Viral Video: ಅಜ್ಜಿ ಸ್ಪೋರ್ಟ್ಸ್ ಬೈಕ್ ರೈಡ್​ ಮಾಡಿದ್ದು ಎಲ್ಲಾದ್ರೂ ನೋಡಿದ್ದೀರಾ: ಈ ವೈರಲ್ ವಿಡಿಯೋ ನೋಡಿ..!

ವಿಡಿಯೋದಲ್ಲಿ ಸ್ಪೋರ್ಟ್ಸ್ ಬೈಕ್ ಯಮಹ ಆರ್15 ಅನ್ನು ಓಡಿಸಿಕೊಂಡು ಕ್ಯಾಮೆರಾದ ಕಡೆಗೆ ನೋಡುತ್ತಾ ನಗುತ್ತಾ ಬರುತ್ತಿರುವುದನ್ನು ನೋಡಿದರೆ ಯಾರಾದ್ರೂ ಹುಬ್ಬೇರಿಸೋದು ಗ್ಯಾರಂಟಿ.

ಬೈಕರ್ ಅಜ್ಜಿ

ಬೈಕರ್ ಅಜ್ಜಿ

  • Share this:
    ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸ್ಟೈಲಿಶ್ ಸ್ಪೋರ್ಟ್ಸ್ ಬೈಕ್‌ಗಳನ್ನು ಓಡಿಸುವುದು ತುಂಬಾ ಸಹಜವಾದ ವಿಷಯ ಮತ್ತು ಅವರು ಅದನ್ನು ಓಡಿಸಿದರೆ ತುಂಬಾ ಚೆನ್ನಾಗಿಯೂ ಕಾಣುತ್ತದೆ, ಆದರೆ ವಯಸ್ಸಾದ ಅಜ್ಜಿಯೊಬ್ಬಳು ಒಳ್ಳೆ ಕಾಲೇಜು ಹುಡುಗರಂತೆ ಸ್ಪೋರ್ಟ್ಸ್ ಬೈಕ್ ಮೇಲೆ ಹತ್ತಿ ಕುಳಿತು ಅದನ್ನು ಓಡಿಸಿಕೊಂಡು ಬಂದಿರುವಂತಹ ಘಟನೆಯ ವಿಡಿಯೋ ನೋಡಲು ಬಹಳ ಕ್ಯೂಟ್ ಆಗಿದ್ದು ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.  ಸಾಮಾನ್ಯವಾಗಿ ವಯಸ್ಸಾದ ಅಜ್ಜಿಯಂದಿರು ಮನೆಯಲ್ಲಿ ಅಡುಗೆ ಮನೆಯಲ್ಲಿ ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡು ತಮ್ಮ ಮೊಮ್ಮಕ್ಕಳ ಜೊತೆಗೆ ಕಾಲ ಕಳೆಯುತ್ತಾ ಇರುತ್ತಾರೆ, ಆದರೆ ಕೆಲ ಅಜ್ಜಿಯರು ತುಂಬಾ ಲವಲವಿಕೆಯಿಂದ ಸದಾ ಹೊಸತನ್ನು ಕಲಿಯಬೇಕೆಂಬ ಹಂಬಲದಿಂದ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತ ಮತ್ತು ಕಲಿಯುತ್ತಾ ಇರುವುದು ಸಹ ನಾವು ನೋಡಿರುತ್ತೇವೆ. ಇಲ್ಲಿ ಅಜ್ಜಿ ಏನು ಮಾಡಿದ್ದಾರೆ ಅಂತ ನೀವು ಈ ವೈರಲ್ ವಿಡಿಯೋದಲ್ಲಿ ನೋಡಿದರೆ ಒಮ್ಮೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದು ಗ್ಯಾರಂಟಿ. 

    ವಿಡಿಯೋದಲ್ಲಿ ಸ್ಪೋರ್ಟ್ಸ್ ಬೈಕ್ ಯಮಹ ಆರ್15 ಅನ್ನು ಓಡಿಸಿಕೊಂಡು ಕ್ಯಾಮೆರಾದ ಕಡೆಗೆ ನೋಡುತ್ತಾ ನಗುತ್ತಾ ಬರುತ್ತಿರುವುದನ್ನು ನೋಡಿದರೆ ಯಾರಾದ್ರೂ ಹುಬ್ಬೇರಿಸೋದು ಗ್ಯಾರಂಟಿ. ಆದರೆ ಈ ವಿಡಿಯೋ ಎಲ್ಲಿಯದ್ದು ಮತ್ತು ಈ ಅಜ್ಜಿ ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲವಾದರೂ ವೀಡಿಯೊ ಮಾತ್ರ ವೈರಲ್ ಆಗಿದೆ.










    View this post on Instagram






    A post shared by @__shubham__5x






    ವಿಡಿಯೋ ತುಣುಕನ್ನು ಇನ್‌ಸ್ಟಾಗ್ರಾಂ ಬಳಕೆದಾರರಾದ _ಶುಭಮ್_5ಎಕ್ಸ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಪೇಜಿನಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೆ ಈ ವಿಡಿಯೋಗೆ 78.4 ಮಿಲಿಯನ್ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ಈ ವಿಡಿಯೋವನ್ನು 5.5 ಮಿಲಿಯನ್ ಕ್ಕಿಂತಲೂ ಜಾಸ್ತಿ ಜನರು ಇಷ್ಟ ಪಟ್ಟಿದ್ದಾರೆ.

    ಇದನ್ನೂ ಓದಿ: Tiger 3: ಸಿನಿಮಾಗಾಗಿ ಸಿದ್ಧರಾಗುತ್ತಿರುವ ಕತ್ರಿನಾ ಕೈಫ್​: ಇಲ್ಲಿವೆ ವಿಡಿಯೋ..!

    ಈ ವಿಡಿಯೋ ತುಣುಕು ಎಷ್ಟರ ಮಟ್ಟಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಬ್ಬಾ ಅಜ್ಜಿಯ ಸಾಹಸವನ್ನು ಮೆಚ್ಚಿಕೊಂಡು ಹೊಗಳಿದ್ದಾರೆ ಮತ್ತು ಕೆಲವರು ಅಜ್ಜಿಯ ವಯಸ್ಸನ್ನು ಪರಿಗಣನೆಗೆ ತೆಗೆದುಕೊಂಡು ಭಲೇ ಅಜ್ಜಿ ಎಂದು ಸಹ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಈ ಅಜ್ಜಿಯು ಸುಮ್ಮನೆ ಬೈಕ್ ಮೇಲೆ ಕುಳಿತಿದ್ದು ಹಿಂದೆಯಿಂದ ಯಾರೋ ಬೈಕ್ ಅನ್ನು ತಳ್ಳಿದ್ದಾರೆ ಎಂದು ಶಂಕೆ ಸಹ ವ್ಯಕ್ತಪಡಿಸಿದ್ದಾರೆ.

    ಗುಲಾಬಿ ಬಣ್ಣದ ರವಿಕೆಯನ್ನು ಮತ್ತು ಹಸಿರು ಬಣ್ಣದ ಲಂಗವನ್ನು ತೊಟ್ಟ ಅಜ್ಜಿ ಬೈಕ್ ಮೇಲೆ ಕುಳಿತು ಹಾಗೆ ಬರುತ್ತಿರುವಂತಹ ಒಂದು ಚಿಕ್ಕ ತುಣುಕನ್ನು ಮತ್ತು ಅದಕ್ಕೆ ತಕ್ಕಂತೆ ಹಿಂದಿ ಚಿತ್ರದ ಗೀತೆಯನ್ನು ಸಹ ಆ ವಿಡಿಯೋಗೆ ಹಿನ್ನಲೆ ಸಂಗೀತವಾಗಿ ಹಾಕಿರುವುದು ನಿಜಕ್ಕೂ ನೋಡುಗರನ್ನು ತನ್ನೆಡೆಗೆ ಆಕರ್ಷಿಸದೇ ಇರದು. ಇತ್ತೀಚೆಗೆ ಹೀಗೆ ಜನರು ತುಂಬಾ ವಿಶಿಷ್ಟವಾಗಿ ಹೊಸದನ್ನು ಮಾಡುತ್ತಾ ಮತ್ತು ಅವುಗಳ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದು, ಅನೇಕ ಈ ತರಹದ ವಿಡಿಯೋಗಳು ನೋಡುಗರನ್ನು ಹೆಚ್ಚಾಗಿ ಆಕರ್ಷಿಸುತ್ತವೆ.



    ಇದನ್ನೂ ಓದಿ: ಬ್ರಾ ಟಾಪ್​- ಹೈ ಸ್ಲಿಟ್​ ಸ್ಕರ್ಟ್​ ತೊಟ್ಟು ಹಾಟ್​ ಲುಕ್ಸ್​ನಿಂದ ಮತ್ತೇರಿಸುತ್ತಿರುವ ಸಾರಾ ಅಲಿ ಖಾನ್​..!



    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
    Published by:Anitha E
    First published: