HOME » NEWS » Trend » THE TRUTH BEHIND THE PIC OF DIAMOND STUDDED AIRPLANE

ಇದು ವಜ್ರದ ವಿಮಾನ; ಆದರೆ ಅಸಲಿ ವಿಷಯ ಗೊತ್ತಾದರೆ ಅಚ್ಚರಿ ಪಡುತ್ತೀರಿ..!

ಸಾಮಾಜಿಕ ಜಾಲತಾಣಗಳಲ್ಲಿ ಎಮಿರೇಟ್ಸ್​ನ ಹೊಸ ವಜ್ರದ ವಿಮಾನ ಎಂದೇ ಈ ಫೋಟೋಗಳು ಹರಿದಾಡಿದ್ದವು.

zahir | news18
Updated:December 7, 2018, 3:03 PM IST
ಇದು ವಜ್ರದ ವಿಮಾನ; ಆದರೆ ಅಸಲಿ ವಿಷಯ ಗೊತ್ತಾದರೆ ಅಚ್ಚರಿ ಪಡುತ್ತೀರಿ..!
@emirates
  • News18
  • Last Updated: December 7, 2018, 3:03 PM IST
  • Share this:
ಸಾಮಾಜಿಕ ಜಾಲತಾಣಗಳಲ್ಲಿ ದಿನ ಬೆಳಗಾಗುವಷ್ಟರಲ್ಲಿ ಕೆಲವೊಂದು ಪೋಸ್ಟ್​ಗಳು ವೈರಲ್ ಆಗುತ್ತದೆ. ಹಾಗೆಯೇ ಸೋಷಿಯಲ್ ನೆಟ್​ವರ್ಕ್​ನಲ್ಲಿ ಇತ್ತೀಚೆಗೆ ಎಮಿರೇಟ್ಸ್​ ಏರ್​ಲೈನ್ಸ್​ನ ವಿಮಾನವೊಂದರ ಫೋಟೋ ಸಖತ್ತಾಗೆ ಹರಿದಾಡಿತ್ತು. ಸಾವಿರಾರು ವಜ್ರ ಹರಳುಗಳನ್ನು ಬಳಸಿ ಈ ವಿಮಾನದ ಹೊರ ಮೇಲ್ಮೈಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿತ್ತು.

ಡೈಮಂಡ್​ನಲ್ಲಿ ಕಂಗೊಳಿಸುತ್ತಿದ್ದ ದುಬೈ ಮೂಲದ ಏರ್​ಲೈನ್ಸ್​ ಕಂಪೆನಿಯ ಈ ವಿಮಾನದ ಫೋಟೋಗಳನ್ನು ನೋಡಿದ ಪ್ರತಿಯೊಬ್ಬರೂ ಅಚ್ಚರಿ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಹೊಸ ವಿನ್ಯಾಸಕ್ಕೆ ಮಾರು ಹೋದ ಅನೇಕರು ಪ್ರತಿಕ್ರಿಯಿಸಿ ಫೋಟೋವನ್ನು ಶೇರ್ ಮಾಡಿದ್ದರು. ಆದರೆ ಈ ವಿಮಾನದ ಫೋಟೋಗೆ ನೀಡಲಾಗಿದ್ದ ಟ್ಯಾಗ್​ಲೈನ್ ನೋಡಿ ಖುದ್ದು ಎಮಿರೇಟ್ಸ್​ ಸಂಸ್ಥೆಗೆ ಅಚ್ಚರಿಯಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಎಮಿರೇಟ್ಸ್​ನ ಹೊಸ ವಜ್ರದ ವಿಮಾನ ಎಂದೇ ಈ ಫೋಟೋಗಳು ಹರಿದಾಡಿದ್ದವು. ಈ ಬಗ್ಗೆ ವ್ಯಕ್ತಿಯೊಬ್ಬರು ಟ್ವಿಟರ್ ಮೂಲಕ ಎಮಿರೇಟ್ಸ್​ನ್ನು ಪ್ರಶ್ನಿಸಿದಾಗ, ಅಸಲಿ ಸತ್ಯ ಗೊತ್ತಾಗಿದೆ. ಎಮಿರೇಟ್ಸ್​ ಬ್ಲಿಂಗ್ 777 ಹೆಸರಿನ ಈ ವಿಮಾನದಲ್ಲಿ ಯಾವುದೇ ವಜ್ರಗಳನ್ನು ಬಳಸಲಾಗಿಲ್ಲ. ಬದಲಾಗಿ ಸಾರಾ ಶಕೀಲ್ ಎಂಬವರು ಈ ಫೋಟೋವನ್ನು ಕ್ರಿಯೇಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.ಕ್ರಿಸ್ಟಲ್ ಆರ್ಟಿಸ್ಟ್​ ಆಗಿರುವ ಸಾರಾ ಶಕೀಲ್ ತಮ್ಮದೇ ಕಲ್ಪನೆಯಲ್ಲಿ ಎಮಿರೇಟ್ಸ್​ನ್ನು ಡೈಮಂಡ್​ನಿಂದ ಅಲಂಕರಿಸಿದ್ದರು. 4.8 ಲಕ್ಷಕ್ಕಿಂತಲೂ ಹೆಚ್ಚು ಇನ್​ಸ್ಟಾಗ್ರಾಂ ಫಾಲೋವರ್ಸ್ ಹೊಂದಿರುವ ಸಾರಾ ಈ ಫೋಟೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಕೆಲವೇ ನಿಮಿಷಗಳಲ್ಲಿ ಡೈಮಂಡ್ ವಿಮಾನ ವೈರಲ್ ಆಗಿದೆ.


ಇದೇ ಫೋಟೋವನ್ನು ಎಮಿರೇಟ್ಸ್​ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕಂಪೆನಿ ಇದು ಸಾರಾ ಶಕೀಲ್​ ಅವರ ಕೈಚಳಕವಾಗಿದ್ದು, ಇಂತಹದೊಂದು ವಿಮಾನವನ್ನು ನಾವು ಹೊಂದಿಲ್ಲ ಎಂದು ಗೊಂದಲಕ್ಕೆ ತೆರೆ ಎಳೆದಿದ್ದಾರೆ.

First published: December 7, 2018, 2:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories