• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • School: ವಿದ್ಯಾರ್ಥಿಗಳಿಲ್ಲದೆ ಮುಚ್ಚಬೇಕಿದ್ದ ಶಾಲೆಯ ಅದೃಷ್ಟವನ್ನೇ ಬದಲಾಯಿಸಿದ ಶಿಕ್ಷಕ! ಹೇಗೆ ಅಂತೀರಾ ಇಲ್ಲಿದೆ ಓದಿ

School: ವಿದ್ಯಾರ್ಥಿಗಳಿಲ್ಲದೆ ಮುಚ್ಚಬೇಕಿದ್ದ ಶಾಲೆಯ ಅದೃಷ್ಟವನ್ನೇ ಬದಲಾಯಿಸಿದ ಶಿಕ್ಷಕ! ಹೇಗೆ ಅಂತೀರಾ ಇಲ್ಲಿದೆ ಓದಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ದತ್ತಾತ್ರೇಯ ವಾರೇ ಅವರನ್ನು ಜಲಿಂದರ್ ನಗರದ ಸರ್ಕಾರಿ ಶಾಲೆಗೆ ವರ್ಗಾಯಿಸಿದಾಗ, ಅಲ್ಲಿ ಕೇವಲ 13 ವಿದ್ಯಾರ್ಥಿಗಳು ಮಾತ್ರ ಇದ್ದರು. ಇವರು ಅಲ್ಲಿಗೆ ಹೋದ ಕೆಲವು ತಿಂಗಳುಗಳಲ್ಲಿಯೇ ಅವರು ತಂದಿರುವ ಪರಿವರ್ತನೆ ನೋಡಿದರೆ ಎಂತವರಿಗೂ ಆಶ್ಚರ್ಯ ಅಂತ ಅನ್ನಿಸಬಹುದು. ಆ 13 ವಿದ್ಯಾರ್ಥಿಗಳ ಸಂಖ್ಯೆಯು ಇಂದು 100 ದಾಟಿದೆ.

ಮುಂದೆ ಓದಿ ...
  • Share this:

ವಿದ್ಯಾರ್ಥಿಗಳ (Students) ಬದುಕನ್ನು ರೂಪಿಸುವವರು ಶಿಕ್ಷಕರು (Teacher). ಆದರೆ ಇಲ್ಲಿ ಒಬ್ಬ ಶಿಕ್ಷಕ ಒಂದು ಗ್ರಾಮದಲ್ಲಿರುವ ವಿದ್ಯಾರ್ಥಿಗಳ ಮತ್ತು ಶಾಲೆಯ ಅದೃಷ್ಟವನ್ನೇ ಬದಲಾಯಿಸಿದ್ದಾರೆ ನೋಡಿ. ಹೌದು.. ರಾಷ್ಟ್ರ ಪ್ರಶಸ್ತಿ ವಿಜೇತ (National award winner) ಶಿಕ್ಷಕ ದತ್ತಾತ್ರೇಯ ವಾರೇ (Dattatreya Ware) ಅವರನ್ನು ಜಲಿಂದರ್ ನಗರದ ಸರ್ಕಾರಿ ಶಾಲೆಗೆ ವರ್ಗಾಯಿಸಿದಾಗ, ಅಲ್ಲಿ ಕೇವಲ 13 ವಿದ್ಯಾರ್ಥಿಗಳು ಮಾತ್ರ ಇದ್ದರು. ಇವರು ಅಲ್ಲಿಗೆ ಹೋದ ಕೆಲವು ತಿಂಗಳುಗಳಲ್ಲಿಯೇ ಅವರು ತಂದಿರುವ ಪರಿವರ್ತನೆ ನೋಡಿದರೆ ಎಂತವರಿಗೂ ಆಶ್ಚರ್ಯ ಅಂತ ಅನ್ನಿಸಬಹುದು. ಆ 13 ವಿದ್ಯಾರ್ಥಿಗಳ ಸಂಖ್ಯೆಯು ಇಂದು 100 ದಾಟಿದೆ. ಈ ಶಾಲೆ (School) ಈಗ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ, ಲ್ಯಾಪ್ಟಾಪ್ ಗಳು ಮತ್ತು ಇತರೆ ಶೈಕ್ಷಣಿಕ ಸಾಧನಗಳೊಂದಿಗೆ ವರ್ಚುವಲ್ ರಿಯಾಲಿಟಿ ಕನ್ನಡಕಗಳನ್ನು ಸಹ ಹೊಂದಿದೆ.


ನವೀನ ಬೋಧನಾ ವಿಧಾನಗಳ ಪರಿಚಯ
ಇವರು ಹಿಂದೆ 2012 ರಲ್ಲಿ ಪುಣೆ ಜಿಲ್ಲೆಯ ಶಿರೂರು ತಹಸಿಲ್ ನ ವಾಬಲ್ವಾಡಿಯ ಶಾಲೆಯೊಂದರ ಉಸ್ತುವಾರಿ ವಹಿಸಿಕೊಂಡ ನಂತರ ಜಿಲ್ಲಾ ಪರಿಷತ್ (ಜಿಪಂ) ಶಿಕ್ಷಕರಾದ ವಾರೇ ಅವರು ತುಂಬಾನೇ ಪ್ರಸಿದ್ಧಿ ಪಡೆದುಕೊಂಡರು. ಅವರು ಶಾಲೆಯಲ್ಲಿನ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಿದರು ಮತ್ತು ನವೀನ ಬೋಧನಾ ವಿಧಾನಗಳನ್ನು ಪರಿಚಯಿಸಿದರು. ಶಾಲೆಯು ರೋಬೋಟಿಕ್ಸ್ ಮತ್ತು ವಿದೇಶಿ ಭಾಷೆಗಳಲ್ಲಿ ಪಾಠಗಳನ್ನು ಸಹ ನೀಡಲು ಪ್ರಾರಂಭಿಸಿತು.


2016 ರಲ್ಲಿ, ವಾರೇ ಅನುಕರಣೀಯ ಶಿಕ್ಷಕರಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು, ಆದರೆ ಐದು ವರ್ಷಗಳ ನಂತರ ಅವರು ಆರ್ಥಿಕ ದುರಾಚಾರ ಮತ್ತು ಹುದ್ದೆಯ ದುರುಪಯೋಗದ ಆರೋಪಗಳನ್ನು ಎದುರಿಸಿದರು ಮತ್ತು ಅಮಾನತ್ತುಗೊಂಡರು.


ಇದನ್ನೂ ಓದಿ: Love marriage: 55 ವರ್ಷದ ವ್ಯಕ್ತಿಯನ್ನು ವಿವಾಹವಾದ 15 ವರ್ಷದ ಯುವತಿ! ಇದಕ್ಕೆಲ್ಲಾ ಕಾರಣ ಬಾಲಿವುಡ್​ ಈ ಖ್ಯಾತ ನಟನ ಹಾಡು!


ಜಲಿಂದರ್ ನಗರದ ಕುಗ್ರಾಮಕ್ಕೆ ವರ್ಗಾವಣೆ
ಈ ವರ್ಷದ ಫೆಬ್ರವರಿಯಲ್ಲಿ ಅಮಾನತ್ತು ಹಿಂತೆಗೆದುಕೊಳ್ಳಲಾಯಿತು, ಆದರೆ ಅವರನ್ನು ಖೇಡ್ ತಹಸಿಲ್ ನ ಜಲಿಂದರ್ ನಗರ ಎಂಬ ಕುಗ್ರಾಮಕ್ಕೆ ವರ್ಗಾಯಿಸಲಾಯಿತು. ಅಲ್ಲಿನ ಪ್ರಾಥಮಿಕ ಶಾಲೆ ತುಂಬಾನೇ ಶಿಥಿಲಾವಸ್ಥೆಯಲ್ಲಿತ್ತು. ಕೇವಲ 13 ಮಕ್ಕಳು ಮತ್ತು ಒಬ್ಬ ಶಿಕ್ಷಕರು ಮಾತ್ರ ಇದ್ದರು ಎಂದು ಅವರು ಹೇಳಿದರು.


ಶಾಲೆಗೆ ಸಂಪರ್ಕ ಒದಗಿಸುವ ಸರಿಯಾದ ಒಂದು ರಸ್ತೆಯೂ ಸಹ ಅಲ್ಲಿ ಇರಲಿಲ್ಲ. "ನನ್ನನ್ನು ಅಮಾನತ್ತುಗೊಳಿಸಿದ ರೀತಿಯಿಂದ ನಾನು ಆಘಾತಕ್ಕೊಳಗಾಗಿದ್ದೆ ಮತ್ತು ನಿರಾಶೆಗೊಂಡೆ. ಆದರೆ ನಾನು ಈ ಶಾಲೆಗೆ ಸೇರಿದಾಗ, ನಾನು ಶಾಲೆಯ ಸ್ಥಿತಿಯನ್ನು ಸುಧಾರಿಸಲು ನಿರ್ಧರಿಸಿದೆ" ಎಂದು ಅವರು ಹೇಳಿದರು.


ಶಾಲೆಯಲ್ಲಿ ಮೂಲಸೌಕರ್ಯಗಳ ಬದಲಾವಣೆ
ವಾರೇ, ತಮ್ಮ ಯೋಜನೆಗಳ ಬಗ್ಗೆ ಮುಖ್ಯೋಪಾಧ್ಯಾಯ ಸಂದೀಪ್ ಅವರಿಗೆ ತಿಳಿಸಿದರು. ವಾರೇ ಅವರು ಶಾಲೆಯಲ್ಲಿ ಬಂದು ಸೇರುವವರೆಗೆ, ಸಂದೀಪ್ ಅವರು ಒಬ್ಬರೇ ಶಿಕ್ಷಕರಾಗಿದ್ದರು. "ನಂತರ ನಾವು ಸ್ಥಳೀಯರೊಂದಿಗೆ ಮಾತನಾಡಿ ಮತ್ತು ಶಾಲೆಯ ನವೀಕರಣದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಕೋರಿದೆವು. ವಾಬಲ್ವಾಡಿ ಶಾಲೆಯಲ್ಲಿ ನಮ್ಮ ಕೆಲಸದ ಬಗ್ಗೆ ಅವರಿಗೆ ತಿಳಿದಿತ್ತು, ಆದ್ದರಿಂದ ಅವರು ಉತ್ಸಾಹವನ್ನು ತೋರಿಸಿದರು. ನಂತರ ನಾವು ಮೂಲಸೌಕರ್ಯ ಬದಲಾವಣೆಗಳೊಂದಿಗೆ ಶಾಲೆಯನ್ನು ಬೆಳೆಸಲು ಕೆಲಸ ಮಾಡಲು ನಿರ್ಧರಿಸಿದೆವು ಮತ್ತು ಅದೇ ಸಮಯದಲ್ಲಿ, ವಿದ್ಯಾರ್ಥಿಗಳಲ್ಲಿ ಗುಣಾತ್ಮಕ ಬದಲಾವಣೆಯನ್ನು ತರಲು ಕೆಲಸ ಮಾಡಲು ಪ್ರಾರಂಭಿಸಿದ್ದೇವು" ಎಂದು ವಾರೇ ಹೇಳಿದರು.


ಇದನ್ನೂ ಓದಿ:  Viral News: ಮದುವೆ ದುಡ್ಡಲ್ಲಿ ರಸ್ತೆ ನಿರ್ಮಿಸಿದ ಟೆಕ್ಕಿ! ಈತನೇ ನಿಜವಾದ ಶ್ರೀಮಂತ!


100 ದಿನಗಳಲ್ಲಿ ಭೌತಿಕ ನವೀಕರಣವನ್ನು ಪೂರ್ಣಗೊಳಿಸುವ ಗುರಿ
ಸೋರುತ್ತಿದ್ದ ಛಾವಣಿಯನ್ನು ಆಕರ್ಷಕ ಪಾಲಿಥೀನ್ ಹಾಳೆಗಳಿಂದ ಬದಲಾಯಿಸಲಾಯಿತು. ನೆಲದ ಡ್ರಾಬ್ ಶಹಾಬಾದಿ ಹಂಚುಗಳನ್ನು ಅಮೃತಶಿಲೆಯ ಹಂಚುಗಳಿಂದ ಬದಲಾಯಿಸಲಾಯಿತು ಮತ್ತು ಸರ್ಕಾರದ ಅನುದಾನದ ಸಹಾಯದಿಂದ ಕಾಂಪೌಂಡ್ ಗೋಡೆಯ ನಿರ್ಮಾಣವೂ ಪ್ರಾರಂಭವಾಯಿತು. ಕೇವಲ 100 ದಿನಗಳಲ್ಲಿ ಭೌತಿಕ ನವೀಕರಣವನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಯಿತು ಹಾಗೂ ಅದನ್ನು ಮುಟ್ಟಲು ಬೇಸಿಗೆ ರಜಾದಿನಗಳನ್ನು ಸಹ ಬಳಸಿಕೊಳ್ಳಲಾಯಿತು.


"ಈ ಅವಧಿಯಲ್ಲಿ, ಎಲ್ಲಾ 13 ವಿದ್ಯಾರ್ಥಿಗಳ ಪೋಷಕರನ್ನು ಪ್ರತಿದಿನ ಶಾಲೆಗೆ ಕಳುಹಿಸುವಂತೆ ಮನವೊಲಿಸಲಾಯಿತು. ನಾವು ಅವರ ಶೈಕ್ಷಣಿಕ ಸಿದ್ಧತೆಯಲ್ಲಿ ಕೆಲಸ ಮಾಡಿದೆವು, ಲ್ಯಾಪ್ಟಾಪ್ ಗಳನ್ನು ಬಳಸಲು ಪ್ರಾರಂಭಿಸಿದೆವು, ಅವರಿಗೆ ಅನಿಮೇಷನ್ ಕಲಿಸಲು ವಿಆರ್ ಕನ್ನಡಕಗಳು ಮತ್ತು ಸ್ಕ್ರ್ಯಾಚ್ ಸಾಫ್ಟ್ವೇರ್ ಅನ್ನು ಪರಿಚಯಿಸಿದ್ದೇವೆ" ಎಂದು ವಾರೆ ಹೇಳುತ್ತಾರೆ.


ಫ್ರೆಂಚ್ ಮತ್ತು ಜಪಾನೀಸ್ ಭಾಷಾ ಪಾಠಗಳ ಪರಿಚಯ
ವಿದ್ಯಾರ್ಥಿಗಳಲ್ಲಿ ವಿದೇಶಿ ಭಾಷೆಗಳಲ್ಲಿ ಆಸಕ್ತಿಯನ್ನು ಬೆಳೆಸಲು ಅವರಿಗೆ ಮೂಲ ಫ್ರೆಂಚ್ ಮತ್ತು ಜಪಾನೀಸ್ ಭಾಷಾ ಪಾಠಗಳನ್ನು ಸಹ ಪರಿಚಯಿಸಿದರು. ಶೀಘ್ರದಲ್ಲಿಯೇ ಜಲಿಂದರ್ ನಗರ ಜಿಲ್ಲಾ ಪಂಚಾಯತ್ ಶಾಲೆಯ ಬಗ್ಗೆ ಸುದ್ದಿ ಹರಡಿತು. "ನಾವು ಜೂನ್ ನಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕಾಗಿ ಶಾಲೆಯನ್ನು ತೆರೆದಿದ್ದೇವೆ, 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಬಯಸುತ್ತಿದ್ದೇವೆ" ಎಂದು ವಾರೇ ಹೇಳಿದರು.


ಈ ಬಗ್ಗೆ ಶಾಲೆಯ ಸಹೋದ್ಯೋಗಿ ಸಂದೀಪ್ ಏನು ಹೇಳಿದ್ದಾರೆ ನೋಡಿ
ವಿದ್ಯಾರ್ಥಿಗಳ ಕೊರತೆಯಿಂದಾಗಿ 2018 ರಲ್ಲಿ ಶಾಲೆಯು ಮುಚ್ಚುವ ಹಂತದಲ್ಲಿದೆ ಎಂದು ಅವರ ಸಹೋದ್ಯೋಗಿ ಸಂದೀಪ್ ಅವರು ಹೇಳಿದ್ದರು. "ನಾನು ಇಲ್ಲಿಗೆ ಬಂದಾಗ ಕೇವಲ ಮೂವರು ವಿದ್ಯಾರ್ಥಿಗಳಿದ್ದರು. ಇಟ್ಟಿಗೆ ಗೂಡಿನ ಕೆಲಸಗಾರರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡುವ ಮೂಲಕ ನಾನು ಈ ಸಂಖ್ಯೆಯನ್ನು 13ಕ್ಕೆ ಹೆಚ್ಚಿಸಿದ್ದೆ" ಎಂದು ಅವರು ಹೇಳಿದರು. "ವಾರೇ ಗುರೂಜಿ ಅವರನ್ನು ಇಲ್ಲಿಗೆ ವರ್ಗಾಯಿಸಿದಾಗ ನಮಗೆ ತುಂಬಾನೇ ಸಂತೋಷವಾಯಿತು. ಅವರ ಅನುಭವದಿಂದ ಶಾಲೆಯು ಅಪಾರ ಪ್ರಯೋಜನವನ್ನು ಪಡೆಯುತ್ತಿದೆ" ಎಂದು ಸಂದೀಪ್ ಹೇಳುತ್ತಾರೆ.


ಇದನ್ನೂ ಓದಿ:  Viral News: ಮಗನ ಜೊತೆ ತಾಯಿಯೂ ಶಾಲೆ ಕಲೀತಾಳೆ! ಹೀಗೊಂದು ವಿಚಿತ್ರ ಘಟನೆ


"ನಾನು ಶಾಲೆಗೆ ಭೇಟಿ ನೀಡಿದ್ದೇನೆ ಮತ್ತು ಅಲ್ಲಿ ಆಗಿರುವ ಬದಲಾವಣೆಯನ್ನು ನೋಡಿದ್ದೇನೆ. ಜನವರಿಯಲ್ಲಿ 13 ರಷ್ಟಿದ್ದ ದಾಖಲಾತಿ ಈಗ ಸುಮಾರು 100ಕ್ಕೆ ಏರಿದೆ. ಕೆಲವು ಎನ್‌ಜಿಓ ಮತ್ತು ಸಾಮಾಜಿಕ ಸಂಸ್ಥೆಗಳ ಸಹಾಯದಿಂದ ವಾರೇ ಅವರು ವಿಆರ್ ಕನ್ನಡಕಗಳು, ಲ್ಯಾಪ್ಟಾಪ್ ಗಳು ಮತ್ತು ಟೆಲಿವಿಷನ್ ಸೆಟ್ ಗಳಂತಹ ವಸ್ತುಗಳನ್ನು ಖರೀದಿಸಿದರು ಮತ್ತು ಶಾಲೆಯ ರೂಪವನ್ನೆ ಬದಲಾಯಿಸಿದರು. ನಾವು ಈಗ ಅಲ್ಲಿ 5ನೇ ತರಗತಿಯನ್ನು ಪ್ರಾರಂಭಿಸಲು ಪ್ರಸ್ತಾವನೆಯನ್ನು ಕಳುಹಿಸಿದ್ದೇವೆ" ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜೀವನ್ ಕೊಕಾನೆ ಅವರು ಹೇಳಿದ್ದಾರೆ.

top videos
    First published: