ಬೇಸಿಗೆಕಾಲದ (Summer Season) ಮಧ್ಯದಲ್ಲಿ ಈಗ ನಾವೆಲ್ಲಾ ಬಂದು ನಿಂತಿದ್ದೇವೆ ನೋಡಿ, ಏಕೆಂದರೆ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಿನಲ್ಲಿದ್ದ ಬಿಸಿಲನ್ನು ಮತ್ತು ಬಿಸಿಲಿನ ಶಾಖವನ್ನು ನಾವೆಲ್ಲಾ ಹೇಗೋ ಪಾರು ಮಾಡಿದೆವು. ಆದರೆ ಈಗ ಏಪ್ರಿಲ್ ತಿಂಗಳ ಮಧ್ಯದಲ್ಲಿ ಇರುವ ನಾವು ಈ ಬಿಸಿಲಿನ ತಾಪಕ್ಕೆ ಬೇಸತ್ತು ಹೋಗಿರುವುದಂತೂ ನಿಜ. ದೇಶದ ಎಷ್ಟೋ ರಾಜ್ಯಗಳಲ್ಲಿರುವ ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ಬಿಸಿಲಿನ ತಾಪಮಾನ ಗರಿಷ್ಠ 48 ರಿಂದ 50 ಡಿಗ್ರಿವರೆಗೂ ಹೋಗಿದೆ. ಹೌದು.. ನಿಜಕ್ಕೂ ಮನೆಯಿಂದ ಒಂದು ಹೆಜ್ಜೆ ಹೊರಗೆ ಇಟ್ಟರೆ ಸಾಕು, ಬಿಸಿಲಿನ ಆ ಶಾಖ ಇಡೀ ದೇಹಕ್ಕೆ ತಟ್ಟುತ್ತಿದೆ. ಅದರಲ್ಲೂ ಈ ಪಶ್ಚಿಮ ಬಂಗಾಳ, ರಾಜಸ್ಥಾನ, ತೆಲಂಗಾಣ ಮತ್ತು ಮಹಾರಾಷ್ಟ್ರದಂತಹ (Maharashtra) ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ (Temperature) ಬೇರೆ ರಾಜ್ಯಗಳಿಗಿಂತಲೂ ಸ್ವಲ್ಪ ಜಾಸ್ತಿಯೇ ಇರುತ್ತೆ.
ಜನರು ಈಗಾಗಲೇ ಬಿಸಿಲಿನ ಶಾಖದಿಂದ ತತ್ತರಿಸಿ ಹೋಗಿದ್ದಾರೆ ಮತ್ತು ಬೆಳಿಗ್ಗೆ 11 ಗಂಟೆ ಮತ್ತು ಸಂಜೆ 5 ಗಂಟೆಯ ಮಧ್ಯೆ ಮನೆಯಿಂದ ಹೊರಗೆ ಬರುತ್ತಿಲ್ಲ. ಬಿಸಿಲು ನಿಮ್ ಕಡೆ ಹೇಗಿದೆ ಅಂತ ಯಾರಾದರೂ ಕೇಳಿದರೆ, ಜನರು ಸಾಮಾನ್ಯವಾಗಿ ‘ಬಿಸಿಲು ಎಷ್ಟಿದೆ ಎಂದರೆ ಆಮ್ಲೆಟ್ ಮಾಡೋದಕ್ಕೆ ಗ್ಯಾಸ್ ಹಚ್ಚುವುದೇ ಬೇಡ ನೋಡಿ’ ಅಂತೆಲ್ಲಾ ಹೇಳುವುದನ್ನು ನಾವು ಆಗಾಗ ಕೇಳಿರುತ್ತೇವೆ.
ಎಂದರೆ ಇದರರ್ಥ ಗ್ಯಾಸಿನಲ್ಲಿ ಮಾಡುವ ಆಮ್ಲೆಟ್ ಅನ್ನು ಹೊರಗೆ ಬಿಸಿಲಿನ ಶಾಖದಲ್ಲಿಯೇ ಮಾಡಬಹುದು. ಈ ಮಾತನ್ನು ಬಹುತೇಕ ಮಂದಿ ಬಿಸಿಲಿನ ತಾಪಮಾನವನ್ನು ವಿವರಿಸಲು ಹೇಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ನಿಜವಾಗಿಯೂ ಇದನ್ನು ಪ್ರಯತ್ನಿಸಿದ್ದಾನೆ.
ಇದನ್ನೂ ಓದಿ: ದೇಶದ ಈ ಹಳ್ಳಿಯಲ್ಲಿ ಮಹಿಳೆಯರು ಬಟ್ಟೆನೇ ಧರಿಸಲ್ವಂತೆ!
ಮುಂಬರುವ ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಬಿಸಿಲು ಇನ್ನೂ ಜಾಸ್ತಿಯಾಗಲಿದೆಯಂತೆ
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಮುಂದಿನ 4 ರಿಂದ 5 ದಿನಗಳವರೆಗೆ ಪಶ್ಚಿಮ ಬಂಗಾಳ, ಬಿಹಾರ ಮತ್ತು ಆಂಧ್ರಪ್ರದೇಶದ ಕರಾವಳಿಯಲ್ಲಿ ಇಂತಹ ಬಿಸಿಲಿನ ಭೀಕರ ಪರಿಸ್ಥಿತಿಗಳು ಇನ್ನೂ ಹೆಚ್ಚಾಗಲಿವೆಯಂತೆ. ಈ ಸುಡುವ ಶಾಖವು ಜನರು ಛತ್ರಿಗಳನ್ನು ಖರೀದಿಸಲು ಮತ್ತು ತಮ್ಮನ್ನು ಸಾಕಷ್ಟು ಹೈಡ್ರೇಟ್ ಆಗಿಡಲು ಧಾವಿಸುವಂತೆ ಮಾಡಿದೆ.
ಬಂಗಾಳದ ವ್ಯಕ್ತಿಯೊಬ್ಬ ಬಿಸಿಲಿನ ಶಾಖದಲ್ಲಿ ಆಮ್ಲೆಟ್ ಮಾಡಿದ್ದಾನೆ ನೋಡಿ
ಈಗ, ಫೇಸ್‌ಬುಕ್ ಬಳಕೆದಾರರೊಬ್ಬರು ಬಿಸಿಲಿನ ಶಾಖದೊಂದಿಗೆ ಒಂದು ಪ್ರಯೋಗವನ್ನು ಮಾಡಿದ್ದಾರೆ ಮತ್ತು ಅವರು ಅದರಲ್ಲಿ ಯಶಸ್ವಿ ಸಹ ಆಗಿದ್ದಾರೆ. ಮಧ್ಯಾಹ್ನದ ಸುಮಾರಿಗೆ ತಮ್ಮ ಮನೆಯ ಟೆರೇಸ್ ಮೇಲೆ ನಿಂತಿರುವ ವ್ಯಕ್ತಿಯು ಸಾಸ್ ಪ್ಯಾನ್ ಅನ್ನು ಕೈಯಲ್ಲಿ ಹಿಡಿದುಕೊಳ್ಳುವುದರೊಂದಿಗೆ ಈ ವಿಡಿಯೋ ಕ್ಲಿಪ್ ಶುರುವಾಗುತ್ತದೆ.
ಆ ಪ್ಯಾನ್ ಎಂದರೆ ಬಾಣಲೆಯನ್ನು ಸೂರ್ಯನ ಬೆಳಕಿನಲ್ಲಿ ತೆರೆದಿಟ್ಟ ನಂತರ, ಅವನು ಒಂದು ಮೊಟ್ಟೆಯನ್ನು ಬಿಸಿ ಬಾಣಲೆಯಲ್ಲಿ ಒಡೆಯುತ್ತಾನೆ. ಆಶ್ಚರ್ಯಕರವಾಗಿ, ಆ ಮೊಟ್ಟೆ ಸಂಪೂರ್ಣವಾಗಿ ಬೇಯುತ್ತದೆ!
ನಂತರ ಆ ವ್ಯಕ್ತಿಯು ಹುರಿದ ಮೊಟ್ಟೆಯನ್ನು ಸವಿಯಲು ಮುಂದುವರಿಯುತ್ತಾನೆ ಮತ್ತು ಅದು ಗ್ಯಾಸ್ ಸ್ಟವ್ ಮೇಲೆ ಇರಿಸಿ ಮಾಡಿದಂತೆಯೇ ತುಂಬಾನೇ ಸ್ವಾದಿಷ್ಟಕರವಾಗಿರುತ್ತದೆ ಅಂತ ಆ ವ್ಯಕ್ತಿ ಹೇಳುತ್ತಾನೆ.
ವಿಡಿಯೋ ಫುಲ್ ವೈರಲ್
ಈ ವಿಡಿಯೋ ಈಗ 1.5 ಮಿಲಿಯನ್ ವೀಕ್ಷಣೆಗಳು ಮತ್ತು ಟನ್ ಗಟ್ಟಲೆ ಪ್ರತಿಕ್ರಿಯೆಗಳನ್ನು ಗಳಿಸಿದೆ. ವಿಡಿಯೋ ನೋಡಿದ ಕೆಲವು ಜನರು ಆಶ್ಚರ್ಯಚಕಿತರಾದರು. ಇನ್ನೂ ಕೆಲವರು ಶಾಖದ ಪರಿಸ್ಥಿತಿಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರೆ, ಇತರರು ಜಾಸ್ತಿ ಸಮಯದವರೆಗೆ ಮನೆಯಿಂದ ಹೊರಗೆ ಇರದಂತೆ ಆ ವ್ಯಕ್ತಿಗೆ ಸಲಹೆ ನೀಡಿದ್ದಾರೆ.
ಈ ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ಇದು ಅದ್ಭುತವಾಗಿದೆ" ಎಂದು ಹೇಳಿದ್ದಾರೆ. "ಇದು ನಿಜವೆಂದು ನಂಬಲು ಸಹ ಸಾಧ್ಯವಿಲ್ಲ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ