Viral Video: ಒಡನಾಡಿಯನ್ನು ಕಳೆದುಕೊಂಡ ನವಿಲಿನ ಆಕ್ರಂದನ

Peacock: ಎಷ್ಟು ದಿನಗಳ ಕಾಲ ಒಟ್ಟಿಗೆ ಆಡಿ ಬೆಳೆದ ಒಡನಾಡಿಯ ಕಳೆದುಕೊಂಡ ನವಿಲೊಂದು  ರೋಧನೆ ವ್ಯಕ್ತಪಡಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಂಥವರ ಕಲ್ಲು ಹೃದಯದವರ ಮನಸನ್ನು ಕೂಡ ಇದು ಘಾಸಿಗೊಳಿಸುತ್ತದೆ

ನವಿಲಿನ ಆಕ್ರಂದನ

ನವಿಲಿನ ಆಕ್ರಂದನ

 • Share this:
  ಹುಟ್ಟಿದ(Birth) ಪ್ರತಿಯೊಂದು ಜೀವಿಗಳೂ ಒಂದಿಲ್ಲೊಂದು ದಿನ ಸಾಯಲೇಬೇಕು(Death). ಆದರೆ ಹೀಗೆ ಸತ್ತ ವ್ಯಕ್ತಿ ಅಥವಾ ಜೀವಿಯಿಂದ ಆತನ ಜೊತೆಗಿದ್ದವರೂ ಅನುಭವಿಸುವ ನೋವು(Problem) ಮಾತ್ರ ಹೇಳತೀರದಾಗಿದೆ.. ಅದೆಷ್ಟೋ ವರ್ಷಗಳಿಂದ ಇದ್ದ ಬಾಂಧವ್ಯ(Attachment) ಸುಮಧುರ ಭಾವನೆ ಒಡನಾಡಿತ ಏಕಾಏಕಿ ಕಳಚಿಬಿದ್ದಂತೆ ಒಂಟಿತನದ(Loneliness) ಭಾವನೆ ಕಾಡುತ್ತದೆ.. ಸಾವು ಎಂಬ ಭಯಾನಕ ಕರಾಳ ಸತ್ಯವನ್ನು ಒಪ್ಪಿಕೊಳ್ಳಲು ಎಷ್ಟು ಜನಕ್ಕೆ ಸಾಧ್ಯವೇ ಆಗುವುದಿಲ್ಲ.. ಹೀಗಾಗಿಯೇ ಯಾರಾದರೂ ತಮ್ಮ ನೆಚ್ಚಿನ ಅವರನ್ನು ಕಳೆದುಕೊಂಡರೆ ಅವರ ಅಗಲಿಕೆಯ ನೋವನ್ನು ಮರೆಯಲು ಬಹುದಿನಗಳವರೆಗೆ ಪ್ರಯತ್ನ ಪಡುತ್ತಲೇ ಇರುತ್ತಾರೆ.. ಆದರೆ ಅವರ ನೆನಪು ಅವರ ಒಡನಾಟ ಎಂದಿಗೂ ಮರೆಯುವುದಿಲ್ಲ.. ಇನ್ನು ಕೆಲವರು ತಾವು ಸಾಯುವವರೆಗೂ ತಮ್ಮ ಆತ್ಮೀಯರಾದ ಗಳಿಕೆಯ ನೋವಿನಿಂದ ಹೊರಬರಲಾಗದೆ ಚಡಪಡಿಸುತ್ತಲೆ ಇರುತ್ತಾರೆ.

  ಇದನ್ನೂ ಓದಿ:  ಜೈಲಿಗೆ ತೆರಳಿ ಕೈದಿ ಜೊತೆಗೆ ಲಿಪ್​ಲಾಕ್ ಮಾಡಿದ ಲೇಡಿ ಜಡ್ಜ್! 

  ಈ ಪ್ರಕ್ರಿಯೆ ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಲ್ಲೂ ಕೂಡ ಇದೆ.. ತಮ್ಮ ಹೊಡಹುಟ್ಟಿದವರು ನಮ್ಮ ಸಂಬಂಧಿಗಳು ತಮ್ಮ ಜೊತೆಗಿದ್ದವರನ್ನು ಕಳೆದುಕೊಂಡ ಪ್ರಾಣಿಗಳು ಮನುಷ್ಯರಂತೆ ರೋಧನೆ ಮಾಡಿರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿವೆ. ಅದೇ ರೀತಿ ಈಗ ನವಿಲೊಂದು ತನ್ನ ಜೊತೆಗಾರನನ್ನು ಕಳೆದುಕೊಂಡು ರೋಧನೆ ಮಾಡಿರುವ ಮನಮಿಡಿಯುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ನೆಟ್ಟಿಗರು ಕಂಬನಿ ಮಿಡಿಯುತ್ತಿದ್ದಾರೆ

  ಒಡನಾಡಿ ಯನ್ನು ಕಳೆದುಕೊಂಡ ನವಿಲಿನ ಆಕ್ರಂದನ

  ಎಷ್ಟು ದಿನಗಳ ಕಾಲ ಒಟ್ಟಿಗೆ ಆಡಿ ಬೆಳೆದ ಒಡನಾಡಿಯ ಕಳೆದುಕೊಂಡ ನವಿಲೊಂದು  ರೋಧನೆ ವ್ಯಕ್ತಪಡಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಂಥವರ ಕಲ್ಲು ಹೃದಯದವರ ಮನಸನ್ನು ಕೂಡ ಇದು ಘಾಸಿಗೊಳಿಸುತ್ತದೆ.. ನವಿಲು, ತನ್ನ ಸತ್ತ ಒಡನಾಡಿಯನ್ನು ಹೊತ್ತೊಯ್ಯುತ್ತಿದ್ದ ಇಬ್ಬರು ವ್ಯಕ್ತಿಗಳ ಬೆನ್ನ ಹಿಂದೆಯೇ ಹೋಗುತ್ತಿರುವ ದೃಶ್ಯ ನೋಡಿದ್ರೆ ಎಂಥಾ ಕಲ್ಲುಹೃದಯವೂ ಕರಗದೆ ಇರಲಾರದು. ನಾಲ್ಕು ವರ್ಷಗಳಿಂದ ತನ್ನ ಒಡನಾಡಿಯೊಂದಿಗೆ ವಾಸಿಸುತ್ತಿದ್ದ ನವಿಲು, ಸತ್ತ ನಂತರವೂ ಕಳುಹಿಸಿಕೊಡಲು ಅದರ ಮನ ಒಪ್ಪಿಲ್ಲ.

  ಇನ್ನು ಇಬ್ಬರು ವ್ಯಕ್ತಿಗಳು ನವಿಲಿನ ಸಹಚರನ ಮೃತ ದೇಹವನ್ನು ಹೊತ್ತೊಯ್ದಾಗ, ಸದ್ದಿಲ್ಲದೆ ಅವರಿಬ್ಬರ ಹಿಂದೆಯೇ ಭಾರದ ಹೆಜ್ಜೆಗಳನ್ನಿಡುತ್ತಾ ಸಾಗಿದೆ. ಈ ಹೃದಯಸ್ಪರ್ಶಿ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಕುಚೇರಾ ಪಟ್ಟಣದಲ್ಲಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.  ಈ ವಿಡಿಯೋವನ್ನು ಸುಮಾರು 1.26 ಲಕ್ಷ ಮಂದಿ ವೀಕ್ಷಿಸಿದ್ದು, ನವಿಲಿನ ಮೂಕರೋಧನೆ ಕಂಡು ಅನೇಕರ ಮನಮಿಡಿದಿದೆ. ಪ್ರಾಣಿ-ಪಕ್ಷಿಗಳು ಮನುಷ್ಯರಿಗಿಂತ ಸಹಬಾಳ್ವೆಯ ಜೀವನ ನಡೆಸುತ್ತವೆ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.

  ಇದನ್ನೂ ಓದಿ: ಕೊರೋನಾ ಬಂದರೂ ಕುಟುಂಬಸ್ಥರ ಜೊತೆ Party; ಈಕೆ ಮಾಡಿದ್ದ ಪ್ಲಾನ್​ ಅದ್ಬುತ

  ಕರ್ನಾಟಕದಲ್ಲೂ ನಡೆದಿತ್ತು ಇಂತಹ ಹೃದಯಸ್ಪರ್ಶಿ ಘಟನೆ

  ಕೆಲವು ವರ್ಷಗಳ ಹಿಂದೆ ಹಸು ಹಾಗೂ ಕರುವನ್ನು ರಸ್ತೆಯಲ್ಲಿ ಹೋಗುವಾಗ ವಾಹನವನ್ನು ಕರುವಿಗೆ ಡಿಕ್ಕಿ ಹೊಡೆದು ಅದರ ಪ್ರಾಣವನ್ನು ಬಲಿತೆಗೆದುಕೊಂಡಿತ್ತು… ತನ್ನ ಮಗುವನ್ನು ಕಳೆದುಕೊಂಡ ಹಸುವಿನ ರೋಧನೆ ಮಾತ್ರ ಹೇಳತೀರದಾಗಿತ್ತು.. ಹೀಗಾಗಿಯೇ ತನ್ನ ಕರುವನ್ನು ಬಿಟ್ಟು ಕದಲದ ಹಸು ಕೊನೆಗೆ ಅದರ ಸಂಸ್ಕಾರ ಮುಗಿದ ಬಳಿಕ ತನ್ನ ಮಗುವಿನ ಸಾವಿಗೆ ಕಾರಣವಾದ ವಾಹನ ಕಂಡಾಗಲೆಲ್ಲಾ ಅದರ ಹಿಂದೆ ಓಡುವ ಮೂಲಕ ತನ್ನ ಆಕ್ರೋಶವನ್ನು ವ್ಯಕ್ತಪಡಿಸುತ್ತಿತ್ತು. ಈ ವಿಡಿಯೋ ಸಹ ಬಹಳ ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜನರು ಆ ಮೂಕ ಪ್ರಾಣಿ ತನ್ನ ಮಗುವಿನ ಮೇಲೆ ಇಟ್ಟಿದ್ದ ಪ್ರೀತಿ ಹಾಗೂ ಮಮಕಾರಕ್ಕೆ ಬೆರಗಾಗಿ ಹೋಗಿದ್ದರು
  Published by:ranjumbkgowda1 ranjumbkgowda1
  First published: