ದಿನ ಬೆಳಗಾದರೆ ಸಾಕು, ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅನೇಕ ರೀತಿಯ ವಿಡಿಯೋಗಳು ಹರಿದಾಡಲು ಶುರು ಮಾಡುತ್ತವೆ, ಎಂದರೆ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರ-ವಿಚಿತ್ರವಾದ, ಮನಸ್ಸಿಗೆ ಮುದ ನೀಡುವ, ಆಸಕ್ತಿಕರವಾದ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ ಎಂದರ್ಥ. ಎಷ್ಟೋ ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ವಿಡಿಯೋಗಳು (Viral Video) ನಮಗೆ ವಿವಿಧ ಕ್ಷೇತ್ರಗಳಲ್ಲಿ ಏನೆಲ್ಲಾ ನಡೀತಾ ಇದೆ ಅನ್ನೋದರ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಆಕರ್ಷಕವಾದ ಫೋಟೋಗಳಿಂದ ಹಿಡಿದು ಹಾಸ್ಯಮಯ ಮೀಮ್ಸ್ ಮತ್ತು ಕುತೂಹಲಕಾರಿ ವಿಡಿಯೋಗಳವರೆಗೆ, ಅನ್ವೇಷಿಸಲು ಹೊಸದಕ್ಕೆ ಕೊರತೆಯಿಲ್ಲ.
ಕೆಲವು ವಿಡಿಯೋಗಳು ನಮಗೆ ಆಸಕ್ತಿದಾಯಕ ಅಂತ ಅನ್ನಿಸಿದರೆ, ಇನ್ನೂ ಕೆಲವು ವಿಡಿಯೋಗಳು ನಮ್ಮನ್ನು ಹೀಗೂ ಇರಬಹುದೇ ಅಂತ ಒಂದು ಕ್ಷಣ ಗೊಂದಲಕ್ಕೀಡು ಮಾಡುತ್ತವೆ. ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾದ ಅಂತಹ ಒಂದು ವಿಡಿಯೋ ಈಗ ಆನ್ಲೈನ್ನಲ್ಲಿ ಜನರನ್ನು ಬರೀ ಗೊಂದಲಕ್ಕೀಡು ಮಾಡದೆ, ದಿಗ್ಭ್ರಮೆ ಸಹ ಗೊಳಿಸಿದೆ ಅಂತ ಹೇಳಬಹುದು. ಯಾವುದಪ್ಪಾ ಅಂತಹ ವಿಡಿಯೋ? ಏನಿದೆ ಅದರಲ್ಲಿ ಅಂತಹದು ಅಂತ ತಿಳಿದುಕೊಳ್ಳಲು ನೀವು ಸಹ ತುಂಬಾನೇ ಕಾತುರರಾಗಿರುತ್ತೀರಿ ಅಂತ ನಮಗೆ ಗೊತ್ತು.
ವಾಹನಗಳು ಸೇತುವೆಯ ಮೇಲೆ ಟರ್ನ್ ತೆಗೆದುಕೊಂಡು ಕಣ್ಮರೆಯಾಗುತ್ತಿವೆ ನೋಡಿ
ಈ 23 ಸೆಕೆಂಡಿನ ವಿಡಿಯೋ ತುಣುಕಿನಲ್ಲಿ ವಾಹನಗಳು ಸೇತುವೆಯ ಮೇಲೆ ಹಾಗೆ ಬಂದು ಟರ್ನ್ ತೆಗೆದುಕೊಳ್ಳುತ್ತವೆ, ಆ ಟರ್ನ್ ತೆಗೆದುಕೊಂಡ ನಂತರ ನಮಗೆ ಆ ವಾಹನಗಳು ಎಲ್ಲಿಗೆ, ಯಾವ ಕಡೆಗೆ ಹೋದವು ಅಂತ ಸ್ವಲ್ಪವೂ ಸಹ ಕಾಣಿಸುವುದಿಲ್ಲ. ಆ ರಸ್ತೆಯ ಮೇಲೆ ಯಾವುದೇ ನಿರ್ಗಮನದ ಸಂಕೇತಗಳು ಇರಲಿಲ್ಲ, ಆ ವಾಹನಗಳು ಎಲ್ಲಿಗೆ ಹೋದವು ಎಂಬುದಕ್ಕೆ ಯಾವುದೇ ತಾರ್ಕಿಕ ಉತ್ತರವಿಲ್ಲ ಎಂದು ಈ ವಿಡಿಯೋ ನೋಡಿದರೆ ನಿಮಗೆ ಅರ್ಥವಾಗುತ್ತದೆ.
"ಯಾರಾದರೂ ಇದನ್ನು ವಿವರಿಸಬಹುದೇ? ದಯವಿಟ್ಟು" ಎಂದು ಈ ವೀಡಿಯೋಗೆ ಚಿಕ್ಕದಾಗಿ ಮತ್ತು ಚೊಕ್ಕದಾಗಿ ಶೀರ್ಷಿಕೆಯೊಂದನ್ನು ಪ್ರಶ್ನೆಯ ರೂಪದಲ್ಲಿ ಬರೆದು ಟ್ವೀಟ್ ಮಾಡಿದ್ದಾರೆ.
ಸಖತ್ ವೈರಲ್ ಆಗಿದೆ ಈ ಚಿತ್ರ-ವಿಚಿತ್ರವಾದ ವಿಡಿಯೋ
ಈ ವಿಡಿಯೋ ಈಗ 30 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ಆನ್ಲೈನ್ ನಲ್ಲಿ ಭಾರಿ ವೈರಲ್ ಆಗಿದೆ ಮತ್ತು ಇದು 64 ಸಾವಿರಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ ಮತ್ತು ಟ್ವಿಟರ್ ಬಳಕೆದಾರರಿಂದ ಪ್ರವಾಹ ಪ್ರತಿಕ್ರಿಯೆಯನ್ನು ಪಡೆದಿದೆ. ಅನೇಕ ಜನರು ತಾವು ನೋಡುತ್ತಿರುವುದನ್ನು ನಂಬಲು ಸಾಧ್ಯವಾಗದಿದ್ದರೂ, ಇತರರು ಇದಕ್ಕೆ ಉತ್ತರವನ್ನು ಕಂಡು ಹಿಡಿಯಲು ಸಾಕಷ್ಟು ಪ್ರಯತ್ನಪಟ್ಟಿರುವ ಹಾಗೆ ಕಾಣಿಸುತ್ತದೆ.
ಇದಕ್ಕೆ ಕಾಮೆಂಟ್ ಮಾಡಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ಮೇಲ್ಛಾವಣಿ ನದಿಯಂತೆ ಕಾಣುತ್ತದೆ. ಒಮ್ಮೆ ನೀವು ವಿಡಿಯೋವನ್ನು ನೋಡಿದ ನಂತರ ನೀವು ಅದನ್ನು ತಿಳಿಯಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಇಲ್ಲಿ ಏನು ನಡೀತಾ ಇದೆ ಅಂತ ತಿಳಿದುಕೊಳ್ಳಲು ಇದನ್ನು ಪದೇ ಪದೇ ನೋಡಲು ಬಯಸುತ್ತಾರೆ" ಅಂತ ಹೇಳಿದರು.
Can anyone explain? Please 🙏 pic.twitter.com/NFQ2tdqCgh
— CCTV IDIOTS (@cctvidiots) May 13, 2023
ವಿಡಿಯೋ ನೋಡಿ ಕಾಮೆಂಟ್ ಮಾಡಿದ ನೆಟ್ಟಿಗರು
ಇನ್ನೊಬ್ಬ ವ್ಯಕ್ತಿಯು ಕಾಮೆಂಟ್ ಮಾಡಿ "ಇದು ತುಂಬಾನೇ ಸುಲಭವಾದದ್ದು, ಇದು ನಾವು ನೋಡುವ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ನೀವು ಮುಂದೆ ನೋಡುವುದು ವಾಸ್ತವವಾಗಿ ಅದು ಮೇಲ್ಛಾವಣಿಯಾಗಿದೆ. ರಸ್ತೆ ತುಂಬಾ ಕೆಳಗಿದೆ ಮತ್ತು ಛಾವಣಿ ನಂತರ ಅದನ್ನು ಮರೆಮಾಡುತ್ತದೆ. ಆದರೂ ಇದು ತುಂಬಾನೇ ಚೆನ್ನಾಗಿತ್ತು" ಅಂತ ಹೇಳಿದರು.
"ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ, ನೀವು ನೋಡುತ್ತಿರುವ ಮೂಲೆ ಬಾಲ್ಕನಿಯಾಗಿದೆ. ಇದು ಬಲವಾದ ಜೂಮ್ ಸೃಷ್ಟಿಸಿದ ಆಪ್ಟಿಕ್ ಭ್ರಮೆಯಾಗಿದೆ, ಇದು ಹಿನ್ನೆಲೆಯನ್ನು ಮುಂಭಾಗದಷ್ಟೇ ಹತ್ತಿರವಾಗಿ ಕಾಣುವಂತೆ ಮಾಡುತ್ತದೆ" ಎಂದು ಈ ವೀಡಿಯೋವನ್ನು ಒಂದು ಆಪ್ಟಿಕಲ್ ಇಲ್ಯೂಷನ್ ಅಂತ ಮೂರನೆಯ ಬಳಕೆದಾರರು ಹೇಳಿದ್ದಾರೆ.
ಟ್ವಿಟರ್ ಬಳಕೆದಾರರೊಬ್ಬರು ಇದು ವಾಸ್ತವವಾಗಿ ಅಂಡರ್ ಪಾಸ್ ಹೊಂದಿರುವ ಸೇತುವೆಯಂತೆ ಕಾಣುವ ಮೇಲ್ಭಾಗವನ್ನು ಹೊಂದಿರುವ ಕಟ್ಟಡವಾಗಿದೆ ಎಂದು ಸೂಚಿಸಿದ್ದಾರೆ. ಈ ನಿರ್ದಿಷ್ಟ ಕ್ಲಿಪ್ 2019 ರಲ್ಲಿಯೂ ಸಹ ಒಮ್ಮೆ ವೈರಲ್ ಆಗಿತ್ತು, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರನ್ನು ಗೊಂದಲಕ್ಕೀಡು ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ