• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Story: ತಂದೆಯ 20 ವರ್ಷಗಳ ಹಳೆ ಕಾರು ಖರೀದಿಸಿದ ಮಗ, ಅಪ್ಪನಿಗೆ ಪುನಃ ಕೊಟ್ಟ ಸರ್ಪ್ರೈಸ್ ಗಿಫ್ಟ್!

Viral Story: ತಂದೆಯ 20 ವರ್ಷಗಳ ಹಳೆ ಕಾರು ಖರೀದಿಸಿದ ಮಗ, ಅಪ್ಪನಿಗೆ ಪುನಃ ಕೊಟ್ಟ ಸರ್ಪ್ರೈಸ್ ಗಿಫ್ಟ್!

ತಂದೆಯ ಕಾರನ್ನು ಮರುಖರೀದಿಸಿ ಗಿಫ್ಟ್​ ಕೊಟ್ಟ ಮಗ

ತಂದೆಯ ಕಾರನ್ನು ಮರುಖರೀದಿಸಿ ಗಿಫ್ಟ್​ ಕೊಟ್ಟ ಮಗ

ಕಾರಿನ ಮೇಲೆ ಹುಚ್ಚು ಅನೇಕರಿಗೆ ಇರುತ್ತದೆ. ಅದೇ ರೀತಿ ಇಲ್ಲೊಬ್ಬರು ಹಲವಾರು ವರ್ಷಗಳಿಂದ ಬೇರ್ಪಟ್ಟು ಇದೀಗ ತಮ್ಮ 20 ವರ್ಷ ಹಳೆಯ ಟಾಟಾ ಇಂಡಿಕಾ ಕಾರನ್ನು ಮರಳಿ ಪಡೆದುಕೊಂಡಿದ್ದಾರೆ.

  • Share this:

ಕಷ್ಟಪಟ್ಟು ದುಡಿದ ಹಣದಲ್ಲಿ ತಮಗಾಗಿ ಒಂದು ಕಾರು (Car) ಖರೀದಿಸಬೇಕೆಂಬುದು ಹೆಚ್ಚಿನವರ ಕನಸಾಗಿರುತ್ತದೆ. ಬಹುತೇಕ ಎಲ್ಲಾ ವಯಸ್ಸಿನವರಿಗೆ ಹಾಗೂ ದುಡಿಯುವ ಗುಂಪಿನವರಿಗೆ ಕಾರು ಎಂಬುದು ಅತ್ಯಗತ್ಯ ವಾಹನವಾಗಿದೆ. ಕೆಲವೊಂದು ಜನರು ಹೀಗೆ ಖರೀದಿಸಿದ ಕಾರುಗಳೊಂದಿಗೆ ಸ್ವಲ್ಪ ಹೆಚ್ಚಾಗಿಯೇ ಅಟ್ಯಾಚ್‌ಮೆಂಟ್ (Attachment) ಬೆಳೆಸಿಕೊಂಡಿರುತ್ತಾರೆ. ಆ ಕಾರಿಗೆ ಕೊಂಚ ಏಟಾದರೂ ಸಹಿಸರು ಅಂತೆಯೇ ಇತರರಿಗೆ ಚಲಾಯಿಸಲು ಕಾರನ್ನು ನೀಡದಷ್ಟು ಕಾರಿನ ಮೇಲೆ ಒಂದು ರೀತಿಯ ಹುಚ್ಚು ಪ್ರೀತಿಯನ್ನು ಬೆಳೆಸಿಕೊಂಡಿರುತ್ತಾರೆ.


20 ವರ್ಷಗಳಷ್ಟು ಹಳೆಯ ಕಾರಿನ ಮರುಖರೀದಿ


ಇಂದಿನ ಲೇಖನದಲ್ಲಿ ಕೂಡ ಕಳೆದ ಹಲವಾರು ವರ್ಷಗಳಿಂದ ಬೇರ್ಪಟ್ಟು ಇದೀಗ ತಮ್ಮ 20 ವರ್ಷ ಹಳೆಯ ಟಾಟಾ ಇಂಡಿಕಾವನ್ನು ಮರಳಿ ಪಡೆದುಕೊಂಡವರ ರೋಚಕ ಸುದ್ದಿಯ ಬಗ್ಗೆ ತಿಳಿದುಕೊಳ್ಳಲಿದ್ದೇವೆ. "Saurabh.kmph ಹೆಸರಿನ ಯೂಟ್ಯೂಬ್ ಬಳಕೆದಾರರು ಈ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದು 20 ವರ್ಷ ಹಳೆಯದಾದ ಟಾಟಾ ಇಂಡಿಕಾವನ್ನು ಮರುಖರೀದಿಸಿದ ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾದ ವಿಡಿಯೋ ಇದಾಗಿದೆ.


ಸುಮಿತ್ ಪೋಷಕರ ಬಳಿ ಇದ್ದ ಸಿಲ್ವರ್ ಬಣ್ಣದ ಟಾಟಾ ಇಂಡಿಕಾ ಕಾರು, ಸುಮಿತನಿಗೆ ಒಂದು ಕಾರು ಎನ್ನುವುದಕ್ಕಿಂತ ಕುಟುಂಬದ ಸದಸ್ಯನಾಗಿ ಹೆಚ್ಚು ಆಪ್ತವಾಗಿತ್ತು. ಮನೆತನದ ಅತ್ಯಮೂಲ್ಯ ಆಸ್ತಿ ಎಂಬಂತೆ ಈ ಟಾಟಾ ಇಂಡಿಕಾವನ್ನು ಸುಮಿತ್ ಕಾಣುತ್ತಿದ್ದರು. ಸುಮಿತ್ ತಮ್ಮ ಪೋಷಕರೊಂದಿಗೆ ಟಾಟಾ ಇಂಡಿಕಾ ಕಾರಿನೊಂದಿಗೆ ಫೋಸ್ ನೀಡಿದ್ದು, ಕಾರಿನ ಮೇಲೆ ಇವರಿಗಿದ್ದ ಪ್ರೀತಿಯನ್ನು ಇದರಲ್ಲಿಯೇ ತಿಳಿದುಕೊಳ್ಳಬಹುದಾಗಿದೆ.


ಇದನ್ನೂ ಓದಿ: ಓಡಿ ಬಂದು ನೀರಿನೊಳಗೆ ನುಸುಳುತ್ತಿರುವ ಆಮೆಯನ್ನೇ ಬೇಟೆಯಾಡಿದ ಹುಲಿ!


ಹೆತ್ತವರ ಕಾರನ್ನು ಅವರಿಗೆ ಮರಳಿಸಿದ ಮಗ ಸುಮಿತ್


ಇದೀಗ ಸುಮಿತ್ ತಮ್ಮ ಹೆತ್ತವರ ಬಳಿ ಇದ್ದ 20 ವರ್ಷ ಹಳೆಯದಾದ ಟಾಟಾ ಇಂಡಿಕಾ ಕಾರನ್ನು ಮರಳಿ ಖರೀದಿಸುವಲ್ಲಿ ಸಫಲರಾಗಿದ್ದು, ಪೋಷಕರಿಗೆ ಅವರ ಅತ್ಯಮೂಲ್ಯ ನಿಧಿಯನ್ನು ಮರಳಿಸಿದ್ದಾರೆ. ಸುಮಿತ್ ತಿಳಿಸಿರುವಂತೆ ಅವರ ಪೋಷಕರು 2003 ರಲ್ಲಿ ಅಕೋಲಾದಲ್ಲಿ ಟಾಟಾ ಇಂಡಿಕಾವನ್ನು ಖರೀದಿಸಿದರು ಹಾಗೂ 2013 ರಲ್ಲಿ ಮಾರಾಟ ಮಾಡುವುದಕ್ಕೂ ಮುನ್ನ ಆ ಕಾರಿನಲ್ಲಿಯೇ ಹೆಚ್ಚಿನ ಓಡಾಟ ನಡೆಸಿ ಕಾರನ್ನು ಸಾಕಷ್ಟು ಹಚ್ಚಿಕೊಂಡಿದ್ದರು.


ಕಾರು ಮಾರಾಟವಾದ ನಂತರ ಸುಮಿತ್‌ಗೆ ಕಾರಿನ ಕುರಿತು ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಆದರೆ ಆ ಕಾರನ್ನು ಪುನಃ ಪೋಷಕರಿಗೆ ಮರಳಿಸಬೇಕೆಂಬ ಛಲ ಹುಟ್ಟಿಕೊಂಡಿತು.


ತಂದೆಯ ಕಾರನ್ನು ಮರುಖರೀದಿಸಿ ಗಿಫ್ಟ್​ ಕೊಟ್ಟ ಮಗ


ಸುಮಾರು ದಶಕಗಳ ಕಾಲ ಅನ್ವೇಷಣೆ ಆರಂಭಿಸಿದ ಸುಮಿತ್, ಕಾರಿನ ಹುಡುಕಾಟವನ್ನು ಛಲ ಬಿಡದ ತ್ರಿವಿಕ್ರಮನಂತೆ ಮಾಡಿದರು. ಅಂತಿಮವಾಗಿ, ಸುಮಿತ್ ಯಶಸ್ವಿಯಾಗಿ ಇಂಡಿಕಾವನ್ನು ಮರುಖರೀದಿಸಿದರು ಹಾಗೂ ತಂದೆಗೆ ಅದನ್ನು ಮರಳಿಸಿದರು. ಸುಮಿತ್ ಕಾರನ್ನು ಮರುಖರೀದಿ ಮಾಡಿದ್ದಲ್ಲದೆ ಅದರ ಹಿಂದಿನ ವೈಭವವನ್ನು ಮರಳಿಸಲು ಅದನ್ನು ಇನ್ನಷ್ಟು ಸುಂದರಗೊಳಿಸುವಲ್ಲಿ ಕೂಡ ಗಮನ ಹರಿಸಿದ್ದಾರೆ. ಕಾರಿನ ಹುಡುಕಾಟಕ್ಕೆ ನೆರವಾದ ಪ್ರತಿಯೊಬ್ಬ ಹಿತೈಷಿಗಳೂ ಹಾಗೂ ಗೆಳೆಯರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.


ಭಾರತದ ಮೊದಲ ದೇಶೀಯ ವಿನ್ಯಾಸದ ಕಾರು


1998 ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡ ಟಾಟಾ ಇಂಡಿಕಾ ಭಾರತದ ಮೊದಲ ದೇಶೀಯ ವಿನ್ಯಾಸದ ಕಾರು. ಕಾರಿನ ಬೆಲೆಯನ್ನು ಘೋಷಿಸಿದ ನಂತರ ಟಾಟಾ ಮೋಟರ್ಸ್ ಎರಡು ವಾರಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿತು.




ಉತ್ತಮ ಇಂಧನ ದಕ್ಷತೆಗೆ ಹೆಸರುವಾಸಿಯಾಗಿದೆ


2.59 ಲಕ್ಷ ಮತ್ತು 3.9 ಲಕ್ಷದ ನಡುವಿನ ಬೆಲೆಯ ಇಂಡಿಕಾವನ್ನು ಎರಡು ಎಂಜಿನ್ ಆಯ್ಕೆಗಳಾದ ಪೆಟ್ರೋಲ್ ಹಾಗೂ ಡೀಸೆಲ್‌ ಮಾದರಿಗಳಲ್ಲಿ ಬಿಡುಗಡೆ ಮಾಡಲಾಗಿದ್ದು ಡೀಸೆಲ್ ರೂಪಾಂತರವನ್ನೊದಗಿಸುವ ಭಾರತದ ಮೊದಲ ಹ್ಯಾಚ್‌ಬ್ಯಾಕ್ ಎಂದೆನಿಸಿದೆ.


ಮಾರುತಿ ಸುಜುಕಿ ಝೆನ್, ಹ್ಯುಂಡೈ ಸ್ಯಾಂಟ್ರೊ, ಡೇವೂ ಮ್ಯಾಟಿಜ್ ಮತ್ತು ಫಿಯೆಟ್ ಯುನೊಗಳಂತಹ ಅದರ ಸಮಯದ ಇತರ ಸಣ್ಣ ಕಾರುಗಳ ವಿರುದ್ಧ ಪೈಪೋಟಿ ನೀಡಿರುವ ಟಾಟಾ ಇಂಡಿಕಾ ವಿಶಾಲವಾದ ಕ್ಯಾಬಿನ್ ಹಾಗೂ ಉತ್ತಮ ಇಂಧನ ದಕ್ಷತೆಗೆ ಹೆಸರುವಾಸಿಯಾಗಿದೆ.

top videos
    First published: