• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral Video: 2000 ರೂಪಾಯಿ ನೋಟು ನೀಡಿದ್ದಕ್ಕೆ ಸ್ಕೂಟರ್​ಗೆ ಹಾಕಿದ ಪೆಟ್ರೋಲ್ ಹಿಂಪಡೆದ ಕೆಲಸಗಾರ!

Viral Video: 2000 ರೂಪಾಯಿ ನೋಟು ನೀಡಿದ್ದಕ್ಕೆ ಸ್ಕೂಟರ್​ಗೆ ಹಾಕಿದ ಪೆಟ್ರೋಲ್ ಹಿಂಪಡೆದ ಕೆಲಸಗಾರ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಉತ್ತರಪ್ರದೇಶದ ಜಲೌನ್ ನಲ್ಲಿ. ಒಬ್ಬ ವ್ಯಕ್ತಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡ ಬಳಿಕ 2000 ರೂ. ಹಣವನ್ನು ನೀಡಿದ್ದಾರೆಂದು ಸ್ಕೂಟರ್​ಗೆ ಹಾಕಿದ್ದ ಪೆಟ್ರೋಲ್ ಅನ್ನು ಪೆಟ್ರೋಲ್ ಬಂಕ್ ಕೆಲಸಗಾರ ವಾಪಸ್ ತೆಗೆದುಕೊಂಡಿದ್ದಾನೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂದೆ ಓದಿ ...
 • Trending Desk
 • 3-MIN READ
 • Last Updated :
 • Uttar Pradesh, India
 • Share this:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (RBI) ಮೇ 19ರಂದು ಎರಡು ಸಾವಿರ (2000 Note) ರೂಪಾಯಿ ನೋಟುಗಳ ಹಿಂಪಡೆಯುವಿಕೆಯನ್ನು ಘೋಷಿಸಿದ್ದು, ಸೆಪ್ಟೆಂಬರ್ 30ರೊಳಗೆ ಜನರು ತಮ್ಮ ಬಳಿ ಇರುವ ನೋಟುಗಳನ್ನು ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳಬಹುದು ಎಂದು ಹೇಳಿದೆ. ಅಂದಿನಿಂದ ಎರಡು ಸಾವಿರ ನೋಟುಗಳನ್ನು ಎಲ್ಲೆಡೆ ತೆಗೆದುಕೊಳ್ಳಲು ಮತ್ತು ಪಡೆದುಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಪೆಟ್ರೋಲ್ ಬಂಕ್ ನಲ್ಲಿ (Petrol Bunk) ಎರಡು ಸಾವಿರ ನೋಟು ತೆಗೆದುಕೊಳ್ಳಲು ನಿರಾಕರಿಸಿರುವುದಲ್ಲದೇ ಪೆಟ್ರೋಲ್ ಅನ್ನು ಹಿಂದಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.


ಏನಿದು ಘಟನೆ?


ಈ ಘಟನೆ ನಡೆದದ್ದು ಉತ್ತರಪ್ರದೇಶದ ಜಲೌನ್ ನಲ್ಲಿ. ಒಬ್ಬ ವ್ಯಕ್ತಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡ ಬಳಿಕ 2000 ರೂ. ಹಣವನ್ನು ನೀಡಿದ್ದಾರೆಂದು ಸ್ಕೂಟರ್​ಗೆ ಹಾಕಿದ್ದ ಪೆಟ್ರೋಲ್ ಅನ್ನು ಪೆಟ್ರೋಲ್ ಬಂಕ್ ಕೆಲಸಗಾರ ವಾಪಸ್ ತೆಗೆದುಕೊಂಡಿದ್ದಾನೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ವಿಡಿಯೋದಲ್ಲಿ ಏನಿದೆ?


ಬೈಕ್​ನ ಮಾಲೀಕರು ಬೈಕ್​ನ ಪಕ್ಕದಲ್ಲಿ ನಿಂತಿದ್ದು, ಪೆಟ್ರೋಲ್ ಬಂಕ್​ನ ಕೆಲಸಗಾರ ಸ್ಕೂಟರ್ ಗೆ ಹಾಕಿದ ಪೆಟ್ರೋಲ್ ಅನ್ನು ಒಂದು ಪೈಪ್​​ನ ಸಹಾಯದಿಂದ ತೆಗೆಯುತ್ತಿರುವುದನ್ನು ನೋಡಬಹುದು.


ಇದನ್ನೂ ಓದಿ: ಈ ಪ್ರಾಣಿಯ ಹಾಲಿನಲ್ಲಿ ಬಿಯರ್​ಗಿಂತ ಹೆಚ್ಚು ಆಲ್ಕೋಹಾಲ್ ಇರುತ್ತಂತೆ!


ಕೊತ್ವಾಲ್ ಒರೈ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್​​ಪೆಕ್ಟರ್ ಈ ಘಟನೆ ಬಗ್ಗೆ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರಸ್ತುತ ಒತ್ತಾಯಿಸಲಾಗಿದೆ.


ಶೇರ್ ಮಾಡಿದ್ದು ಯಾರು?


ಈ ವಿಡಿಯೋವನ್ನು ನಿಗರ್ ಪ್ರವೀಣ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಉತ್ತರಪ್ರದೇಶದ ಜಲೌನ್ ನಲ್ಲಿನ ಪೆಟ್ರೋಲ್ ಬಂಕ್ ನಲ್ಲಿ 2000ರೂ. ನೋಟುಗಳನ್ನು ನೀಡಲಾಯಿತು. ಆದರೆ ಪೆಟ್ರೋಲ್ ಬಂಕ್ ನವರು 2000 ನೋಟುಗಳನ್ನು ಪಡೆದುಕೊಳ್ಳಲು ಒಪ್ಪಿಕೊಳ್ಳಲಿಲ್ಲ. ನಂತರ ಸ್ಕೂಟರ್ ಗೆ ಹಾಕಿದ ಪೆಟ್ರೋಲ್ ಅನ್ನು ತೆಗೆದುಕೊಳ್ಳಲಾಯಿತು.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ನಿಗರ್ ಪ್ರವೀಣ್ ಎಂಬುವವರು ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೇ 22ರಂದು ಈ ವಿಡಿಯೋ ಶೇರ್ ಆಗಿದ್ದು, 1000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.


ಬಳಕೆದಾರರು ಏನಂದ್ರು?


ಈ ವಿಡಿಯೋ ನೋಡಿದ ಕೆಲವರು ಪೆಟ್ರೋಲ್ ಬಂಕ್ ನ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಕೆಲವರು ಆ ಸ್ಥಿತಿಯಲ್ಲಿ ಸ್ಕೂಟರ್ ಮಾಲೀಕನ ಮೇಲೆ ಮರುಕಗೊಂಡಿದ್ದಾರೆ.


ಸಾಂಕೇತಿಕ ಚಿತ್ರ


ಪೆಟ್ರೋಲ್ ಬಂಕ್ ಮ್ಯಾನೇಜರ್ ಹೇಳುವುದೇನು?


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 2000 ರೂ. ನೋಟುಗಳ ಮೇಲೆ ನಿಷೇಧ ಹೇರಿದ ದಿನದಿಂದ ಹೆಚ್ಚೆಚ್ಚು 2000 ನೋಟುಗಳನ್ನು ನಮ್ಮ ಪೆಟ್ರೋಲ್ ಬಂಕ್ ಪಡೆದುಕೊಂಡಿದ್ದು, ಇದರಿಂದ ವಹಿವಾಟು ಕಷ್ಟಕರವಾಗಿದೆ.
ಹಾಗಾಗಿ ಗ್ರಾಹಕರು 2000ರೂ. ಗೆ ಪೆಟ್ರೋಲ್ ಹಾಕಿಸಿಕೊಂಡರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಲವರು ಸ್ವಲ್ಪ ಲೀಟರ್ ಪೆಟ್ರೋಲ್ ಹಾಕಿಸಿಕೊಂಡು 2000 ನೋಟುಗಳನ್ನು ನೀಡುತ್ತಾರೆ. ಇದು ನೋಟು ಬದಲಾವಣೆಗೆ ಕಷ್ಟಕರವಾಗುತ್ತದೆ ಎಂದು ಪೆಟ್ರೋಲ್ ಬಂಕ್ ಮ್ಯಾನೇಜರ್ ರಾಜೀವ್ ಗಿರ್ಹೋತ್ರಾ ಹೇಳಿದ್ದಾರೆ.


ಆರ್ ಬಿಐ ಹೇಳಿದ್ದೇನು?


ಆರ್ ಬಿಐ ಪ್ರಕಾರ, ಸೆಪ್ಟೆಂಬರ್ 30ರವರೆಗೆ 2000ರೂ. ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಬಹುದು. ಒಂದೇ ಬಾರಿಗೆ 20,000ರೂ.ಗಳನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ. ಆದಾಗ್ಯೂ ಸೆಪ್ಟೆಂಬರ್ 30ರವರೆಗೂ 2000 ರೂ. ಗಳನ್ನು ಯಾವುದೇ ತೊಂದರೆಯಿಲ್ಲದೇ, ಭಯವಿಲ್ಲದೆ ದಿನನಿತ್ಯದ ವಹಿವಾಟುಗಳಿಗೆ ಬಳಸಬಹುದು. ಆದ್ದರಿಂದ 2000 ರೂ. ನೋಟುಗಳನ್ನು ಸ್ವೀಕರಿಸಲು ನಿರಾಕರಿಸುವುದು ಕಾನೂನುಬಾಹಿರವಾಗಿದೆ ಎಂದಿದೆ.

top videos
  First published: