• Home
  • »
  • News
  • »
  • trend
  • »
  • President: ನನ್ನನ್ನೂ ಭಾರತದ ರಾಷ್ಟ್ರಪತಿ ಮಾಡಿ! ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವ್ಯಕ್ತಿ

President: ನನ್ನನ್ನೂ ಭಾರತದ ರಾಷ್ಟ್ರಪತಿ ಮಾಡಿ! ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವ್ಯಕ್ತಿ

ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್

ಇಲ್ಲೊಬ್ಬ ವ್ಯಕ್ತಿ ನಾನೂ ಯಾಕೆ ರಾಷ್ಟ್ರಪತಿ ಆಗಬಾರದು ಅಂತ ಯೋಚಿಸಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೇ ರಾಷ್ಟ್ರಪತಿಯನ್ನಾಗಿ ಮಾಡಿ ಅಂತ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ! ಮುಂದೆ ಏನಾಯ್ತು ಅಂತ ತಿಳಿಯೋದಕ್ಕೆ ಈ ಸ್ಟೋರಿ ಓದಿ…

  • News18 Kannada
  • Last Updated :
  • New Delhi, India
  • Share this:

ನವದೆಹಲಿ: ನಾನು ಪ್ರಧಾನ ಮಂತ್ರಿ (Prime Minister) ಆಗಬೇಕು? ನಾನು ಮುಖ್ಯಮಂತ್ರಿ (Chief Minister) ಆಗಬೇಕು? ನಾನು ಭಾರತದ ರಾಷ್ಟ್ರಪತಿ (President of India) ಆಗಬೇಕು? ಹೀಗಂತೆ ನಾವೆಲ್ಲ ಚಿಕ್ಕವರಿದ್ದಾಗ (Childhood) ಶಾಲೆಯಲ್ಲಿ (School) ಶಿಕ್ಷಕರು (Teachers) ನೀವು ಮುಂದೆ ಏನಾಗಬಯಸುತ್ತೀರಿ? ಅಂತ ಕೇಳಿದಾಗ ಎದ್ದು ನಿಂತು ಈ ರೀತಿಯ ಉತ್ತರಗಳನ್ನು (Answers) ನೀಡುತ್ತಿದ್ದೆವು. ಆದರೆ ಈ ಸ್ಥಾನಗಳೆಲ್ಲ ತುಂಬಾ ಜವಾಬ್ದಾರಿಯುತ ಹಾಗೂ ಮಹತ್ವದ ಸ್ಥಾನವಾಗಿದ್ದು, ಯಾರು ಬೇಕಾದರೆ ಅವರು ಈ ಸ್ಥಾನಕ್ಕೆ ಏರಲು ಸಾಧ್ಯವಿಲ್ಲ ಎನ್ನುವುದು ನಮ್ಮೆಲ್ಲರಿಗೂ ಗೊತ್ತು. ಆದರೆ ಇಲ್ಲೊಬ್ಬ ವ್ಯಕ್ತಿ ನಾನೂ ಯಾಕೆ ರಾಷ್ಟ್ರಪತಿ ಆಗಬಾರದು ಅಂತ ಯೋಚಿಸಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೇ ನನ್ನನ್ನೂ ಯಾಕೆ ಈ ದೇಶದ ರಾಷ್ಟ್ರಪತಿಯನ್ನಾಗಿ ಮಾಡಬಾರದು ಅಂತ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಿದ್ದಾನೆ. ಮುಂದೆ ಏನಾಯ್ತು ಅಂತ ತಿಳಿಯೋದಕ್ಕೆ ಈ ಸ್ಟೋರಿ ಓದಿ…


“ನನ್ನನ್ನೂ ರಾಷ್ಟ್ರಪತಿ ಹುದ್ದೆಗೆ ನೇಮಿಸಿ” ಅಂತ ಅರ್ಜಿ


ಭಾರತದ ರಾಷ್ಟ್ರಪತಿ ಹುದ್ದೆಗೆ ತಮ್ಮನ್ನೂ ಕೂಡ ನೇಮಕ ಮಾಡುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. "ಅವರ ಮನವಿಯನ್ನು ಪರಿಗಣಿಸಬೇಡಿ" ಎಂದು ನೋಂದಾವಣೆ ಕೇಳುತ್ತಾ, ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಅರ್ಜಿಯು "ಕ್ಷುಲ್ಲಕ" ಮತ್ತು "ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗ" ಎಂದು ಚಾಟಿ ಬೀಸಿದೆ.


ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಯಾರು?


ಕಳೆದ 20 ವರ್ಷಗಳಿಂದ ಪರಿಸರವಾದಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವ ಕಿಶೋರ್ ಜಗನ್ನಾಥ್ ಸಾವಂತ್ ಅವರು ಸುಪ್ರೀಂ ಕೋರ್ಟ್‌ಗೆ ಈ ರೀತಿಯ ವಿಚಿತ್ರ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ. ಕಿಶೋರ್ ಜಗನ್ನಾಥ್ ಸಾವಂತ್ ಅವರು ಸರ್ವೋಚ್ಚ ನ್ಯಾಯಾಲಯದ ಮುಂದೆ ಹಾಜರಾಗಿ "ಸರ್ಕಾರದ ನೀತಿಗಳನ್ನು ಪ್ರತಿಭಟಿಸುವ ಎಲ್ಲಾ ಹಕ್ಕುಗಳನ್ನೂ ನಾನು ಹೊಂದಿದ್ದೇನೆ ಅಂತ ಹೇಳಿದ್ದಾರೆ.


ಇದನ್ನೂ ಓದಿ: Notice To Hanuman: ಜಾಗ ಒತ್ತುವರಿ ಮಾಡ್ಕೊಂಡಿದ್ದಾನಂತೆ ಆಂಜನೇಯ! 10 ದಿನಗಳೊಳಗೆ ಖಾಲಿ ಮಾಡುವಂತೆ ನೋಟಿಸ್!


ಅರ್ಜಿಯಲ್ಲಿ ಮೂರು ಅಂಶಗಳ ಉಲ್ಲೇಖ


ಅರ್ಜಿದಾರ ಅರ್ಜಿಯು ಮೂರು ಅಂಶಗಳನ್ನು ಒಳಗೊಂಡಿತ್ತು. ಕಿಶೋರ್ ಜಗನ್ನಾಥ್ ಸಾವಂತ್ ಅವರನ್ನು 2022 ರ ಅಧ್ಯಕ್ಷೀಯ ಚುನಾವಣೆಗೆ ಅವಿರೋಧ ಅಭ್ಯರ್ಥಿಯಾಗಿ ಪರಿಗಣಿಸಲು ನಿರ್ದೇಶನ ನೀಡಬೇಕು, ಭಾರತದ ರಾಷ್ಟ್ರಪತಿಯಾಗಿ ಅವರನ್ನು ನೇಮಕ ಮಾಡಲು ನಿರ್ದೇಶನ ಮತ್ತು 2004 ರಿಂದ ಹಿಂದಿನ ರಾಷ್ಟ್ರಪತಿಗಳಿಗೆ ಪಾವತಿಸಿದ ವೇತನವನ್ನು ಪಾವತಿಸಲು ನಿರ್ದೇಶನ ನೀಡಬೇಕು ಅಂತ ಮನವಿ ಮಾಡಲಾಗಿತ್ತು. ಇನ್ನು ಶ್ರೀಲಂಕಾದಲ್ಲಿ ಮಾಜಿ ಅಧ್ಯಕ್ಷರು ಜನರ ಪ್ರತಿಭಟನೆಗೆ ಮಣಿಯಬೇಕಾದ ಪರಿಸ್ಥಿತಿಯನ್ನು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.


ಚಾಟಿ ಬೀಸಿದ ಸುಪ್ರೀಂ ನ್ಯಾಯಪೀಠ


ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಜಸ್ಟೀಸ್ ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠದ ಎದುರಿಗೆ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಅರ್ಜಿಯನ್ನ ಗಮನಿಸಿದ ನ್ಯಾಯಪೀಠ, ಕೆಂಡಾಮಂಡಲವಾಗಿದೆ. ಈ ಅರ್ಜಿಯನ್ನ ವಜಾ ಮಾಡಿದ್ದಷ್ಟೇ ಅಲ್ಲ, ಅರ್ಜಿ ಸ್ವೀಕರಿಸಿದ ರಿಜಿಸ್ಟ್ರಾರ್, ಅರ್ಜಿ ಸಲ್ಲಿಸಿದ್ದ ವ್ಯಕ್ತಿ ಸೇರಿದಂತೆ ಹಲವರಿಗೆ ಏಕಕಾಲಕ್ಕೆ ಚಾಟಿ ಬೀಸಿದೆ.


ಇದನ್ನೂ ಓದಿ: Weirdest Law: ಹಸು ಸೆಗಣಿ ಹಾಕಿದ್ರೂ ಕೊಡಬೇಕು ಟ್ಯಾಕ್ಸ್! ವಿಚಿತ್ರ ಕಾನೂನಿನಿಂದ ರೈತರು ಕಂಗಾಲು


ನ್ಯಾಯಪೀಠ ಹೇಳಿದ್ದೇನು?


ಈ ರೀತಿಯ ಕ್ಷುಲ್ಲಕ ಅರ್ಜಿಗಳನ್ನು ಏಕೆ ವಿಚಾರಣೆಗೆ ಸ್ವೀಕರಿಸುತ್ತೀರಿ ಎಂದು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಗೆ ಚಾಟಿ ಬೀಸಿದ ನ್ಯಾಯಮೂರ್ತಿಗಳು, ಮುಂದೆ ಈ ರೀತಿಯ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಬಾರದು ಎಂದು ತಾಕೀತು ಮಾಡಿದೆ. ಅಷ್ಟೇ ಅಲ್ಲ ಈ ಪ್ರಸಂಗವನ್ನು ನ್ಯಾಯಾಂಗದ ಹಾಗೂ ನ್ಯಾಯಾಲಯ ಕಾರ್ಯ ಕಲಾಪಗಳ ದುರ್ಬಳಕೆ ಎಂದು ಪೀಠ ಹರಿಹಾಯ್ದಿದೆ. ಅರ್ಜಿದಾರನ ವಿರುದ್ಧ ಕಟು ಶಬ್ಧಗಳನ್ನು ಪ್ರಯೋಗ ಮಾಡಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ, ಈ ರೀತಿಯ ಅರ್ಜಿ ಸಲ್ಲಿಸೋದು ಕೀಳು ಮಟ್ಟದ ಹಾಸ್ಯಾಸ್ಪದ ವರ್ತನೆ ಎಂದು ಕಿಡಿ ಕಾರಿದೆ.

Published by:Annappa Achari
First published: