Ikipalin: ಸಂಬಂಧಿಕರು ಸಾವನ್ನಪ್ಪಿದರೆ ತಮ್ಮ ಬೆರಳುಗಳನ್ನು ಕತ್ತರಿಸಿಕೊಳ್ತಾರೆ ಈ ಮಹಿಳೆಯರು!

ಈ ಬುಡಕಟ್ಟು ಜನರು ಅನುಸರಿಸುವ ಕೆಲವು ಆಚರಣೆಗಳು ಎಷ್ಟು ವಿಲಕ್ಷಣವಾಗಿವೆ ಎಂದು ನಮಗೆ ಅನ್ನಿಸಬಹುದು. ಏಕೆಂದರೆ ಅವರಿಗೆ ನೋವು ಮಾಡಿಕೊಳ್ಳುವಂತಹ ಆಚರಣೆಗಳನ್ನು ಪಾಲಿಸುತ್ತಾರೆ. ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ದಾನಿ ಬುಡಕಟ್ಟಿನವರು ಇನ್ನೂ ಅನುಸರಿಸುತ್ತಿರುವ ಅಂತಹ ಒಂದು ವಿಚಿತ್ರ ಸಂಪ್ರದಾಯದ ಬಗ್ಗೆ ನೀವು ಕೇಳಿದರೆ ಒಂದು ಕ್ಷಣ ನಿಮಗೆ ಭಯವಾಗದೆ ಇರದು.

ಬೆರಳುಗಳನ್ನು ಕತ್ತರಿಸುವ ವಿಚಿತ್ರ ಸಂಪ್ರದಾಯ

ಬೆರಳುಗಳನ್ನು ಕತ್ತರಿಸುವ ವಿಚಿತ್ರ ಸಂಪ್ರದಾಯ

  • Share this:
ನಮ್ಮ ಜಗತ್ತು ತಂತ್ರಜ್ಞಾನದಲ್ಲಿ (Technology) ಮತ್ತು ವಿಜ್ಞಾನದಲ್ಲಿ ಎಷ್ಟೇ ಮುಂದುವರೆದಿದ್ದರೂ ಮತ್ತು ಹೊಸ ಹೊಸ ಸಂಶೋಧನೆಗಳನ್ನು ಮಾಡಿದರೂ ಸಹ ಜಗತ್ತಿನ ಕೆಲವು ಮೂಲೆಗಳಲ್ಲಿ ವಾಸಿಸುವಂತಹ ಜನರು ತಮ್ಮ ಹಳೆಯ ಪದ್ದತಿಗಳನ್ನೇ ಮತ್ತು ಸಂಪ್ರದಾಯಗಳನ್ನೇ (Tradition) ಯಾವುದೇ ತಾರ್ತಿಕವಾದ ಕಾರಣವನ್ನು ಹುಡುಕಲು ಪ್ರಯತ್ನಿಸದೆ ಜಾಣ ಕುರುಡರಂತೆ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂಬುದನ್ನು ನಾವು ಅನೇಕ ಬಾರಿ ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಗಳಿಂದ ತಿಳಿದುಕೊಂಡಿರುತ್ತೇವೆ. ಹೌದು.. ಈ ಪ್ರಪಂಚದಲ್ಲಿ ನಮಗೆ ಗೊತ್ತಿಲ್ಲದ ಅನೇಕ ಸಾಂಸ್ಕೃತಿಕ ಸಂಪ್ರದಾಯಗಳು (Cultural Tradition) ಮತ್ತು ಆಚರಣೆಗಳು ಇನ್ನೂ ಅಸ್ತಿತ್ವದಲ್ಲಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ವಿಶೇಷವಾಗಿ ಪ್ರಪಂಚದಾದ್ಯಂತ ಕಂಡು ಬರುವ ಹಲವಾರು ಬುಡಕಟ್ಟು ಜನಾಂಗಗಳಿಗೆ ಇದು ಹೆಚ್ಚಾಗಿ ಅನ್ವಯಿಸುತ್ತದೆ.

ಇಂಡೋನೇಷ್ಯಾದ ಬುಡಕಟ್ಟು ಜನರ ವಿಚಿತ್ರ ಸಂಪ್ರದಾಯ 
ಈ ಬುಡಕಟ್ಟು ಜನರು ಅನುಸರಿಸುವ ಕೆಲವು ಆಚರಣೆಗಳು ಎಷ್ಟು ವಿಲಕ್ಷಣವಾಗಿವೆ ಎಂದು ನಮಗೆ ಅನ್ನಿಸಬಹುದು. ಏಕೆಂದರೆ ಅವರಿಗೆ ನೋವು ಮಾಡಿಕೊಳ್ಳುವಂತಹ ಆಚರಣೆಗಳನ್ನು ಪಾಲಿಸುತ್ತಾರೆ. ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ದಾನಿ ಬುಡಕಟ್ಟಿನವರು ಇನ್ನೂ ಅನುಸರಿಸುತ್ತಿರುವ ಅಂತಹ ಒಂದು ವಿಚಿತ್ರ ಸಂಪ್ರದಾಯದ ಬಗ್ಗೆ ನೀವು ಕೇಳಿದರೆ ಒಂದು ಕ್ಷಣ ನಿಮಗೆ ಭಯವಾಗದೆ ಇರದು.

ಏನಪ್ಪಾ.. ಇಂತಹ ಭಯವಾಗುವಂತಹ ಸಂಪ್ರದಾಯ ಅಂತ ನೀವು ಸ್ವಲ್ಪ ಯೋಚಿಸಬಹುದು. ಈ ಬುಡಕಟ್ಟಿನ ಜನರು ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಕುಟುಂಬ ಸದಸ್ಯರ ಮರಣದ ನಂತರ ತಮ್ಮ ಕೈಯಲ್ಲಿರುವ ಬೆರಳುಗಳನ್ನು ಕತ್ತರಿಸಿಕೊಳ್ಳುತ್ತಾರಂತೆ ಎಂದು ಹೇಳಲಾಗುತ್ತಿದೆ. ಅಬ್ಬಾ..ಎಂತಹ ನೋವಿನ ಸಂಗತಿ ಅಲ್ಲವೇ? ಪ್ರೀತಿ ಪಾತ್ರರ ಸಾವಿನ ಸುದ್ದಿ ಕೇಳಿಯೇ ನೋವು ಅನುಭವಿಸುತ್ತಿರುವ ಜನರು ತಮ್ಮ ಬೆರಳನ್ನು ಕತ್ತರಿಸಿಕೊಂಡು ಇನ್ನಷ್ಟು ನೋವು ಅನುಭವಿಸುವರೆ ಎಂದು ನೀವು ಮತ್ತು ನಾವು ಯೋಚಿಸುತ್ತಿರಬಹುದು. ಆದರೆ ಇದಕ್ಕೆ ಇವರು ನೀಡುವ ಕಾರಣ ಬೇರೆಯೇ ಇದೆ ನೋಡಿ.

ಇಕಿಪಾಲಿನ್  ಪದ್ಧತಿ
ಇಂಡೋನೇಷ್ಯಾ ಸರ್ಕಾರವು ದ್ವೀಪ ಸಮೂಹದಲ್ಲಿ ಈ ಪದ್ಧತಿಯನ್ನು ನಿಷೇಧಿಸಿದ್ದರೂ ಸಹ ಜಯವಿಜಯ ಪ್ರಾಂತ್ಯದಲ್ಲಿ ವಾಸಿಸುವ ದಾನಿ ಬುಡಕಟ್ಟು ಜನಾಂಗದವರು ಇಕಿಪಾಲಿನ್ ಎಂದು ಕರೆಯಲ್ಪಡುವ ಈ ವಿಶಿಷ್ಟ ಪದ್ಧತಿಯನ್ನು ಇನ್ನೂ ಹಾಗೆಯೇ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಕಿಪಾಲಿನ್ ಎಂಬುದು ಒಂದು ಆಚರಣೆಯಾಗಿದ್ದು, ಒಂದು ಕುಟುಂಬದ ಪ್ರೀತಿಯ ಸದಸ್ಯನ ಮರಣದ ನಂತರ, ಮನೆಯ ಮಹಿಳೆಯರು ತಮ್ಮ ಬೆರಳಿನ ಮೇಲ್ಭಾಗವನ್ನು ಕತ್ತರಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ಅಂಗಚ್ಛೇದನವು ಪೂರ್ಣಗೊಂಡ ನಂತರ, ಅವರ ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ನೀಡಲಾಗುತ್ತದೆ ಎಂದು ಅವರ ನಂಬಿಕೆಯಾಗಿದೆಯಂತೆ.

ಇದನ್ನೂ ಓದಿ:Self Love: ಈ ಸ್ಟೋರಿ ಓದಿದ್ರೆ ನಿಮಗೆ ನಿಮ್ಮ ಮೇಲೆ ಲವ್ವಾಗೋದು ಗ್ಯಾರೆಂಟಿ! ಅಷ್ಟಕ್ಕೂ ಏನಿದೆ ನೋಡಿ

ಬೆರಳು ಕತ್ತರಿಸುವ ಉದ್ದೇಶವೇನು?
ರಕ್ತ ಪರಿಚಲನೆಯನ್ನು ತಡೆಗಟ್ಟಲು ಮಹಿಳೆಯ ಬೆರಳನ್ನು ಹಗ್ಗದಿಂದ ಸುರಕ್ಷಿತವಾಗಿ ಕಟ್ಟುವ ಮೂಲಕ ಈ ಅಭ್ಯಾಸವನ್ನು ಕಾರ್ಯಗತಗೊಳಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ, ಅದನ್ನು ಕತ್ತರಿಸಲು ಕೊಡಲಿಯನ್ನು ಬಳಸಲಾಗುತ್ತದೆ. ಈ ಎಲ್ಲಾ ಕಾರ್ಯ ವಿಧಾನವು ಪೂರ್ಣಗೊಂಡ ನಂತರ, ರಕ್ತಸ್ರಾವವನ್ನು ನಿಲ್ಲಿಸಲು ಬೆರಳುಗಳನ್ನು ಸುಡಲಾಗುತ್ತದೆ. ಬೆರಳನ್ನು ಕತ್ತರಿಸುವುದರಿಂದ ಕುಟುಂಬದ ಸದಸ್ಯನ ಸಾವಿನಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ದಾನಿ ಬುಡಕಟ್ಟು ಜನಾಂಗದವರು ಭಾವಿಸುತ್ತಾರೆ.

ಇದನ್ನೂ ಓದಿ:  Arthur: 8 ಹೆಂಡತಿಯರಿಗೆ ಬಂಗಲೆ ನಿರ್ಮಿಸುತ್ತಿರುವ ದೇವರಂಥಾ ಗಂಡ! ಅವರೊಂದಿಗೆ ಮುದ್ದಾಡಲು ಟೈಂ ಟೇಬಲ್​ ಕೂಡ ಫಿಕ್ಸ್

ತುಂಬಾನೇ ನೋವಿನಿಂದ ಕೂಡಿದ ಈ ಆಚರಣೆಯನ್ನು ನಿಷೇಧಿಸಲು ಅಲ್ಲಿನ ಸರ್ಕಾರವು ಅನೇಕ ಕಠಿಣ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದೆ. ಆದರೆ ಈ ಭಯಾನಕ ಸಂಪ್ರದಾಯವನ್ನು ಖಂಡಿಸಿ ಮತ್ತು ಅಂತಹ ನೋವಿನ ಸಂಪ್ರದಾಯಗಳನ್ನು ಮಹಿಳೆಯರ ಮೇಲೆ ಮಾತ್ರ ಏಕೆ ಹೇರಲಾಗಿದೆ ಮತ್ತು ಇವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಅಂತ ಪ್ರಶ್ನಿಸಿ ಅನೇಕ ಜನರು ಹಲವಾರು ಪ್ರತಿಭಟನೆಗಳನ್ನು ಸಹ ನಡೆಸಿದ್ದಾರೆ. ಆದರೆ ಇನ್ನೂ ಕೆಲವು ದ್ವೀಪಗಳಲ್ಲಿ ಮಾತ್ರ ಈ ಆಚರಣೆ ಹೀಗೆ ಮುಂದುವರೆದಿರುವುದನ್ನು ನಾವು ನೋಡಬಹುದು.
Published by:Ashwini Prabhu
First published: