Height Problem: ಇಂಗ್ಲೆಂಡ್​ನ ಈ ಕುಟುಂಬದವರ ಎತ್ತರ ಈಗ ತಂದೊಡ್ಡಿದೆ ಸಂಕಷ್ಟ

ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿ ಇರುವ ಈ ಕುಟುಂಬದ ಸದಸ್ಯರು ತಮ್ಮ ಎತ್ತರದ ದೇಹದಿಂದ ತೊಂದರೆಗೆ ಈಡಾಗಿದ್ದಾರೆ. ಪ್ರತಿಯೊಬ್ಬರೂ ಕಿರಿಯ ಸದಸ್ಯರ ಎತ್ತರಕ್ಕಿಂತ 6 ಅಡಿ 2 ಇಂಚು ಹೆಚ್ಚು ಎತ್ತರ ಹೊಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಎಲ್ಲರಿಗೂ ತಾವು ಎತ್ತರವಾಗಿ (Height), ಸ್ಲಿಮ್  (Slim) ಆಗಿ, ಬೆಳ್ಳಗೆ ಇರಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಎತ್ತರ ಕಡಿಮೆ ಇದ್ದಾಗ, ದಪ್ಪ ದೇಹ (Body), ಕಪ್ಪು ಚರ್ಮ ಇದೆಲ್ಲವನ್ನೂ ಕೆಲವರು ಸಹಿಸುವುದಿಲ್ಲ. ತಮ್ಮ ಹೈಟ್ ಹೆಚ್ಚಿಸಿಕೊಳ್ಳೋಕೆ, ಸಣ್ಣ ಆಗೋಕೆ ಸಾಕಷ್ಟು ಹರಸಾಹಸ ಮಾಡ್ತಿರ್ತಾರೆ. ಎತ್ತರವಿದ್ದಾಗ ಪ್ರತಿಯೊಬ್ಬ ವ್ಯಕ್ತಿ ತುಂಬಾ ಚೆನ್ನಾಗಿ ಕಾಣುತ್ತಾನೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ತಾವು ಎತ್ತರ ಇರಬೇಕಿತ್ತು ಅಂದುಕೊಳ್ತಾರೆ. ಕೆಲವರು ತಮ್ಮ ಎತ್ತರವನ್ನು ಹೆಚ್ಚಿಸಲು ಅನೇಕ ಖಾದ್ಯ, ಮಾತ್ರೆ, ಔಷಧ ತೆಗೆದುಕೊಳ್ತಾರೆ. ಇನ್ನು ಕೆಲವರು ಮನೆಮದ್ದುಗಳನ್ನು ಸಹ ಅಳವಡಿಸಿಕೊಳ್ಳುತ್ತಾರೆ. ಇದೆಲ್ಲಾ ಮಾಡಿದ್ರೂ ಎತ್ತರ ಹೆಚ್ಚಾಗ್ತಾ ಇಲ್ಲ ಅಂದಾಗ ನಿರಾಸೆ, ಜಿಗುಪ್ಸೆ ಹೊಂದುತ್ತಾರೆ. ಆದರೆ ಇಲ್ಲೊಂದು ಕುಟುಂಬವಿದೆ (Family). ಕುಟುಂಬದ ಪ್ರತಿ ಸದಸ್ಯರ ಎತ್ತರ 6.2 ಅಡಿಗಿಂತ ಹೆಚ್ಚಿಗೆ ಇದೆ.

    ತಮ್ಮ ಎತ್ತರದ ದೇಹದಿಂದ ತೊಂದರೆ

    ಕುಟುಂಬದ ಎಲ್ಲಾ ಸದಸ್ಯರ ಉದ್ದವನ್ನು ಸೇರಿಸಿದರೆ, ಅವರ ಒಟ್ಟು ಉದ್ದವು 25 ಅಡಿಗಳಿಗಿಂತ ಹೆಚ್ಚು ಆಗಿದೆ. ಈ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಎತ್ತರದ ಕಾರಣದಿಂದಾಗಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಿದೆ. ಹಾಗಾದರೆ ಈ ಕುಟುಂಬ ಯಾವುದು..? ಇವರ ಪ್ರತಿದಿನದ  ಕಷ್ಟಗಳು ಏನು ಅನ್ನೋದನ್ನ ತಿಳಿಯೋಣ.

    ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿ ಇರುವ ಈ ಕುಟುಂಬದ ಸದಸ್ಯರು ತಮ್ಮ ಎತ್ತರದ ದೇಹದಿಂದ ತೊಂದರೆಗೆ ಈಡಾಗಿದ್ದಾರೆ. ಪ್ರತಿಯೊಬ್ಬರೂ ಕಿರಿಯ ಸದಸ್ಯರ ಎತ್ತರಕ್ಕಿಂತ 6 ಅಡಿ 2 ಇಂಚು ಹೆಚ್ಚು ಎತ್ತರ ಹೊಂದಿದ್ದಾರೆ. ಈ ಅತಿಯಾದ ಎತ್ತರದಿಂದಾಗಿ ಸದಸ್ಯರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.

    ಇದನ್ನೂ ಓದಿ: ಸೂಟ್ ಜಾಕೆಟ್ ನಲ್ಲಿ ಮೂರು ಬಟನ್ ಗಳಿರೋದು ಯಾಕೆ ಗೊತ್ತಾ?

    ಏಕೆಂದರೆ ಅವರ ಗಾತ್ರ ಮತ್ತು ಎತ್ತರಕ್ಕೆ ತಕ್ಕ ಬಟ್ಟೆಗಳು ಸಿಗುವುದಿಲ್ಲ. ಹೀಗಾಗಿ ಬಟ್ಟೆ ಖರೀದಿಸಲು ಅವರು ತುಂಬಾ ಕಷ್ಟಪಡುತ್ತಾರೆ. ಕಾರು ಹತ್ತುವ ಮೊದಲು ತಮ್ಮ ಎತ್ತರಕ್ಕಿಂತ ಕಾರು ಹೈಟ್ ಇದೆಯೋ ಇಲ್ಲವೋ ಎಂದು ಚೆಕ್ ಮಾಡಿ, ಕಾರಿನಲ್ಲಿ ಕುಳಿತುಕೊಳ್ಳುತ್ತಾರೆ.

    ಈ ಕುಟುಂಬ ಯಾವುದು..?

    ಈ ಕುಟುಂಬದಲ್ಲಿ 4 ಜನರು ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಗಂಡ, ಹೆಂಡತಿ, ಮಗ ಮತ್ತು ಮಗಳು ಇದ್ದಾರೆ. ಅವರ ಕುಟುಂಬದ ಎತ್ತರ ಎಷ್ಟಿದೆಯೆಂದರೆ ಅವರ ಮನೆಗೆ ಹೆಚ್ಚುವರಿ ಎತ್ತರದ ಬಾಗಿಲುಗಳು ಮತ್ತು ಕನ್ನಡಿಗಳನ್ನು ಅಳವಡಿಸಲಾಗಿದೆ. ಈ ಕುಟುಂಬದ ಹಿರಿಯನ ಹೆಸರು ಟಾಮ್, 54 ವರ್ಷ ವಯಸ್ಸು. ಇವರ ಎತ್ತರ 6 ಅಡಿ 6 ಇಂಚು.

    ಪತ್ನಿಯ ಹೆಸರು ವಿಕ್ಕಿ ಗೋಲ್ಸ್ವರ್ತಿ, ಅವರ ವಯಸ್ಸು 56 ವರ್ಷ. ಆಕೆಯ ಎತ್ತರ 6 ಅಡಿ 2 ಇಂಚು. ಟಾಮ್ ಮತ್ತು ವಿಕ್ಕಿ ಅವರ ಮಗಳ ಹೆಸರು ಎಮಿಲಿ, ಅವರು 19 ವರ್ಷ ವಯಸ್ಸಿನವರಾಗಿದ್ದಾರೆ. ಅವರ ಎತ್ತರ 6 ಅಡಿ 3 ಇಂಚು ಆಗಿದೆ. ಮಗನ ಹೆಸರು ಡೇನಿಯಲ್ ಮತ್ತು ಅವನ ವಯಸ್ಸು 17 ವರ್ಷ ಮತ್ತು ಎತ್ತರ 6 ಅಡಿ 4 ಇಂಚು. ಇನ್ನೊಂದು ವಿಷ್ಯ ಅಂದ್ರೆ ಇವರೆಲ್ಲರೂ ಒಟ್ಟಿಗೆ ಹೊರಗೆ ಹೋದರೆ ಜನರು ಇವರನ್ನು ಹಾಗೂ ಎತ್ತರವನ್ನು ನೋಡಿ ಆಶ್ಚರ್ಯ ಪಡುತ್ತಾರೆ.

    ಅತೀ ಎತ್ತರದಿಂದ ಸಂಕಷ್ಟ

    ವಿಕ್ಕಿ ಪ್ರಕಾರ, ಅವರ ಕುಟುಂಬದ ಎಲ್ಲರೂ ತುಂಬಾ ಎತ್ತರದವರು. ಅದಕ್ಕಾಗಿಯೇ ಅವರ ಗಾತ್ರದ ಬಟ್ಟೆಗಳನ್ನು ಆಯ್ಕೆ ಮಾಡಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಏಕೆಂದರೆ ಅವರ ಗಾತ್ರದ ಬಟ್ಟೆಗಳು ಸುಲಭವಾಗಿ ಸಿಗುವುದಿಲ್ಲ.

    ಅವರು ಹೊರಗೆ ಹೋದಾಗಲೆಲ್ಲಾ, ಹೆಚ್ಚಿನ ಜನರು ಅವರನ್ನು ದಿಟ್ಟಿಸಿ ನೋಡುತ್ತಾರೆ. ಕೆಲವೊಮ್ಮೆ 'ಇವರು ಎಷ್ಟು ಎತ್ತರವಾಗಿದ್ದಾರೆ' ಎಂದು ಮಾತಾಡಿಕೊಳ್ತಾರೆ. ಇದಲ್ಲದೆ, ಅವರು ಒಟ್ಟಿಗೆ ವಾಕಿಂಗ್ ಹೋಗಲು ಕಾರಿನಲ್ಲಿ ಕುಳಿತುಕೊಳ್ಳುವುದು ಕಷ್ಟ. ಇದಕ್ಕಾಗಿ, ಅವರು ತಮ್ಮ ಎತ್ತರಕ್ಕೆ ಸರಿ ಹೊಂದುವ ಕಾರನ್ನು ಹುಡುಕಬೇಕು.

    ಹುಟ್ಟುವಾಗ ಸರಾಸರಿ ಎತ್ತರವಿತ್ತು

    ವಿಕ್ಕಿ ಪ್ರಕಾರ, ಎಮಿಲಿ ಮತ್ತು ಡೇನಿಯಲ್ ಜನಿಸಿದಾಗ, ಅವರ ಸರಾಸರಿ ತೂಕ ಮತ್ತು ಎತ್ತರವು ಸಾಮಾನ್ಯವಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ ಅವರ ಎತ್ತರವು ಹೆಚ್ಚಾಯಿತು. ಅವರ ಮಕ್ಕಳು 14-15 ವರ್ಷಗಳಲ್ಲಿ ವಯಸ್ಸಾದ ಜನರ ಪ್ಯಾಂಟ್ ಧರಿಸಲು ಶುರು ಮಾಡಿದರು. ಅವರ ಕಾಲುಗಳು ತುಂಬಾ ಉದ್ದವಾಗಿದ್ದವು.

    ಇದನ್ನೂ ಓದಿ: 58 ವರ್ಷದ ಅಂಕಲ್ ಜೊತೆ 26ರ ಹುಡುಗಿಯ ಡೇಟಿಂಗ್: ತನ್ನ ಸೆಕ್ಸ್ ಜೀವನದ ರಹಸ್ಯ ಬಿಚ್ಚಿಟ್ಟ ಯುವತಿ

    ಪಾದಗಳ ಉದ್ದ, ಎತ್ತರದ ಕಾರಣದಿಂದ ಅವರು ತಮ್ಮ ಮನೆಯಲ್ಲಿ ಕನ್ನಡಿಗಳನ್ನು ತುಂಬಾ ಎತ್ತರದಲ್ಲಿ ಅಳವಡಿಸಿದ್ದಾರೆ. ಇದಕ್ಕಾಗಿ ತಮ್ಮ ಮನೆಗೆ ಅತಿಥಿಗಳು ಬಂದಾಗ, ಮನೆಯಲ್ಲಿ ಕನ್ನಡಿಗಳು ತುಂಬಾ ಎತ್ತರದಲ್ಲಿ ಇರುತ್ತವೆ. ಇದರಿಂದಾಗಿ ಬಾಚಣಿಗೆ ತೆಗೆದುಕೊಳ್ಳಲು, ಕನ್ನಡಿ ನೋಡಿಕೊಳ್ಳಲು ತೊಂದರೆಯಾಗುತ್ತದೆ ಎಂದಿದ್ದಾರೆ. ಇದರೊಂದಿಗೆ ಅವರ ಮನೆಯಲ್ಲಿ ಅಡುಗೆ ಕೋಣೆ ಮತ್ತು ಹಾಸಿಗೆಯ ಎತ್ತರವೂ ಕುಟುಂಬ ಸದಸ್ಯರ ಪ್ರಕಾರವೇ ಇದೆ.
    Published by:renukadariyannavar
    First published: