ಗೂಗಲ್ (Google) ಅಲ್ಲಿ ಸಾಮಾನ್ಯವಾಗಿ ಯಾವುದೇ ಸ್ಥಳಕ್ಕೂ ಹೋಗಬೇಕಾದರು ಗೂಗಲ್ ಮ್ಯಾಪ್ ಅನ್ನು ಅವಲಂಬಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಒಂದು ದಿನ ರಜೆ ಸಿಕ್ಕರೆ ಸಾಕು, ಫ್ಯಾಮಿಲಿಯವರ ಜೊತೆಗೋ, ಸ್ನೇಹಿತರ ಜೊತೆಗೋ ಯಾವುದಾದರೂ ವಿಶೇಷ ಸ್ಥಳಕ್ಕೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಹೆಚ್ಚಿನವರಿಗೆ ಕೆಲವೊಮದು ಸ್ಥಳಗಳ ಮಾಹಿತಿಗಳೇ ಇರುವುದಿಲ್ಲ. ಈ ಸಂದರ್ಭದಲ್ಲಿ ಗೂಗಲ್ ಮೊರೆ ಹೋಗೋದು ಸಾಮಾನ್ಯ. ಕೇವಲ ಗೂಗಲ್ ಮೂಲಕ ಒಂದು ಸ್ಥಳದ ಬಗ್ಗೆ ಸರ್ಚ್ ಮಾಡಿದ್ರೆ ಸಾಕು ಅದ್ರಲ್ಲಿ ನಮಗೆ ಬೇಕಾದ ಎಲ್ಲಾ ವಿಷಯಗಳನ್ನು ತಿಳಿಯಬಹುದು. ಅದೇ ರೀತಿ ಕೆಲವರು ಈಗಾಗಲೇ ಹೋದವರು ತಮ್ಮ ಅನುಭವವಗಳನ್ನು ಅಲ್ಲಿ ರಿವೀವ್ ಪೇಜ್ನಲ್ಲಿ (Review Page) ಹಂಚಿಕೊಂಡಿರುತ್ತಾರೆ. ಇಂತಹದೇ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ವೈರಲ್ ಆಗಿದೆ. ಇಲ್ಲೊಬ್ಬ ಪೊಲೀಸ್ ಸ್ಟೇಶನ್ (Police Station) ಬಗ್ಗೆನೇ ರಿವೀವ್ ಬರೆದಿದ್ದಾನೆ.
ಹೌದು, ಇಲ್ಲೊಬ್ಬ ಗೂಗಲ್ನಲ್ಲಿ ಹಾಕಿದ್ದ ಪೊಲೀಸ್ ಸ್ಟೇಷನ್ ಲೊಕೇಶನ್ನಲ್ಲಿ ರಿವೀವ್ ಮಾಡುವ ಪೇಜ್ನಲ್ಲಿ ತನ್ನ ಅನುಭವವನ್ನು ಹಂಚಿಕೊಂ ಡಿದ್ದಾನೆ. ಇದು ಬಹಳಷ್ಟು ಹಾಸ್ಯಾಸ್ಪದವಾಗಿದ್ದು, ನೋಡುಗರಲ್ಲಿ ಒಮ್ಮೆ ನಗು ತರಿಸುತ್ತೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ತಿರುಮುಲ್ಲೈವಾಯಲ್ ಟಿ10 ಪೊಲೀಸ್ ಸ್ಟೇಷನ್
ಇನ್ನು ಇದು ತಮಿಳುನಾಡಿನ ತಿರುಮುಲ್ಲೈವಾಯಲ್ T10 ಪೊಲೀಸ್ ಠಾಣೆಯಾಗಿದ್ದು, ಗೂಗಲ್ ಮ್ಯಾಪ್ಸ್ನಲ್ಲಿ ಇದರ ಬಗ್ಗೆ ಹಲವಾರು ಪ್ರತಿಕ್ರಿಯೆ ಬಂದಿದೆ. ಇನ್ನು ಇದಕ್ಕೆ ಸಂಬಂಧ ಪಟ್ಟಂತೆ ಗೂಗಲ್ನಲ್ಲಿ ಏನು ಬೇಕಾದರು ವಿಷಯವನ್ನು ಹುಡುಕುಬಹುದಾಗಿದ್ದು, ಫೋಟೋದಿಂದ ಹಿಡಿದು ಎಲ್ಲಾ ಮಾಹಿತಿಗಳು ಲಭ್ಯವಿದೆ. ಇನ್ನು ಗೂಗಲ್ ಮ್ಯಾಪ್ಸ್ನಲ್ಲಿ ನೀಡಲಾದ ಇದರ ಲೊಕೇಶನ್ ನೋಡಿ ಒಬ್ಬ ಆ ಸ್ಟೇಷನ್ನಲ್ಲಾದ ತನ್ನ ಅನುಭವವನ್ನು ವ್ಯಕ್ತಪಡಿಸಿದ್ದಾನೆ.
ಆ ರಿವೀವ್ ಪೇಜ್ನಲ್ಲಿ ಏನಿದೆ?
ತಮಿಳುನಾಡಿನ ತಿರುಮಲ್ಲೈವಾಯಲ್ ಟಿ10 ಪೊಲೀಸ್ ಸ್ಟೇಷನ್ ಬಗ್ಗೆ ಲೋಗೇಶ್ವರನ್ ಎಂಬವರು ತನ್ನ ರಿವೀವ್ ನೀಡಿದ್ದು, ಇದರಲ್ಲಿ "ನಾನು ಮಧ್ಯರಾತ್ರಿ ಬೈಕ್ನಲ್ಲಿ ಯಾವುದೇ ದಾಖಲೆಗಳಿಲ್ಲದೆ ಪ್ರಯಾಣಿಸಿದ್ದಕ್ಕಾಗಿ ಈ ಸ್ಟೇಷನ್ನಲ್ಲಿ ಬಂಧಿಸಿದ್ದರು. ಈ ಸ್ಟೇಷನ್ ಮಾತ್ರ ಬಹಳ ಸ್ವಚ್ಛವಾಗಿದೆ ಮತ್ತು ಮೈನ್ ರೋಡ್ನಲ್ಲೇ ಕಾಣಸಿಗುತ್ತದೆ.
ಇದನ್ನೂ ಓದಿ: 25ರ ಯುವಕನಿಗೆ 62ರ ಅಜ್ಜಿಯೊಂದಿಗೆ ಲವ್! ಮದ್ವೆಯಾದ ಈ ಜೋಡಿಗೆ ಮಗೂನೂ ಬೇಕಂತೆ!
ಇನ್ನು ಇಲ್ಲಿರುವ ಸಿಬ್ಬಂದಿಗಳು ತುಂಬಾ ದಯೆಯಿಂದ ಮತ್ತು ನನಗೆ ಯಾವುದೇ ಕಿರುಕುಳವನ್ನು ನೀಡಲಿಲ್ಲ. ನನ್ನ ಡಾಕ್ಯುಮೆಂಟ್ಗಳನ್ನು ಸಂಗ್ರಹಿಸಿದ ನಂತರ ಯಾವುದೇ ರೀತಿಯಲ್ಲಿ ಲಂಚಗಳನ್ನು ಸ್ವೀಕರಿಸದೆ ನನ್ನನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದಾನೆ. ಅಚ್ಚರಿಯೆಂದರೆ ಕೊನೆಗೆ ಪ್ರತಿಯೊಬ್ಬರು ನಿಮ್ಮ ಜೀವನದಲ್ಲಿ ಹೋಗಲೇ ಬೇಕಾದ ಸ್ಥಳ ಎಂದೂ ಬರೆದಿದ್ದಾರೆ.
Ok. I understand that #ratings and reviews are a great thing for restaurants, places of interest, experiences.
But @Google , posting reviews about a police station jail lockup is taking the idea of reviews a bit too far!
What do you all think?
😂😃😂 pic.twitter.com/lHekzuXVKo
— Ravi Mantha (@rmantha2) November 27, 2019
ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್
ಸದ್ಯ ಲೋಗೇಶ್ವರನ್ ಅವರು ರಿವೀವ್ ಮಾಡಿರುವ ಫೋಟೋ ಟ್ವಿಟರ್, ಇನ್ಸ್ಟಾಗ್ರಾಮ್, ವಾಟ್ಸಾಪ್ನಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿ ಹಲವಾರು ನೆಟ್ಟಿಗರು ಹಾಸ್ಯಾಸ್ಪದ ಕಮೆಂಟ್ಗಳನ್ನು, ಎಮೋಜಿಗಳನ್ನು ಸೆಂಡ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ