ ಉದ್ದೇಶದಿಂದ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಿದ್ದಾರೆ. ಹಾಗಿದ್ರೆ ಆ ಮಹಿಳೆ ಯಾರು, ಇಷ್ಟು ಖರ್ಚು ಮಾಡಲು ಕಾರಣವೇನು ಎಂಬುದನ್ನೆಲ್ಲಾ ಈ ಲೇಖನದಲ್ಲಿ ತಿಳಿಸಲಾಗಿದೆ.

ಮುಂದೆ ಓದಿ ...
  • Share this:

    ಮಹಿಳೆಯರು (Womens) ಸೌಂದರ್ಯ ಪ್ರಿಯರು. ತಾನು ಸುಂದರವಾಗಿ ಕಾಣಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲೂ ಇರುತ್ತೆ. ಇದಕ್ಕಾಗಿ ಸಾಕಷ್ಟು ಮೇಕಪ್​ ಕಿಟ್​ಗಳನ್ನು (Makeup Kit), ಸೌಂದರ್ಯ ಸಂಬಂಧಿತ ವಸ್ತುಗಳನ್ನು ಖರೀದಿಸುವುದು ಸಾಮಾನ್ಯ. ಇನ್ನೂ ಕೆಲವರು ಔಷಧಿಗಳನ್ನು ಸಹ ಖರೀದಿ ಮಾಡುತ್ತಾರೆ. ಹುಡುಗರು ಅಷ್ಟೇ ತಮ್ಮ ಸೌಂದರ್ಯಕ್ಕಾಗಿ, ಫ್ಯಾಶನ್​ಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಇಲ್ಲೊಬ್ಬಳು ಸೌಂದರ್ಯಕ್ಕಾಗಿ ಖರ್ಚು ಮಾಡಿದ ಹಣವನ್ನು ನೋಡಿದ್ರೆ ಆಶ್ಚರ್ಯ ಪಡ್ತೀರಾ. ಏಕೆಂದರೆ ಇಲ್ಲೊಬ್ಬರು ಮಹಿಳೆ ವಿಶ್ವದ ಅತಿದೊಡ್ಡ ತುಟಿಯನ್ನು (Worlds Biggest Lips) ಪಡೆಯಲು ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿದ್ದಾರೆ. ಜೊತೆಗೆ ಅತಿ ದೊಡ್ಡ ಕೆನ್ನೆ ಪಡೆಯಲು ಚಿಕಿತ್ಸೆ ಪಡೆಯುತ್ತಿದ್ದಾರೆ.


    ಹೌದು, ಇಲ್ಲೊಬ್ಬರು ಬಲ್ಗೇರಿಯಾದ ಮಹಿಳೆ ವಿಶ್ವದಲ್ಲೇ ಅತೀ ದೊಡ್ಡ ತುಟಿಯನ್ನು ಪಡೆಯುವ ಉದ್ದೇಶದಿಂದ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಿದ್ದಾರೆ. ಹಾಗಿದ್ರೆ ಆ ಮಹಿಳೆ ಯಾರು, ಇಷ್ಟು ಖರ್ಚು ಮಾಡಲು ಕಾರಣವೇನು ಎಂಬುದನ್ನೆಲ್ಲಾ ಈ ಲೇಖನದಲ್ಲಿ ತಿಳಿಸಲಾಗಿದೆ.


    ಬರೋಬ್ಬರಿ 7.9 ಲಕ್ಷ ಹಣ ಖರ್ಚು


    ಬಲ್ಗೇರಿಯಾದ ಸೋಫಿಯಾದ ಆಂಡ್ರಿಯಾ ಇವನೋವಾ ಎಂಬ ಮಹಿಳೆ ತಮ್ಮ 25 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅತಿದೊಡ್ಡ ತುಟಿಗಳನ್ನು ಹೊಂದಲು ಬರೋಬ್ಬರಿ 7.9 ಲಕ್ಷ ಹಣವನ್ನು ಖರ್ಚು ಮಾಡಿದ್ದಾರೆ.


    ಇದನ್ನೂ ಓದಿ: ಏಕಕಾಲದಲ್ಲಿ 5 ಮಕ್ಕಳಿಗೆ ಜನ್ಮ ನೀಡಿದ ಏಳು ಮಕ್ಕಳ ತಾಯಿ! ಇದು ಪವಾಡವೆಂದ ಬಾಣಂತಿ


    ಇದಲ್ಲದೆ ಇನ್ನು ಮುಂದಿನ ದಿನಗಳಲ್ಲಿ ದೊಡ್ಡ ಕೆನ್ನೆಯ ಮೂಳೆಗಳನ್ನು ಪಡೆಯಬೇಕೆಂದು ಬಳಸಿದ್ದಾರೆ. ಇದೂ ಸಹ ವಿಶ್ವದ ಅತೀ ದೊಡ್ಡ ಕೆನ್ನೆಯಾಗಲಿದೆ.




    ಆಂಡ್ರಿಯಾ ಅವರ ಈ ಕುರಿತು ಅಭಿಪ್ರಾಯ


    ಇನ್ನು 25 ವರ್ಷದ ಆಂಡ್ರಿಯಾ ಅವರು ಈ ಕುರಿತು ಮಾತನಾಡಿ, ನಾನುವಿಶ್ವದ ದೊಡ್ಡ ತುಟಿಗಳನ್ನು ಈಗಾಗಲೇ ಹೊಂದಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ವಿಶ್ವದ ದೊಡ್ಡ ಕೆನ್ನೆಯ ಮೂಳೆಗಳನ್ನು ಸಹ ಹೊಂದಲು ಬಯಸುತ್ತೇನೆ. ಇನ್ನು ನನ್ನ ಗುರಿ ಮಾಡೆಲ್​ ಆಗುವುದು. ಇದಕ್ಕಾಗಿ ಗಮನಾರ್ಹವಾದ ದೊಡ್ಡ ತುಟಿ ಅಗತ್ಯವಾಗಿದೆ. ಕೆನ್ನೆಯ ಮೂಲೆಗಳಲ್ಲಿ ನಾಲ್ಕು ಹೈಲುರಾನಿಕ್​ ಆ್ಯಸಿಡ್​ ಚುಚ್ಚುಮದ್ದನ್ನು ಪಡೆದಿದ್ದೇನೆ. ಇನ್ನು ವಾರದೊಳಗೆ ಇನ್ನೆರಡು ಚುಚ್ಚುಮದ್ದನ್ನು ಹಾಕಿಸಿಕೊಳ್ಳುತ್ತೇನೆ ಎಂದಿದ್ದಾರೆ.


    ವಿಶ್ವದ ಅತಿದೊಡ್ಡ ತುಟಿ ಹೊಂದಿರುವ ಮಹಿಳೆ


    ಈ ಸಂದರ್ಭದಲ್ಲಿ ‘ನನ್ನ ಮುಖವು ಹಿಂದಿಗಿಂತಲೂ ಈಗ ಇನ್ನಷ್ಟು ತೀಕ್ಷ್ಣವಾಗಿದೆ. ಆದರೆ ಈ ಬದಲಾವಣೆಯನ್ನು ನಾನು ತುಂಬಾ ಇಷ್ಟಪಡುತ್ತೇನೆ. ನನ್ನ ಮುಖದ ಈ ಹೊಸ ಸೌಂದರ್ಯವನ್ನು ನನ್ನ ಕುಟುಂಬ ಗೌರವಿಸಿದರೆ ಸಾಕು. ಬದಲಿಗೆ ಜನರ, ನೋಡುಗರ ಕಮೆಂಟ್​ಗಳ ಬಗ್ಗೆ ನಾನು ಯಾವುದೇ ರೀತಿಯಲ್ಲಿ ಚಿಂತಿಸಲು ಹೋಗುವುದಿಲ್ಲ. ನನ್ನ ಸೌಂದರ್ಯದ ಬಗ್ಗೆ ನನ್ನದೇ ಆದ ನಿಲುವನ್ನು, ಕಾಳಜಿಯನ್ನು ಮತ್ತು ದೃಷ್ಟಿಕೋನಗಳನ್ನು ಹೊಂದಿದ್ದೇನೆ ಎಂದು ಆಂಡ್ರಿಯಾ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.




    5 ಮಕ್ಕಳಿಗೆ ಜನ್ಮ ನೀಡಿದ ಏಳು ಮಕ್ಕಳ ತಾಯಿ


    ಹೀಗೆ ಏಕಕಾಲದಲ್ಲಿ ಐದು ಮಕ್ಕಳಿಗೆ ತಾಯಿಯೊಬ್ಬಳು ಜನ್ಮ ನೀಡಿದ ಘಟನೆ ಪೋಲೆಂಡ್‌ನಲ್ಲಿ ನಡೆದಿದೆ. ದಕ್ಷಿಣ ಪೋಲೆಂಡ್‌ನ ಕ್ರಾಕೋವ್‌ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಇಂತದ್ದೊಂದು ಅಚ್ಚರಿ ಪವಾಡದಂತಹ ಘಟನೆ ನಡೆದಿದ್ದು, ಏಳು ಮಕ್ಕಳ ತಾಯಿ ಪ್ರಸ್ತುತ ಮತ್ತೆ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈಗಾಗಲೇ ಏಳು ಮಕ್ಕಳನ್ನು ಹೊಂದಿರುವ 37 ವರ್ಷದ ಡೊಮಿನಿಕಾ ಕ್ಲಾರ್ಕ್ ಎಂಬ ಮಹಿಳೆ ಎಂಟನೇ ಮಗುವನ್ನು ಬಯಸಿ ಗರ್ಭವತಿಯಾಗಿದ್ದರು. ಆದರೆ ಅವರು ಬಯಸಿದ್ದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಪಡೆದಿದ್ದಾರೆ. ಸದ್ಯ ಐದು ಮಕ್ಕಳಿಗೆ ಜನ್ಮ ನೀಡಿರುವ ತಾಯಿ ಇದೀಗ ಒಮ್ಮೆಲೇ ಒಟ್ಟು 12 ಮಕ್ಕಳ ತಾಯಿಯಾಗಿದ್ದಾರೆ.

    Published by:Prajwal B
    First published: