Viral Photo: ರಾಷ್ಟ್ರೀಯ ಉದ್ಯಾನವನದಲ್ಲಿ ಹಿಮದ ಗುಹೆ! ಅಪರೂಪದ ಚಿತ್ರ ನೀವೂ ನೋಡಿ

ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಹಿಮದ ಗುಹೆಯೊಳಗಿನ ಚಿತ್ರಗಳಾಗಿದ್ದು ಅಂತಿಂಥ ಚಿತ್ರಗಳಾಗಿರಲಿಲ್ಲ, ವಿಭಿನ್ನವಾಗಿತ್ತು. ಗುಹೆಯ ಹಿಮದ ಛಾವಣಿಯ ಮೇಲೆ ಸೂರ್ಯನ ಬೆಳಕು ಪ್ರತಿಬಿಂಬಿತವಾದಾಗ ಕಾಮನ ಬಿಲ್ಲಿನ ಏಳು ಬಣ್ಣಗಳು ಕಂಡುಬರುತ್ತದೆ. ನಿಜಕ್ಕೂ ಈ ಛಾಯಾಚಿತ್ರಗಳು ಮನಸ್ಸಿಗೆ ಚೇತೋಹಾರಿಯಾದ ದೃಶ್ಯ ವೈಭವಕ್ಕೆ ಕಾರಣವಾಗಿದ್ದವು.

 ನೈಸರ್ಗಿಕ ಕಾಮನಬಿಲ್ಲಿನ ಹೊಳಪನ್ನು ಪ್ರದರ್ಶಿಸುವ ಹಿಮದ ಗುಹೆಗಳು

ನೈಸರ್ಗಿಕ ಕಾಮನಬಿಲ್ಲಿನ ಹೊಳಪನ್ನು ಪ್ರದರ್ಶಿಸುವ ಹಿಮದ ಗುಹೆಗಳು

  • Share this:
ಕೆಲವೇ ದಿನಗಳ ಹಿಂದೆ ಮೌಂಟ್ ರೈನಿಯರ್ ರಾಷ್ಟ್ರೀಯ ಉದ್ಯಾನವನದ ಹಿಮದ ಗುಹೆಯೊಳಗಿನ (Ice Cave) ಚಿತ್ರಗಳನ್ನು ಛಾಯಾಗ್ರಾಹಕ ಮ್ಯಾಥ್ಯೂ ನಿಕೋಲ್ಸ್ (Mathew Nichols) ತೆಗೆದಿದ್ದು, ಇಂಟರ್ನೆಟ್‌ನಲ್ಲಿ ಈ ಚಿತ್ರಗಳು ಭರ್ಜರಿ ಸದ್ದುಮಾಡಿದ್ದವು. ನೆಟ್ಟಿಗರು ಈ ಚಿತ್ರಗಳನ್ನು ನೋಡಿ ಸ್ತಂಬೀಭೂತರಾದದ್ದು ಮಾತ್ರವಲ್ಲದೆ ಗುಹೆಗೆ ಭೇಟಿ ನೀಡುವ ವಿಚಾರಗಳನ್ನು ಇನ್ಸ್ಟಾಗ್ರಾಮ್ ನಲ್ಲಿ  ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಹಿಮದ ಗುಹೆಯೊಳಗಿನ ಚಿತ್ರಗಳಾಗಿದ್ದು (Photos) ಅಂತಿಂಥ ಚಿತ್ರಗಳಾಗಿರಲಿಲ್ಲ, ವಿಭಿನ್ನವಾಗಿತ್ತು. ಗುಹೆಯ ಹಿಮದ ಛಾವಣಿಯ ಮೇಲೆ ಸೂರ್ಯನ ಬೆಳಕು ಪ್ರತಿಬಿಂಬಿತವಾದಾಗ ಕಾಮನಬಿಲ್ಲಿನ (Rainbow) ಏಳು ಬಣ್ಣಗಳು ಕಂಡುಬರುತ್ತದೆ. ನಿಜಕ್ಕೂ ಈ ಛಾಯಾಚಿತ್ರಗಳು ಮನಸ್ಸಿಗೆ ಚೇತೋಹಾರಿಯಾದ ದೃಶ್ಯ ವೈಭವಕ್ಕೆ ಕಾರಣವಾಗಿದ್ದವು.

ಹಿಮದ ಗುಹೆಗಳ ಮನಮೋಹಕ ಚಿತ್ರ
ಈ ದೃಶ್ಯಗಳು ನೋಡಲು ರಮಣೀಯವಾಗಿದ್ದರೂ ಅಧಿಕಾರಿಗಳು ಭೇಟಿ ನೀಡುವವರೆಗೆ ಮಂಜಿನ ಗುಹೆಯೊಳಗೆ ಛಾಯಾಚಿತ್ರಗಳನ್ನು ತೆಗೆಯಬಾರದು ಎಂದು ರಾಷ್ಟ್ರೀಯ ಉದ್ಯಾನವನ ಸೇವೆಯ (ಎನ್‌ಪಿಎಸ್) ಅಧಿಕಾರಿಗಳು ತಿಳಿಸಿದ್ದು, ಹಿಮದ ಗುಹೆಗಳು ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಎನ್‌ಪಿಎಸ್ ಎಚ್ಚರಿಕೆಯ ಸೂಚನೆ ನೀಡಿದ್ದು, ಹಿಮದ ಗುಹೆಗಳು ಸ್ವಯಂಪ್ರೇರಿತವಾಗಿ ಕರಗಿ ಕುಸಿತಕ್ಕೆ ಕಾರಣವಾಗುತ್ತಿವೆ ಇದು ಗುಹೆಯನ್ನು ವೀಕ್ಷಿಸಲು ಬಂದವರಿಗೆ ಹಾನಿಯನ್ನುಂಟು ಮಾಡಬಹುದು ಎಂದು ತಿಳಿಸಿದೆ. ಹಿಮದ ಗುಹೆಗಳು ತಮ್ಮಷ್ಟಕ್ಕೆ ಕರಗಿ ಸ್ವಾಭಾವಿಕ ಕುಸಿತಕ್ಕೆ ಒಳಗಾಗುತ್ತವೆ ಹಾಗಾಗಿಯೇ ಈ ಗುಹೆಗಳಿಗೆ ಇಲ್ಲವೇ ಕರಗುವ ನೀರಿನ ಕಾಲುವೆಗಳಿಗೆ ಭೇಟಿ ಕೊಡದಂತೆ ಭೇಟಿ ನೀಡುವವರಿಗೆ ಅಧಿಕಾರಿಗಳು ನಿರ್ಬಂಧ ಹೇರುತ್ತಿದ್ದಾರೆ. ಅಧಿಕಾರಿಗಳ ಪ್ರಕಾರ ಕರಗುವಿಕೆಯು ಈ ವರ್ಷ ವೇಗವಾಗಿ ನಡೆಯುತ್ತದೆ ಎಂದಾಗಿದೆ.

ಗುಹೆಗೆ ಭೇಟಿನೀಡುವವರಿಗೆ ಅಪಾಯ ತಪ್ಪಿದ್ದಲ್ಲ
ಇನ್ನು ಗುಹೆಗಳ ಕುಸಿತ, ಮಂಜುಗಡ್ಡೆ ಹಾಗೂ ಬಂಡೆಗಳ ಕುಸಿತವು ಪ್ರಾಣಹಾನಿಯನ್ನುಂಟು ಮಾಡಬಹುದು ಅಂತೆಯೇ ಗುಹೆಯ ಪ್ರವೇಶ ದ್ವಾರ ಅಥವಾ ದ್ವಾರದ ಸಮೀಪ ಸಾಹಸ ನಡೆಸುವವರಿಗೆ ಗಂಭೀರ ಅಪಾಯಗಳನ್ನುಂಟು ಮಾಡಬಹುದು. ಕರಗುವ ಹಿಮವು ಸಂದರ್ಶಕರನ್ನು ನಜ್ಜುಗುಜ್ಜು ಮಾಡಬಹುದು ಅಂತೆಯೇ ಲಘೂಷ್ಣತೆಯ ಅಪಾಯವನ್ನು ಹೊಂದಿರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:  Viral Video: ವಿಷಕಾರಿ ಹಾವುಗಳಿಗೆ ಬರಿಗೈಯಲ್ಲಿಯೇ ಸ್ನಾನ ಮಾಡಿಸ್ತಾರೆ ಈ ಧೈರ್ಯಶಾಲಿ ವ್ಯಕ್ತಿ, ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ

ಅಧಿಕಾರಿಗಳು ಗುಹೆಯನ್ನು ವೀಕ್ಷಿಸಲು ಬಂದವರು ಸ್ವಯಂ ಮುಂಜಾಗ್ರತೆಯನ್ನು ತೆಗೆದುಕೊಳ್ಳಬೇಕು ಎಂದು ವಿನಂತಿಸಿದ್ದು, ನಿಕೋಲ್ ಅವರ ಛಾಯಾಚಿತ್ರವು ಕೂಡ ಕರಗುತ್ತಿರುವ ಹಿಮದ ಸೂಚನೆಯನ್ನು ನೀಡುತ್ತಿದೆ, ಅವ್ಯಾಹತ ಹಿಮದ ವಿಸ್ತಾರದೊಂದಿಗೆ ಹರಿದು ಹೋಗುತ್ತಿರುವ ಕರಗುವ ನೀರಿನ ವಾಹಿನಿಯನ್ನು ಪ್ರದರ್ಶಿಸಿದೆ ಎಂಬುದು ಚಿತ್ರದಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ನಿಕೋಲ್ಸ್ ಹಂಚಿಕೊಂಡಿರುವ ‍ಛಾಯಾಚಿತ್ರಗಳು
ಗುಹೆಯೊಳಗಿನ ಫೋಟೋಗಳನ್ನು ಛಾಯಾಗ್ರಾಹಕ ನಿಕೋಲ್ಸ್ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಚಿತ್ರಗಳ ಬಣ್ಣವನ್ನು ನಾನು ಹೆಚ್ಚಿಸಲಿಲ್ಲ ಬದಲಿಗೆ ಚಿತ್ರಗಳೇ ವರ್ಣರಂಜಿತವಾಗಿವೆ ಎಂದು ಬರೆದುಕೊಂಡಿದ್ದಾರೆ.




ಸೂರ್ಯನ ಕಿರಣಗಳು ಈ ಗುಹೆಯನ್ನು ಪ್ರವೇಶಿಸಿದಾಗ ಅವು ಕಾಮನಬಿಲ್ಲಿನ ಮಂಜಿನ ಗುಹೆಗಳಾಗಿ ಮಾರ್ಪಟ್ಟವು, ನನ್ನ ಕಣ್ಣುಗಳನ್ನು ನನಗೆ ನಂಬಲಾಗಲಿಲ್ಲ, ರೈನಿಯರ್‌ಗೆ ನಾನು ಭೇಟಿ ನೀಡಿದ್ದು ಹಿಮದ ಗುಹೆಗಳನ್ನು ನೋಡಲು ಆದರೆ, ಅವುಗಳು ಇಷ್ಟೊಂದು ವರ್ಣರಂಜಿತ ಹಾಗೂ ಸುಂದರವಾಗಿರುತ್ತವೆ ಎಂದು ನಾನು ಊಹಿಸಿಯೇ ಇರಲಿಲ್ಲ.

ಇದನ್ನೂ ಓದಿ: Dream Job: ಜನರೊಂದಿಗೆ ಒಡನಾಟ ಮಾಡೋದೇ ಇವರ ಕೆಲಸ ಅಂತೆ! ಅದರಲ್ಲೇ ನಡೆಯತ್ತೆ ಸಂಪಾದನೆ

ಸರಿಯಾದ ಸಮಯಕ್ಕೆ ನಾನು ಗುಹೆಯೊಳಗಿದ್ದೆ ಈ ಬಣ್ಣಗಳು ಎರಡು ಗಂಟೆಯವರೆಗೆ ಇದ್ದವು, ಅಂತೆಯೇ ಪ್ರಕಾಶಮಾನ ಏರುತ್ತಿದ್ದಂತೆ ಅವುಗಳು ಮಂಜಾಗುತ್ತವೆ ಎಂದು ನಿಕೋಲ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಹಿಮದ ಗುಹೆಗಳನ್ನು ಮುಚ್ಚಿರುವ ಉದ್ಯಾನವನ
ಮೌಂಟ್ ರೈನಿಯರ್ ರಾಷ್ಟ್ರೀಯ ಉದ್ಯಾನವನವು ಕೆಲವೊಂದು ಸಂದರ್ಭಗಳಲ್ಲಿ ಮಂಜಿನ ಗುಹೆಗಳಿಗೆ ನೆಲೆಯಾಗಿದೆ. ಹವಾಮಾನ ಬದಲಾವಣೆಗಳಿಂದಾಗಿ ಹಿಮದ ಗುಹೆಗಳು ಕಾಲಾನಂತರದಲ್ಲಿ ಕರಗಿ ಕಣ್ಮರೆಯಾಯಿತು. ಐಸ್ ತುಂಡುಗಳು ಮತ್ತು ಚಕ್ಕೆಗಳು ಸೇರಿದಂತೆ ಗುಹೆಯ ಮೇಲ್ಛಾವಣಿಯ ಸಡಿಲವಾದ ಬೀಳುವಿಕೆ ಮೊದಲಾದ ಅಸುರಕ್ಷಿತ ಪರಿಸ್ಥಿತಿಗಳಿಂದಾಗಿ ಪಾರ್ಕ್‌ನಲ್ಲಿದ್ದ ಐತಿಹಾಸಿಕ ಮಂಜಿನ ಗುಹೆಗಳನ್ನು 1980 ರ ಸುಮಾರಿಗೆ ಮುಚ್ಚಲಾಯಿತು ಎಂಬುದಾಗಿ ಎನ್‌ಪಿಎಸ್ ಹೇಳಿಕೆ ತಿಳಿಸಿದೆ.
Published by:Ashwini Prabhu
First published: