• Home
 • »
 • News
 • »
 • trend
 • »
 • Video: ಮ್ಯೂಸಿಕ್ ಮಾಂತ್ರಿಕ ಇಳಯರಾಜ ಅವರ ಹಾಡು ಹಾಡುತ್ತಲೇ ಕ್ಯಾನ್ಸರ್ ಆಪರೇಷನ್ ಮಾಡಿಸಿಕೊಂಡ ಮಹಿಳೆ!

Video: ಮ್ಯೂಸಿಕ್ ಮಾಂತ್ರಿಕ ಇಳಯರಾಜ ಅವರ ಹಾಡು ಹಾಡುತ್ತಲೇ ಕ್ಯಾನ್ಸರ್ ಆಪರೇಷನ್ ಮಾಡಿಸಿಕೊಂಡ ಮಹಿಳೆ!

ಇಳಯರಾಜ ಜೊತೆ ಸೀತಾಲಕ್ಷ್ಮೀ

ಇಳಯರಾಜ ಜೊತೆ ಸೀತಾಲಕ್ಷ್ಮೀ

ಸಂಗೀತ ಎನ್ನುವುದು ಮನುಷ್ಯನ ಕಷ್ಟ ಮರೆಯುವುದಕ್ಕೆ ದೇವರು ಕೊಟ್ಟಿರುವ ವರ. ಇಳಯರಾಜ ಅವರಂತಹ ಸರಸ್ವತಿ ಪುತ್ರರ ಸಂಗೀತದಲ್ಲಂತೂ ದೈವಿಕ ಶಕ್ತಿ ಇರುತ್ತದೆ. ಇದೀಗ ಇವರದ್ದೇ ಸಂಗೀತ ಮಹಿಳೆಯ ಬದುಕಲ್ಲಿ ಜಾದೂ ಮಾಡಿದೆ. ಅದೇನು ಅಂತ ತಿಳಿದುಕೊಳ್ಳಲು ಮುಂದೆ ಓದಿ...

 • Share this:

  ಇದೊಂದು ಅಪರೂಪದ ಪ್ರಸಂಗ. ಇತ್ತೀಚೆಗೆ ಚೆನ್ನೈನ (Chennai) ಅಪೋಲೊ (Apollo) ಪ್ರೋಟಾನ್ ಕ್ಯಾನ್ಸರ್ ಕೇಂದ್ರವೊಂದರಲ್ಲಿ ಸ್ತನ ಕ್ಯಾನ್ಸರ್‌ನಿಂದ (Breast cancer) ಬಳಲುತ್ತಿದ್ದ ಸೀತಾಲಕ್ಷ್ಮೀ (Seetha Lakshmi) ಎಂಬುವರು ಅವರ ಶಸ್ತ್ರ ಚಿಕಿತ್ಸೆ (Operation) ನಡೆಯುತ್ತಿರುವಾಗಲೇ, ಸೀತಾಲಕ್ಷ್ಮೀ ತಮಿಳು (Tamil) ಚಿತ್ರರಂಗದ ದಿಗ್ಗಜ ಸಂಗೀತಗಾರರಾಗಿರುವ ಇಳಯರಾಜಾ (Ilayaraja) ಅವರ ಸಂಯೋಜನೆಯ ಹಾಡೊಂದನ್ನು ಹಾಡುವ ಮೂಲಕ ವೈದ್ಯರೇ ಅಚ್ಚರಿಪಡುವಂತೆ ಮಾಡಿದ ಘಟನೆಯೊಂದು ನಡೆದಿದೆ. ಸ್ತನ ಕ್ಯಾನ್ಸರ್ ಪೀಡಿತೆಯಾಗಿರುವ ಸೀತಾಲಕ್ಷ್ಮೀ ಅವರ ದೈಹಿಕ ಸ್ಥಿತಿ ಅಷ್ಟೊಂದು ಸಶಕ್ತವಾಗಿರದ ಕಾರಣ ಅವರಿಗೆ ಲೋಕಲ್ ಮಟ್ಟದ ಅರವಳಿಕೆಯನ್ನು ನೀಡಿ ಶಸ್ತ್ರಚಿಕಿತ್ಸೆಯನ್ನು ವೈದರು ನಡೆಸುತ್ತಿದ್ದರು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಸೀತಾಲಕ್ಷ್ಮೀ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ಸಂದರ್ಭದಲ್ಲೇ ಇಳಯರಾಜಾ ಅವರ ಹಾಡನ್ನು ಹಾಡಲು ಪ್ರಾರಂಭಿಸಿದರು.


  ವೈದ್ಯರಿಗೇ ಅಚ್ಚರಿ ತಂದ ಘಟನೆ


  ವೈದ್ಯರು, ಇದನ್ನು ಕಂಡಾಗ ಅಚ್ಚರಿ ಪಟ್ಟಿದ್ದು ಸುಳ್ಳಲ್ಲ. ಅದಕ್ಕೂ ವಿಶೇಷವಾದ ಸಂಗತಿಯೆಂದರೆ ಅವರು ಹಾಡಲು ಪ್ರಾರಂಭಿಸುತ್ತಿದ್ದಂತೆ ಅವರ ಒಳಾಂಗಗಳು ಸ್ಥಿರವಾದವು ಎನ್ನಲಾಗಿದೆ. ಅವರು ಬಾಯಿಯಿಂದ ಹೊರ ಬಂದ ಎಲ್ಲ ಹಾಡುಗಳು ಇಳಯರಾಜಾ ಅವರು ಸಂಯೋಜಿಸಿದ್ದ ಗೀತೆಗಳೇ ಎನ್ನುವುದು ಮತ್ತೊಂದು ವಿಶೇಷ.


  ವೈರಲ್ ಆಗಿರುವ ವಿಡಿಯೋ


  ಶಸ್ತ್ರಚಿಕಿತ್ಸೆಯ ನಂತರ ಈ ಬಗ್ಗೆ ವೈದ್ಯರು ಸೀತಾಲಕ್ಷ್ಮೀಯವರನ್ನು ಕೇಳಿದಾಗ ಅವರು, "ಇಳಯರಾಜಾರವರು ಒಬ್ಬ ದಂತಕಥೆ, ಅವರನ್ನು ಕಂಡರೆ ಯಾರಿಗೆ ತಾನೆ ಇಷ್ಟವಾಗದು" ಎಂದು ಚುಟುಕಾಗಿ ಉತ್ತರಿಸಿದ್ದಾರೆ. ಕಳೆದ ತಿಂಗಳು ಈ ಘಟನೆ ನಡೆದಿದ್ದು ಸದ್ಯ ವೈರಲ್ ಆಗಿ ಹರಿದಾಡುತ್ತಿದೆ.


  ವಿಡಿಯೋ ನೋಡಿ:  ಈ ಬಗ್ಗೆ ವೈದ್ಯರು ತಮ್ಮ ಸರ್ಕಲ್ ಒಳಗೆ ಈ ಬಗ್ಗೆ ವಿಷಯ ಹಂಚಿಕೊಂಡಿದ್ದರು. ತರುವಾಯ ವೈವಿಧ ವೈದ್ಯರು ಈ ಸ್ಟೋರಿಯನ್ನು ಶೇರ್ ಮಾಡಿಕೊಂಡಿದ್ದರು. ಇಷ್ಟೆಲ್ಲ ಪ್ರಚಾರವಾದ ಮೇಲೆ ಒಂದು ದಿನ ಅಪೋಲೋ ಆಸ್ಪತ್ರೆಯ ತಂಡವು ಈ ಘಟನೆಯಿಂದ ಸ್ಫೂರ್ತಿ ಪಡೆದು ಹಾಗೂ ಸೀತಾಲಕ್ಷ್ಮೀ ಅವರು ಬೇಗನೆ ಚೇತರಿಸಿಕೊಳ್ಳುವಂತೆ ಅನುವಾಗಲು ಅವರಲ್ಲಿ ಹುರುಪು ಮೂಡಿಸುವ ದೃಷ್ಟಿಯಿಂದ ಇಳಯರಾಜಾ ಅವರೊಂದಿಗೆ ಸೀತಾಲಕ್ಷ್ಮೀಯವರ ಭೇಟಿಯಾಗುವಂತೆ ಕ್ರಮ ಕೈಗೊಂಡಿತು.


  ಇದನ್ನೂ ಓದಿ: Viral Video: ಇಡ್ಲಿ ಮಾರುವವರಿಗೆ ಈ ಮಹಿಳೆ ಕೊಟ್ಟ ಗಿಫ್ಟ್​ ನೋಡಿದ್ರೆ ಆಶ್ಚರ್ಯವಾಗುತ್ತೆ


  ಇದಕ್ಕೂ ಮುಂಚೆ ಅಪೋಲೋ ಆಸ್ಪತ್ರೆಯ ಸಂವಹನ ತಂಡವು ಸೀತಾಲಕ್ಷ್ಮೀಯವರ ಆಪರೇಶನ್ ಮಾಡಿದ್ದ ವೈದ್ಯರನ್ನು ಕುರಿತು, "ವೈದ್ಯರೆ, ನಮ್ಮ ರೋಗಿಯೊಬ್ಬರು ಇಳಯರಾಜಾ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆಂದು ನಮಗೆ ತಿಳಿದುಬಂದಿದೆ. ಹಾಗಾಗಿ ಶೀಘ್ರದಲ್ಲೇ ಅವರು ವೈಯಕ್ತಿಕವಾಗಿ ಇಳಯರಾಜಾ ಅವರ ಭೇಟಿಯಾಗುವಂತೆ ನಾವು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಅವರ ಪರಿಸ್ಥಿತಿಯಲ್ಲಿ ಏನಾದರೂ ಸುಧಾರಣೆ ಬರಬಹುದೇ?" ಎಂದು ಕೇಳಿಕೊಂಡಿತ್ತು.


  ಇಳಯರಾಜ ಅವರನ್ನು ಭೇಟಿಯಾದ ಸೀತಾಲಕ್ಷ್ಮೀ


  ತದನಂತರ ನಿರೀಕ್ಷಿಸಿಲಾದಂತೆ ಇಳಯರಾಜಾ ಅವರೊಂದಿಗೆ ಭೇಟಿ ಮಾಡುವ ಸಂದರ್ಭ ಒದಗಿ ಬಂದಿತು ಹಾಗೂ ಸೀತಾಲಕ್ಷ್ಮೀ ಅವರು ಖುದ್ದಾಗಿ ಇಳಯರಾಜಾ ಅವರ ಮನೆಗೆ ತೆರಳಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅತಿ ಸಂತಸದಿಂದಿದ್ದ ಸೀತಾಲಕ್ಷ್ಮೀ ಅವರು ತಮ್ಮ ನೆಚ್ಚಿನ ಸಂಗೀತಗಾರನೊಂದಿಗೆ ಕೆಲ ಸಮಯ ಕಳೆದರು.


  ಇಳಯರಾಜಾ ಅವರನ್ನು ಮಾತನಾಡಿಸಿ ತಮ್ಮೊಂದಿಗೆ ಚಿತ್ರ ತೆಗೆಸಿಕೊಂಡಿದ್ದಲ್ಲದೆ ತಮ್ಮ ಸಂಗೀತ ಜೀವನದ ಹಲವಾರು ಘಟನೆಗಳನ್ನು ಸೀತಾಲಕ್ಷ್ಮೀ ಹಾಗೂ ಅಪೋಲೊ ತಂಡದವರೊಂದಿಗೆ ಹಂಚಿಕೊಂಡಿದ್ದಾಗಿ ತಿಳಿದುಬಂದಿದೆ.


  ವೈದ್ಯರ ಒತ್ತಡವನ್ನೇ ಕಡಿಮೆ ಮಾಡಿದ ರೋಗಿ!


  ಈ ನಡುವೆ ಮೂಲಗಳಿಂದ ತಿಳಿದು ಬಂದಿರುವ ಮತ್ತೊಂದು ವಿಷಯವೆಂದರೆ, ಸೀತಾಲಕ್ಷ್ಮೀ ಅವರ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ವೈದ್ಯರ ತಂಡವು ಬಹಳಷ್ಟು ಒತ್ತಡದಲ್ಲಿತ್ತು. ಆದರೆ, ಸೀತಾಲಕ್ಷ್ಮೀ ಹಾಡುಗಳನ್ನು ಹಾಡುತ್ತಿದ್ದಂತೆಯೇ ವೈದ್ಯರ ಒತ್ತಡ ಕಡಿಮೆಯಾಗಿ ಅಲ್ಲಿನ ವಾತಾವರಣವು ಶಾಂತವಾಯಿತು ಎಂದು ಹೇಳಲಾಗಿದೆ.


  ಇದನ್ನೂ ಓದಿ: Video: ಯುದ್ಧ ಸ್ಮಾರಕದಲ್ಲಿ ಸಹೋದರನ ಹೆಸರು ಕಂಡು ಭಾವುಕಳಾದ ಸಹೋದರಿ, ಕಣ್ಣಲ್ಲಿ ನೀರು ತರಿಸುವ ದೃಶ್ಯ ಇಲ್ಲಿದೆ


  ಈ ಬಗ್ಗೆ ಸವಿಸ್ತಾರವಾದ ಪೋಸ್ಟ್ ಒಂದನ್ನು ಅಪೋಲೋ ತಂಡವು ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದು ಅದೀಗ ವೈರಲ್ ಆಗುತ್ತಿದೆ. ಪೋಸ್ಟ್‌ನಲ್ಲಿ, "ಈ ರೀತಿಯ ಶಸ್ತ್ರಚಿಕಿತ್ಸೆಯು ಸಾಕಷ್ಟು ಸಂಕೀರ್ಣತೆಯಿಂದ ಕೂಡಿದ್ದು ಅದಕ್ಕೊಳಗಾದ ರೋಗಿಯು ಗೀತೆಗಳನ್ನು ಹಾಡುವ ಮೂಲಕ ತಮಗಾಗುತ್ತಿದ್ದ ಕಷ್ಟದ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದ ಪರಿ ನಿಜಕ್ಕೂ ಅಮೋಘವಾದದ್ದು.


  ನಮ್ಮ ಇಡೀ ವೈದ್ಯರ ತಂಡಕ್ಕೆ ಇದೊಂದು ಅನನ್ಯ ಹಾಗೂ ವಿಶಿಷ್ಟವಾದ ಅನುಭೂತಿಯಾಗಿತ್ತು. ಇದು ನಾವೆಂದೂ ಮರೆಯಲಾಗದ ಘಟನೆಯಾಗಿದೆ ಹಾಗೂ ನಮ್ಮ ಆಸ್ಪತ್ರೆಗಳು ತಮ್ಮ ರೋಗಿಗಳಿಗೆ ಯಾವ ರೀತಿಯಲ್ಲಿ ಆಳವಾಗಿ ಸ್ಪಂದಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ" ಎಂದು ಬರೆದುಕೊಂಡಿದೆ.

  Published by:Annappa Achari
  First published: