Viral Video: ಬ್ರಹ್ಮಾಸ್ತ್ರ ಸಿನೆಮಾದಲ್ಲಿ ಅಲಿಯಾ ಪಾತ್ರವನ್ನು ಮಿಮಿಕ್ರಿ ಮಾಡಿದ ಮಹಿಳೆ, ಇಲ್ಲಿದೆ ವೈರಲ್ ವಿಡಿಯೋ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಚಾಂದಿನಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಅವರು ತುಂಬಾನೇ ಜನಪ್ರಿಯರಾಗಿದ್ದಾರೆ ಮತ್ತು ದಿಟ್ಟೋ ಆಲಿಯಾ ಭಟ್ ಅವರಂತೆಯೇ ಚಾಂದಿನಿ ಅವರು ಅನುಕರಿಸಿದ್ದಾರೆ.

ಅಲಿಯಾ ತರಹ ಮಿಮಿಕ್ರಿ ಮಾಡಿದ ಮಹಿಳೆ

ಅಲಿಯಾ ತರಹ ಮಿಮಿಕ್ರಿ ಮಾಡಿದ ಮಹಿಳೆ

  • Share this:
ಕೆಲವೊಬ್ಬರು ಯಾವುದಾದರೂ ಒಂದು ಚಲನಚಿತ್ರವನ್ನು (Movie) ಥಿಯೇಟರ್ ನಲ್ಲಿ ನೋಡಿ ಬಂದರೆ ಸಾಕು, ಅದರಲ್ಲಿರುವ ನಾಯಕ ನಟನ ಮತ್ತು ನಟಿಯ ಕೆಲವು ಸೂಪರ್ ಹಿಟ್ ಡೈಲಾಗ್ ಗಳನ್ನು ಮಿಮಿಕ್ರಿ (Mimicry) ಮಾಡಿ ಜನರಿಗೆ ತೋರಿಸುವುದು, ತಮ್ಮ ನೆಚ್ಚಿನ ನಟ ಮತ್ತು ನಟಿಯ ಡ್ಯಾನ್ಸ್ ಸ್ಟೆಪ್ ಗಳನ್ನು ಹಾಕಿ ತೋರಿಸುವುದರ ಮೂಲಕ ತಮ್ಮ ಸುತ್ತಮುತ್ತಲಿನ ಜನರನ್ನು ರಂಜಿಸುತ್ತಾರೆ. ಈ ಹಿಂದೆ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ (Pushpa) ಚಿತ್ರದಲ್ಲಿ ಮೂಡಿ ಬಂದ ಡೈಲಾಗ್ ಗಳನ್ನು ಮತ್ತು ಡ್ಯಾನ್ಸ್ ಸ್ಟೆಪ್ ಗಳನ್ನು ಅನೇಕರು ಕಾಪಿ ಮಾಡಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ (Video) ಹಂಚಿಕೊಂಡಿದ್ದನ್ನ ನಾವೆಲ್ಲಾ ನೋಡಿದ್ದೆವು.

ಇಷ್ಟೇ ಅಲ್ಲದೆ ಅದರಲ್ಲಿ ನಟಿ ಸಮಂತಾ ಮಾಡಿದ ‘ಉ ಅಂಟಾವಾ ಮಾವಾ, ಊಹೂ ಅಂಟಾವಾ ಮಾವ’ ಹಾಡಿನ ಡ್ಯಾನ್ಸ್ ಅಂತೂ ಅನೇಕರು ಮಾಡಿ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು ನಮಗೆ ಗೊತ್ತೇ ಇದೆ. ಈಗ ಅಭಿಮಾನಿಗಳಲ್ಲಿ ಹೊಸ ಚಿತ್ರದ ಕ್ರೇಜ್ ಮನೆ ಮಾಡಿದೆ.

ಗಲ್ಲಾಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ಬ್ರಹ್ಮಾಸ್ತ್ರ ಸಿನೆಮಾ 
ಈಗಾಗಲೇ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಅವರು ಅಭಿನಯಿಸಿದ ‘ಬ್ರಹ್ಮಾಸ್ತ್ರ’ ಚಿತ್ರ ದೊಡ್ಡ ಪರದೆಗೆ ಅಪ್ಪಳಿಸಿದ್ದು, ಇದು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆಯನ್ನು ಬರೆಯುವತ್ತ ಸಾಗಿರುವುದು ಅಭಿಮಾನಿಗಳಿಗೆ ಮತ್ತು ಬಾಲಿವುಡ್ ಗೆ ತುಂಬಾನೇ ಒಳ್ಳೆಯ ಸುದ್ದಿ. ಇದನ್ನು ನೋಡಿದ ಅಭಿಮಾನಿಗಳು ಸಹ ತುಂಬಾನೇ ಉತ್ಸಾಹದಲ್ಲಿದ್ದಾರೆ.

ಇದನ್ನೂ ಓದಿ:  Anushka Sharma and Virat Kohli: ಜಾಲಿಮೂಡ್‌ನಲ್ಲಿ ಕಿಂಗ್ ಕೊಹ್ಲಿ ದಂಪತಿ! ಲಂಡನ್‌ನ ಬೀದಿಗಳಲ್ಲಿ ವಿರಾಟ್-ಅನುಷ್ಕಾ ಸುತ್ತಾಟ

ಅಲಿಯಾ ಭಟ್ ಅವರ ಪಾತ್ರವನ್ನು ಅನುಕರಿಸುವ ವಿಡಿಯೋ ಮಹಿಳೆ
ಅಯಾನ್ ಮುಖರ್ಜಿ ಅವರ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಟಿ ಅಲಿಯಾ ಭಟ್, ನಟ ರಣಬೀರ್ ಕಪೂರ್ ಮತ್ತು ಬಿಗ್ ಬಿ ಅಮಿತಾಭ್ ಬಚ್ಚನ್ ಸೇರಿದಂತೆ ಇತರರು ನಟಿಸಿದ್ದು, ಈ ಚಿತ್ರವು ದೃಶ್ಯ ಔತಣಕ್ಕಾಗಿ ಜನಸಾಮಾನ್ಯರಿಂದ ಉತ್ತಮ ವಿಮರ್ಶೆಗಳನ್ನು ಪಡೆದಿದೆ. ಆದ್ದರಿಂದ, ಚಾಂದಿನಿ ಎಂಬ ಮಹಿಳೆ ಚಿತ್ರದಲ್ಲಿ ಅಲಿಯಾ ಭಟ್ ಅವರ ಪಾತ್ರವನ್ನು ಅನುಕರಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇಂಟರ್ನೆಟ್ ನಲ್ಲಿ ಈ ವಿಡಿಯೋ ಜೋರಾಗಿಯೇ ಹರಿದಾಡಿ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ ನೋಡಿ.




ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಚಾಂದಿನಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಅವರು ತುಂಬಾನೇ ಜನಪ್ರಿಯರಾಗಿದ್ದಾರೆ ಮತ್ತು ದಿಟ್ಟೋ ಆಲಿಯಾ ಭಟ್ ಅವರಂತೆಯೇ ಚಾಂದಿನಿ ಅವರು ಅನುಕರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ವಿಡಿಯೋ 
ಸಣ್ಣ ಕ್ಲಿಪ್ ನಲ್ಲಿ ಚಾಂದಿನಿ ‘ಬ್ರಹ್ಮಾಸ್ತ್ರ’ ಚಿತ್ರದ ಇಶಾ ಎಂಬ ಆಲಿಯಾ ಪಾತ್ರವನ್ನು ಅನುಕರಿಸಿದ್ದಾರೆ. ಅವಳು ಶಿವ ಎಂಬ ಹೆಸರನ್ನು ಪದೇ ಪದೇ ಹೇಳುತ್ತಲೇ ಇದ್ದಳು, ಅದು ರಣಬೀರ್ ಪಾತ್ರ, ಪ್ರತಿ ನಿಮಿಷವೂ ಮತ್ತು ತನ್ನದೇ ಆದ ರೀತಿಯಲ್ಲಿ ಸಂಭಾಷಣೆಗಳನ್ನು ಮರುಸೃಷ್ಟಿಸುತ್ತಿದ್ದಳು. ನೀವು ಈ ವಿಡಿಯೋವನ್ನು ಮಿಸ್ ಮಾಡಲೇಬೇಡಿ.

ಈ ವಿಡಿಯೋವನ್ನು ಆನ್ಲೈನ್ ನಲ್ಲಿ ಹಂಚಿಕೊಂಡ ನಂತರ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ. ನೆಟ್ಟಿಗರು ಈ ಮಿಮಿಕ್ರಿಯನ್ನು ನೋಡಿ ನಗುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಮತ್ತು ಕಾಮೆಂಟ್ ಮಾಡದೆ ಇರಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ:  Troll Video: ಬ್ಲೌಸ್ ಹಾಕೊಂಡು ಭವಿಷ್ಯ ಹೇಳಮ್ಮಾ! ಖ್ಯಾತ ಜ್ಯೋತಿಷಿಯ ಗ್ರಹಚಾರ ಬಿಡಿಸಿದ ನೆಟ್ಟಿಗರು

"ನಾನು ಚಲನಚಿತ್ರಕ್ಕಿಂತ ಹೆಚ್ಚಾಗಿ ನಿಮ್ಮ ಮಿಮಿಕ್ರಿಗಾಗಿಯೇ ಕಾಯುತ್ತಿದ್ದೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ಈ ವಿಡಿಯೋವು ಹೇಗೆ ಅಷ್ಟು ಕರೆಕ್ಟ್ ಆಗಿರಲು ಸಾಧ್ಯ" ಎಂದು ಹೇಳಿದ್ದಾರೆ. ಇವರೊಂದಿಗೆ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ತೆಲುಗು ನಟ ನಾಗಾರ್ಜುನ ಮತ್ತು ನಟಿ ಮೌನಿ ರಾಯ್ ಸಹ ನಟಿಸಿದ್ದಾರೆ.
Published by:Ashwini Prabhu
First published: