ಮೊದಲೆಲ್ಲಾ ಈ ಮದುವೆ ಸಮಾರಂಭಗಳು (Marriage Program) ತುಂಬಾನೇ ಸಂಭ್ರಮದಿಂದ ನಡೆಯುತ್ತಿದ್ದವು, ಆದರೆ ಈಗ ಮದುವೆಗಳು (Brides) ಸಂಭ್ರಮದ ಜೊತೆಗೆ ಅಷ್ಟೇ ಮೋಜಿನ ಘಟನೆಗಳಿಗೂ (Funny Moments) ಸಹ ಸಾಕ್ಷಿಯಾಗುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು. ಈ ಕೋವಿಡ್-19 ಸಾಂಕ್ರಾಮಿಕ (Viral) ರೋಗದ ಹಾವಳಿ ಶುರುವಾದಾಗಿಂದಲೂ ಮದುವೆ ಸಮಾರಂಭದ ಮೇಲೆ ಅನೇಕ ರೀತಿಯ ನಿರ್ಬಂಧನೆಗಳನ್ನು ಹೇರಲಾಗಿದೆ. ಮದುವೆ ಸಮಾರಂಭಕ್ಕೆ ಮೊದಲಿನಷ್ಟು ಜನರು ಇರಲಿಕ್ಕಿಲ್ಲ, ಆದರೆ ಏನಾದರೊಂದು ಮೊಜಿನ ಸಂಗತಿಗಳು ಈ ಮದುವೆ ಸಮಾರಂಭಗಳಲ್ಲಿ ನಡೆಯುತ್ತಲೇ ಇವೆ ಅಂತ ಹೇಳಬಹುದು.
ಈ ಎರಡೂವರೆ ವರ್ಷಗಳಲ್ಲಿ ಎಷ್ಟೊಂದು ರೀತಿಯ ಘಟನೆಗಳು ಮದುವೆ ಸಮಾರಂಭದಲ್ಲಿ ನಡೆದಿವೆ ಮತ್ತು ಅವುಗಳ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಹರಿದಾಡಿ ವೈರಲ್ ಆಗಿವೆ ಅನ್ನೋದನ್ನ ಬಹುಶಃ ಲೆಕ್ಕವಿಡಲು ಸಹ ಸಾಧ್ಯವಾಗದೆ ಇರಬಹುದು.
ಹೌದು. ಮದುವೆ ಮಂಟಪಕ್ಕೆ ವಧು-ವರರು ನೀಡುವ ಗ್ರ್ಯಾಂಡ್ ಎಂಟ್ರಿಯಿಂದ ಹಿಡಿದು ಮದುವೆಗೆ ಬಂದ ಅತಿಥಿಗಳು ವಿಭಿನ್ನವಾಗಿ ಡ್ಯಾನ್ಸ್ ಮಾಡುವವರೆಗೂ ಅನೇಕ ರೀತಿಯ ವೀಡಿಯೋಗಳನ್ನು ನಾವೆಲ್ಲಾ ನೋಡಿದ್ದೇವೆ ಅಂತ ಹೇಳಬಹುದು.
ಈಗಿನ ಮದುವೆಗಳು ವಿಭಿನ್ನ ಘಟನೆಗಳಿಗೆ ಸಾಕ್ಷಿಯಾಗುತ್ತಿವೆ
ಅದರಲ್ಲೂ ಮದುವೆ ಸಮಾರಂಭ ಎಂದರೆ ಡ್ಯಾನ್ಸ್, ಸಂಗೀತ ಮತ್ತು ಭರ್ಜರಿ ಊಟ ಇದೆಲ್ಲಾ ಕೇಳಬೇಕೆ? ಆ ಸಂಭ್ರಮ ಒಂದು ಹಬ್ಬದಂತೆ ಇರುತ್ತದೆ ಅಂತ ಹೇಳಬಹುದು ನೋಡಿ. ಮದುವೆ ಎನ್ನುವುದು ವಧು-ವರರ ಜೀವಮಾನದಲ್ಲಿ ನಡೆಯುವ ಒಂದು ಮಧುರವಾದ ಘಟನೆ ಎಂದು ಹೇಳಬಹುದು.
ಇಂತಹ ಮದುವೆಗಳನ್ನು ಕಣ್ತುಂಬಿ ಕೊಳ್ಳಲು ಅನೇಕ ಜನ ಅತಿಥಿಗಳು, ಸ್ನೇಹಿತರು ಮತ್ತು ಸಂಬಂಧಿಕರು ಬಂದು ಮದುವೆ ಸಮಾರಂಭದಲ್ಲಿ ಹಾಡಿಗೆ ಒಂದೆರಡು ಡ್ಯಾನ್ಸ್ ಸ್ಟೆಪ್ಸ್ ಗಳನ್ನು ಹಾಕದೇ ಹೋದರೆ ಏನು ಮಜಾ ಇರುತ್ತೆ ಹೇಳಿ? ಆದರೆ ಈ ಮಜಾ ಇಲ್ಲೊಂದು ಘಟನೆಯಲ್ಲಿ ಯಾವ ರೀತಿಯಾಗಿ ಬದಲಾಗಿದೆ ನೋಡಿ.
ಸಾಮಾಜಿಕ ಮಾಧ್ಯಮದಲ್ಲಿ ಈಗಂತೂ ನಾವು ಈ ಮದುವೆ ಸಮಾರಂಭಗಳಿಂದ ಹಲವಾರು ಡ್ಯಾನ್ಸ್ ಮಾಡಿರುವ ವೀಡಿಯೋಗಳನ್ನು ನಾವು ನೋಡಿರುತ್ತೇವೆ, ಇದರಲ್ಲಿ ಜನರು ಸಂಗೀತದ ಬೀಟ್ ಗಳಿಗೆ ಗ್ರೂವಿಂಗ್ ಮಾಡುವುದನ್ನು ಕಾಣಬಹುದು. ಆಯ್ದ ಕೆಲವು ವೀಡಿಯೋಗಳು ಏಕವ್ಯಕ್ತಿ, ಡ್ಯುಯೆಟ್ ಅಥವಾ ಸಮೂಹ ಡ್ಯಾನ್ಸ್ ಪ್ರದರ್ಶನಗಳಾಗಿರುತ್ತವೆ.
ಆದರೆ ಕೆಲವೊಂದು ಮದುವೆ ಸಮಾರಂಭಗಳಲ್ಲಿ ಈ ಡ್ಯಾನ್ಸ್ ಗಳು ಅನೇಕ ಎಡವಟ್ಟುಗಳಿಗೆ ದಾರಿ ಮಾಡಿಕೊಟ್ಟಿರುತ್ತದೆ ಅಂತ ಹೇಳಬಹುದು. ಇಲ್ಲಿಯೂ ಸಹ ನಾವು ನಿಮಗೆ ಇಂತಹದೇ ಒಂದು ಆಘಾತವನ್ನುಂಟು ಮಾಡುವ ವೀಡಿಯೋವನ್ನು ತೋರಿಸುತ್ತೇವೆ ನೋಡಿ.
View this post on Instagram
ಇತ್ತೀಚೆಗೆ, ಮದುವೆ ಕಾರ್ಯಕ್ರಮವೊಂದರಲ್ಲಿ ಜನರ ಗುಂಪು ಡ್ಯಾನ್ಸ್ ಮಾಡುವಲ್ಲಿ ಮಗ್ನರಾಗಿದ್ದರು ಮತ್ತು ಹಠಾತ್ತನೆ ಅವರೆಲ್ಲಾ ಡ್ಯಾನ್ಸ್ ಮಾಡುತ್ತಿದ್ದ ಆ ಡ್ಯಾನ್ಸ್ ಫ್ಲೋರ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ ನೋಡಿ. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಎಲ್ಲರೂ ಸಂಗೀತದ ಬೀಟ್ ಗಳಿಗೆ ಡ್ಯಾನ್ಸ್ ಮಾಡುತ್ತಿರುವಾಗ, ಇದ್ದಕ್ಕಿದ್ದಂತೆ ಆ ಫ್ಲೋರ್ ಕುಸಿದು ಕೆಳಕ್ಕೆ ಬಿದ್ದಿತು ಮತ್ತು ಇಡೀ ಜನರ ಗುಂಪು ಕೆಳಕ್ಕೆ ಬಿತ್ತು. ಅಪಘಾತದಿಂದ ಪಾರಾದ ಇನ್ನೂ ಕೆಲವರು ಕೆಳಗೆ ಬಿದ್ದಿರುವ ಜನರನ್ನು ನೋಡುತ್ತಿರುವುದನ್ನು ಈ ವೀಡಿಯೋದಲ್ಲಿ ನಾವು ನೋಡಬಹುದು.
ಇದನ್ನೂ ಓದಿ: Viral Video: ಫ್ರೀಯಾಗಿ ಆಪರೇಶನ್ ಮಾಡಿದ ಡಾಕ್ಟರ್ ಸಾಲವನ್ನ 11 ವರ್ಷ ಕಾದು ತೀರಿಸಿದ ವ್ಯಕ್ತಿ, ವಿಡಿಯೋ ನೋಡಿ
ಈ ವೀಡಿಯೋದ ಸತ್ಯಾಸತ್ಯತೆ ತಿಳಿದಿಲ್ಲವಾದರೂ, ನೆಟ್ಟಿಗರು ಮಾತ್ರ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಫ್ಲೋರ್ ಕುಸಿದ ನಂತರ ಕೆಳಗೆ ಬಿದ್ದ ವ್ಯಕ್ತಿಗಳ ಗುಂಪಿನ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದು ಚಲನಚಿತ್ರದ ಚಿತ್ರೀಕರಣದ ದೃಶ್ಯ ಎಂದು ಅಭಿಪ್ರಾಯಪಟ್ಟರು.
ಮೇ 24, 2001 ರಂದು ಇದೇ ರೀತಿಯ ಒಂದು ಘಟನೆ ನಡೆದಿತ್ತು, ಇದರಲ್ಲಿ ವರ್ಸೇಲ್ಸ್ ವೆಡ್ಡಿಂಗ್ ಹಾಲ್ ನ ಮೂರನೇ ಮಹಡಿಯ ಒಂದು ದೊಡ್ಡ ಭಾಗವು ಇಸ್ರೇಲ್ ನ ಜೆರುಸಲೇಮ್ ನ ತಾಲ್ಪಿಯೋಟ್ ನಲ್ಲಿ ಕುಸಿದಿತ್ತು. ಈ ದುರ್ಘಟನೆಯಲ್ಲಿ 23 ಜನರು ಸಾವನ್ನಪ್ಪಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ