Viral Video: ಮೂರು ಆನೆಗಳ ಜೀವ ಉಳಿಸಿದ ಚಾಲಕರು! ವಿಡಿಯೋ ವೈರಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿಯೊಂದು ಪಕ್ಷಿಸಂಕುಲ ವನ್ಯಜೀವಿ ಕೂಡ ದೇಶದ ಸಂಪತ್ತು, ಅದನ್ನು ರಕ್ಷಿಸುವುದು, ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಆದರೆ ಇತ್ತೀಚಿನ ಟೆಕ್ನಾಲಜಿಗಳಿಂದ, ವಾತಾವರಣದ ಕಾರಣದಿಂದ ಹಲವಾರು ಪ್ರಾಣಿಗಳು ನಶಿಸಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ರೈಲು ಚಾಲಕರು ಆನೆಯನ್ನು ಬಚಾವ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ.

ಮುಂದೆ ಓದಿ ...
  • Share this:

    ಪ್ರತಿಯೊಂದು ಪಕ್ಷಿಸಂಕುಲ (Bird), ವನ್ಯಜೀವಿ (Wild) ಕೂಡ ದೇಶದ ಸಂಪತ್ತು, ಅದನ್ನು ರಕ್ಷಿಸುವುದು, ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಆದರೆ ಇತ್ತೀಚಿನ ಟೆಕ್ನಾಲಜಿಗಳಿಂದ (Technology), ವಾತಾವರಣದ (Climate) ಕಾರಣದಿಂದ ಹಲವಾರು ಪ್ರಾಣಿಗಳು (Animals) ನಶಿಸಿ ಹೋಗುತ್ತಿವೆ. ಅಭಿವೃದ್ಧಿ ಮತ್ತು ವಿನಾಶ ಎರಡೂ ಒಂದೇ ಮುಖದ ನಾಣ್ಯಗಳಿದ್ದಂತೆ. ಒಂದಾಗಬೇಕಾದರೆ, ಒಂದನ್ನು ಕಳೆದುಕೊಳ್ಳಲೇಬೇಕು. ಇದಕ್ಕೆ ಉತ್ತಮ ನಿದರ್ಶನ ಎಂದರೆ ಈ ಗುಬ್ಬಿಗಳು. ಮೊಬೈಲ್‌ ಫೋನ್‌ (Mobile Phone) ಬಂದಮೇಲೆ ಇವುಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನಲಾಗಿದೆ. ಹಾಗೆಯೇ ಈ ರೈಲು ವ್ಯವಸ್ಥೆ (Train System). ರೈಲಿಗೆ ಸಿಕ್ಕಿ ಅದೆಷ್ಟೋ ಪ್ರಾಣಿಗಳು ತಮ್ಮ ಜೀವ ಕಳೆದುಕೊಳ್ಳುತ್ತಿವೆ.


    ವಿವಿಧ ವನ್ಯಜೀವಿ ಪ್ರಭೇದಗಳಿಗೆ ನೆಲೆಯಾಗಿರುವ ಕಾಡಿನ ಪ್ರದೇಶಗಳು ಸೇರಿದಂತೆ, ಭಾರತೀಯ ರೈಲ್ವೆಯ ಮಾರ್ಗಗಳು ದೇಶದ ವಿವಿಧ ಭಾಗಗಳ ಮೂಲಕ ಹಾದು ಹೋಗುತ್ತವೆ.


    ಕಾಡಿನಲ್ಲಿ ಅತ್ತಿಂದಿತ್ತ ಸಂಚರಿಸುವಾಗ ಹಳಿ ದಾಟುವ ಸಂದರ್ಭದಲ್ಲಿ ವೇಗವಾದ ರೈಲಿಗೆ ಸಿಕ್ಕಿ ಪ್ರಾಣಿಗಳು ಸಾವನ್ನಪ್ಪುತ್ತವೆ. ಇದು ಕಾಡಿಗೆ ಮಾತ್ರವಲ್ಲದೇ ನಾಡಲ್ಲೂ ಸಹ ಸಂಭವಿಸುತ್ತದೆ.


    ಊರಿನ ಬದಿಗಳಲ್ಲಿ ಹಸು, ಎಮ್ಮೆ, ಕುರಿಗಳಂತಹ ಪ್ರಾಣಿಗಳು ಸಿಕ್ಕಿ ಸಾವನ್ನಪ್ಪುವ ಘಟನೆಗಳು ದಿನ ನಿತ್ಯ ನಡೆಯುತ್ತವೆ. ವೇಗವಾಗಿರುವ ಬೃಹತ್‌ ವಾಹನವನ್ನು ನಿಲ್ಲಿಸಲು ಕಷ್ಟಸಾಧ್ಯವಾದ ಕಾರಣ ಈ ಅವಘಡಗಳಿಗೆ ರೈಲು ಚಾಲಕರನ್ನು ದೂಷಿಸಲು ಸಾಧ್ಯವಿಲ್ಲ.


     The video of the driver who saved the lives of three elephants went viral
    ಸಾಂದರ್ಭಿಕ ಚಿತ್ರ


    ಖುಷಿ ನೀಡುತ್ತದೆ ಈ ವೈರಲ್‌ ವಿಡಿಯೋ


    ಆದರೆ ಎಲ್ಲಾ ಸಂದರ್ಭಗಳಲ್ಲೂ ಇದೇ ನಡೆಯುತ್ತದೆ ಎನ್ನಲು ಸಾಧ್ಯವಿಲ್ಲ. ಕೆಲವೊಮ್ಮೆ ತಮ್ಮ ಸಮಯಪ್ರಜ್ಞೆಯಿಂದಲೂ ಸಹ ಜೀವ ಉಳಿಸುವ ಮಹತ್ಕಾರ್ಯವನ್ನು ಈ ಚಾಲಕರು ಕೈಗೊಳ್ಳುತ್ತಾರೆ.


    ರೈಲಿಗೆ ಸಿಕ್ಕಿ ಪ್ರಾಣಿಗಳು ಸಾವನ್ನಪ್ಪುವ ಇಂತಹ ಘಟನೆಗಳನ್ನೇ ಹೆಚ್ಚಾಗಿ ನೋಡುವ ನಮಗೆ ಇತ್ತೀಚೆಗೆ ವೈರಲ್‌ ಆದ ಒಂದು ವಿಡಿಯೋ ಖುಷಿ ನೀಡುತ್ತದೆ ನೋಡಿ.


    ಮೂರು ಆನೆಗಳ ಜೀವ ಉಳಿಸಿದ ಲೋಕೋ ಪೈಲಟ್‌ಗಳು


    ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪೂರ್ವ ದೃಶ್ಯವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್‌ನ ಜಾಗರೂಕತೆಯು ಆನೆಗಳ ಜೀವವನ್ನು ಉಳಿಸಲು ಸಹಾಯ ಮಾಡಿದ ಘಟನೆಯ ಕುರಿತು ಟ್ವೀಟ್ ಮಾಡಿದ್ದಾರೆ.



    ಈ ಹಳಿ ಪಕ್ಕದಲ್ಲಿ ಮೂರು ಆನೆಗಳು ಹಾದು ಹೋಗುತ್ತಿದ್ದವು ಇದನ್ನು ಕಂಡ ತಕ್ಷಣ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದಾರೆ. ಈ ಆನೆಗಳು ಹಳಿ ದಾಟುವ ತನಕ ಕಾದ ಚಾಲಕರು ಮತ್ತೆ ಮುಂದೆ ಸಾಗಿದ್ದಾರೆ. ಈ ಮೂಲಕ ಮೂರು ಆನೆಗಳ ಜೀವ ಉಳಿಸಿದ್ದಾರೆ.


    ಚಾಲಕರಿಗೆ ಧನ್ಯವಾದ ತಿಳಿಸಿ ಪೋಸ್ಟ್‌ ಹಂಚಿಕೊಂಡ ಐಎಫ್‌ಎಸ್ ಅಧಿಕಾರಿ


    ಇದು ಎಪಿಡಿ ಜಂಕ್ಷನ್ ಮತ್ತು ರಾಜಭಟ್ಖಾವಾ ನಿಲ್ದಾಣದ ನಡುವಿನ ಟ್ರ್ಯಾಕ್‌ನಲ್ಲಿ ಸೆರೆಯಾದ ದೃಶ್ಯ. ಬೆಳಿಗ್ಗಿನ ನಸುಕಿನ ವೇಳೆ ಈ ಪ್ರದೇಶದಲ್ಲಿ ಆನೆಗಳು ಹಳಿ ದಾಟುತ್ತಿದ್ದವು.


    ಇದನ್ನು ತಕ್ಷಣ ಗಮನಿಸಿದ ಲೊಕೊ ಪೈಲಟ್ ಎಲ್ ಕೆ ಜಹಾ ಮತ್ತು ಸಹಾಯಕ ಲೋಕೋ ಪೈಲಟ್ ಅರಿಂದಮ್ ಬಿಸ್ವಾಸ್ ತಕ್ಷಣ ತುರ್ತು ಬ್ರೇಕ್‌ ಅನ್ನು ಒತ್ತಿದ್ದಾರೆ. ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ಇಬ್ಬರು ಚಾಲಕರಿಗೆ ಧನ್ಯವಾದ ತಿಳಿಸಿ ಈ ಪೋಸ್ಟ್‌ ಹಂಚಿಕೊಂಡಿದ್ದಾರೆ.


    ಇದನ್ನೂ ಓದಿ:  Human Genome: ಮಾನವ ಜೀನೋಮ್‌ನಲ್ಲಿ ನಿಗೂಢ ಡಿಎನ್‌ಎ ಅಂಶವನ್ನು ಪತ್ತೆ ಹಚ್ಚಿದ ವಿಜ್ಞಾನಿಗಳು


    ರೈಲು ಚಾಲಕರ ಕಾರ್ಯಕ್ಕೆ ನೆಟ್ಟಿಗರ ಶ್ಲಾಘನೆ


    ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಚಾಲಕರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ಪೋಸ್ಟ್‌ ಅನ್ನು ಹಂಚಿಕೊಂಡ ನಂತರ 31,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು, ಲೈಕ್‌ ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.


    ಹಲವು ಬಳಕೆದಾರರು ಇದನ್ನು ಇದನ್ನು ಮಾನವೀಯತೆ, ಒಳ್ಳೆಯ ಕೆಲಸ ಎಂದು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲ ಬಳಕೆದಾರರು ಲೋಕೋ ಪೈಲಟ್‌ಗಳ ಕರ್ತವ್ಯ ಪ್ರಜ್ಞೆಗೆ ಸಲಾಂ ಎಂದಿದ್ದಾರೆ.

    Published by:Gowtham K
    First published: