Lizards: ಹಲ್ಲಿ ನೋಡಿದ್ರೆ ಕೇವಲ ಮನುಷ್ಯರಿಗೆ ಮಾತ್ರ ಅಲ್ಲ ನಾಯಿಗಳಿಗೂ ಭಯವಂತೆ! ಈ ವಿಡಿಯೋ ನೋಡಿದ್ರೆ ನಿಮಗೇ ಗೊತ್ತಾಗುತ್ತೆ

ಗೋಲ್ಡನ್ ರಿಟ್ರೀವರ್ ನಾಯಿಯೊಂದು ಒಂದು ಹಲ್ಲಿಗೆ ಹೇಗೆ ಹೆದರಿಕೊಂಡು ಓಡಿ ಹೋಗಿದೆ ನೋಡಿ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋದಲ್ಲಿ ಈ ನಾಯಿ ಹಲ್ಲಿಯನ್ನು ನೋಡಿ ಹೇಗೆ ಭಯಭೀತವಾಗಿದೆ ಅಂತ ನೋಡಿ...

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ ನಮ್ಮ ನಮ್ಮ ಮನೆಗಳಲ್ಲಿ ಗೋಡೆಗೆ ಅಂಟಿಕೊಂಡು ಕೂತಿರುವ ಹಲ್ಲಿಯನ್ನು (Lizard) ನೋಡಿದರೆ ಸಾಕು ನಾವು ಬಹುತೇಕರು ಭಯ ಬೀಳುತ್ತೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ನಿರೀಕ್ಷೆ ಮಾಡದಿರುವ ಸ್ಥಳಗಳಲ್ಲಿ ಈ ಹಲ್ಲಿಗಳನ್ನು ನೋಡಿದರಂತೂ ಮುಗಿದೇ ಹೋಯಿತು ಬಿಡಿ, ನಮ್ಮ ಹೃದಯ ಬಡಿತ (Heart Beat) ನಮಗೆ ಅರಿವಿಲ್ಲದಂತೆಯೇ ಜೋರಾಗುತ್ತದೆ ಮತ್ತು ಮೈಯಲ್ಲಿ ಬೆವರು (Sweat) ಬರಲು ಶುರುವಾಗುತ್ತದೆ. ಕೆಲವರಂತೂ ತಮ್ಮ ಮಲಗುವ ಕೋಣೆಯ ಗೋಡೆಯ ಮೇಲಿಂದ ಆ ಹಲ್ಲಿ ಹೊರಗೆ ಹೋಗುವವರೆಗೂ ಆರಾಮಾಗಿ ನಿದ್ರೆ ಮಾಡುವುದಿಲ್ಲ. ಎಷ್ಟೇ ಸಮಯವಾದರೂ ಸರಿ, ಆ ಹಲ್ಲಿಯನ್ನು ಹೊರಗೆ ಓಡಿಸುವವರೆಗೆ ಅವರಿಗೆ ಸಮಾಧಾನ ಇರುವುದಿಲ್ಲ ಎಂದು ಹೇಳಬಹುದು.

ಹಲ್ಲಿಗಳಿಗೆ ಹೆದರುವ ಜನರು
ಕೆಲವರಂತೂ ಈ ಹಲ್ಲಿಗಳನ್ನು ಮತ್ತು ಜಿರಳೆಗಳನ್ನು ನೂಡಿ ದೊಡ್ಡ ಹಾವು ಕಣ್ಮುಂದೆ ಬಂದವರಂತೆ ಜೋರಾಗಿ ಕೂಗಿ ಕೊಳ್ಳುತ್ತಾರೆ. ಇನ್ನೂ ಕೆಲವರು ಆ ಹಲ್ಲಿಯನ್ನು ಪೊರಕೆಯ ಸಹಾಯದಿಂದ ಓಡಿಸಿ ಅದನ್ನು ಮನೆಯಿಂದ ಹೊರಗೆ ಹೋಗುವಂತೆ ಮಾಡುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಮನುಷ್ಯ ಎಷ್ಟೇ ಬಲಶಾಲಿಯಾಗಿದ್ದರೂ ಸಹ ಕೆಲವು ಚಿಕ್ಕ ಪುಟ್ಟ ಪ್ರಾಣಿಗಳಿಗೆ ಹೆದರುತ್ತಾನೆ ಎನ್ನುವುದಂತೂ ನಿಜ.

ಇದನ್ನೂ ಓದಿ:  Elephant Saves Calf: ಕೊಚ್ಚಿ ಹೋಗ್ತಿದ್ದ ಮರಿಯಾನೆಯನ್ನು ರಕ್ಷಿಸಿದ ಅಮ್ಮ! ವಿಡಿಯೋ ವೈರಲ್

ಹಲ್ಲಿಗಳ ಬಗ್ಗೆ ಈಗೇಕೆ ಇಷ್ಟೊಂದು ಮಾತುಕತೆ ಅಂತ ನಿಮಗೆ ಅನ್ನಿಸಬಹುದು ಅಲ್ಲವೇ? ಈ ಹಲ್ಲಿಗಳಿಗೆ ಕೇವಲ ಮಾನವರು ಮಾತ್ರ ಹೆದರುತ್ತಾರೆಯೇ ಅಂತ ನೀವು ನಮ್ಮನ್ನು ಕೇಳಿದರೆ, ನಾವು ನಿಮಗೆ ಇಲ್ಲಿರುವ ಒಂದು ವಿಡಿಯೋವನ್ನು ನೋಡಲು ಹೇಳುತ್ತೇವೆ.

ಹಲ್ಲಿಯನ್ನು ನೋಡಿ ಗೊಂದಲಕ್ಕೊಳಗಾದ ನಾಯಿ
ಇಲ್ಲೊಂದು ಹೊಸ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಅದರಲ್ಲಿ ಒಂದು ಗೋಲ್ಡನ್ ರಿಟ್ರೀವರ್ ನಾಯಿಯೊಂದು ಒಂದು ಹಲ್ಲಿಗೆ ಹೇಗೆ ಹೆದರಿಕೊಂಡು ಓಡಿ ಹೋಗಿದೆ ನೋಡಿ. ಈ ನಾಯಿಯ ದುಃಸ್ಥಿತಿಯನ್ನು ನೀವು ಬಹುಶಃ ಅರ್ಥ ಮಾಡಿಕೊಳ್ಳಬಹುದು. ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾದ ವಿಡಿಯೋವು ಈ ನಾಯಿ ಹಲ್ಲಿಯನ್ನು ನೋಡಿ ಹೇಗೆ ಗೊಂದಲಕ್ಕೊಳಗಾಗಿದೆ ಮತ್ತು ಭಯ ಭೀತವಾಗಿದೆ ಎಂದು ತೋರಿಸುತ್ತದೆ. ಈ ಕ್ಲಿಪ್ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಪ್ರತಿಕ್ರಿಯೆಗಳನ್ನು ಪಡೆದಿದೆ ಎಂದು ಹೇಳಬಹುದು.

ವಿಡಿಯೋದಲ್ಲಿ ಏನಿದೆ
"ನೀವು ತೋಳ ಅಂತಹ ಪ್ರಾಣಿಗಳ ಜೊತೆಗೆ ಜಗಳವಾಡುತ್ತೀರಿ, ಆದರೆ ಈಗ ನೀವು ಈ ಚಿಕ್ಕ ಹಲ್ಲಿಗಳಿಗೆ ಹೆದರುತ್ತಿದ್ದೀರಿ" ಎಂದು ವಿಡಿಯೋದಲ್ಲಿ ಪಠ್ಯವೊಂದನ್ನು ಬರೆದು ಸೇರಿಸಲಾಗಿದೆ. ವಿಡಿಯೋದಲ್ಲಿ ನಾಯಿಯು ಬೇಲಿಯ ಮೇಲೆ ಹಲ್ಲಿಯನ್ನು ನೋಡಿ ಹೇಗೆ ಪ್ರತಿಕ್ರಿಯಿಸಿದೆ ಎನ್ನುವುದನ್ನು ತೋರಿಸಿದೆ.
ಮೊದಲಿಗೆ ಈ ನಾಯಿ ಬೇಲಿಯ ಕಡೆಗೆ ಓಡುತ್ತಿರುವುದನ್ನು ಕಾಣಬಹುದು, ನಂತರ ಅಲ್ಲಿರುವ ಪುಟ್ಟ ಹಲ್ಲಿಯನ್ನು ನೋಡಿ ತಕ್ಷಣವೇ ಎದ್ದೋ ಬಿದ್ದೋ ಎನ್ನುವಂತೆ ಹಿಂದಕ್ಕೆ ಓಡಿ ಬಂದು ತನ್ನ ಒಡೆಯನ ಬಳಿ ನಿಂತಿರುವುದನ್ನು ನೋಡಬಹುದು. ನಂತರ ಹಲ್ಲಿಗೆ ಪ್ರತಿಕ್ರಿಯೆಯಾಗಿ ಬೇಲಿಯ ಕಡೆಗೆ ಮತ್ತೆ ಆ ನಾಯಿ ಜೋರಾಗಿ ಓಡಿಹೋಗಿ ಹೆದರಿಸಿದೆ. ಆಗ ಆ ಹಲ್ಲಿ ಮೇಲಕ್ಕೆ ಸರಸರನೆ ಹೋಗಿದೆ.

ಇನ್‌ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೋ
ಗೋಲ್ಡನ್‌ಗರ್ಲ್ ಕ್ಸೇನಾ ಎಂಬ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಲಾದ ವೀಡಿಯೋದೊಂದಿಗೆ "ಇದು ತುಂಬಾನೇ ಸಾಲಿಡ್ ಆಗಿದೆಯಲ್ಲಾ" ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ. ವೀಡಿಯೋವನ್ನು ಇನ್ನಷ್ಟು ಆರಾಧ್ಯವಾಗಿಸುವುದು ಅದರ ಹಿನ್ನೆಲೆಯಲ್ಲಿ ಬರುವ ಧ್ವನಿ. ಸುಮಾರು 21 ಗಂಟೆಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋವು ಈಗಾಗಲೇ 9,500ಕ್ಕೂ ಹೆಚ್ಚು ಲೈಕ್ ಗಳನ್ನು ಮತ್ತು ಹಲವಾರು ವಿಭಿನ್ನ ಕಾಮೆಂಟ್ ಗಳನ್ನು ವಿಡಿಯೋ ಪಡೆದಿದೆ ಎಂದು ಹೇಳಬಹುದು.

ಇದನ್ನೂ ಓದಿ:  Philippine Big Fish: ಫಿಲಿಪ್ಪೈನ್ಸ್​ನಲ್ಲಿ ತೀರಕ್ಕೆ ಬಂದು ಬಿದ್ದ ಶಾರ್ಕ್​, ಗಾತ್ರ ನೋಡಿ ಜನ ಶಾಕ್! ಫೊಟೋ ವೈರಲ್

"ಅವನು ಪ್ರೇಮಿ, ಹೋರಾಟಗಾರನಲ್ಲ" ಎಂದು ಒಬ್ಬ ವ್ಯಕ್ತಿಯು ಕಾಮೆಂಟ್ ಮಾಡಿದನು. "ಹಲ್ಲಿಗಳನ್ನು ಬೆನ್ನಟ್ಟಲು ನನ್ನ ನಾಯಿಗೆ ತುಂಬಾ ಇಷ್ಟ, ಆದರೆ ಹಲ್ಲಿ ನಾಯಿಗಿಂತಲೂ ತುಂಬಾನೇ ವೇಗವಾಗಿದೆ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಮೂರನೆಯವನು ನಗುವ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾನೆ.
Published by:Ashwini Prabhu
First published: