Heart Touching Story: ರಾಪಿಡೋ ಬೈಕ್ ಓಡಿಸುವ ಈ ವ್ಯಕ್ತಿಯ ಕಥೆ ಕೇಳಿದ್ರೆ ನಿಜವಾಗಿಯೂ ಅಚ್ಚರಿಯಾಗೋದು ಗ್ಯಾರೆಂಟಿ!

ತಮ್ಮ ಹೊಟ್ಟೆ ಪಾಡಿಗಾಗಿ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಾ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿರುವುದು ಮತ್ತು ಹಿಂದೆ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡಿ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ಸಂದರ್ಭದಲ್ಲಿ ಕೆಲಸ ಕಳೆದುಕೊಂಡು ಈಗ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿರುವವರನ್ನು ನೋಡಿರುತ್ತೇವೆ. ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಪೋಸ್ಟ್ ಒಬ್ಬ ಬೆಂಗಳೂರಿನ ರಾಪಿಡೋ ಬೈಕ್ ಚಾಲಕನಾಗಿ ಕೆಲಸ ಮಾಡುತ್ತಿರುವ ಒಬ್ಬ ವ್ಯಕ್ತಿ ಹಿಂದೆ ಏನೆಲ್ಲಾ ಕೆಲಸಗಳನ್ನು ಮಾಡಿದ್ದಾರೆ ಅಂತ ನೀವು ಕೇಳಿದರೆ ಆಶ್ಚರ್ಯ ಪಡುವುದಂತೂ ಗ್ಯಾರೆಂಟಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಾವು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಈ ಫುಡ್ ಅಗ್ರಿಗೆಟರ್ ಗಳಾದ ಝೊಮ್ಯಾಟೊ (Zomato) ಮತ್ತು ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ಸ್ (Swiggy Delivery Boys) ಆಗಿ ಕೆಲಸ ಮಾಡುತ್ತಿರುವವರ ಜೀವನದ ಕಥೆಗಳನ್ನು (Life Story) ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ತಮ್ಮ ಹೊಟ್ಟೆಪಾಡಿಗಾಗಿ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಾ ತಮ್ಮ ವಿದ್ಯಾಭ್ಯಾಸವನ್ನು (Education) ಮುಂದುವರೆಸುತ್ತಿರುವುದು ಮತ್ತು ಹಿಂದೆ ದೊಡ್ಡ ಕಂಪನಿಯಲ್ಲಿ (Company) ಕೆಲಸ ಮಾಡಿ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ಸಂದರ್ಭದಲ್ಲಿ ಕೆಲಸ ಕಳೆದುಕೊಂಡು ಈಗ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿರುವವರನ್ನು ನೋಡಿರುತ್ತೇವೆ.

ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಪೋಸ್ಟ್​​ ಒಬ್ಬ ಬೆಂಗಳೂರಿನ ರಾಪಿಡೋ ಬೈಕ್ ಚಾಲಕನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಕಥೆ. ಈ ವ್ಯಕ್ತಿ ಹಿಂದೆ ಏನೆಲ್ಲಾ ಕೆಲಸಗಳನ್ನು ಮಾಡಿದ್ದಾರೆ ಅಂತ ನೀವು ಕೇಳಿದರೆ ಆಶ್ಚರ್ಯ ಪಡುವುದಂತೂ ಗ್ಯಾರೆಂಟಿ. ಪರಾಗ್ ಜೈನ್ ಎಂಬ ಟ್ವಿಟರ್ ಬಳಕೆದಾರರು ಆಗಸ್ಟ್ 15 ರಂದು ಒಂದು ಟ್ವಿಟ್ಟರ್ ಥ್ರೆಡ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮತ್ತು ರಾಪಿಡೋ ರೈಡರ್ ನಡುವಿನ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನ ರಾಪಿಡೋ ಬೈಕ್ ಚಾಲಕನ ಕಥೆ ಕೇಳಿ 
ಈ ಥ್ರೆಡ್ ಪ್ರಕಾರ, ಕರೋನ ವೈರಸ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಕೆಲಸ ಕಳೆದುಕೊಂಡ ವಿಘ್ನೇಶ್ ನಾಗಭೂಷಣಂ ಅವರು ತಮ್ಮ ಹೊಟ್ಟೆಪಾಡಿಗಾಗಿ ಈಗ ರಾಪಿಡೋ ಬೈಕ್ ನ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಒಬ್ಬ ಪ್ರಶಸ್ತಿ ವಿಜೇತ ನಿರ್ದೇಶಕರೂ ಹೌದು. ವೀ ವರ್ಕ್ ಕಟ್ಟಡದಲ್ಲಿ ತಮ್ಮ ಕಂಪನಿಯ ಕಚೇರಿಯ ಹೊರಗೆ ಕಾಯುತ್ತಿದ್ದ ಜೈನ್ ಅವರನ್ನು ತನ್ನ ರಾಪಿಡೋ ಬೈಕ್ ಮೇಲೆ ಕೂರಿಸಿಕೊಂಡು ಅವರೊಂದಿಗೆ ಸಂಭಾಷಣೆ ಪ್ರಾರಂಭ ಮಾಡಿದರು. ಅವರು ಸಂಭಾಷಣೆಯನ್ನು ಪ್ರಾರಂಭಿಸಿ ಜೈನ್ ಅವರಿಗೆ ಯಾವ ಫ್ಲೋರ್ ನಲ್ಲಿ ನೀವು ಕೆಲಸ ಮಾಡುತ್ತೀರಿ ಎಂದು ಕೇಳಿದರು.

ಇದನ್ನೂ ಓದಿ: Viral Video: ಹಣ್ಣು ಮಾರುವ ಮಹಿಳೆಗೆ ಶಾಲಾ ಮಕ್ಕಳು ಹೇಗೆ ಸಹಾಯ ಮಾಡ್ತಿದ್ದಾರೆ ಗೊತ್ತೇ? ಈ ವಿಡಿಯೋ ನೋಡಿ ಗೊತ್ತಾಗುತ್ತೆ

ಎರಡು ವರ್ಷಗಳ ಹಿಂದೆ ಇದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದೆ ಎಂದು ರೈಡರ್ ವಿಘ್ನೇಶ್ ನಾಗಭೂಷಣಂ ಅವರು ತನ್ನ ಸವಾರ ಜೈನ್ ಅವರಿಗೆ ತಿಳಿಸಿದರು. ತಾನು ಚೀನಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಮಾರ್ಚ್ 2020ರಲ್ಲಿ ಚೀನೀ ಅಪ್ಲಿಕೇಶನ್ ಗಳ ಮೇಲೆ ಭಾರತ ಸರ್ಕಾರ ಘೋಷಿಸಿದ ನಿಷೇಧದಿಂದಾಗಿ ತನ್ನ ಕೆಲಸವನ್ನು ಕಳೆದು ಕೊಂಡಿದ್ದೇನೆ ಎಂದು ನಾಗಭೂಷಣಂ ಹೇಳಿದ್ದನ್ನು ಜೈನ್ ಅವರು ತಮ್ಮ ಟ್ವಿಟರ್ ಬಳಕೆದಾರರಿಗೆ ಬಹಿರಂಗಪಡಿಸಿದರು. ದುರದೃಷ್ಟವಶಾತ್, ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಅವರಿಗೆ ಬೇರೆ ಕೆಲಸ ಹುಡುಕಲು ಸಾಧ್ಯವಾಗಲಿಲ್ಲ.

ಚಲನಚಿತ್ರಗಳನ್ನು ನಿರ್ದೇಶಿಸುವ ಆಸಕ್ತಿ 
ಆದ್ದರಿಂದ ಅವರು ಚಲನಚಿತ್ರಗಳನ್ನು ನಿರ್ದೇಶಿಸುವ ತಮ್ಮ ದೀರ್ಘಕಾಲದ ಕನಸನ್ನು ಮುಂದುವರಿಸಲು ನಿರ್ಧರಿಸಿದರು. ಅವರು ಮಿನಿ ಸಿರೀಸ್ ಗಳನ್ನು ನಿರ್ದೇಶಿಸಿದರು. ಅದರಲ್ಲಿ ತಮ್ಮ ಎಲ್ಲಾ ಉಳಿತಾಯವನ್ನು ಸಹ ಹಾಕಿದರು. ಈ ಮಿನಿ ಸಿರೀಸ್ ಗಳು ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಸುಮಾರು 15 ಚಲನಚಿತ್ರೋತ್ಸವಗಳಿಗೆ ನಾಮನಿರ್ದೇಶನಗೊಂಡಿತು. ಅವರ ಕೆಲಸಗಳು ಒಟಿಟಿಗಳ ಗಮನವನ್ನು ಸಹ ಸೆಳೆದಿತ್ತು, ಆದರೆ ಕಮರ್ಷಿಯಲ್ ಸಮಸ್ಯೆಗಳಿಂದಾಗಿ ಅದನ್ನು ತಿರಸ್ಕರಿಸಿದರು.

ನಾಗಭೂಷಣಂ ನಂತರ ರಾಪಿಡೋಗೆ ಅರೆಕಾಲಿಕ ರೈಡರ್ ಆಗಿ ಸೇರಲು ನಿರ್ಧರಿಸಿದರು. ಏಕೆಂದರೆ ಅವರು ತಮ್ಮ ಎಲ್ಲಾ ಹಣವನ್ನು ತಮ್ಮ ಚಿತ್ರಗಳ ಮೇಲೆ ಖರ್ಚು ಮಾಡಿದ್ದರು ಮತ್ತು ಆರ್ಥಿಕ ತೊಂದರೆಯಲ್ಲಿದ್ದರು. ಇಷ್ಟಾದರೂ ಸಹ ಅವನು ತನ್ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ತನ್ನ ತಾಯಿಗೆ ಹೇಳಲಿಲ್ಲ. ಜೈನ್ ಅವರು ವಿಘ್ನೇಶ್ ನಾಗಭೂಷಣಂ ಅವರ ವಿಸಿಟಿಂಗ್ ಕಾರ್ಡ್ ನ ಫೋಟೋವನ್ನು ಸಹ ಟ್ವಿಟ್ಟರ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಎಲ್ಲಾ ವಿವರಗಳನ್ನು ನೀಡಿದ್ದಾರೆ. ಈ ಥ್ರೆಡ್ 2,800ಕ್ಕೂ ಹೆಚ್ಚು ಲೈಕ್​​ಗಳನ್ನು ಗಳಿಸಿತು.

ಇದನ್ನೂ ಓದಿ:  ದಿನ ಬೆಳಗಾಗ್ತಿದ್ದಂತೆ ಸ್ಟಾರ್​​ ಆದ ಡೆಲಿವರಿ ಬಾಯ್, ಭೇಟಿಯಾಗುವಂತೆ ಕರೆ ಮಾಡಿದ Dubai ರಾಜಕುಮಾರ!

"ದಯವಿಟ್ಟು ಈ ಪ್ರತಿಭೆಗೆ ಸ್ವಲ್ಪ ಮನ್ನಣೆ ನೀಡಿ. ಕನಿಷ್ಠ ಪಕ್ಷ ಅವನ ಕೆಲಸಕ್ಕೆ ಸ್ವಲ್ಪ ಪ್ರಚಾರವನ್ನಾದರೂ ನೀಡಿ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು "ಇವರ ಕಥೆಯು ಕಿರುಚಿತ್ರ ಮಾಡಲು ಯೋಗ್ಯವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: