ನಾವು ಈ ಬಸ್ ನಲ್ಲಿ (Bus) ಅಥವಾ ರೈಲಿನಲ್ಲಿ (Train) ಪ್ರಯಾಣಿಸುವಾಗ ಅಲ್ಲಲ್ಲಿ ಬಸ್ ಅಥವಾ ರೈಲನ್ನು ಸ್ವಲ್ಪ ಹೊತ್ತು ನಿಲ್ಲಿಸಿದ್ದಾಗ, ಪ್ರಯಾಣಿಕರು ಟೀ-ಕಾಫಿ ಕುಡಿಯಲು, ತಿಂಡಿ ತಿನ್ನಲು ಮತ್ತು ವಾಶ್ ರೂಂ ಗೆ ಹೋಗಲು ಕೆಳಕ್ಕೆ ಇಳಿಯುತ್ತಾರೆ. ಹೀಗೆ ಕೆಳಕ್ಕೆ ಇಳಿದ ಪ್ರಯಾಣಿಕರು ಮರಳಿ ಹತ್ತುವ ಮುಂಚೆಯೇ ಒಮ್ಮೊಮ್ಮೆ ಈ ಬಸ್ ಮತ್ತು ರೈಲು ನಿಲ್ದಾಣವನ್ನು ಬಿಟ್ಟು ಹೋಗಿರುತ್ತವೆ. ಇಂತಹ ಅನೇಕ ಘಟನೆಗಳನ್ನು ನಾವು ಈಗಾಗಲೇ ತುಂಬಾನೇ ನೋಡಿರುತ್ತೇವೆ ಅಂತ ಹೇಳಬಹುದು. ಎಷ್ಟೋ ಬಾರಿ ಯಾವುದೋ ಒಂದು ಕಾರಣಕ್ಕೆ ಪ್ರಯಾಣಿಕರು ಈ ಬಸ್ ಮತ್ತು ರೈಲಿನಿಂದ ಇಳಿದು ಇವುಗಳನ್ನು ಮಿಸ್ ಮಾಡಿಕೊಂಡಿರುವ ಸಂದರ್ಭಗಳು ಇರುತ್ತವೆ ಅಂತ ಹೇಳಬಹುದು. ಹಾಗೆಯೇ ಈ ವಿಮಾನಗಳಲ್ಲಿ (Airplane) ಪ್ರಯಾಣಿಸುವ ಪ್ರಯಾಣಿಕರಿಗೂ ಸಹ ವಿಮಾನ ಹೊರಡುವ ಮುಂಚೆ ಪ್ರಯಾಣಿಕರಿಗೆ ಅಂತ ಅನೇಕ ಸೂಚನೆಗಳನ್ನು ನೀಡುತ್ತಲೇ ಇರುತ್ತಾರೆ.
ಸೂಚನೆಗಳು ಅಂತ ಹೇಳಿದರೆ ಈ ಸಂಖ್ಯೆಯ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಚೆಕ್ ಇನ್ ಮಾಡಿಕೊಳ್ಳಬೇಕು, ತಮ್ಮ ಲಗೇಜ್ ಗಳನ್ನು ನೀಡಬೇಕು ಮತ್ತು ಸೆಕ್ಯೂರಿಟಿ ತಪಾಸಣೆಗೆ ಹೋಗಬೇಕು ಅಂತೆಲ್ಲಾ ಸೂಚನೆಗಳನ್ನು ನೀಡುತ್ತಲೇ ಇರುತ್ತಾರೆ. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಸಹ ಇಲ್ಲೊಂದು ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ ನೋಡಿ.
ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಟೇಕ್ ಆಫ್ ಆದ ಫ್ಲೈಟ್..
ಹೌದು.. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆಯಂತೆ ಅಂತ ಹೇಳಲಾಗುತ್ತಿದೆ. ತಮ್ಮ ಪ್ರಯಾಣಿಕರನ್ನು ಹಾಗೆಯೇ ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಟೇಕ್ ಆಫ್ ಆಗಿದೆಯಂತೆ ಗೋ ಫರ್ಸ್ಟ್ ವಿಮಾನ. ಈ ವಿಮಾನ ಟೇಕ್ ಆಫ್ ಆದ ನಂತರ 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋಗಲಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಟ್ರಿಪ್ ಹೋದ ಹುಡುಗಿ ಮೇಲೆ ಮಂಗಗಳ ಅಟ್ಯಾಕ್; ಗರ್ಲ್ ಶಾಕ್, ಮಂಕಿ ರಾಕ್!
ಟಾರ್ಮ್ಯಾಕ್ ನಲ್ಲಿ ಪ್ರಯಾಣಿಕರನ್ನು ಬಿಟ್ಟು ಹೋಗಿದ್ದಕ್ಕಾಗಿ ಹಲವಾರು ಪ್ರಯಾಣಿಕರು ಈ ವಿಮಾನದ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಜಿ8116 ಸಂಖ್ಯೆಯ ವಿಮಾನ ಸೋಮವಾರ ಬೆಳಗ್ಗೆ 6.30ಕ್ಕೆ ಹೊರಟಿತ್ತು. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರ ಪ್ರಕಾರ, 54 ಪ್ರಯಾಣಿಕರು ಇಲ್ಲದೆಯೇ ಈ ವಿಮಾನವು ಟೇಕ್ ಆಫ್ ಆಗಿದೆ ಎಂದು ಆರೋಪಿಸಲಾಗಿದೆ.
ವಿಮಾನ ಹತ್ತದೆ ಟಾರ್ಮ್ಯಾಕ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಪ್ರಯಾಣಿಕರು
ತಮ್ಮ ಬೋರ್ಡಿಂಗ್ ಪಾಸ್ ಗಳನ್ನು ಹೊಂದಿದ್ದ ಮತ್ತು ಅವರ ಸಾಮಾನು ಸರಂಜಾಮುಗಳನ್ನು ಪರಿಶೀಲಿಸಲಾಗಿದ್ದ ಪ್ರಯಾಣಿಕರು ಟಾರ್ಮ್ಯಾಕ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
@DGCAIndia @Officejmscindia @AmitShahOffice @official_Arnab_ Go first G8 116 flight Blore-delhi, 54 passengers were left in the bus post final on-board, the flight took off with luggages and left 54 passengers at the airport, serious security branch. passenger's are struggling. pic.twitter.com/MhwG7vI7UZ
— Neeraj Bhat (@neerajbhat001) January 9, 2023
ವಿಮಾನವು ಲಗೇಜ್ ನೊಂದಿಗೆ ಹೊರಟಿತು ಮತ್ತು 54 ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟಿತು. ಇದರಿಂದಾಗಿ ವಿಮಾನ ಮಿಸ್ ಮಾಡಿಕೊಂಡು ಪ್ರಯಾಣಿಕರು ಪರದಾಡುವಂತಾಗಿದೆ” ಎಂದು ಬರೆದಿದ್ದಾರೆ.
ಈ ಘಟನೆಯ ಬಗ್ಗೆ ಕ್ಷಮೆಯಾಚಿಸಿದ ವಿಮಾನಯಾನ ಸಂಸ್ಥೆ
"ಜಿ8116 ಬೆಂಗಳೂರು ವಿಮಾನ ನಿಲ್ದಾಣದ ಗೇಟ್ ಸಂಖ್ಯೆ 25 ರಿಂದ ಬೋರ್ಡಿಂಗ್ ಪಾಸ್ ಗಳನ್ನು ಸ್ಕ್ಯಾನ್ ಮಾಡಿದ ನಂತರ ರನ್ವೇಯಲ್ಲಿ 60 ಪ್ರಯಾಣಿಕರನ್ನು ಬಿಟ್ಟು ದೆಹಲಿಗೆ ಹೊರಟಿದೆ" ಎಂದು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.
ಈ ಟ್ವೀಟ್ ಗಳಿಗೆ ವಿಮಾನಯಾನ ಸಂಸ್ಥೆ ಕೂಡಲೇ ಪ್ರತಿಕ್ರಿಯಿಸಿದ್ದು "ಪ್ರಯಾಣಿಕರಿಗೆ ಆದ ಈ ಅನಾನುಕೂಲತೆಯ ಬಗ್ಗೆ ಕ್ಷಮೆಯಾಚಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ