• Home
  • »
  • News
  • »
  • trend
  • »
  • Viral Story: ಮನವಿ ಮಾಡಿದ್ರೂ ರಜೆ ನೀಡದ ಅಧಿಕಾರಿಗಳು, ಮಗನ ಶವವನ್ನು ಎಸ್‌ಪಿ ಕಚೇರಿಗೆ ಹೊತ್ತೊಯ್ದ ಪೊಲೀಸ್​ ಪೇದೆ!

Viral Story: ಮನವಿ ಮಾಡಿದ್ರೂ ರಜೆ ನೀಡದ ಅಧಿಕಾರಿಗಳು, ಮಗನ ಶವವನ್ನು ಎಸ್‌ಪಿ ಕಚೇರಿಗೆ ಹೊತ್ತೊಯ್ದ ಪೊಲೀಸ್​ ಪೇದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉತ್ತರ ಪ್ರದೇಶದ ಈತ್ವಾ ಜಿಲ್ಲೆಯ ಪೊಲೀಸ್ ಪೇದೆಗೆ ಮೇಲಾಧಿಕಾರಿಯಿಂದ ರಜೆ ಅನುಮತಿ ಸಿಗದ ಕಾರಣ ತನ್ನ ಮಗನ ಶವವನ್ನೇ ಅವರ ಬಳಿಗೆ ಕೊಂಡೊಯ್ದು ರಜೆಯನ್ನು ಬೇಡಿದ್ದಾರೆ. ಆಮೇಲೇನಾಯ್ತು ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ

  • Share this:

    ಪೊಲೀಸ್​ ಅಧಿಕಾರಿಗಳಾಗಿರಬಹುದು (Police Officer), ಕಾನ್​​ಸ್ಟೇಬಲ್​ಗಳು ಆಗಿರಬಹುದು ರಾತ್ರಿ  ಹಗಲೆನ್ನದೆ ದುಡಿಯುತ್ತಾರೆ. ಆದರೆ ಇವರಿಗೆ ರಜೆ ಎಂಬುದು ಬಹಳ ಕಡಿಮೆ. ಎಷ್ಟೋ ಆಫೀಸ್​ಗಳಲ್ಲಿಯೂ ಸಹ ಅವರಿಗೆ ಬೇಕಾದ ಹಾಗೆ ದುಡಿಸಿಕೊಳ್ಳುತ್ತಾರೆ. ಆದರೆ ಉದ್ಯೋಗಿಗಳಿಗೆ ಬೇಕಾದ ಸಂದರ್ಭದಲ್ಲಿ ರಜೆಯೇ ಸಿಗುವುದಿಲ್ಲ. ರಜೆ ಸಿಗದೆ ಕೆಲಸ ಬಿಟ್ಟಂತಹ ಉದಾಹರಣೆಗಳು ಇತ್ತೀಚಿನ ದಿಗಳಲ್ಲಿ ಬಹಳಷ್ಟು ಕಾಣ ಸಿಗುತ್ತದೆ. ಕೆಲವು ಉದ್ಯೋಗಿಗಳು (Employee) ತಮಗೆ ಬೇಕಾದಾಗ ರಜೆ ಸಿಗದಿದ್ದರೆ ಬಹಳಷ್ಟು ಉಪಾಯಗಳನ್ನು ಮಾಡುತ್ತಾರೆ. ಆದರೆ ಅವುಗಳೆಲ್ಲಾ ವಿಫಲವಾದಾಗ ಮನನೊಂದು ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ಆದರೆ ಇಲ್ಲೊಂದು ಮನಕಲಕುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಪೊಲೀಸ್ ಪೇದೆಯೊಬ್ಬರು ತನಗೆ ರಜೆ ನೀಡಲಿಲ್ಲ ಎಂಬ ಕಾರಣಕ್ಕೆ ತನ್ನ ಮಗನ ಶವವನ್ನೇ ಹಿಡಿದುಕೊಂಡು ಮೇಲಾಧಿಕಾರಿಗಳ ಬಳಿಗೆ ತೆರಳಿದ್ದಾರೆ.


    ಉತ್ತರ ಪ್ರದೇಶದ ಈತ್ವಾ ಜಿಲ್ಲೆಯ ಪೊಲೀಸ್ ಪೇದೆಗೆ ಮೇಲಾಧಿಕಾರಿಯಿಂದ ರಜೆ ಅನುಮತಿ ಸಿಗದ ಕಾರಣ ತನ್ನ ಮಗನ ಶವವನ್ನೇ ಅವರ ಬಳಿಗೆ ಕೊಂಡೊಯ್ದು ರಜೆಯನ್ನು ಬೇಡಿದ್ದಾರೆ. ಆಮೇಲೇನಾಯ್ತು ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.


    ರಜೆಕೋರಿ ಇಟವಾ ನಗರದ ಎಸ್​​ಪಿ ಕಪಿಲ್​ ದೇವ್ ಅವರಿಗೆ ಪತ್ರ


    ಹೌದು, ಕಳೆದ ವಾರ ಅಂದರೆ ಜನವರಿ 7 ರಂದು ಉತ್ತರ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಸೋನು ಚೌಧರಿ ಅವರು,  ಇಟವಾ ನಗರ ಎಸ್ ಪಿ ಕಪಿಲ್ ದೇವ್ ಅವರ ಕಚೇರಿಗೆ ತನ್ನ ರಜೆ ಕೋರಿ ಅರ್ಜಿ ಸಲ್ಲಿಸಿದ್ದರು, ಆದರೆ ಆ ಪತ್ರವನ್ನು ಮೇಲಅಧಿಕಾರಿ ಅವರು ನಿರಾಕರಿಸಿ ಸೋನು ಚೌಧರಿ ಅವರನ್ನು ಕ್ವಿಕ್​ ರೆಸ್ಪಾನ್ಸ್​ ಟೀಮ್​ಗೆ ಫೋಸ್ಟ್​ ಮಾಡಲಾಯಿತು.


    ಇದನ್ನೂ ಓದಿ: ಹೆಂಡತಿ ಜೊತೆ ಟೈಂ ಕಳೆಯೋಕೆ ರಜೆ ಕೇಳಿದ ಕಾನ್ಸ್‌ಟೇಬಲ್! 5 ದಿನ ಲೀವ್ ಸ್ಯಾಂಕ್ಷನ್ ಮಾಡಿದ ಇಲಾಖೆ


    ರಜೆ ಕೋರಿದ ಉದ್ದೇಶ


    ಸೋನು ಎಂದಿನಂತೆ ತನ್ನ ಕರ್ತವ್ಯಕ್ಕೆ ಹೊಡುತ್ತಿದ್ದರು, ಅವರ ಇಬ್ಬರು ಮಕ್ಕಳಾದಂತಹ ಶಿವೇಂದ್ರ ತ್ತು ಗೋಲು, ಆಟವಾಡಲೆಂದು ತನ್ನ ಮನೆಯ ಪಕ್ಕದ ಫ್ಲ್ಯಾಟ್​​​ಗೆ ತೆರಳಿದ್ದರು.


    ಅದೇ ರೀತಿ ಸೋನು ಚೌಧರಿಯ ಪತ್ನಿ ಕವಿತಾ ಕಿಬ್ಬೊಟ್ಟೆಯ ಆಪರೇಷನ್​ನಿಂದ ಹಾಸಿಗೆ ಹಿಡಿದಿದ್ದರು. ಸೋನು ಹೊರಡುತ್ತಿರಬೇಕಾದರೆ ಶಿವೇಂದ್ರ ಸ್ವಲ್ಪ ಸಮಯದ ನಂತರ ಮನೆಗೆ ವಾಪಾಸಾಗ್ತಾನೆ. ಆದರೆ ಅವನ ಜೊತೆ ಹೋದ ಗೋಲು ಬರಲ್ಲ. ಈ ಸಂದರ್ಭದಲ್ಲಿ ಸೋನು ಚೌಧರಿ ಗೂಲುವನ್ನು ಹುಡುಕಲು ತೆರಳುತ್ತಾರೆ. ಆ ಸಂದರ್ಭದಲ್ಲಿ ಗೋಲು ಪಕ್ಕದ ಫ್ಲ್ಯಾಟ್​​ನಲ್ಲಿ ಚರಂಡಿ ನೀರಿನಲ್ಲಿ ತುಂಬಿದ ಗುಂಡಿಯಲ್ಲಿ ಶವವಾಗಿ ತೇಲುತ್ತಿರುತ್ತಾನೆ. ಇದನ್ನು ಕಂಡಂತಹ ಸೋನು ತಕ್ಷಣ ಮೇಲಕ್ಕೆತ್ತು ಆಸ್ಪತ್ರೆಗೆ ಸಾಗಿಸುತ್ತಾರೆ.




    ಆದರೆ ಗೋಲು ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಆಘಾತಕಾರಿ ಸುದ್ದಿಯನ್ನು ಹೇಳುತ್ತಾರೆ.  ಹಾಸಿಗೆ ಹಿಡಿದ ಪತ್ನಿಯೊಂದಿಗೆ ತನ್ನ ಇಬ್ಬರು ಪುತ್ರರನ್ನು ನೋಡಿಕೊಳ್ಳುವ ಉದ್ದೇಶದಿಂದ ರಜೆಕೋರಿದ್ದರು ಸಹ ಇವರ ಪತ್ರವನ್ನು ನೋಡಿ ಹಿರಿಯ ಅಧಿಕಾರಿಗಳು ರಜೆ ನೀಡಲಿಲ್ಲ ಎಂದು ಸೋನು ಆಕ್ರೋಶಗೊಂಡು ತನ್ನ ಎರಡೂವರೆ ವರ್ಷದ ಮಗನ ದೇಹವನ್ನು ಹಿಡಿದುಕೊಂಡು ಎಸ್‌ಎಸ್‌ಪಿ ಕಚೇರಿಗೆ ಕೊಂಡೊಯ್ದರು.


    ಪೊಲೀಸ್​ ಪೇದೆ ಸೋನು ಚೌಧರಿಯಿಂದ ಆರೋಪ


    ಈ ಬಗ್ಗೆ ಸೋನು ಚೌಧರಿ ಇದೀಗ ತನ್ನ ಪತ್ರವನ್ನು ಲೆಕ್ಕಿಸದ ಕಾರಣಕ್ಕಾಗಿ, ಅನಾರೋಗ್ಯದ ಸಮಸ್ಯೆಯಿಂದಿರುವ ಪತ್ನಿ ಮತ್ತು ಎರಡು ಮಕ್ಕಳನ್ನು ನೋಡಿಕೊಳ್ಳಲು ತನಗೆ  ರಜೆ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ,


    ಮೇಲಾಧಿಕಾರಿಯಿಂದ ಸಾಂತ್ವನ


    ಕಛೇರಿಗೆ ಹೋದಂತಹ ಸೋನು ಚೌಧರಿಗೆ ಅಲ್ಲಿದ್ದ ಪೊಲೀಸ್​ ಸಿಬ್ಬಂದಿಗಳು, ಅಧಿಕಾರಿಗಳು ಸಾಂತ್ವನವನ್ನು ಹೇಳಿ, ಅವರನ್ನು ಏಕತಾ ಕಾಲೋನಿಯಲ್ಲಿರುವ ಅವರ ಮನೆಗೆ ಮರಳುವಂತೆ ಅವರನ್ನು ಸಮಾಧಾನ ಮಾಡಿದರು.


    ಸೋನು ಮತ್ತು ಅವರ ಕುಟುಂಬ ಏಕತಾ ಕಾಲೋನಿಯಲ್ಲಿರುವ 2 ರೂಮ್​​ನ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ನಂತರ ಸೋನು ಅವರನ್ನು ಮನೆಗೆ ಕರೆದೊಯ್ದ ಅಧಿಕಾರಿಗಳು ಮತ್ತು ಕುಟುಂಬದವರು ಗೋಲುವಿನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.


    ಜೊತೆಗೆ ಈ ಸಂದರ್ಭದಲ್ಲಿ ಇದರ ಬಗಗಿನ ಆರೋಪನ್ನು ತನಿಖೆಗೆ ಆದೇಶ ನೀಡಲಾಗಿದೆ ಎಂದು ಎಸ್​ಎಸ್​ಪಿ ಇಟಾವಾಹ್​ ಜೈ ಪ್ರಕಾಶ್​ ಸಿಂಗ್ ಅವರು ಹೇಳಿದ್ದಾರೆ.

    Published by:Prajwal B
    First published: