Marriage with Doll: ಇವನಿಗೆ ಬೊಂಬೆ ಮೇಲೆ ಪ್ಯಾರ್‌ಗೇ ಆಗ್ಬಿಟ್ಟೈತೆ! ಅದನ್ನೇ ಮದ್ವೆಯಾಗ್ತಾನಂತೆ ಈ ಭೂಪ!

ಈಗೆಲ್ಲ ತನ್ನನ್ನೇ ತಾನು ಮದುವೆಯಾಗುವ ಪದ್ಧತಿಯೂ (Sologamy) ಶುರುವಾಗಿದೆ. ವಿದೇಶಗಳಲ್ಲಂತೂ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ಮದುವೆಯಾಗುವ ಭೂಪರೂ ಇದ್ದಾರೆ. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ಈ ಯುವಕ. ಈ ಮಹಾನುಭಾವ ಹೆಣ್ಣು ಗೊಂಬೆಯೊಂದನ್ನು (Doll) ಪ್ರೀತಿಸುತ್ತಾ ಇದ್ದು, ಇದೀಗ ಅದನ್ನೇ ಮದುವೆಯಾಗಲು ತಯಾರಿ ಮಾಡಿಕೊಂಡಿದ್ದಾನೆ!

ಗೊಂಬೆ ಜೊತೆ ಮದುವೆಯಾಗಲು ಮುಂದಾದ ಯುವಕ

ಗೊಂಬೆ ಜೊತೆ ಮದುವೆಯಾಗಲು ಮುಂದಾದ ಯುವಕ

  • Share this:
“ಒಂದು ಗಂಡಿಗೆ (Boy) ಒಂದು ಹೆಣ್ಣು (Girl)” ಎನ್ನುವುದು ಹಿಂದಿನ ಕಾಲದ ಸಂಪ್ರದಾಯ. ಆದರೆ ಕಾಲ ಬದಲಾದಂತೆ ಮದುವೆ (Marriage), ಸಂಸಾರ (Family) ಎನ್ನುವ ಕಾನ್ಸೆಪ್ಟ್ (Concept) ಕೂಡ ಬದಲಾಗಿದೆ. ಈಗೆಲ್ಲ ಗಂಡು ಗಂಡು (Men and Men), ಹೆಣ್ಣು ಹೆಣ್ಣು (Women and Women) ಮದುವೆಯಾಗುವುದು ಕಾಮನ್ ಆಗಿದೆ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನನ್ನೇ ತಾನು ಮದುವೆಯಾಗುವ ಪದ್ಧತಿಯೂ (Sologamy) ಶುರುವಾಗಿದೆ. ವಿದೇಶಗಳಲ್ಲಂತೂ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ಮದುವೆಯಾಗುವ ಭೂಪರೂ ಇದ್ದಾರೆ. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ಈ ಯುವಕ. ಈ ಮಹಾನುಭಾವ ಹೆಣ್ಣು ಗೊಂಬೆಯೊಂದನ್ನು (Doll) ಪ್ರೀತಿಸುತ್ತಾ (Love) ಇದ್ದು, ಇದೀಗ ಅದನ್ನೇ ಮದುವೆಯಾಗಲು ತಯಾರಿ ಮಾಡಿಕೊಂಡಿದ್ದಾನೆ!

ಗೊಂಬೆ ಜೊತೆ ಮದುವೆಯಾಗಲು ನಿರ್ಧರಿಸಿದ ಭೂಪ!

@montbk5959 ಎಂಬ ಹೆಸರಿನ ಸೋಶಿಯಲ್ ಮೀಡಿಯಾ ಬಳಕೆದಾರರು ಇಂಥದ್ದೊಂದು ವಿಚಿತ್ರ ಪೋಸ್ಟ್ ಹಾಕಿದ್ದಾರೆ. ತಾನು ಗೊಂಬೆಯನ್ನು ಮದುವೆಯಾಗಲು ನಿರ್ಧರಿಸಿದ್ದಾಗಿ ಆತ ತಿಳಿಸಿದ್ದಾನೆ.  ರಾಗ್‌ ಡಾಲ್ ಎಂಬ ವಿಚಿತ್ರ ಗೊಂಬೆಯನ್ನು ಆತ ಮದುವೆಯಾಗುತ್ತಾನಂತೆ!

ಗೊಂಬೆ ಜೊತೆ ಮದುವೆಗೆ ನಿರ್ಧಾರ


5 ವರ್ಷಗಳಿಂದ ಈ ಗೊಂಬೆ ಜೊತೆ ಡೇಟಿಂಗ್!


ಈ ವ್ಯಕ್ತಿ ರಾಗ್‌ ಡಾಲ್‌ ಜೊತೆ ಕಳೆದ 5 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದು, ಪ್ರೀತಿ ಮಾಡುತ್ತಿದ್ದಾನಂತೆ. ಅದಕ್ಕೆ ನಟಾಲಿಯಾ ಅಂತ ಹೆಸರಿಟ್ಟಿದ್ದು, ಅದರೊಂದಿಗೆ ಗಾಢ ಪ್ರೀತಿಯಲ್ಲಿ ಬಿದ್ದಿದ್ದಾನಂತೆ!

ನಟಾಲಿಯಾ ಜೊತೆ ಯುವಕನ ಪ್ರೀತಿ


ಇದನ್ನೂ ಓದಿ: Goat Marriage: ಡೌರಿ ಕೊಟ್ಟು ಹೆಣ್ಣು ಮೇಕೆಯನ್ನು ಮದುವೆಯಾದ ಭೂಪ! ಕಾರಣ ಕೇಳಿದ್ರೆ ಬಿದ್ದೂ ಬಿದ್ದೂ ನಗ್ತೀರಿ

ಇತ್ತೀಚಿಗೆ ಲವ್ ಆ್ಯನಿವರ್ಸರಿ ಆಚರಿಸಿಕೊಂಡ ಜೋಡಿ!

ಈ ವ್ಯಕ್ತಿ ತನ್ನ ಗೊಂಬೆ ಪ್ರೇಯಸಿ ನಟಾಲಿಯಾ ಜೊತೆ ಇತ್ತೀಚಿಗಷ್ಟೇ ಪ್ರೀತಿಯ ವಾರ್ಷಿಕೋತ್ಸವ ಆಚರಿಸಿ ಕೊಂಡಿದ್ದಾನಂತೆ. ಈತ ಈ ನಟಾಲಿಯಾ ಎಂಬ ಗೊಂಬೆ ಜೊತೆ ವಾಕಿಂಗ್‌ಗೆ ಹೋಗುತ್ತಾನಂತೆ, ಶಾಪಿಂಗ್‌ಗೆ ಹೋಗುತ್ತಾನಂತೆ! ಅಷ್ಟೇ ಅಲ್ಲ, ಆ ಗೊಂಬೆಯನ್ನು ತನ್ನ ಮನೆಯವರಿಗೆ ಪರಿಚಯಿಸಿದ್ದಾಗಿಯೂ ಹೇಳಿದ್ದಾನೆ. ಆ ಗೊಂಬೆ ಜೊತೆಗೆ ಆತ ಜಾಲಿಯಾಗಿರುವ ವಿಡಿಯೋಗಳನ್ನೂ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾನೆ.

ಗೊಂಬೆ ಜೊತೆಯೇ ಮಲಗುವ ವ್ಯಕ್ತಿ


ಸೋಶಿಯಲ್ ಮೀಡಿಯಾದಲ್ಲಿ ಮದುವೆ ನಿರ್ಧಾರ ಪ್ರಕಟ

ಈ ಗೊಂಬೆ ಮೇಲೆ ನನಗೆ ಲವ್ ಆಗಿದೆ, ನಾನು ಇದನ್ನು ಮದುವೆಯಾಗಲು ನಿರ್ಧಾರ ಮಾಡಿದ್ದೇನೆ ಅಂತ ಈ ವ್ಯಕ್ತಿ ತನ್ನ @montbk5959 ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.

ನೆಟ್ಟಿಗರಿಂದ ಚಿತ್ರ, ವಿಚಿತ್ರ ಕಾಮೆಂಟ್‌

ನನ್ನ ಪ್ರೇಯಸಿ ಗೊಂಬೆಯೊಂದಿಗೆ ನಾನು ಟಿವಿ ನೋಡುತ್ತೇನೆ. ಅಷ್ಟೇ ಅಲ್ಲ ನಾನು ಆಕೆಯೊಂದಿಗೆ ಎಲ್ಲದರ ಬಗ್ಗೆ ಮಾತನಾಡುತ್ತೇವೆ. ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಅವರಿಗೆ ತಿಳಿದಿಲ್ಲ, ನಾನು ಅವಳೊಂದಿಗೆ ನಾನು ಮದುವೆಯಾಗಲು ಯೋಜಿಸುತ್ತೇನೆ. ಈ ಗೊಂಬೆ ಇಲ್ಲದಿದ್ದರೆ ನಾನು ಲೈಫ್‌ ನಲ್ಲಿ ಎಷ್ಟು ಒಂಟಿಯಾಗಿ ಇರುತ್ತಿದ್ದೆ ಎಂಬುವುದನ್ನು ಕಲ್ಪನೆ ಮಾಡಿಕೊಳ್ಳಲೂ ನನ್ನಿಂದ ಆಗುವುದಿಲ್ಲ" ಅಂತ ಆತ ಹೇಳಿದ್ದಾನೆ. ಆತ ಸುಮಾರು 9 ಸಾವಿರ ಫಾಲೋವರ್ಸ್ ಹೊಂದಿದ್ದು, ನೆಟ್ಟಿಗರು ಆತನ ನಿರ್ಧಾರದ ಬಗ್ಗೆ ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಮೊಸಳೆ ಜೊತೆ ಮೇಯರ್ ಮದುವೆ! ಅದ್ಧೂರಿ ಕಲ್ಯಾಣೋತ್ಸವಕ್ಕೆ ಸಾಕ್ಷಿಯಾದ ಜನ

ಗೊಂಬೆಯನ್ನೇ ಮದುವೆಯಾಗಿ ಸಂಸಾರ ಮಾಡಿದ್ದ ಮಹಿಳೆ

ಇದು ಈ ವಿಚಿತ್ರ ವ್ಯಕ್ತಿಯ ಕಥೆಯಾದರೆ, ಮತ್ತೊಂದೆಡೆ ಮೇರಿವೊನ್ನೆ ರೊಚಾ ಮೊರೇಸ್ ಎಂಬ ಮಹಿಳೆ ತನ್ನ ಗೊಂಬೆ ಮಾರ್ಸೆಲೊವನ್ನು  ಮದುವೆಯಾಗಿದ್ದಳು. ಅವಳು ಕೆಲ ವರ್ಷಗಳಿಂದ ಒಂಟಿಯಾಗಿದ್ದಳು. ಬಳಿಕ ಗೊಂಬೆಯೊಂದನ್ನು ಪ್ರೀತಿಸಿ ಮದುವೆಯನ್ನೂ ಆಗಿದ್ದಳು. ಆ ಗೊಂಬೆಗೆ ಮಾರ್ಸೆಲ್ಲೋ ಅಂತ ಹೆಸರಿಟ್ಟು, ನನ್ನ ಗಂಡ ಅಂತ ಹೇಳಿ ಕೊಂಡಿದ್ದಳು. ಅವನು ನನ್ನೊಂದಿಗೆ ಜಗಳವಾಡುವುದಿಲ್ಲ, ವಾದ ಮಾಡುವುದಿಲ್ಲ, ಅವನು ನನ್ನನ್ನು ಅರ್ಥಮಾಡಿಕೊಳ್ಳುತ್ತಾನೆ. ಮಾರ್ಸೆಲೊ ಒಬ್ಬ ಶ್ರೇಷ್ಠ ಮತ್ತು ನಿಷ್ಠಾವಂತ ಪತಿ ಎಂದು ಆಕೆ ಹೇಳಿಕೊಂಡಿದ್ದಳು.
Published by:Annappa Achari
First published: