ಕೆಲವರು 40-50 ವರ್ಷ (Year) ವಯಸ್ಸು (Age) ದಾಟಿದ ನಂತರ ಹೆಚ್ಚು ಮನೋರಂಜನೆ (Entertainment) ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ತಾವಾಯ್ತು, ತಮ್ಮ ಕೆಲಸ (Job) ಆಯ್ತು ಅಂತ ನೋಡಿಕೊಂಡು ಶಾಂತವಾಗಿರುವುದನ್ನು (Peace) ನಾವೆಲ್ಲಾ ನೋಡಿರುತ್ತೇವೆ. ಆದರೆ ಇನ್ನೂ ಕೆಲವರು ತಮಗೆ ವಯಸ್ಸೇ ಆಗಿಲ್ಲವೇನೋ ಎಂಬಂತೆ ಇರುತ್ತಾರೆ, ಎಂದರೆ ಮದುವೆ (Wedding) ಸಮಾರಂಭಗಳಲ್ಲಿ ಹಾಡು (Song) ಹೇಳುವುದು, ಡ್ಯಾನ್ಸ್ (Dance) ಮಾಡುವುದೆಲ್ಲವನ್ನು ಮಾಡಿ ತಾವು ಮಜವಾಗಿರುತ್ತಾರೆ ಮತ್ತು ಅಲ್ಲಿದ್ದವರೆಲ್ಲರನ್ನು ನಕ್ಕು ನಗಿಸುತ್ತಾರೆ ಅಂತ ಹೇಳಬಹುದು.
ಹೌದು. ಕೆಲವರಿಗೆ ಈ ವಯಸ್ಸು ಎಂಬುದು ಬರೀ ಒಂದು ಸಂಖ್ಯೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಕೆಲವರು ತಮಗೆ ವಯಸ್ಸಾಯಿತು ಅಂತ ಪದೇ ಪದೇ ಹೇಳುವುದನ್ನು ನಾವು ಕೇಳಿರುತ್ತೇವೆ, ಅಂತಹವರು ತಮ್ಮ ವಯಸ್ಸಿನ ಬಗ್ಗೆಯೇ ಹೆಚ್ಚು ಯೋಚನೆ ಮಾಡುತ್ತಿರುತ್ತಾರೆ.
ಇನ್ನೂ ಕೆಲವರು ಅವರಿಗೆ ಎಷ್ಟು ವಯಸ್ಸಾಗಿದೆ ಅಂತ ಸ್ವಲ್ಪವೂ ತಲೆ ಕೆಡೆಸಿಕೊಳ್ಳುವುದಿಲ್ಲ. ಒಂದು ರೀತಿಯಲ್ಲಿ ವಯಸ್ಸಿನ ಬಗ್ಗೆ ಜಾಸ್ತಿ ಯೋಚನೆ ಮಾಡದೆ, ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಾ ಸಂಪೂರ್ಣವಾಗಿ ಆಸ್ವಾದಿಸುವುದು ಒಳ್ಳೆಯದು.
'ತಿತಲಿಯಾ ವಾರ್ಗಾ’ ಹಾಡಿಗೆ ಡ್ಯಾನ್ಸ್ ಮಾಡಿದ ಅಂಕಲ್
ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ‘ತಿತಲಿಯಾ ವಾರ್ಗಾ’ ಹಾಡಿಗೆ ಸಖತ್ತಾಗಿ ಡ್ಯಾನ್ಸ್ ಮಾಡುವುದರ ಮೂಲಕ ತುಂಬಾನೇ ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಮಾರಂಭದಲ್ಲಿ ನೆರೆದಿದ್ದವರಿಗೂ ಸಹ ಸಖತ್ ಖುಷಿ ಕೊಟ್ಟಿದ್ದಾರೆ ಅಂತ ಹೇಳಬಹುದು.
ತಮ್ಮನ್ನು ತಾವು ‘ತಿತಲಿಯಾ ವಾರ್ಗಾ’ ಹಾಡಿನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದನ್ನು ನೋಡುವುದೇ ಒಂದು ಆನಂದದ ವಿಷಯ ಅಂತ ಹೇಳಬಹುದು ಮತ್ತು ಇದು ತುಂಬಾನೇ ಹೃದಯಸ್ಪರ್ಶಿಯಾಗಿದೆ.
ವಯಸ್ಸಾದ ವ್ಯಕ್ತಿಯ ಅಂತಹ ಒಂದು ವೀಡಿಯೋ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಬೆರಗುಗೊಳಿಸಿದೆ.
ಈ ವೀಡಿಯೋವನ್ನು ಸಂದೀಪ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಕುರ್ತಾ ಪೈಜಾಮಾ ಧರಿಸಿ ಮದುವೆ ಸಮಾರಂಭದಲ್ಲಿ, ಹಾರ್ಡಿ ಸಂಧು ಅವರ ಹಿಟ್ ಹಾಡು 'ತಿತಲಿಯಾ ವಾರ್ಗಾ' ಸಂಗೀತಕ್ಕೆ ಸಖತ್ತಾಗಿ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ಹಾಕುತ್ತಿರುವುದನ್ನು ನಾವು ನೋಡಬಹುದು.
ಹಾಡಿನ ರಾಗಕ್ಕೆ ಸರಿಯಾಗಿ ಹೊಂದಿಸಿಕೊಂಡು ಸ್ಟೆಪ್ಸ್ ಹಾಕಿದ ವ್ಯಕ್ತಿ
ಅವರು ಈ ಹಾಡಿನ ರಾಗಕ್ಕೆ ಸ್ಟೆಪ್ಸ್ ಗಳನ್ನು ತಾಳಕ್ಕೆ ತಕ್ಕಂತೆ ಹೊಂದಿಸಿಕೊಂಡು ಡ್ಯಾನ್ಸ್ ಮಾಡಿದ್ದಾರೆ ಮತ್ತು ಅದು ನೋಡಲು ತುಂಬಾನೇ ಸೊಗಸಾಗಿ ಸಹ ಕಂಡು ಬಂದಿದೆ.
ವೀಡಿಯೋದಲ್ಲಿನ ಇತರರು ಈ ಡ್ಯಾನ್ಸ್ ನೋಡಿ ಶಿಳ್ಳೆ, ಚಪ್ಪಾಳೆ ಹೊಡೆಯುತ್ತಿರುವುದನ್ನು, ಜೋರಾಗಿ ನಗುವುದನ್ನು ಮತ್ತು ಈ ವ್ಯಕ್ತಿಯ ಡ್ಯಾನ್ಸ್ ಕೌಶಲ್ಯಗಳನ್ನು ಶ್ಲಾಘಿಸುವುದನ್ನು ಸಹ ನಾವು ಇಲ್ಲಿ ಕಾಣಬಹುದು.
View this post on Instagram
ಅನೇಕ ಬಳಕೆದಾರರು ಈ ವ್ಯಕ್ತಿಯ ದೋಷರಹಿತ ನಡೆಗಳಿಂದ ಆಶ್ಚರ್ಯಚಕಿತರಾದರು. ಅನೇಕರು ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ.
ಅಂಕಲ್ ಡ್ಯಾನ್ಸ್ ಸ್ಟೆಪ್ಸ್ ನೋಡಿ ಕಾಮೆಂಟ್ ಮಾಡಿದ ನೆಟ್ಟಿಗರು
"ವಯಸ್ಸು ಕೇವಲ ಒಂದು ಸಂಖ್ಯೆ ಎಂದು ನೀವು ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೇಳಿದರು.
ಇದನ್ನೂ ಓದಿ: Viral Video: ಸಾಂತಾಕ್ಲಾಸ್ಗೆ ಏನಂತ ಪತ್ರ ಬರೆದಿದ್ದಾಳೆ ನೋಡಿ ಈ ಪುಟ್ಟ ಹುಡುಗಿ! ಪೋಸ್ಟ್ ನೋಡಿ ಭಾವುಕರಾದ ನೆಟ್ಟಿಗರು
ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಸಲ್ಮಾನ್ ಖಾನ್ ಗಿಂತ ಉತ್ತಮ" ಎಂದು ಹೇಳಿದರು. ಮೂರನೇ ಬಳಕೆದಾರರೊಬ್ಬರು "ಇದು ತುಂಬಾ ಚೆನ್ನಾಗಿದೆ" ಎಂದು ಕಾಮೆಂಟ್ ಮಾಡಿದರು. "ಸೂಪರ್ ಡಾನ್ಸ್ ಸರ್ ಜೀ" ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು.
ಕೆಲವು ದಿನಗಳ ಹಿಂದೆ, ರೆಟ್ರೋ ಹಿಟ್ 'ಆ ಜಾನೆ ಜಾ' ಹಾಡಿಗಾಗಿ ವಯಸ್ಸಾದ ದಂಪತಿಗಳು ಡ್ಯಾನ್ಸ್ ಮಾಡಿರುವ ಕ್ಲಿಪ್ ಇಂಟರ್ನೆಟ್ ನಲ್ಲಿ ವೈರಲ್ ಆಗಿತ್ತು.
ಲತಾ ಮಂಗೇಶ್ಕರ್ ಅವರ ಹಿಟ್ ಹಾಡಿಗೆ ಬಿರೀಂದರ್ ಮತ್ತು ಅಮರ್ಜ್ಯೋತ್ ಗಿಲ್ ಎಂಬ ದಂಪತಿಗಳು ಡ್ಯಾನ್ಸ್ ಮಾಡಿದ್ದು, ಆನ್ಲೈನ್ ನಲ್ಲಿ ಇದು ಅನೇಕರ ಹೃದಯವನ್ನು ಗೆದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ