• Home
  • »
  • News
  • »
  • trend
  • »
  • Viral Video: ಫ್ಲೈಟ್ ಟೇಕ್ ಆಫ್ ಆಗುವ ಮುನ್ನ ತಂದೆಯ ಆಶೀರ್ವಾದ ಪಡೆದ ಪೈಲಟ್ ಮಗಳು! ವಿಡಿಯೋ ಫುಲ್ ವೈರಲ್

Viral Video: ಫ್ಲೈಟ್ ಟೇಕ್ ಆಫ್ ಆಗುವ ಮುನ್ನ ತಂದೆಯ ಆಶೀರ್ವಾದ ಪಡೆದ ಪೈಲಟ್ ಮಗಳು! ವಿಡಿಯೋ ಫುಲ್ ವೈರಲ್

ವೈರಲ್​ ಆದ ಪೈಲಟ್​ ಮತ್ತು ತಂದೆಯ ವಿಡಿಯೋ

ವೈರಲ್​ ಆದ ಪೈಲಟ್​ ಮತ್ತು ತಂದೆಯ ವಿಡಿಯೋ

ಇಲ್ಲೊಂದು ತಂದೆಯ ಆಸೆಯಂತೆ ಪೈಲಟ್ ಆಗಿರುವ ಮಗಳು ತನ್ನ ತಂದೆಯನ್ನು ಅದೇ ವಿಮಾನದಲ್ಲಿ ಕರೆದೊಯ್ದಿದ್ದು, ಈ ವಿಡಿಯೋ ಇದೀಗ ಇನ್‌ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  • Share this:

    ತಮ್ಮ ಮಕ್ಕಳು (Childrens) ದೊಡ್ಡವರಾಗಿ ಬೆಳೆದು ಒಳ್ಳೆಯ ಶಿಕ್ಷಣ ಪಡೆದು ಒಂದು ಒಳ್ಳೆಯ ಕೆಲಸವನ್ನು ಪಡೆಯಬೇಕು ಅನ್ನೋದು ಎಲ್ಲಾ ಪೋಷಕರ ಜೀವನದ ಒಂದು ದೊಡ್ಡ ಕನಸಾಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅನೇಕ ಜನ ಮಕ್ಕಳು ತಮ್ಮ ಪೋಷಕರ ಕನಸಿನಂತೆ (Parents Dream) ಚೆನ್ನಾಗಿ ಓದಿ, ಒಂದು ಒಳ್ಳೆಯ ಕೆಲಸ ಪಡೆದು ಪೋಷಕರಿಗೆ ಗೌರವ ತರುವ ರೀತಿಯಲ್ಲಿ ಬದುಕುತ್ತಾರೆ. ನಾವು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತಂದೆ ತಾಯಂದಿರಿಗೆ ತಮ್ಮ ಮಕ್ಕಳ ಬಗ್ಗೆ ಹೆಮ್ಮೆ ಅಂತ ಅನ್ನಿಸುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ ಅಂತ ಹೇಳಬಹುದು. ಇಲ್ಲಿಯೂ ಸಹ ಮತ್ತೊಂದು ಅಂತಹದೇ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ.


    ಪೋಷಕರು ತಮ್ಮ ಮಕ್ಕಳು ಅವರವರ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಮತ್ತು ಅವರ ಎಲ್ಲಾ ಕನಸುಗಳನ್ನು ಈಡೇರಿಸಬೇಕೆಂದು ಬಯಸುತ್ತಾರೆ. ತಮ್ಮ ಮಕ್ಕಳ ಜೀವನವನ್ನು ಉತ್ತಮಗೊಳಿಸಲು ಮತ್ತು ಅವರ ಗುರಿಗಳನ್ನು ಸಾಧಿಸಲು ಸಹಾಯ ಮಾಡಲು, ಪೋಷಕರು ತಮ್ಮ ಜೀವನದಲ್ಲಿ ಏನೆಲ್ಲಾ ತ್ಯಾಗಗಳನ್ನು ಮಾಡಲು ಹಿಂಜರಿದಿರುವುದಿಲ್ಲ.


    ಅವರ ತ್ಯಾಗಕ್ಕೆ ಪ್ರತಿಯಾಗಿ ಮಕ್ಕಳು ತಮ್ಮ ಹೆತ್ತವರ ಮುಂದೆ ಏನಾದರೂ ಸಾಧಿಸಿ ತೋರಿಸಿದಾಗ ಅವರಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ ಅಂತ ಹೇಳಬಹುದು.


    ಸಿಕ್ಕಾಪಟ್ಟೆ ವೈರಲ್ ಆಗಿರುವ ತಂದೆ-ಮಗಳ ವಿಡಿಯೋದಲ್ಲಿ ಏನಿದೆ?


    ಇಲ್ಲಿಯೂ ಸಹ ಅಂತಹದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿ ಹರಿದಾಡುತ್ತಿದೆ. ಇದರಲ್ಲಿ ತಂದೆ-ಮಗಳ ಜೋಡಿಯ ಹೃದಯಸ್ಪರ್ಶಿ ಕ್ಷಣ ನಿಮ್ಮ ಕಣ್ಣುಗಳನ್ನು ಒದ್ದೆ ಮಾಡದೆ ಬಿಡದು ಅಂತ ಹೇಳಬಹುದು. ಈ ಕ್ಲಿಪ್ ಈಗ ಆನ್ಲೈನ್ ನಲ್ಲಿ ಅನೇಕರ ಹೃದಯಗಳನ್ನು ಗೆಲ್ಲುತ್ತಿದೆ.




    ಈಗ ತಾನೇ ಹೊಸದಾಗಿ ಪೈಲಟ್ ಆಗಿರುವ ಮಗಳು ತನ್ನ ತಂದೆಯನ್ನು ಅದೇ ವಿಮಾನದಲ್ಲಿ ಕರೆದೊಯ್ದಿದ್ದು, ಈ ಕ್ಷಣದ ವಿಡಿಯೋ ಈಗ ಇನ್‌ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೈಲಟ್ ಆದ ಮಗಳ ಮುಖದಲ್ಲಿ ಆ ಸಂತೋಷ ಮತ್ತು ತಾನು ಹಾರಿಸುತ್ತಿರುವ ವಿಮಾನದಲ್ಲಿ ತನ್ನ ತಂದೆಯನ್ನು ಕೂರಿಸಿಕೊಂಡು ಹೋಗುತ್ತಿರುವುದು ಈ ವಿಡಿಯೋ ಸೂಕ್ತವಾಗಿ ಸೆರೆಹಿಡಿದಿದೆ ಅಂತ ಹೇಳಬಹುದು.


    ತನ್ನ ವಿಮಾನದಲ್ಲಿ ತಂದೆಯನ್ನ ಕೂರಿಸಿಕೊಂಡು ಹೋದ ಪೈಲಟ್ ಮಗಳು


    ಏರ್‌ಬಸ್ 320 ವಿಮಾನದ ಕ್ಯಾಪ್ಟನ್ ಕ್ರುತಾದ್ನ್ಯ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. "ಪೈಲಟ್ ಮಗಳು ತನ್ನ ತಂದೆಯನ್ನು ವಿಮಾನದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಳೆ.. ಅವರ ಸಂತೋಷದ ಕಣ್ಣೀರು. ನಾವು ಹೊರಡುವ ಮೊದಲು ನಾನು ಎಂದಿಗೂ ನನ್ನ ಹೆತ್ತವರ ಆಶೀರ್ವಾದವಿಲ್ಲದೆ ನನ್ನ ಮನೆಯಿಂದ ಸಹ ಹೊರಗೆ ಹೋಗುವುದಿಲ್ಲ.


    ವೈರಲ್​ ಆದ ಪೈಲಟ್​ ಮತ್ತು ತಂದೆಯ ವಿಡಿಯೋ


    ಕೆಲವೊಮ್ಮೆ ನಾನು ಮುಂಜಾನೆ ಕೆಲಸಕ್ಕೆ ಹೋಗುತ್ತೇನೆ, ನನ್ನ ಪೋಷಕರು ಗಾಢ ನಿದ್ರೆಯಲ್ಲಿದ್ದಾಗ ಮುಂಜಾನೆ 3-4 ಗಂಟೆಗೆ ಮನೆಯಿಂದ ಹೊರಡುತ್ತೇನೆ, ಆದರೂ ಅವರ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡದೆ ಮನೆಯಿಂದ ಹೊರಡುವುದು ಅಪೂರ್ಣವಾಗಿರುತ್ತದೆ. "ಅಪ್ಪನ ಖುಷಿಯ ಕಣ್ಣೀರು" ಎಂದು ವಿಡಿಯೋದ ಸ್ಕ್ರೀನ್ ಮೇಲೆ ಬರೆಯಲಾಗಿದೆ.


    ಆ ವಿಮಾನ ಟೇಕ್ ಆಫ್ ಆಗುವ ಮೊದಲು ಪೈಲಟ್ ಮಗಳು ತನ್ನ ತಂದೆಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯಲು ನಮಸ್ಕರಿಸುವುದನ್ನು ತೋರಿಸುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ. ನಂತರ ಅವಳು ತನ್ನ ತಂದೆಯನ್ನು ಬಿಗಿಯಾಗಿ ಒಮ್ಮೆ ತಬ್ಬಿಕೊಳ್ಳುತ್ತಾಳೆ, ಆಗ ಅವರ ಕಣ್ಣು ತುಂಬಿ ಬರುವುದನ್ನು ನಾವು ಇಲ್ಲಿ ನೋಡುತ್ತೇವೆ.


    ವಿಡಿಯೋ ನೋಡಿ ಭಾವುಕರಾದ್ರು ನೆಟ್ಟಿಗರು


    ಈ ವಿಡಿಯೋ ಪೋಸ್ಟ್ ಮಾಡಿದಾಗಿನಿಂದ, ಈ ಟ್ವೀಟ್ 5.6 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ಹಲವಾರು ಕಾಮೆಂಟ್ ಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ತಂದೆ-ಮಗಳ ಬಂಧವನ್ನು ತುಂಬಾನೇ ಇಷ್ಟಪಟ್ಟರು ಮತ್ತು ಪೈಲಟ್ ಮೇಲೆ ಪ್ರೀತಿಯ ಸುರಿಮಳೆಯನ್ನೇ ಹರಿಸಿದರು. ಅನೇಕರು ಈ ವಿಡಿಯೋ ನೋಡಿ ಭಾವುಕರಾದರು ಮತ್ತು ಕಾಮೆಂಟ್ ವಿಭಾಗದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡರು.


    ಇದನ್ನೂ ಓದಿ: ಎರಡು ರೂಪಾಯಿಗೆ 2 ಮಸಾಲೆ ದೋಸೆ, 2 ಟೀ: ಐವತ್ತು ವರ್ಷ ಹಿಂದಿನ ಬಿಲ್ ಫುಲ್ ವೈರಲ್


    "ತನ್ನ ತಂದೆಗೆ ಗೌರವ ನೀಡಿದ ರೀತಿಯನ್ನು ನಾನು ಪ್ರೀತಿಸುತ್ತೇನೆ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.


    ಇನ್ನೊಬ್ಬರು ಕಾಮೆಂಟ್ ಮಾಡಿ "ನಿಮ್ಮಂತಹ ಮಹಿಳೆಯರು ನಮ್ಮನ್ನು ಹೆಮ್ಮೆ ಪಡುವಂತೆ ಮಾಡುತ್ತಾರೆ ಮತ್ತು ಪ್ರತಿದಿನ ನಮಗೆ ಸ್ಫೂರ್ತಿ ನೀಡುತ್ತಾರೆ" ಎಂದು ಹೇಳಿದ್ದಾರೆ.

    Published by:Prajwal B
    First published: