• Home
  • »
  • News
  • »
  • trend
  • »
  • Reverse Bridge: ಪ್ರಪಂಚವನ್ನೇ ಬೆರಗುಗೊಳಿಸಿದೆ ನೆದರ್ಲ್ಯಾಂಡ್‌ನ ರಿವರ್ಸ್ ಸೇತುವೆ! ಹೇಗಿದೆ ಗೊತ್ತಾ ಇದರ ನಿರ್ಮಾಣ?

Reverse Bridge: ಪ್ರಪಂಚವನ್ನೇ ಬೆರಗುಗೊಳಿಸಿದೆ ನೆದರ್ಲ್ಯಾಂಡ್‌ನ ರಿವರ್ಸ್ ಸೇತುವೆ! ಹೇಗಿದೆ ಗೊತ್ತಾ ಇದರ ನಿರ್ಮಾಣ?

ನೆದರ್​ಲ್ಯಾಂಡ್​ನ ರಿವರ್ಸ್​ ಬ್ರಿಡ್ಜ್

ನೆದರ್​ಲ್ಯಾಂಡ್​ನ ರಿವರ್ಸ್​ ಬ್ರಿಡ್ಜ್

ಕೆಲವೊಂದು ನಿರ್ಮಾಣಗಳು ನಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತವೆ, ಅರೆ! ಇದು ಹೇಗೆ ಸಾಧ್ಯ ಅಂತಾ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳುವಷ್ಟರ ಮಟ್ಟಿಗೆ ಅವು ನಿರ್ಮಾಣವಾಗಿರುತ್ತವೆ.

  • Share this:

ಭಾರತದಲ್ಲಿನ ರಾಷ್ಟ್ರೀಯ  ಮೀನುಗಾರಿಕೆ ಅಭಿವೃದ್ಧಿ ಮಂಡಳಿಯಿಂದ ಭವಿಷ್ಯದ ದುಬೈನ (Dubai) ಮ್ಯೂಸಿಯಂವರೆಗೂ ಪ್ರಪಂಚದಾದ್ಯಂತ ಅತ್ಯದ್ಭುತ ನಿರ್ಮಾಣಗಳನ್ನು ನಾವು ನೋಡಬಹುದು. ಕೆಲವೊಂದು ನಿರ್ಮಾಣಗಳು ನಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತವೆ, ಅರೆ! ಇದು ಹೇಗೆ ಸಾಧ್ಯ ಅಂತಾ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳುವಷ್ಟರ ಮಟ್ಟಿಗೆ ಅವು ನಿರ್ಮಾಣವಾಗಿರುತ್ತವೆ. ಇಂತಹ ಸಾಕಷ್ಟು ಅಪೂರ್ವ ರಚನೆಗಳು ಪ್ರಪಂಚದಾದ್ಯಂತ (World) ಇವೆ. ಇಂತಹ ರಚನೆಗಳನ್ನು ಮಾಡಿದ ಎಂಜಿನಿಯರಿಂಗ್ ಕೌಶಲ್ಯಕ್ಕೆ ನಾವು ಸಲಾಂ ಹೇಳಲೇಬೇಕು. ಇಂತಹ ಒಂದಷ್ಟು ಎಂಜಿನಿಯರಿಂಗ್ ಅದ್ಭುತಗಳ ಪಟ್ಟಿಗೆ ಸೇರಿದ್ದು, ನೆದರ್ಲ್ಯಾಂಡಿನ (Netherland) 'ರಿವರ್ಸ್ ಸೇತುವೆ'. ನೆದರ್ಲ್ಯಾಂಡಿನ 'ರಿವರ್ಸ್ ಸೇತುವೆ'ಯನ್ನು ನೋಡಿದವರು ಒಂದು ಕ್ಷಣ ತಲೆಗೆ ಹುಳ ಬಿಟ್ಟುಕೊಳ್ಳುವುದಂತೂ ಪಕ್ಕಾ. ವಿಶ್ವದಾದ್ಯಂತ ಅನೇಕರನ್ನು ಬೆರಗುಗೊಳಿಸಿದ 'ರಿವರ್ಸ್ ಸೇತುವೆ' ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.


ಸೇತುವೆ ವಿಡಿಯೋ ವೈರಲ್!
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ನೆದರ್ಲ್ಯಾಂಡ್ಸ್‌ನ ಸೇತುವೆಯೊಂದು ಹೆಚ್ಚು ಗಮನ ಸೆಳೆಯುತ್ತಿದೆ. ಆಲ್ವಿನ್ ಫೂ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಸೇತುವೆಯ ವಿಡಿಯೋ ಹಲವರ ಕೌತಕಕ್ಕೆ ಕಾರಣವಾಗಿದೆ.


ಹೇಗಿದೆ ರಿವರ್ಸ್‌ ಸೇತುವೆ ನಿರ್ಮಾಣ ಶೈಲಿ?
ಈ ವಿಡಿಯೋ ನೋಡಿ ನಿಮಗೆ ಒಂದು ಕ್ಷಣ ಅರೆ! ರಸ್ತೆ ಮೇಲೆ ಬಂದ ವಾಹನಗಳು ಎಲ್ಲಿ ಹೋದವು, ಮತ್ತೆ ಹೇಗೆ ಅದೇ ರಸ್ತೆಯಲ್ಲಿ ಕಾಣಿಸಿಕೊಂಡವು ಎಂದೆನಿಸಬಹುದು. ಅದೇ ನೋಡಿ ಸೇತುವೆ ಚಮತ್ಕಾರ.


ವಿಡಿಯೋ ಕ್ಲಿಪ್‌ನಲ್ಲಿ ಕಾಣುವಂತೆ ಕಾರುಗಳು ಸೇತುವೆಯ ಮೂಲಕ ಚಲಿಸುತ್ತಿರುವುದನ್ನು ಮತ್ತು ನೀರಿನ ಒಂದು ವಿಭಾಗದ ಅಡಿಯಲ್ಲಿ ಕಣ್ಮರೆಯಾಗುತ್ತಿರುವಂತೆ ತೋರುತ್ತದೆ.


ನಂತರ ಕಾರುಗಳು ಇನ್ನೊಂದು ಬದಿಯಲ್ಲಿ ಮತ್ತೆ ಕಾಣಿಸಿಕೊಳ್ಳುತ್ತವೆ. ಕಾರುಗಳು ರಸ್ತೆಯಿಂದ ಮಧ್ಯೆ ಅಂಡರ್‌ವಾಟರ್‌ ಬ್ರಿಡ್ಜ್‌ನಲ್ಲಿ ಬರುತ್ತವೆ, ಇದೇ ಆ ಸೇತುವೆ ಪ್ರಮುಖ ವಿಶೇಷತೆ.


ಜಲಸಾರಿಗೆಗೆ ತೊಂದರೆಯಾಗದಂತೆ ನಿರ್ಮಾಣವಾಗಿದೆ ಸೇತುವೆ


ನೆದರ್‌ಲ್ಯಾಂಡ್‌ನಲ್ಲಿರುವ 82 ಅಡಿ ಉದ್ದದ ಕಾಲುವೆ ಅಥವಾ ನೀರಿನ ಸೇತುವೆ ಇದು. ನೆದರ್‌ಲ್ಯಾಂಡ್ಸ್‌ನ ಡಚ್‌ ನಗರದ ಹಾರ್ಡರ್‌ವಿಜ್ಕ್‌ನಲ್ಲಿ ಈ ನೀರಿನ ಸೇತುವೆ ಇದೆ.


ಈ ಸುಂದರ ವಾಟರ್‌ ಬ್ರಿಡ್ಜ್‌ ಅನ್ನು ವೇಲುವೆಮಿರ್ ಸರೋವರದಲ್ಲಿ ನೋಡಬಹುದು. ಇದು ಕೂಡಾ ಅದ್ಭುತ ಸುರಂಗ ಮಾರ್ಗವಾಗಿದೆ. ಅಕ್ಕಪಕ್ಕ ದಟ್ಟ ಮರಗಳ ನಡುವೆ ನೀರಿನಲ್ಲಿ ಹಾದು ಹೋಗುವ ರಸ್ತೆ ನಿಜಕ್ಕೂ ಸುಂದರವಾಗಿದೆ.


ಇದನ್ನೂ ಓದಿ: ವಿದ್ಯಾರ್ಥಿನಿಗೆ ಶಿಕ್ಷಕನೇ ಬರೆದ ಲವ್ ಲೆಟರ್​! ಬೇಲಿನೇ ಎದ್ದು ಹೊಲ ಮೇಯುವುದು ಅಂದ್ರೆ ಇದೇನಾ?


ಪ್ರಮುಖವಾದ ವಿಶೇಷತೆ ಎಂದರೆ ಇಲ್ಲಿ ಮೇಲ್ಭಾಗದಲ್ಲಿ ಹಡಗುಗಳು ಹೋದರೆ, ಕೆಳಭಾಗದಲ್ಲಿ ವಾಹನಗಳು ಸಂಚರಿಸುತ್ತವೆ. ಜಲಸಾರಿಗೆಗಳು ಸರಾಗವಾಗಿ ದಾಟಲು ಅನುವು ಮಾಡಿಕೊಡುವಂತೆ ಈ ಅದ್ಭುತ ಸೇತುವೆಯನ್ನು ನಿರ್ಮಿಸಲಾಗಿದೆ.


2002 ರಲ್ಲಿ ಆರಂಭವಾದ ಸೇತುವೆ


ಇದು ವಿಶ್ವದ ಅತಿದೊಡ್ಡ ಕೃತಕ ದ್ವೀಪವಾದ ಫ್ಲೆವೊಲ್ಯಾಂಡ್ ಎಂಬ ನೆರೆಯ ದ್ವೀಪದೊಂದಿಗೆ ಮುಖ್ಯ ಭೂಭಾಗವನ್ನು ಸಂಪರ್ಕಿಸುತ್ತದೆ. 2002 ರಲ್ಲಿ ತೆರೆಯಲಾದ ವೇಲುವೆಮೀರ್ ಅಕ್ವಾಡಕ್ಟ್ ವಾಹನ ಸಂಚಾರ ಮತ್ತು ಜಲಮೂಲದ ಸಂಚಾರವನ್ನು ಪರಸ್ಪರ ಇನ್ನೊಂದಕ್ಕೆ ಅಡ್ಡಿಯಾಗದಂತೆ ಹಾದುಹೋಗಲು ಅನುವು ಮಾಡಿಕೊಡುತ್ತದೆ.


ಅಲ್ಲದೆ, ರಸ್ತೆಯ ಮೇಲಿನ ನೀರಿನ ಭಾರವನ್ನು ಹೊರಲು ಮತ್ತು ನೀರು ಮತ್ತು ಕೆಸರು ಕೆಳಗಿನ ರಸ್ತೆಗೆ ಸೋರಿಕೆಯಾಗದಂತೆ ತಡೆಯಲು ಸ್ಟೀಲ್ ಶೀಟ್ ಪೈಲಿಂಗ್ ಅನ್ನೂ ಇಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ಮೇಲಿನ ನೀರು ವಾಹನ ಸವಾರರ ಮೇಲೆ ಕೆಳಗೆ ಬೀಳುವ ಯಾವುದೇ ಪ್ರಸಂಗವೂ ಎದುರಾಗುವುದಿಲ್ಲ.
ಈ ವೀಡಿಯೊವನ್ನು ಕೆಲವು ಸಮಯದ ಹಿಂದೆ ಆಲ್ವಿನ್ ಫೂ ಅವರು ಟ್ವಿಟರ್‌ನಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆದ ವಿಡಿಯೋ 8.4 ಮಿಲಿಯನ್ ವೀಕ್ಷಣೆ ಮತ್ತು ಹಲವು ಕಾಮೆಂಟ್‌ಗಳನ್ನು ಪಡೆದಿದೆ. ನೀವು ಸಹ ಎಂದಾದರೂ ನೆದರ್‌ಲ್ಯಾಂಡ್‌ಗೆ ಹೋದಾಗ ಈ ರಿವರ್ಸ್‌ ಸೇತುವೆ ಮೇಲೆ ಒಮ್ಮೆ ಪ್ರಯಾಣ ಮಾಡಿಬರೋದನ್ನ ಮರೀಬೇಡಿ ನೋಡಿ.

First published: