Viral Video: ದುಬಾರಿ ಕಾರಲ್ಲಿ ಬರ್ತಾರೆ, ಬಿಪಿಎಲ್ ಕಾರ್ಡ್‌ನಲ್ಲಿ ಗೋಧಿ ಪಡೀತಾರೆ! ಇವರ ಕಥೆ ಕೇಳಿದ್ರೆ ಪಾಪ ಅನಿಸುತ್ತೆ

ಈ 58 ಸೆಕೆಂಡುಗಳ ವಿಡಿಯೋದಲ್ಲಿ ಪಂಜಾಬ್ ಸರ್ಕಾರವು ಪ್ರತಿ ಕೆಜಿಗೆ 2 ರೂಪಾಯಿಗೆ ಮಾರಾಟ ಮಾಡುವ ಗೋಧಿಯನ್ನು ಖರೀದಿಸಲು ವ್ಯಕ್ತಿಯೊಬ್ಬ ತನ್ನ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಬಂದನು. ಈ ವಿಡಿಯೋ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ವೈರಲ್ ಆಗಿದೆ!

ಮರ್ಸಿಡಿಸ್ ಬೆಂಝ್ ನಲ್ಲಿ ಗೋಧಿ ಖರೀದಿಸಿದ ವ್ಯಕ್ತಿ

ಮರ್ಸಿಡಿಸ್ ಬೆಂಝ್ ನಲ್ಲಿ ಗೋಧಿ ಖರೀದಿಸಿದ ವ್ಯಕ್ತಿ

  • Share this:
ಕೆಲವೊಮ್ಮೆ ನಾವು ನೋಡಿದ್ದು ಮತ್ತು ಅರ್ಥಮಾಡಿಕೊಂಡಿದ್ದು ತಪ್ಪು (Wrong) ಆಗುವ ಸಾಧ್ಯತೆ ಸಹ ಇರುತ್ತದೆ. ಅದಕ್ಕಾಗಿಯೇ ತುಂಬಾ ಹಿಂದೆಯಿಂದಲೂ ‘ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು’ ಅಂತ ಒಂದು ಮಾತನ್ನು ಹಿರಿಯರು ಹೇಳುತ್ತಿದ್ದುದ್ದನ್ನು ನಾವು ಇಲ್ಲಿ ಮತ್ತೊಮ್ಮೆ ಜ್ಞಾಪಿಸಿಕೊಳ್ಳಬಹುದು. ಏಕೆಂದರೆ ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವೈರಲ್ (Viral) ಸಹ ಆಗಿದೆ ನೋಡಿ. ಈ ವಿಡಿಯೋ (Video) ನೋಡಿದವರು ಯಾರಾದರೂ ‘ದೇಶದ ಬಡವರು ಮತ್ತು ದೀನದಲಿತರಿಗೆ ಅನುಕೂಲವಾಗುವಂತೆ ಭಾರತದಾದ್ಯಂತ ಹಲವಾರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿವೆ. ಆ ಯೋಜನೆಗಳ ಅನಗತ್ಯ ಲಾಭವನ್ನು ಶ್ರೀಮಂತ ಜನರು (Richest People) ಪಡೆಯುತ್ತಿದ್ದಾರೆ. ಹೀಗೆ ಮುಂದುವರೆದರೆ ಬಡವನಾದವನು (Poor) ತನ್ನ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯನ್ನು (Clothes) ಹಾಕಿಕೊಳ್ಳುವ ಸಮಯ ಬರುತ್ತದೆ’ ಅಂತ ಅನ್ನಿಸದೆ ಇರದು.

ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಬಂದು ಗೋಧಿ ಖರೀದಿಸಿದ ವ್ಯಕ್ತಿ
ಅಂತಹದ್ದೇನಿದೆ ಈ ವೈರಲ್ ಆದ ವಿಡಿಯೋದಲ್ಲಿ ಅಂತೀರಾ? ಈ 58 ಸೆಕೆಂಡುಗಳ ವಿಡಿಯೋದಲ್ಲಿ ಪಂಜಾಬ್ ಸರ್ಕಾರವು ಪ್ರತಿ ಕೆಜಿಗೆ 2 ರೂಪಾಯಿಗೆ ಮಾರಾಟ ಮಾಡುವ ಗೋಧಿಯನ್ನು ಖರೀದಿಸಲು ವ್ಯಕ್ತಿಯೊಬ್ಬ ತನ್ನ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಬಂದನು. ಈ ವಿಡಿಯೋ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ವೈರಲ್ ಆಗಿದೆ, ಇಂತಹ ಒಂದು ಕೆಟ್ಟ ರೂಢಿಯ ಬಗ್ಗೆ ಮತ್ತೊಮ್ಮೆ ಜನರ ಗಮನ ಸೆಳೆದಿದೆ.

ಇದನ್ನೂ ಓದಿ: Teacher: ಶಾಲೆಯಲ್ಲಿ ಪಾಠ ಮಾಡುವುದಷ್ಟೇ ಅಲ್ಲ, ಈ ಶಿಕ್ಷಕಿ ಮಾಡುವ ಕೆಲಸ ಎಂಥದ್ದು ನೋಡಿ

ಬಡತನ ರೇಖೆಗಿಂತ ಕೆಳಗಿರುವ ಎಂದರೆ ಬಿಪಿಎಲ್ ವರ್ಗಕ್ಕೆ ಈ ಅಂಗಡಿಗಳಲ್ಲಿ ಪಡಿತರ ಲಭ್ಯವಿದೆ. ಬಡವರು ಆಹಾರವಿಲ್ಲದೆ ಹಸಿವಿನಿಂದ ಬಳಲಬಾರದು ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ಪಡಿತರವನ್ನು ವಿತರಿಸುತ್ತದೆ. ಈ ವಿಡಿಯೋ ಸಾಕಷ್ಟು ಟ್ವಿಟರ್ ಬಳಕೆದಾರರನ್ನು ಕೆರಳಿಸಿತು ಮತ್ತು ಅನೇಕರು ಮರ್ಸಿಡಿಸ್-ಬೆಂಝ್ ನಲ್ಲಿ ಪಡಿತರವನ್ನು ತೆಗೆದುಕೊಳ್ಳಲು ಬಂದ ವ್ಯಕ್ತಿಯ ಸತ್ಯಾಸತ್ಯತೆಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ.ಈ ವಿಡಿಯೋ ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ವೈರಲ್ ಆದ ನಂತರ, ಈ ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ ಸ್ಪಷ್ಟೀಕರಣ ನೀಡಿದ್ದಾನೆ. ಹೋಶಿಯಾರ್‌ಪುರ್ ದ ಅಜ್ಜೋವಲ್ ರಸ್ತೆಯಲ್ಲಿರುವ ರಮೇಶ್ ಕುಮಾರ್ ಸೈನಿ ಎಂದು ಗುರುತಿಸಲಾದ ವ್ಯಕ್ತಿ, ಮರ್ಸಿಡಿಸ್ ಬೆಂಝ್ ಅಮೆರಿಕದಲ್ಲಿರುವ ತನ್ನ ಅನಿವಾಸಿ ಭಾರತೀಯ ಸಂಬಂಧಿಕರಲ್ಲಿ ಒಬ್ಬರಿಗೆ ಸೇರಿದ್ದು, ಅವರು ವರ್ಷಕ್ಕೊಮ್ಮೆ ಪಂಜಾಬ್ ಗೆ ಭೇಟಿ ನೀಡುತ್ತಾರೆ ಮತ್ತು ಅವರ ಪಕ್ಕದ ಮನೆಯಲ್ಲಿ ಇವರು ವಾಸಿಸುತ್ತಾರೆ ಎಂದು ಹೇಳಿದ್ದಾರೆ.

ಮರ್ಸಿಡಿಸ್ ಬೆಂಝ್ ಪಕ್ಕದ ಮನೆಯವರಿಗೆ ಸೇರಿದ್ದು
ಇವರ ಸಂಬಂಧಿಕರು ಅಮೆರಿಕದಲ್ಲಿ ವಾಸಿಸುತ್ತಿರುವುದರಿಂದ, ಅವರು ತಮ್ಮ ಮರ್ಸಿಡಿಸ್ ಬೆಂಝ್ ಅನ್ನು ಬಳಸಲು ಮತ್ತು ನೋಡಿಕೊಳ್ಳಲು ಇವರಿಗೆ ಹೇಳಿದ್ದಾರೆ ಎಂದು ರಮೇಶ್ ಹೇಳಿದರು. ಪ್ರತಿ 10 ರಿಂದ 15 ದಿನಗಳಿಗೊಮ್ಮೆ, ಅವರು ಈ ಕಾರನ್ನು ಸ್ಟಾರ್ಟ್ ಮಾಡಿ ಮತ್ತು ಕಾರು ಉತ್ತಮ ಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಒಂದು ರೌಂಡ್ ಹೊರಗೆ ತೆಗೆದುಕೊಂಡು ಹೋಗುತ್ತಾರೆ. ಅವರು ಹೀಗೆ ಮಾಡದೆ ಹೋದರೆ ಕಾರಿನ ಬ್ಯಾಟರಿ ಡಿಸ್ಚಾರ್ಜ್ ಆಗುತ್ತದೆ ಮತ್ತು ಅನಗತ್ಯವಾಗಿ ಇದನ್ನು ಮತ್ತೆ ರಿಪೇರಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಅವರು ಹೇಳಿದರು.

ವಿಡಿಯೋದ ಬಗ್ಗೆ ಮಾತನಾಡಿದ ರಮೇಶ್, ಪ್ರತಿ 10-15 ದಿನಗಳಿಗೊಮ್ಮೆ ಕಾರನ್ನು ಓಡಿಸುವ ಸಲುವಾಗಿ ಕಾರನ್ನು ಹೊರ ತಂದಿದ್ದೆವು ಎಂದು ಹೇಳಿದರು. ಮನೆಗೆ ಹೋಗುವಾಗ, ತನ್ನ ಮಕ್ಕಳು ಡಿಪೋದಿಂದ ಗೋಧಿಯನ್ನು ಸಂಗ್ರಹಿಸುತ್ತಿರುವುದನ್ನು ಅವನು ನೋಡಿದನು. ತನ್ನ ಮಕ್ಕಳಿಗೆ ಸಹಾಯ ಮಾಡಲು, ಅವನು ಕಾರನ್ನು ನಿಲ್ಲಿಸಿ ಮರ್ಸಿಡಿಸ್ ಬೆಂಝ್ ನ ಡಿಕ್ಕಿಯಲ್ಲಿ ಆ ಚೀಲಗಳನ್ನು ತುಂಬಿಸಿದರು. ಅವರು ಕಾರಿನ ದಾಖಲೆಗಳನ್ನು ಸಹ ತೋರಿಸಿದ್ದಾರೆ, ಅದು ಅವರು ಅದರ ಮಾಲೀಕರಲ್ಲ ಎಂದು ಬಹಿರಂಗಪಡಿಸುತ್ತದೆ.

ಈ ಕುರಿತು ಅನೂಪ್ ಸೈನಿ ಮಾಧ್ಯಮಗಳಿಗೆ ಏನು ಹೇಳಿದ್ದಾರೆ 
ರಮೇಶ್ ಕುಮಾರ್ ಸೈನಿ ಅವರ ಪುತ್ರ ಅನೂಪ್ ಸೈನಿ ಅವರು ತಮ್ಮ ತಂದೆ ಟ್ರಕ್ ಡ್ರೈವರ್ ಆಗಿದ್ದು, ಅಪಘಾತದ ನಂತರ ಕೆಲಸ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಾರೆ, ಅವರ ಪತ್ನಿ ದರ್ಜಿಯಾಗಿ ಕೆಲಸ ಮಾಡುತ್ತಾರೆ ಮತ್ತು ಮರ್ಸಿಡಿಸ್ ಬೆಂಝ್ ಅಂತಹ ಐಷಾರಾಮಿ ಕಾರನ್ನು ಖರೀದಿಸುವುದು ಅವರ ಸಾಮರ್ಥ್ಯದಿಂದ ಹೊರಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Viral Story: ಬದುಕಿರುವಾಗಲೇ ಸತ್ತಿದ್ದಾರೆ ಎಂದು ಸರ್ಕಾರಿ ದಾಖಲೆಯಲ್ಲಿ ಉಲ್ಲೇಖ! ಪಿಂಚಣಿಗಾಗಿ ಹೋರಾಡುತ್ತಿರುವ 102 ವರ್ಷದ ಅಜ್ಜ

ಹೋಶಿಯಾರ್‌ಪುರ್ ದ ನಲೋಯನ್ ಚೌಕ್ ನಲ್ಲಿರುವ ಪಡಿತರ ಡಿಪೋದ ಹೊರಗೆ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಡಿಪೋ ಮಾಲೀಕ ಅಮಿತ್ ಕುಮಾರ್ ಅವರು ವಿವರಗಳನ್ನು ಬಹಿರಂಗಪಡಿಸದೆ ಎಲ್ಲಾ ನೀಲಿ ಪಡಿತರ ಚೀಟಿದಾರರಿಗೆ ಪಡಿತರವನ್ನು ತಲುಪಿಸಲು ಬದ್ಧರಾಗಿದ್ದಾರೆ ಎಂದು ಹೇಳಿದರು. ಈ ಘಟನೆಯನ್ನು ನೋಡಿದ ಪಂಜಾಬ್ ಸರ್ಕಾರವು ಈ ವಿಷಯವನ್ನು ಪರಿಶೀಲಿಸುವಂತೆ ತನ್ನ ಆಹಾರ ಸರಬರಾಜು ಇಲಾಖೆಗೆ ಆದೇಶಿಸಿದೆ.
Published by:Ashwini Prabhu
First published: