ಜಾರ್ಖಂಡ್: ಭಾರತದಲ್ಲಿ ಸಾರ್ವಜನಿಕ ಸಾರಿಗೆ (Public Transport) ಅಂದ್ರೆ ಮೂಗು ಮರಿಯುವವರೇ ಜಾಸ್ತಿ. ಅದು ಬಸ್ ಸೇವೆ (Bus Service) ಇರಲಿ, ರೈಲು ಸೇವೆಯೇ (Railway Service) ಇರಲಿ. ಟೈಮಿಂಗ್ ಮೆಂಟೇನ್ (Timing Maintain) ಮಾಡಲ್ಲ, ಸ್ವಚ್ಛತೆ (Cleanness) ಕಾಪಾಡುವುದಿಲ್ಲ, ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ನೀಡುವುದಿಲ್ಲ ಎನ್ನುವುದು ಜನ ಸಾಮಾನ್ಯರ ಆರೋಪ. ಅದರಲ್ಲೂ ರೈಲುಗಳು ಲೇಟ್ ಲತೀಫ್ (Late Latif) ಎನ್ನುವುದು ಎಲ್ಲರ ಆರೋಪ. ಇದಕ್ಕೆ ಇದೀಗ ಬಹುದೊಡ್ಡ ಉದಾಹರಣೆಯೇ (Example) ಸಿಕ್ಕಿದೆ. ಅಲ್ಲ ರೈಲು ತಡವಾಗುವುದು ಸಾಮಾನ್ಯ. ಆದರೆ ಕೆಲ ನಿಮಿಷಗಳೋ, ಕೆಲ ಗಂಟೆಗಳೋ (Hours) ವಿಳಂಬವಾಗಿದ್ದು ಇದೆ. ಆದರೆ ಒಂದು ವರ್ಷ ವಿಳಂಬವಾಗಿ (One Year Late) ರೈಲು ತಲುಪಬೇಕಾದ ಸ್ಥಳ ತಲುಪಿದ್ರೆ ಏನೆನ್ನಬೇಕು? ಇಲ್ಲಿ ಆಗಿದ್ದೂ ಅದೇ, ಛತ್ತೀಸ್‌ಗಢ್‌ನಿಂದ (Chhattisgarh) ಅಕ್ಕಿ ಮೂಟೆ (Rice Bag) ಹಾಕಿಕೊಂಡು ಹೊರಟ ರೈಲೊಂದು ಬರೋಬ್ಬರಿ 1 ವರ್ಷದ ಬಳಿಕ ಜಾರ್ಖಂಡ್‌ನ (Jharkhand) ಸ್ಟೇಷನ್ (Station) ತಲುಪಿದೆಯಂತೆ. ಈ ವಿಚಿತ್ರ ಸುದ್ದಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…
ಒಂದು ವರ್ಷದ ಹಿಂದೆ ಹೊರಟಿದ್ದ ರೈಲು
ಒಂದು ವರ್ಷದ ಹಿಂದೆ ಛತ್ತೀಸ್‌ಗಢದಿಂದ ಆಹಾರ ಧಾನ್ಯಗಳನ್ನು ಹೊತ್ತು ಬರಬೇಕಿದ್ದ ರೈಲು ಮೇ 17 ರಂದು ತನ್ನ ಗಮ್ಯಸ್ಥಾನವನ್ನು ತಲುಪಿದೆ. ಮೇ 2021 ರಲ್ಲಿ ಛತ್ತೀಸ್‌ಗಢದ ರೈಲು ನಿಲ್ದಾಣದಲ್ಲಿ 1000 ಆಹಾರ ಧಾನ್ಯಗಳ ಚೀಲಗಳನ್ನು ಲೋಡ್ ಮಾಡಲಾಗಿತ್ತು. ಈ ರೈಲು 762 ಕಿಮೀ ಪ್ರಯಾಣಿಸಿ, ಜಾರ್ಖಂಡ್‌ನ ನ್ಯೂ ಗಿರಿದಿಹ್ ನಿಲ್ದಾಣವನ್ನು ತಲುಪಬೇಕಿತ್ತು. ಆದರೆ ಒಂದು ವರ್ಷದ ಬಳಿಕ ಅಲ್ಲಿಗೆ ರೈಲು ರೀಚ್ ಆಗಿದೆ.
ತಾಂತ್ರಿಕ ಕಾರಣಗಳಿಂದ ಕೆಟ್ಟು ನಿಂತಿದ್ದ ರೈಲು
ರೈಲು ತಾಂತ್ರಿಕ ಸಮಸ್ಯೆ ಕಾರಣದಿಂದಾಗಿ ಒಂದು ಇಂಚೂ ಕದಲದೆ ನಿಂತಲ್ಲೇ ನಿಂತಿದೆ. ಒಂದು ವರ್ಷಗಳ ಬಳಿಕ ಆ ಬೋಗಿಯೊಂದಿಗೆ ಗೂಡ್ಸ್ ರೈಲು ಮೇ 17, 2022 ರಂದು ಜಾರ್ಖಂಡ್‌ನ ನ್ಯೂ ಗಿರಿದಿಹ್ ನಿಲ್ದಾಣವನ್ನು ತಲುಪಿದೆ. ವೇಳಾಪಟ್ಟಿಯೊಂದಿಗೆ ಸಂಬಂಧವೇ ಇಲ್ಲದ ಈ ಬೋಗಿಯನ್ನು ಕಂಡು ರೈಲ್ವೆ ಅಧಿಕಾರಿಗಳು ಗಾಬರಿಗೊಂಡಿದ್ದಾರೆ. ರೈಲು ತಪಾಸಣೆ ನಡೆಸಿದ ಬಳಿಕ ಬೋಗಿಯಲ್ಲಿ ಭಾರತೀಯ ಆಹಾರ ನಿಗಮಕ್ಕೆ ಸೇರಿದ ಅಕ್ಕಿ ಲೋಡ್ ಪತ್ತೆಯಾಗಿದೆ
ಇದನ್ನೂ ಓದಿ: Urine Beer: ಮಾರುಕಟ್ಟೆಗೆ ಬಂದಿದೆ ಮೂತ್ರದ ಬಿಯರ್! ಛೀ ಅನ್ಬೇಡಿ, ಕುಡಿದು ಚಿಲ್ಡ್ ಆಗಿ ಅಂತಿದೆ ಕಂಪನಿ
ಹಾಳಾಯ್ತು ರೈಲಿನಲ್ಲಿರುವ ಅಕ್ಕಿ ಮೂಟೆ
ಒಂದು ವರ್ಷ ವಿಳಂಬದಿಂದ 200-300 ಮೂಟೆ ಅಕ್ಕಿ ಹಾಳಾಗಿದೆ. ಉಳಿದ ಸರಕು ತುಂಬಾ ಹಳೆಯದ್ದಾಗಿದ್ದು, ಬಳಕೆಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಹೊಸ ಗಿರಿದಿಹ್ ಠಾಣಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದು, ಅವರು ಬಂದು ಪರಿಸ್ಥಿತಿಯನ್ನು ಅವಲೋಕಿಸಿ ಈ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಾರೆ ಎಂದಿದ್ದಾರೆ.
ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮದ ಭರವಸೆ
ಸ್ಟೇಷನ್ ಮಾಸ್ಟರ್ ಪಂಕಜ್ ಕುಮಾರ್ ಮಾತನಾಡಿ, ಮೇ 31 ರಂದು ಸಂಬಂಧಪಟ್ಟ ರೈಲ್ವೇ ಅಧಿಕಾರಿಗಳು ಆಗಮಿಸಿ ಹೆಚ್ಚಿನ ತನಿಖೆ ನಡೆಸಲಾಗುವುದು. ಏತನ್ಮಧ್ಯೆ, ಮಹೇಶ್ಲುಂಡಿ ಪಂಚಾಯತ್‌ಗೆ ನೂತನವಾಗಿ ಆಯ್ಕೆಯಾದ ಮುಖ್ಯಸ್ಥ ಶಿವನಾಥ ಸಾವೆ ಎಂಬುವರು, ಘಟನೆ ದುರದೃಷ್ಟಕರ ಎಂದು ಬಣ್ಣಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: South Asia: ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ನೇಪಾಳ ವಿಮಾನ ನಾಪತ್ತೆ
ಹಾಳಾಯ್ತು ಬಡವರ ಹೊಟ್ಟೆ ಸೇರಬೇಕಾದ ಆಹಾರ ಧಾನ್ಯ
ಸುಮಾರು 1000 ಚೀಲ ಆಹಾರ ಧಾನ್ಯಗಳು ಪತ್ತೆಯಾಗಿದ್ದು, ಅದರಲ್ಲಿ 200-300 ಚೀಲಗಳು ಹಾಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದಿಕಾರಿಗಳ ನಿರ್ಲಕ್ಷ್ಯದಿಂದ ಬಡವರಿಗೆ ನೀಡಬೇಕಿದ್ದ ಆಹಾರ ಧಾನ್ಯಗಳು ಸಂಪೂರ್ಣ ಕೊಳೆತು ಹೋಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ