• Home
  • »
  • News
  • »
  • trend
  • »
  • Viral Video: ಪೇರೆಂಟ್ಸ್​ ಆಗ್ತಾ ಇದ್ದೀವಿ ಅಂತ ಗೊತ್ತಾಗಿ ಗಂಡ ಹೆಂಡ್ತಿ ಕೊಟ್ಟ ಸೇಮ್​ ರಿಯಾಕ್ಷನ್​! ಎಲ್ಲಾ ಕಡೆ ಇವರದ್ದೇ ಹವಾ

Viral Video: ಪೇರೆಂಟ್ಸ್​ ಆಗ್ತಾ ಇದ್ದೀವಿ ಅಂತ ಗೊತ್ತಾಗಿ ಗಂಡ ಹೆಂಡ್ತಿ ಕೊಟ್ಟ ಸೇಮ್​ ರಿಯಾಕ್ಷನ್​! ಎಲ್ಲಾ ಕಡೆ ಇವರದ್ದೇ ಹವಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Trending Video: ಪೋಷಕರಾಗ್ತಾ ಇದ್ದೇವೆ ಅಂತ ಗೊತ್ತಾದಾಗ ಆಗುವ ಸಂತೋಷವೇ ಬೇರೆ. ಇದಕ್ಕಾಗಿ ಅವರವರ ಭಾವನೆಗಳು ಯಾವ ರೀತಿಯಾಗಿ ವ್ಯಕ್ತವಾಗುತ್ತದೆ ಎಂದು ನೋಡೋದೇ ಚೆಂದ. ಇಲ್ಲಿ ಒಂದು ಜೋಡಿ ಕೂಡ ಸಖತ್​ ವೈರಲ್​ ಆಗ್ತಾ ಇದ್ದಾರೆ. ಏನ್​ ವಿಷ್ಯ ಗೊತ್ತಾ?

  • Share this:

ನಾವು ಚಿಕ್ಕವರಾಗಿದ್ದಾಗ ಮನೆಯಲ್ಲಿ ತಂದೆ ಮತ್ತು ತಾಯಿ ‘ಶಾಲೆಯಲ್ಲಿ ಆ ಹುಡುಗ ತುಂಬಾ ತುಂಟ, ಅವನ ಜೊತೆ ಇದ್ದರೆ ನಿನಗೂ ಆ ಗುಣ ತುಂಟತನ ಬರುತ್ತೆ, ಸ್ವಲ್ಪ ದೂರ ಇರು’ ಅಂತ ಹೇಳುವುದನ್ನು ಒಮ್ಮೆಯಾದರೂ ಕೇಳಿರುತ್ತೇವೆ. ಹೀಗೇಕೆ ಹೇಳುತ್ತಾರೆ ತಂದೆ-ತಾಯಿ ಅಂತ ಆ ಸಮಯದಲ್ಲಿ ನಮಗೆ ಒಂದು ರೀತಿ ವಿಚಿತ್ರ ಅಂತ ಅನ್ನಿಸಿರುತ್ತದೆ. ಆದರೆ ದೊಡ್ಡವರಾದ ನಂತರ ನಮಗೆ ಅದರ ಬಗ್ಗೆ ಪೂರ್ತಿಯಾಗಿ ಅರ್ಥವಾಗುತ್ತದೆ.  ಹೌದು, ನಾವು ಎಂತಹ ಜನರೊಂದಿಗೆ ಹೆಚ್ಚಾಗಿ ಇರುತ್ತೇವೆ, ಬೆರೆಯುತ್ತೇವೆಯೋ, ಅವರ ಗುಣಗಳು ಅಥವಾ ಸ್ಟೈಲ್ (Style) ನಮಗೆ ಗೊತ್ತಿರದೆ ನಮ್ಮ ವ್ಯಕ್ತಿತ್ವಕ್ಕೆ (Personality) ಸೇರಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಡಿಟ್ಟೋ ಇದೇ ರೀತಿಯಾಗಿ ಮದುವೆಯಾದ ನಂತರ ಪತಿ ತನ್ನ ಪತ್ನಿಯಲ್ಲಿನ ಅಥವಾ ಪತ್ನಿ ತನ್ನ ಪತಿಯಲ್ಲಿನ ಕೆಲವು ಗುಣಗಳನ್ನು ಅಥವಾ ಶೈಲಿಯನ್ನು ಬದಲಿಸಲು ಪ್ರಯತ್ನಿಸುತ್ತಾರೆ. ಕೆಲವೊಬ್ಬರ ವಿಷಯದಲ್ಲಿ ಅದು ಕೆಲಸ ಮಾಡುತ್ತೆ, ಎಂದರೆ ಪತಿಯು ಹೇಳಿದ ಗುಣಗಳನ್ನು ಪತ್ನಿ ಸರಿಪಡಿಸಿಕೊಳ್ಳುತ್ತಾರೆ, ಪತ್ನಿ ಹೇಳಿದ ಗುಣಗಳನ್ನು ಪತಿ ಸರಿಪಡಿಸಿಕೊಳ್ಳುತ್ತಾರೆ. ಆದರೆ ಎಷ್ಟೋ ವರ್ಷಗಳು ಒಟ್ಟಿಗೆ ಕಳೆದರೂ ಇಬ್ಬರ ಗುಣಗಳಲ್ಲಿ ಮತ್ತು ಶೈಲಿಯಲ್ಲಿ ಯಾವುದೇ ಬದಲಾವಣೆ ಸಹ ಆಗದೆ ಇರಬಹುದು.


ಒಟ್ಟಿಗಿದ್ದ ಮೇಲೆ ಶೈಲಿ ಒಂದೇ ರೀತಿಯಾಗುವ ಸಾಧ್ಯತೆಗಳಿವೆ


ಗುಣಗಳನ್ನು ಬದಲಿಸುವ ವಿಚಾರ ಪಕ್ಕಕ್ಕೆ ಸರಿಸಿದರೆ, ಪರಸ್ಪರರ ಶೈಲಿ ಕೆಲವೊಮ್ಮೆ ಒಂದೇ ಆಗಿರುತ್ತದೆ. ಎಂದರೆ ಇಬ್ಬರು ನಗುವ ಸ್ಟೈಲ್, ಖುಷಿಯ ವಿಚಾರಕ್ಕೆ ಪ್ರತಿಕ್ರಿಯಿಸುವ ಶೈಲಿ, ಮಾತಾಡುವ ಶೈಲಿ ಹೀಗೆ ಸ್ವಲ್ಪ ಮಟ್ಟಿಗಾದರೂ ಗಂಡ ಹೆಂಡತಿ ಇಬ್ಬರದು ಒಂದೇ ಆಗಿರುತ್ತದೆ. ವರ್ಷಾನುಗಟ್ಟಲೆ ಜೊತೆಗಿದ್ದ ಮೇಲೆ ಕೆಲವೊಂದು ವಿಚಾರದಲ್ಲಾದರೂ ಇಬ್ಬರು ಒಂದೇ ರೀತಿ ಇರಬೇಕಲ್ಲವೇ? ಇಲ್ಲಿಯೂ ಸಹ ಅಂತಹದೇ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ.


ಇನ್ನೊಂದು ವಿಷಯವೆಂದರೆ ನೀವು ತುಂಬಾ ವರ್ಷಗಳ ಕಾಲ ಒಬ್ಬರೊಂದಿಗೆ ಬದುಕಿದಾಗ ಅವರು ಕೆಲವು ವಿಷಯಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೀವು ಸರಿಯಾಗಿ ಊಹಿಸಬಹುದು. ಕೆಲವೊಮ್ಮೆ ಇಬ್ಬರು ಒಂದೇ ರೀತಿ ವರ್ತಿಸಲು ಪ್ರಾರಂಭಿಸುತ್ತಾರೆ.


ಇದನ್ನೂ ಓದಿ: ಸಿಂಗಾಪುರ್ 100% ಸುರಕ್ಷಿತ ದೇಶ ಎಂಬುದನ್ನು ಖಾತ್ರಿಪಡಿಸಲು ಈ ಟಿಕ್‌ಟಾಕರ್ ಮಾಡಿದ ಸಾಹಸವೇನು? ಇಲ್ಲಿದೆ ರೋಚಕ ಸ್ಟೋರಿ!


ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಳ್ಳಲಾದ ಮತ್ತು ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ನಿಖರವಾಗಿ ಅದೇ ನಡೆದಿರುವುದು ನೀವು ನೋಡಬಹುದು.


ವೀಡಿಯೋದಲ್ಲಿ ಏನಿದೆ ನೋಡಿ..


ಮಹಿಳೆಯೊಬ್ಬಳಿಗೆ ತಾನು ಗರ್ಭಿಣಿಯಾಗಿದ್ದೇನೆ ಅಂತ ತಿಳಿಯುತ್ತದೆ. ಗರ್ಭಧಾರಣೆಯ ಪರೀಕ್ಷೆಯ ಸಹಾಯದಿಂದ ಇದನ್ನು ಹೇಗೆ ದೃಢೀಕರಿಸುತ್ತಾಳೆ ಎಂಬುದನ್ನು ತೋರಿಸುವ ಮೂಲಕ ವೀಡಿಯೋ ಶುರುವಾಗುತ್ತದೆ. ಅದನ್ನು ತಿಳಿದುಕೊಂಡು ಅವಳಿಗಾದ ಸಂತೋಷಕ್ಕೆ ಯಾವುದೇ ಮಿತಿಗಳಿರುವುದಿಲ್ಲ. ಅವಳ ಪ್ರತಿಕ್ರಿಯೆ ಸಂಪೂರ್ಣವಾಗಿ ಹೃದಯಸ್ಪರ್ಶಿಯಾಗಿದೆ ಮತ್ತು ಸಾಕಷ್ಟು ಭಾವನಾತ್ಮಕವಾಗಿದೆ ಎಂದು ಹೇಳಬಹುದು. ಇದನ್ನು ಒಲಿವಿಯಾ ಮಾರ್ಕೆಲ್ ಎಂಬ ಮಹಿಳೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.
ಆದರೆ ಈ ವೀಡಿಯೋದಲ್ಲಿ ಇರುವ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಅವಳು ತನ್ನ ಗಂಡನಿಗೆ ಈ ಒಳ್ಳೆಯ ಸುದ್ದಿಯನ್ನು ತಿಳಿಸುತ್ತಾಳೆ.


ಇದನ್ನೂ ಓದಿ: ಮೈಕ್ರೋಸಾಫ್ಟ್‌ ಉದ್ಯೋಗ ಬಿಟ್ಟು ಸ್ವಂತ ಉದ್ಯಮ ಆರಂಭಿಸಿ ಯಶಸ್ಸುಗಳಿಸಿದ ಸಾಧಕನ ಕಥೆ


ವಿಷಯ ತಿಳಿದ ಪತಿಯು ಸಹ ಹೆಚ್ಚು ಕಡಿಮೆ ತನ್ನ ಪತ್ನಿಯಂತೆಯೇ ಪ್ರತಿಕ್ರಿಯಿಸುತ್ತಾನೆ ಮತ್ತು ಅವರ ಜೀವನದಲ್ಲಿ ಈ ಹೊಸ ಮತ್ತು ಸ್ವಾಗತಾರ್ಹ ಬದಲಾವಣೆಯ ವಿಷಯಕ್ಕೆ ಬಂದಾಗ ತನ್ನ ಸಂತೋಷವನ್ನು ವ್ಯಕ್ತಪಡಿಸಲು ಪತ್ನಿ ಬಳಸಿದ ಪದಗಳನ್ನೇ ಅವನು ಸಹ ಬಳಸುತ್ತಾನೆ. ನೋಡಿದ್ರಲ್ಲಾ ಪತಿ ಮತ್ತು ಪತ್ನಿ ಇಬ್ಬರ ಪ್ರತಿಕ್ರಿಯೆ ಹೇಗೆ ಒಂದೇ ಆಗಿತ್ತು ಅಂತ.


ಸೆಪ್ಟೆಂಬರ್ 27 ರಂದು ಹಂಚಿಕೊಳ್ಳಲಾದ ಈ ವೀಡಿಯೋಗೆ ಈಗಾಗಲೇ 8 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಬಂದಿವೆ ಮತ್ತು ಲಕ್ಷಾಂತರ ಜನರು ಇದನ್ನು ನೋಡಿದ್ದಾರೆ. "ಇದು ತುಂಬಾನೇ ಮುದ್ದಾಗಿದೆ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಬರೆದಿದ್ದಾರೆ. "ಸ್ವರ್ಗದಲ್ಲಿ ನಿಶ್ಚಯವಾದ ಜೋಡಿ ಇದು.. ಲವ್ ಯೂ ಗಾಯ್ಸ್” ಎಂದು ಮತ್ತೊಬ್ಬ ವ್ಯಕ್ತಿ ಪ್ರತಿಕ್ರಿಯಿಸಿದ್ದಾರೆ. ಮೂರನೆಯವರು "ಗಂಡ ಹೆಂಡತಿ ಒಂದೇ ರೀತಿ ಇದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.

First published: