ಮಕ್ಕಳಿಗಾಗಿ (Childrens) ಸರ್ವಸ್ವವನ್ನು ತ್ಯಾಗ ಮಾಡುವ ತಾಯಿ (Mother), ಮಕ್ಕಳು ತಮಗಾಗಿ ಏನಾದರೂ ವಿಶೇಷವಾಗಿರುವುದನ್ನು ಮಾಡಿದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಖುಷಿಪಡುತ್ತಾರೆ. ತಮ್ಮ ಮಕ್ಕಳು ತಮಗಾಗಿ ಏನಾದರೂ ವಿಶೇಷವಾದುದನ್ನು ಮಾಡಬೇಕು ಹಾಗೂ ತಾವು ಅವರಿಗೆ ವಿಶೇಷವಾಗಿರಬೇಕು ಎಂದು ಬಯಸುತ್ತಾರೆ.
ತಾಯಿಯ ಹುಟ್ಟುಹಬ್ಬಕ್ಕೆ ವಿಶೇಷ ಕೊಡುಗೆ ನೀಡಿದ ಮಗ
ಇದೀಗ ರಿಷಭ್ ಎಂಬ ತರುಣ ಕೂಡ ತನ್ನ ತಾಯಿಯ 45ರ ಹುಟ್ಟುಹಬ್ಬಕ್ಕಾಗಿ ಅಮ್ಮನನ್ನು ಥಾಯ್ಲೆಂಡ್ ಪ್ರವಾಸಕ್ಕೆ ಕೊಂಡೊಯ್ದಿದ್ದು ಅಲ್ಲಿನ ವಿಶೇಷತೆಗಳ ಪರಿಚಯ ಮಾಡಿಸಿದ್ದಾನೆ.
ತನ್ನ ತಾಯಿಯ ಹುಟ್ಟುಹಬ್ಬಕ್ಕಾಗಿ ಏನಾದರೂ ವಿಶೇಷವಾದುದನ್ನು ಮಾಡಬೇಕು ಎಂದು ಬಯಸಿದ್ದಾನೆ. ಅದಕ್ಕಾಗಿ ತನ್ನ ಅಮ್ಮನನ್ನು ಥಾಯ್ಲೆಂಡ್‌ಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವಿಶೇಷವಾದುದನ್ನು ಪರಿಚಯಿಸಿದ್ದಾನೆ ಹಾಗೂ ತನ್ನಮ್ಮನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾನೆ.
ಗಾಂಜಾ ಸೇವಿಸಿದ ನಂತರ ಅಮ್ಮ ಹೇಗೆ ಪ್ರತಿಕ್ರಿಯಿಸಿದ್ದಾರೆ?
ಗ್ರೀನ್ ಲೀವ್ಸ್ ಎಂದೇ ಥಾಯ್ಲೆಂಡ್‌ನಲ್ಲಿ ಪರಿಚಿತ ಹಾಗೂ ನ್ಯಾಯಸಮ್ಮತವಾಗಿರುವ ಗಾಂಜಾವನ್ನು ರಿಷಭ್ ಅಮ್ಮನಿಗೆ ನೀಡಿದ್ದು ನಂತರ ಅವರಮ್ಮನ ಪ್ರತಿಕ್ರಿಯೆಯನ್ನು ರೀಲ್ಸ್ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾನೆ. ಇದೇ ಮೊದಲ ಬಾರಿಗೆ ತನ್ನಮ್ಮ ಗಾಂಜಾ ಸೇವಿಸುತ್ತಿರುವುದಾಗಿ ರಿಷಭ್ ಹಂಚಿಕೊಂಡಿದ್ದು, ಥಾಯ್ಲೆಂಡ್‌ನಲ್ಲಿ ಇದು ಸಾಮಾನ್ಯವಾದುದಾಗಿದೆ, ಹಾಗಾಗಿಯೇ ಇಲ್ಲಿನ ಗಾಂಜಾದ ಪರಿಚಯವನ್ನೇ ನನ್ನಮ್ಮನಿಗೆ ಮಾಡಿಸಿರುವುದಾಗಿ ರಿಷಭ್ ತಿಳಿಸಿದ್ದಾನೆ.
ಇದನ್ನೂ ಓದಿ: 2000 ರೂಪಾಯಿ ನೋಟು ನೀಡಿದ್ದಕ್ಕೆ ಸ್ಕೂಟರ್ಗೆ ಹಾಕಿದ ಪೆಟ್ರೋಲ್ ಹಿಂಪಡೆದ ಕೆಲಸಗಾರ!
ನಷೆಯ ಅನುಭವ ಹಂಚಿಕೊಂಡ ಪುತ್ರ
ಗಾಂಜಾ ಸೇವಿಸಿದ ನಂತರ ತನ್ನಮ್ಮನ ಪ್ರತಿಕ್ರಿಯೆಯನ್ನು ರಿಷಭ್ ಹಂಚಿಕೊಂಡಿದ್ದು, ಇದೊಂದು ಮರೆಯಲಾರದ ಪ್ರತಿಕ್ರಿಯೆ ಎಂದು ಗಾಂಜಾ ಸೇವಿಸಿದ ನಂತರ ರಿಷಭ್‌ನ ತಾಯಿ ದಾರಿಯುದ್ದಕ್ಕೂ ಒಂದು ರೀತಿಯ ನಷೆಗೆ ಒಳಗಾಗಿದ್ದು ಬಿಡುವಿಲ್ಲದೆ ಮಗನೊಂದಿಗೆ ಹರಟೆ ಹೊಡೆದಿದ್ದಾರೆ ಹಾಗೂ ತಾನು ಬೆಸ್ಟ್ ತಾಯಿ ಹಾಗೂ ರಾಣಿ ಎಂದು ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡ ಪುತ್ರ
ತಮ್ಮ ತಾಯಿಯ ಈ ನಡವಳಿಕೆಗೆ ಗಾಂಜಾ ಕಾರಣ ಎಂದು ಪ್ರತಿಕ್ರಿಯಿಸಿರುವ ಮಗ ರಿಷಭ್ ನನ್ನ ತಾಯಿಯನ್ನು ನಾನು ಸಾಯುವವರೆಗೆ ಪ್ರೀತಿಸುತ್ತೇನೆ ಎಂದು ಶೀರ್ಷಿಕೆ ನೀಡಿ ವಿಡಿಯೋ ಹಂಚಿಕೊಂಡಿದ್ದಾನೆ.
ಥಾಯ್ಲೆಂಡ್‌ನಲ್ಲಿ ಅಮ್ಮನ ಬರ್ತ್‌ಡೇ ಆಚರಿಸಿದ ಮಗ
ಥಾಯ್ಲೆಂಡ್‌ನ ಮಾರುಕಟ್ಟೆಯಲ್ಲಿ ಅಡ್ಡಾಡಿದ ತಾಯಿ ಮಗ ದಾರಿಯುದ್ದಕ್ಕೂ ಮಗನ ಕೈ ಹಿಡಿದುಕೊಂಡು ನಿರಂತರವಾಗಿ ಮಾತನಾಡುತ್ತಿರುವುದನ್ನು ಗಮನಿಸಬಹುದಾಗಿದೆ. ಗಾಂಜಾದ ನಶೆಯಲ್ಲಿದ್ದ ರಿಷಭ್ ತಾಯಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದು ನಾನು ಒಬ್ಬ ಬೆಸ್ಟ್ ತಾಯಿ ಎಂದು ನಿನ್ನಜ್ಜಿ ಹೇಳುತ್ತಿದ್ದರು ಎಂದೆಲ್ಲಾ ಹೇಳಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.
View this post on Instagram
ವಿಶ್ವದ ರಾಣಿ ಎಂದು ನಾನು ಹೇಗೆ ಭಾವಿಸಿರುವೆ ಎಂದು ರಿಷಭ್ ತಾಯಿ ಹೇಳಿದ್ದು, ಮಗ ಕೂಡ ತಾಯಿಯ ಮಾತಿಗೆ ಪ್ರತಿಕ್ರಿಯಿಸುತ್ತಾ ದಾರಿಯುದ್ದಕ್ಕೂ ನಡೆದಿದ್ದು ನಗುತ್ತಾ ಆಕೆಯೊಂದಿಗೆ ಹರಟೆ ಹೊಡೆದಿದ್ದಾನೆ ಹಾಗೂ ತಮ್ಮ ತಾಯಿಯ ವಿನೋದಕ್ಕೆ ಪ್ರತಿಯಾಗಿ ತಾನು ಸ್ಪಂದಿಸಿದ್ದಾನೆ.
ಬಳಕೆದಾರರು ಹೇಗೆ ಕಾಮೆಂಟ್ ಮಾಡಿದ್ದಾರೆ
ಇನ್‌ಸ್ಟಾಗ್ರಾಮ್‌ನಲ್ಲಿ ರಿಷಭ್ ತಾಯಿಯ ಈ ವಿನೋದಮಯ ವಿಡಿಯೋವನ್ನು ಹಂಚಿಕೊಂಡಿದ್ದು ಬಳಕೆದಾರರು ಕೂಡ ತಾಯಿಯ ವಿನೋದದಲ್ಲಿ ಸೇರಿಕೊಂಡಿದ್ದಾರೆ. ರಿಷಭ್ ತಾಯಿ ನಶೆಯಲ್ಲಿ ಪೂರ್ತಿಯಾಗಿ ಬೇರೊಂದು ಲೋಕದಲ್ಲಿ ತೇಲುತ್ತಿದ್ದಾರೆ ಎಂಬುದಾಗಿ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ತಾಯಿ ತುಂಬಾ ಮುದ್ದಾಗಿದ್ದಾರೆ ನಾನೊಮ್ಮೆ ಆಕೆಯನ್ನು ಭೇಟಿಯಾಗಬೇಕು ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋ ಇಂಟರ್ನೆಟ್‌ನಲ್ಲಿ ದಿ ಬೆಸ್ಟ್ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನಷ್ಟು ಬಳಕೆದಾರರು ರಿಷಭ್ ತಾಯಿಯ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದು ನಿಜಕ್ಕೂ ಇದು ವಿನೋದಮಯವಾಗಿದೆ. ನಿಮ್ಮ ತಾಯಿ ಪ್ರೇಮಮಯಿ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ