ಲಂಡನ್ನಲ್ಲಿ ನೆಲದಿಂದ 115 ಅಡಿ ಎತ್ತರದಲ್ಲಿ ನೆರೆಹೊರೆಯ ಎರಡು ಕಟ್ಟಡಗಳ 10ನೇ ಮಹಡಿಯ ನಡುವೆ 'ಸ್ಕೈ ಪೂಕ್' ಎಂದು ಕರೆಯಲ್ಪಡುವ 82 ಅಡಿ ಉದ್ದದ ತೇಲುವ ಪಾರದರ್ಶಕ ಈಜುಕೊಳವನ್ನು ನಿರ್ಮಿಸಲಾಗಿದ್ದು, ಈ ಈಜುಕೊಳದ ಪೋಟೋ ಮತ್ತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ ಲಂಡನ್ ರಾಯಭಾರ ಕಚೇರಿಯಲ್ಲಿ ಈಜುಕೊಳ ವನ್ನು ನಿರ್ಮಿಸಲಾಗಿದ್ದು, ಇದಕ್ಕೆ 50 ಟನ್ ನೀರನ್ನು ತುಂಬಿಸಲಾಗಿದ್ದು, ಮೇಲ್ಚಾವಣಿಯಲ್ಲಿ ಬಾರ್ ಮತ್ತು ಸ್ಪಾವನ್ನು ಸಹ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ರಚನಾತ್ಮಕ ಎಂಜಿನಿಯರ್ಗಳಾದ ಎಕರ್ಸ್ಲೆ ಒ'ಕಲ್ಲಾಗನ್ ಈ ಈಜುಕೊಳವನ್ನು ನಿರ್ಮಿಸಿದ್ದಾರೆ ಎಂದು ತಿಳಿದುಬಂದಿದೆ.
View this post on Instagram
ಇದು ವಿಶ್ವದ ಮೊಟ್ಟ ಮೊದಲ 'ಸ್ಕೈ ಪೂಲ್' ಆಗಿದ್ದು, ಮೇ 19 ರಂದು ಈ ಈಜುಕೊಳಕ್ಕೆ ಚಾಲನೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ