• Home
 • »
 • News
 • »
 • trend
 • »
 • Viral Video: ಪುಟ್ಟ ಬಾಲಕನ ಹಾಡು ಕೇಳಿ ಎಂಜಾಯ್ ಮಾಡಿದ ಪೊಲೀಸರು! ಈ ವಿಡಿಯೋ ನೋಡಿ ನಿಮ್ಗೂ ಖುಷಿ ಆಗ್ಬಹುದು

Viral Video: ಪುಟ್ಟ ಬಾಲಕನ ಹಾಡು ಕೇಳಿ ಎಂಜಾಯ್ ಮಾಡಿದ ಪೊಲೀಸರು! ಈ ವಿಡಿಯೋ ನೋಡಿ ನಿಮ್ಗೂ ಖುಷಿ ಆಗ್ಬಹುದು

ಪುಟ್ಟ ಬಾಲಕನ ವೈರಲ್ ವಿಡಿಯೋ

ಪುಟ್ಟ ಬಾಲಕನ ವೈರಲ್ ವಿಡಿಯೋ

ಕೇರಳ ಪೊಲೀಸರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಪುಟವು ಪುಟ್ಟ ಹುಡುಗನ ಆಸಕ್ತಿದಾಯಕ ವಿಡಿಯೋವನ್ನು ಪೋಸ್ಟ್ ಮಾಡಿದೆ, ಅದು ಸಾಮಾಜಿಕ ಮಾಧ್ಯಮದಲ್ಲಿ ಈಗ ಅಪಾರ ಪ್ರಶಂಸೆ ಮತ್ತು ಮೆಚ್ಚುಗೆಯನ್ನು ಸಹ ಗಳಿಸುತ್ತಿದೆ.

 • News18 Kannada
 • Last Updated :
 • Boyapalle | Songadh
 • Share this:

ಕೇರಳ ಪೊಲೀಸ್ ಇಲಾಖೆಯವರು (Kerala Police Department) ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ತುಂಬಾನೇ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಒಮ್ಮೆ ಅಪರಾಧಿಗಳನ್ನು ಹಿಡಿದು ಸುದ್ದಿ ಮಾಡಿದರೆ, ಇನ್ನೊಮ್ಮೆ ಹಾಸ್ಯಭರಿತ ಸಾಮಾಜಿಕ ಮಾಧ್ಯಮ (Social Media) ಅಪ್ಡೇಟ್ ಗಳಿಗಾಗಿ ಸುದ್ದಿಯಲ್ಲಿರುತ್ತಾರೆ ಅಂತ ಹೇಳಿದ್ರೆ ತಪ್ಪಾಗುವುದಿಲ್ಲ. ಅದರಲ್ಲೂ ಅಪ್ರತಿಮ ಚಲನಚಿತ್ರ ದೃಶ್ಯಗಳನ್ನು ಆಧರಿಸಿದ ಮೀಮ್ ಗಳ ಮೂಲಕ, ಅವರು ವಿವಿಧ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ (Public) ಜಾಗೃತಿ ಮೂಡಿಸಲು ಸದಾ ಪ್ರಯತ್ನಿಸುತ್ತಾ ಇರುತ್ತಾರೆ ಎಂದು ಹೇಳಬಹುದು. ಆ ಮೂಲಕ ನಾಗರಿಕರಿಗೆ ಸ್ನೇಹಪರತೆಯ ಪ್ರಜ್ಞೆಯನ್ನು ಸಹ ನೀಡುತ್ತಾರೆ. ಪೊಲೀಸ್ ಇಲಾಖೆಯ ಈ ನಡೆ ಇವರನ್ನು ಜನರೊಂದಿಗೆ ಇನ್ನಷ್ಟು ಬೆಸೆಯುವಂತೆ ಮಾಡುವುದಲ್ಲದೆ, ಪೊಲೀಸರು ಸ್ನೇಹ ಪರವಾಗಿರಲು ಸಾಧ್ಯವಿಲ್ಲ ಎಂಬ ಮಾತನ್ನು ಸುಳ್ಳು ಮಾಡಲು ಸಹ ಸಹಾಯ ಮಾಡುತ್ತದೆ.


ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದಂತೆ ಇಲ್ಲೊಂದು ಹೊಸ ವಿಡಿಯೋ ಹೊರ ಬಂದಿದೆ ನೋಡಿ. ಜುಲೈ 28 ರಂದು, ಕೇರಳ ಪೊಲೀಸರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಪುಟವು ಪುಟ್ಟ ಹುಡುಗನ ಆಸಕ್ತಿದಾಯಕ ವಿಡಿಯೋವನ್ನು ಪೋಸ್ಟ್ ಮಾಡಿದೆ, ಅದು ಸಾಮಾಜಿಕ ಮಾಧ್ಯಮದಲ್ಲಿ ಈಗ ಅಪಾರ ಪ್ರಶಂಸೆ ಮತ್ತು ಮೆಚ್ಚುಗೆಯನ್ನು ಸಹ ಗಳಿಸುತ್ತಿದೆ.


ಪೊಲೀಸ್ ಅಧಿಕಾರಿಯ ಬಳಿ ಕೂತು ಜಾನಪದ ಹಾಗು ಹಾಡಿದ ಬಾಲಕ
ವೈರಲ್ ಕ್ಲಿಪ್ ನಲ್ಲಿ ಒಬ್ಬ ಪುಟ್ಟ ಬಾಲಕ ಪೊಲೀಸ್ ಠಾಣೆಯ ಒಳಗೆ ಪೊಲೀಸ್ ಅಧಿಕಾರಿಯ ಬಳಿ ಕೂತು ಜಾನಪದ ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದು. ಪೊಲೀಸರಿಗೆ ಈ ಪುಟ್ಟ ಬಾಲಕ ಒಳ್ಳೆಯ ಹಾಡಿನಿಂದ ಮನರಂಜನೆಯನ್ನು ನೀಡಿದ್ದಾರೆ. ಈ ವಿಡಿಯೋವು ಪೊಲೀಸ್ ಅಧಿಕಾರಿಯೊಬ್ಬರು ಸಣ್ಣ ಹುಡುಗನನ್ನು ಹಾಡಲು ಒತ್ತಾಯಿಸುವುದರೊಂದಿಗೆ ಪ್ರಾರಂಭವಾಗುತ್ತದೆ.


ಹುಡುಗನ ಹಾಡು ಕೇಳಿ ಎಂಜಾಯ್ ಮಾಡಿದ ಪೊಲೀಸರು
ಪುಟ್ಟ ಹುಡುಗ ತನ್ನ ಹಾಡಿನ ಸಾಹಿತ್ಯವನ್ನು ಚಪ್ಪಾಳೆಗಳ ಶಬ್ದಕ್ಕೆ ಲಯಬದ್ಧವಾಗಿ ಸಿಂಕ್ ಮಾಡುವುದರಿಂದ ಡ್ರಮ್ ಗಳನ್ನು ಬಾರಿಸಲು ಕುರ್ಚಿಯನ್ನು ಸಹ ಪೊಲೀಸರು ನೀಡುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು. ಹಿನ್ನೆಲೆಯಲ್ಲಿರುವ ಇನ್ನೊಬ್ಬ ಪೊಲೀಸ್ ಅಧಿಕಾರಿ ಪುಟ್ಟ ಹುಡುಗನು ಹಾಡು ಹಾಡುತ್ತಿರುವ ದೃಶ್ಯವನ್ನು ತನ್ನ ಮೊಬೈಲ್ ಸಾಧನದಲ್ಲಿ ಚಿತ್ರೀಕರಿಸುವುದನ್ನು ಸಹ ಇಲ್ಲಿ ಕಾಣಬಹುದು. ಆ ಪುಟ್ಟ ಬಾಲಕ ಸುಮಧುರ ರಾಗದಲ್ಲಿ ಹಾಡಿದ ಹಾಡನ್ನು ಕೇಳಿ ಪೊಲೀಸರಂತೂ ತುಂಬಾನೇ ಆನಂದಿಸಿದ್ದಾರೆ. ಆ ಹುಡುಗ ಸಹ ನಿರ್ಭೀತಿಯಿಂದ ಹಾಡುವುದನ್ನು ನೋಡುತ್ತಿದ್ದಂತೆ ಹತ್ತಿರದ ಎಲ್ಲಾ ಪೊಲೀಸರು ಸಹ ಸಂಪೂರ್ಣವಾಗಿ ಮನರಂಜನೆ ಪಡೆದಿರುವುದಂತೂ ಸುಳ್ಳಲ್ಲ.


ಇದನ್ನೂ ಓದಿ: Bengaluru: ವೀಕೆಂಡ್​ನಲ್ಲಿ ರ್‍ಯಾಪಿಡೋ ಓಡಿಸುವ ಎಂಜಿನಿಯರ್! ಹೀಗೇಕೆ ಮಾಡ್ತಾರೆ ಗೊತ್ತಾ?


ಹಾಡಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಪೋಸ್ಟ್ ನ ಶೀರ್ಷಿಕೆಯು ಆಸಕ್ತಿದಾಯಕ ಟ್ವಿಸ್ಟ್ ನೊಂದಿಗೆ ಬಂದಿದೆ. ಕೇರಳ ಪೊಲೀಸ್ ಇಲಾಖೆಯು ಮಲಯಾಳಂ ಚಲನಚಿತ್ರ ‘ಪ್ರಜಾ’ ದ ಅಪ್ರತಿಮ ಸಂಭಾಷಣೆಗಳಲ್ಲಿ ಒಂದನ್ನು ತಿರುಚಿ ರಾಜ್ಯದಾದ್ಯಂತ ತಮ್ಮ ಫಾಲೋವರ್ಸ್ ಮತ್ತು ನಾಗರಿಕರಲ್ಲಿ ಸಕಾರಾತ್ಮಕತೆಯ ಸಂದೇಶವನ್ನು ರವಾನಿಸಿದೆ. ಮಲಯಾಳಂ ಭಾಷೆಯಲ್ಲಿ ಶೀರ್ಷಿಕೆಯಲ್ಲಿ "ಝಾಕೀರ್ ಭಾಯ್ ಪೊಲೀಸ್ ಠಾಣೆಯನ್ನು ಪ್ರವೇಶಿಸಿ ಒಂದು ಹಾಡನ್ನು ಹಾಡಬಹುದೇ? ಪಾಲಕ್ಕಾಡ್ ನಟ್ಟುಕಲ್ ಪೊಲೀಸ್ ಠಾಣೆಯಲ್ಲಿ ಇದನ್ನು ಮಾಡಿದ್ದಾರೆ" ಎಂದು ಬರೆದಿದ್ದಾರೆ.


ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?
ಈ ಸಕಾರಾತ್ಮಕ ವೀಡಿಯೋವು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಪ್ರತಿಕ್ರಿಯೆಯನ್ನು ಗಳಿಸಿದೆ. ಹಲವಾರು ಬಳಕೆದಾರರು ಕೇರಳ ಪೊಲೀಸ್ ಇಲಾಖೆಯನ್ನು ಶ್ಲಾಘಿಸಿದರೆ, ಅನೇಕರು ಇದನ್ನು 'ಸುಂದರ' ಕ್ಷಣ ಎಂದು ಶ್ಲಾಘಿಸಿದ್ದಾರೆ.


 ಇದನ್ನೂ ಓದಿ:  Traffic Challan: ಬೈಕ್​ನಲ್ಲಿ ಪೆಟ್ರೋಲ್ ಇಲ್ಲದಿದ್ರೂ ಪೊಲೀಸರು ದಂಡ ಹಾಕಬಹುದೇ?


‘ಆಕ್ಷನ್ ಹೀರೋ ಬಿಜು’ ಎಂಬ ಶೀರ್ಷಿಕೆಯ ಚಿತ್ರದ ದೃಶ್ಯದೊಂದಿಗೆ ಈ ವೈರಲ್ ವಿಡಿಯೋದ ಹೋಲಿಕೆಯನ್ನು ಬಹು ಬೇಗನೆ ನೆಟ್ಟಿಗರು ಗುರುತಿಸಿದ್ದಾರೆ. ಈ ಚಿತ್ರದಲ್ಲಿ ಸಬ್-ಇನ್ಸ್ಪೆಕ್ಟರ್ ಬಿಜು ಪೌಲೋಸ್ ಪಾತ್ರವು ಪೊಲೀಸ್ ಠಾಣೆಯೊಳಗೆ ಒಬ್ಬ ವ್ಯಕ್ತಿಗೆ ಹಾಡು ಹೇಳು ಅಂತ ಹೇಳುವ ದೃಶ್ಯಕ್ಕೆ ಹೋಲುತ್ತದೆ. ಚಿತ್ರದಲ್ಲಿನ ಪಾತ್ರವನ್ನು ಸೂಪರ್ ಸ್ಟಾರ್ ನಿವಿನ್ ಪೌಲಿ ನಿರ್ವಹಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ಫೋಟೋ ಶೇರಿಂಗ್ ಅಪ್ಲಿಕೇಶನ್ ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

Published by:Ashwini Prabhu
First published: