Smallest Gun: ವಿಶ್ವದ ಅತ್ಯಂತ ಚಿಕ್ಕ ರಿವಾಲ್ವರ್ ಬೆಲೆ ಬರೋಬ್ಬರಿ 5 ಲಕ್ಷ ರೂ. ಇದರ ತೂಕ ಕೇವಲ 19.8 ಗ್ರಾಂ!

ಚಿಕ್ಕ ಬಂದೂಕಿನ ಬೆಲೆಯನ್ನು ಕೇಳಿ ನೀವು ಹೌಹಾರಬಹುದು. ಏಕೆಂದರೆ ಈ ಬಂದೂಕಿನ ಮೌಲ್ಯ 5 ಲಕ್ಷ ರೂ. ಬಂದೂಕಿನ ಚಿನ್ನದ ಆವೃತ್ತಿಯೂ ಲಭ್ಯವಿದ್ದು ಇದರ ಬೆಲೆ ಸರಿ ಸುಮಾರು 50 ಸಾವಿರ ಅಮೆರಿಕನ್ ಡಾಲರ್ ಅಂದರೆ 3, 76,68,075 ಇದೆ ಮತ್ತು ಇದನ್ನು ವಿಶೇಷ ಆಯೋಗಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ.

ವಿಶ್ವದ ಅತ್ಯಂತ ಚಿಕ್ಕ ರಿವಾಲ್ವರ್

ವಿಶ್ವದ ಅತ್ಯಂತ ಚಿಕ್ಕ ರಿವಾಲ್ವರ್

 • Share this:
  ಬಂದೂಕಿನಿಂದ (Gun) ಹಾರಿಸಿದ ಗುಂಡು ಯಾರನ್ನಾದರೂ ಕೊಲ್ಲಬಹುದು. ಗನ್‍ಗಳು ಎಷ್ಟು ದುಬಾರಿಯೋ ಅಷ್ಟೇ ಅಪಾಯಕಾರಿಯೂ ಹೌದು. ವಿಶ್ವದ ಅತ್ಯುನ್ನತ ಬಂದೂಕಿನ ಬೆಲೆ ಕೂಡ ಸಾವಿರಗಳಲ್ಲಿ ಇಲ್ಲ. ಲಕ್ಷಗಳಲ್ಲಿ ಇವೆ. ವಿಶ್ವದಲ್ಲಿ ಅತಿದೊಡ್ಡ ಗನ್‍ನಿಂದ (World Biggest Gun) ಹಿಡಿದು 19.8 ಗ್ರಾಂ ತೂಗುವ ಚಿಕ್ಕ ಗಾತ್ರದ ಗನ್‍ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ವಿಶ್ವದ ಅತ್ಯಂತ ಚಿಕ್ಕ ಗನ್ (World Biggest Gun Or Revolver) ಅಥವಾ ರಿವಾಲ್ವರ್ ಕೇವಲ 19.8 ಗ್ರಾಂ ತೂಕವಿದ್ದು, ಇದು ನಿಮ್ಮ ಅಂಗೈಗಿಂತ ಚಿಕ್ಕದಾಗಿದೆ. ಆದರೆ ಇದರ ಬೆಲೆ ಬರೋಬ್ಬರಿ 5 ಲಕ್ಷ ರೂ. ದಿಗ್ಭ್ರಮೆಯಾಯಿತೇ? ಬಂದೂಕಿನ ಬೆಲೆ ಮಾತ್ರ ಆಶ್ಚರ್ಯಕರ ಎನಿಸುವುದಿಲ್ಲ. ಬಂದೂಕಿನ ಹೆಸರು ಸಿ1ಎಸ್‍ಟಿ ಮತ್ತು ಇದು ಸ್ಟೇನ್ಲೆಸ್ ಸ್ಟೀಲ್ ಮಾದರಿಯಿಂದ ಕೂಡಿದೆ.

  "ಈ ಬಂದೂಕು 1 ಜೌಲ್‍ಗಿಂತ ಕಡಿಮೆ ಶಕ್ತಿ ಹೊಂದಿರುವುದರಿಂದ ಯಾರೊಬ್ಬರ ಜೀವ ತೆಗೆಯುವುದು ಸ್ವಲ್ಪ ಕಷ್ಟ. ಒಬ್ಬನು ಯಾರನ್ನಾದರೂ ಕೊಲ್ಲಬೇಕಾದರೆ, ಸಣ್ಣ ಬುಲೆಟ್ ಅನ್ನು ತಲೆಬುರುಡೆಯ ಅತ್ಯಂತ ದುರ್ಬಲ ಭಾಗಕ್ಕೆ ತೀರಾ ಹತ್ತಿರದ ವ್ಯಾಪ್ತಿಯಿಂದ ಹೊಡೆಯಬೇಕು. ಆಗ ಈ ಗನ್ ಇನ್ನೊಬ್ಬರ ಜೀವವನ್ನು ತೆಗೆದುಕೊಳ್ಳಬಹುದು, ಆದರೆ ಮತ್ತೊಮ್ಮೆ ನೀವು ಇಟ್ಟಿರುವ ಗುರಿ ಎಷ್ಟು ಹತ್ತಿರದಲ್ಲಿದೆ ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆ ಎಂದು ಬಂದೂಕಿನ ತಯಾರಕರು ಹೇಳುತ್ತಾರೆ.

  ವರದಿಗಳ ಪ್ರಕಾರ, ವಿಶ್ವದ ಅತ್ಯಂತ ಚಿಕ್ಕ ರಿವಾಲ್ವರ್ ಅನ್ನು ಸ್ವಿಸ್ ಮಿನಿ ಗನ್ ಎನ್ನಲಾಗುತ್ತದೆ. ಇದು ಕೂಡ ಯಾವುದೇ ಇತರ ಬಂದೂಕಿನಂತೆ ಗುಂಡು ಹಾರಿಸಬಹುದು ಮತ್ತು ಕಾರ್ಯನಿರ್ವಹಿಸಬಹುದು. ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಇದರ ಹೆಸರನ್ನು ಸೇರಿಸಲಾಗಿದ್ದು, ವಿಶ್ವದ ಅತ್ಯಂತ ಚಿಕ್ಕ ರಿವಾಲ್ವರ್ ಎಂದು ಉಲ್ಲೇಖಿಸಲಾಗಿದೆ. ಈ ಗನ್ 5.5-ಸೆಂಮೀ ಉದ್ದ ಮತ್ತು 1 ಸೆಂ. ಮೀ ಅಗಲ ಹೊಂದಿದ್ದು, ಕೇವಲ 19.8 ಗ್ರಾಂ ತೂಕ ಹೊಂದಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್‍ನಂತಹ ದೇಶಗಳು ಅದರ ಸಣ್ಣ ಗಾತ್ರದ ಕಾರಣದಿಂದಾಗಿ ಅದರ ಆಮದನ್ನು ನಿಷಧಿಸಿವೆ. ಏಕೆಂದರೆ ಈ ಬಂದೂಕನ್ನು ಬಟ್ಟೆಗಳಲ್ಲಿ ಸುಲಭವಾಗಿ ಮರೆಮಾಡಬಹುದು ಮತ್ತು ಜೊತೆಗೆ ಸಾಗಿಸಬಹುದು.

  ರಿವಾಲ್ವರ್‍ನ ಸಿ1ಎಸ್‍ಟಿ ಸ್ಟೇನ್ಲೆಸ್ ಸ್ಟೀಲ್ ಮಾದರಿಯನ್ನು ಸ್ವಿಸ್ ವಾಚ್ ಮೇಕಿಂಗ್ ಮತ್ತು ಆಭರಣಗಳಲ್ಲಿ ಬಳಸುವ ತಂತ್ರಜ್ಞಾನದಿಂದ ಮಾಡಲಾಗಿದೆ. ಇದು ಸೊಗಸಾದ ಚರ್ಮದ ಹೋಲ್ಡರ್ ಅನ್ನು ಒಳಗೊಂಡಿದೆ. ಈ ಗನ್‍ನಿಂದ 24 ಲೈವ್ ಮತ್ತು 24 ಖಾಲಿ ಕಾಟ್ರ್ರಿಡ್ಜ್‍ಗಳನ್ನು ಹೊಡೆದು ಹಾಕಬಹುದು ಮತ್ತು ಅದನ್ನು ಕೀ ರಿಂಗ್ ಸಹಾಯದಿಂದ ಬೆಲ್ಟ್ ನಿಂದ ನೇತು ಹಾಕಬಹುದು.

  ಇದನ್ನು ಓದಿ: Reliance Jio: 20.9 ಎಂಬಿಪಿಎಸ್ ಡೌನ್ಲೋಡ್ ವೇಗದೊಂದಿಗೆ 4ಜಿ ಚಾರ್ಟ್​ನಲ್ಲಿ ಮುಂಚೂಣಿ ಸ್ಥಾನ ಪಡೆದ ಜಿಯೋ!

  ಚಿಕ್ಕ ಬಂದೂಕಿನ ಬೆಲೆಯನ್ನು ಕೇಳಿ ನೀವು ಹೌಹಾರಬಹುದು. ಏಕೆಂದರೆ ಈ ಬಂದೂಕಿನ ಮೌಲ್ಯ 5 ಲಕ್ಷ ರೂ. ಬಂದೂಕಿನ ಚಿನ್ನದ ಆವೃತ್ತಿಯೂ ಲಭ್ಯವಿದ್ದು ಇದರ ಬೆಲೆ ಸರಿ ಸುಮಾರು 50 ಸಾವಿರ ಅಮೆರಿಕನ್ ಡಾಲರ್ ಅಂದರೆ 3, 76,68,075 ಇದೆ ಮತ್ತು ಇದನ್ನು ವಿಶೇಷ ಆಯೋಗಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ.

  ಈ ಚಹಾದ ಬೆಲೆ 1 ಸಾವಿರ ರೂಪಾಯಿ!

  ಎಲ್ಲರೂ ಒಂದು ಕಪ್ ಚಹಾಗೆ ಎಷ್ಟು ಹಣ ಪಾವತಿಸಬಹುದು? ಸಾಮಾನ್ಯವಾಗಿ ಒಂದು ಕಪ್ ಟೀ ಬೆಲೆ 10 ರಿಂದ 20 ರೂ ಇರುತ್ತದೆ. ಇಲ್ಲವಾದಲ್ಲಿ ತುಂಬಾ ವಿಶೇಷವಾದುದಾದರೆ 100 ರೂ. ನೀಡಿ ಟೀ ಸವಿಯನ್ನು ಸವಿಯಬಹುದು. ಸಾಮಾನ್ಯವಾಗಿ ಕಾಫಿ ಉದ್ಯಮ ಅದರದ್ದೇ ಆದ ಬ್ರಾಂಡ್​ ಹೊಂದಿದೆ. ಈ ಕಾರಣಕ್ಕಾಗಿ ಒಂದು ಕಪ್​ ಕಾಫಿಗೆ ಸಾವಿರಾರು ರೂಪಾಯಿಯನ್ನೂ ಕೆಲವೆಡೆ ಪಾವತಿಸಬೇಕು. ಆದರೆ ಟೀಗೆ ಆ ರೀತಿಯ ಬ್ರಾಂಡ್​ ಇನ್ನೂ ಬಂದಿಲ್ಲ. ಹೀಗಿರುವಾಗ ಹೈದಾರಾಬಾದ್‍ನಲ್ಲಿ ಒಂದು ಕಪ್ ಚಹಾಕ್ಕೆ 1000 ರೂ. ಪಾವತಿಸಬೇಕು. Hyderabadನ ನಿಲೌಫರ್ ಕೆಫೆ ಒಂದು ಕಪ್ ಟೀಯನ್ನು ಪರಿಚಯಿಸಿದೆ ಮತ್ತು ಇದರ ಬೆಲೆ 1,000 ರೂಪಾಯಿ ಎಂದು ಕೆಫೆಯ ಆಡಳಿತ ಹೇಳಿದೆ. ಮೊದಲಿಗೆ, ಇದನ್ನು ಚಹಾ ಎಲೆಗಳಿಂದ ತಯಾರಿಸಲಾಗುತ್ತದೆ. ಇದರ ಬೆಲೆ ಕೆಜಿಗೆ 75,000 ಎಂದು ಕಂಪೆನಿ ನಿರ್ದೇಶಕರು ಹೇಳಿದ್ದಾರೆ.
  Published by:HR Ramesh
  First published: