ನಮ್ಮ ಮಕ್ಕಳು (Children) ಒಂದು ಐದು ನಿಮಿಷ ಕಣ್ಣಿಗೆ ಕಾಣದೆ ಹೋದರೆ ‘ಅಯ್ಯೋ ನನ್ನ ಮಗ, ಮಗಳು ಎಲ್ಲಿ ಹೋದರು, ಇಲ್ಲೇ ಇದ್ರಲ್ಲ’ ಅಂತ ಹೇಳಿ ನಾವು ಪೋಷಕರು (Parents) ಎಷ್ಟೊಂದು ಆತಂಕ ಪಡುತ್ತೇವೆ. ಎಲ್ಲಿ ಹೋದರು ಮಕ್ಕಳು ಅಂತ ಒಂದು ಕ್ಷಣ ಧೈರ್ಯ (Courage) ಕಳೆದುಕೊಂಡು ಆತಂಕಕ್ಕೆ ಒಳಗಾಗಿರುತ್ತೇವೆ ಅಂತ ಹೇಳಬಹುದು. ಸಾಮಾನ್ಯವಾಗಿ ಈ ಊರ ಜಾತ್ರೆಯಲ್ಲಿ, ಪಟ್ಟಣದಲ್ಲಿ ಬರುವ ದೊಡ್ಡ ದೊಡ್ಡ ಎಗ್ಸಿಬಿಷನ್ಗಳಲ್ಲಿ ಮಕ್ಕಳು ಕಳೆದು ಹೋಗುವುದು ಮತ್ತು ಪೋಷಕರಿಂದ ತಪ್ಪಿಸಿಕೊಳ್ಳುವ ಅನೇಕ ಪ್ರಕರಣಗಳನ್ನು (Incident) ನಾವು ನೋಡಿರುತ್ತೇವೆ. ಕೆಲವೊಮ್ಮೆ ಕೆಲ ನಿಮಿಷದಲ್ಲಿಯೇ ಆ ಮಕ್ಕಳು ಮತ್ತೆ ಪೋಷಕರಿಗೆ ಸಿಕ್ಕರೆ, ಇನ್ನೂ ಕೆಲವು ಬಾರಿ ಅನೇಕ ಗಂಟೆಗಳ ಹುಡುಕಾಟದ (Searching) ನಂತರವೂ ಅವರು ಪೋಷಕರ ಕೈಗೆ ಸಿಕ್ಕಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಪ್ಪಂದಿರಿಗಿಂತಲೂ ಅಮ್ಮಂದಿರ ಆ ನೋವು, ಆತಂಕ ತಾರಕಕ್ಕೆ ಏರಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಈಗಂತೂ ನಾವು ಎಷ್ಟೋ ಮಕ್ಕಳು ಕಾಣೆಯಾಗಿರುವುದರ ಬಗ್ಗೆ ಅನೇಕ ಸುದ್ದಿಗಳನ್ನು ಟಿವಿಯಲ್ಲಿ ಮತ್ತು ಪತ್ರಿಕೆಯಲ್ಲಿ ದಿನ ಬೆಳಗಾದರೆ ನೋಡುತ್ತಲೇ ಇರುತ್ತೇವೆ. ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದ್ದು, ಅದೃಷ್ಟವಶಾತ್ ಕಳೆದು ಹೋದ ಆ ಯುವಕ ಮತ್ತೆ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾನೆ ಅಂತ ಹೇಳಬಹುದು.
ಯುವಕ ಕಳೆದು ಹೋದದ್ದು ಸಮುದ್ರದಲ್ಲಿ ಅಂತೆ
ಹೌದು.. ಈ ಯುವಕ ಕಳೆದು ಹೋದದ್ದು ಸಮುದ್ರದಲ್ಲಿ ಅಂತೆ.. ಇಲ್ಲೊಂದು ಆತಂಕ ಪಡುವ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ ಮತ್ತು ಫ್ರೀಡೈವರ್ ನ ಕುಟುಂಬವು ಅವನನ್ನು ಸಮುದ್ರದಲ್ಲಿ ಜೀವಂತವಾಗಿ ಹಿಂದಿರುಗಿದ್ದನ್ನು ನೋಡಿ ಖುಷಿಯಿಂದ ಕಣ್ಣೀರಿಟ್ಟ ಆ ಭಾವನಾತ್ಮಕ ಕ್ಷಣವನ್ನು ತೋರಿಸುತ್ತದೆ.
ಎನ್ಬಿಸಿ ನ್ಯೂಸ್ ವರದಿಯ ಪ್ರಕಾರ, 22 ವರ್ಷದ ಡೈಲನ್ ಗಾರ್ಟೆನ್ಮೇಯರ್ ಬಲವಾದ ಗಲ್ಫ್ ಸ್ಟ್ರೀಮ್ ಪ್ರವಾಹದಲ್ಲಿ ಸಿಲುಕಿದ ನಂತರ ಹಲವಾರು ಗಂಟೆಗಳ ಕಾಲ ಸಮುದ್ರದಲ್ಲಿ ಕಾಣೆಯಾಗಿದ್ದರಂತೆ, ಇದು ಮೀನುಗಾರಿಕೆ ಮತ್ತು ಫ್ರೀ ಡೈವಿಂಗ್ ಗೆ ಹೆಸರುವಾಸಿಯಾದ ಅವರ ಕುಟುಂಬಕ್ಕೆ ದೊಡ್ಡ ಆಘಾತ ನೀಡಿತ್ತು.
ಇದನ್ನೂ ಓದಿ:Viral Video: ಮಗಳ ತುಂಟಾಟಕ್ಕೆ ಅಪ್ಪನ ಸಾಥ್, ವಿಡಿಯೋ ನೋಡಿ ಮನಸೋತ ನೆಟ್ಟಿಗರು!
ಒಬ್ಬಂಟಿಯಾಗಿ ಸಮುದ್ರಕ್ಕೆ ಇಳಿದ ಡೈಲನ್ ಕಾಣೆಯಾದದ್ದು ಹೇಗೆ?
ಡೈಲನ್ ಒಬ್ಬಂಟಿಯಾಗಿ ಸಮುದ್ರಕ್ಕೆ ಇಳಿದಿದ್ದಾರೆ ಮತ್ತು ತುಂಬಾ ಹೊತ್ತು ಹಾಗೆಯೇ ನೀರಿನಲ್ಲಿ ಕಾಣೆಯಾಗಿದ್ದರು. "ನನ್ನ ಸುತ್ತಲೂ ಒಂದು ರೀತಿಯ ಬಲೆ ತೇಲುತ್ತಿತ್ತು" ಎಂದು ಡೈಲನ್ ಭಯಾನಕ ದೃಶ್ಯದ ಬಗ್ಗೆ ಹೇಳಿದರು. "ಅಲ್ಲಿ ದೊಡ್ಡ ಮೀನುಗಳ, ಶಾರ್ಕ್ ಫಿಶ್ ಇದ್ದವು. ನಾನು ರಾತ್ರಿಯಿಡೀ ಸಮುದ್ರದಲ್ಲಿ ಮುಳುಗದೆ ಹೋರಾಡಲು ಮನಸ್ಸಿನಲ್ಲೇ ಸಿದ್ಧನಾಗಿದ್ದೆ, ಆದರೆ ಅದಕ್ಕೂ ಮುಂಚಿತವಾಗಿಯೇ ನನ್ನನ್ನು ರಕ್ಷಿಸಲಾಗಿದೆ. ನಿಜಕ್ಕೂ ಬದುಕಿ ಬಂದಿದ್ದು ಖುಷಿ ಆಗಿದೆ ಎಂದು" ಎಂದು ಡೈಲನ್ ಸಂತಸ ವ್ಯಕ್ತಪಡಿಸಿದರು.
ಮಗನನ್ನು ಕಾಪಾಡಲು ಹಡಗಿನಲ್ಲಿ ಬಂದ ತಾಯಿ
ಡೈಲನ್ ಅವರ ತಾಯಿ, ತಬಿತಾ ಗಾರ್ಟೆನ್ಮೇಯರ್ ಮತ್ತು ಇತರ ಕುಟುಂಬ ಸದಸ್ಯರು ತಮ್ಮ ಮಗನನ್ನು ಹುಡುಕಲು ಇನ್ನೊಂದು ಹಡಗಿನಲ್ಲಿ ಸಮುದ್ರದಲ್ಲಿ ಇಳಿದರು. ಆಳವಾದ ನೀರಿನಿಂದ ತಮ್ಮ ಮಗನನ್ನು ರಕ್ಷಣಾ ಸಿಬ್ಬಂದಿಯವರು ರಕ್ಷಿಸಿದ ನಂತರ ಕುಟುಂಬದ ಭಾವನಾತ್ಮಕ ಪ್ರತಿಕ್ರಿಯೆ ಈಗ ತುಂಬಾನೇ ವೈರಲ್ ಆಗಿದೆ. ಫೇಸ್ಬುಕ್ ನಲ್ಲಿ, ಅವರ ಸೋದರ ಸಂಬಂಧಿ ಪ್ರಿಸಿಲ್ಲಾ ಗಾರ್ಟೆನ್ಮೇಯರ್ ಏನಾಯಿತು ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.
"ದೇವರು ಖಂಡಿತವಾಗಿಯೂ ನಮ್ಮ ಕಡೆ ಇದ್ದರು, ಏಕೆಂದರೆ ನಮಗೆ ಸುಳಿವು ಸಿಕ್ಕ ಕಡೆಯಲ್ಲಿಯೇ ಹುಡುಕಾಟ ಶುರು ಮಾಡಿದೆವು ಮತ್ತು ಸ್ವಲ್ಪ ಸಮಯದಲ್ಲಿಯೇ ಡೈಲನ್ ಅನ್ನು ಹುಡುಕಲು ಸಾಧ್ಯವಾಯಿತು" ಎಂದು ಪ್ರಿಸಿಲ್ಲಾ ಬರೆದಿದ್ದಾರೆ.
ಬಾಲ್ಯದಿಂದಲೂ ಡೈವಿಂಗ್ ಮತ್ತು ಮೀನು ಹಿಡಿಯುತ್ತಿರುವ ಡೈಲನ್ ಅವರ ವಿಡಿಯೋಗಳು ಈಗ ಬಹುತೇಕ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ