ಸೌಂದರ್ಯ ಕಳೆದುಕೊಳ್ಳುತ್ತಿದ್ದಾನೆ ಚಂದ್ರ; ಸಂಶೋಧನೆಯಿಂದ ಬಯಲಾಯ್ತು ಆಘಾತಕಾರಿ ವಿಚಾರ

ಚಂದ್ರನ 12,000 ಫೋಟೋಗಳನ್ನು ಅಧ್ಯಯನ ನಡೆಸಲಾಗಿದೆ. ಕಳೆದ 70 ಲಕ್ಷ ವರ್ಷಗಳಲ್ಲಿ ಚಂದ್ರನ ಒಟ್ಟಾರೆ ಮೇಲ್ಮೈ 150 ಅಡಿ ಕುಗ್ಗಿದೆ.

Rajesh Duggumane | news18
Updated:May 15, 2019, 11:02 PM IST
ಸೌಂದರ್ಯ ಕಳೆದುಕೊಳ್ಳುತ್ತಿದ್ದಾನೆ ಚಂದ್ರ; ಸಂಶೋಧನೆಯಿಂದ ಬಯಲಾಯ್ತು ಆಘಾತಕಾರಿ ವಿಚಾರ
ಚಂದ್ರನ 12,000 ಫೋಟೋಗಳನ್ನು ಅಧ್ಯಯನ ನಡೆಸಲಾಗಿದೆ. ಕಳೆದ 70 ಲಕ್ಷ ವರ್ಷಗಳಲ್ಲಿ ಚಂದ್ರನ ಒಟ್ಟಾರೆ ಮೇಲ್ಮೈ 150 ಅಡಿ ಕುಗ್ಗಿದೆ.
Rajesh Duggumane | news18
Updated: May 15, 2019, 11:02 PM IST
ನವದೆಹಲಿ (ಮೇ 14): ಹುಣ್ಣಿಮೆ ಎಂದರೆ ಬುತೇಕರಿಗೆ ಇಷ್ಟ. ಆ ದಿನ ರಾತ್ರಿ ಚಂದ್ರನನ್ನು ನೋಡುತ್ತಾ ಕೂರುವುದೇ ಒಂದು ಆನಂದ. ಆತ ಸೂಸುವ ಮಂದವಾದ ಬೆಳಕು ಏನೋ ಒಂದು ತೆರನಾದ ಮುದ ನೀಡುತ್ತದೆ. ಆದರೆ, ಮುಂದಿನ ದಿನಗಳಲ್ಲಿ ಹುಣ್ಣಿಮೆಯ ದಿನದಂದೂ ನಿಮಗೆ ಚಂದ್ರನ ಬೆಳಕು ಸಿಗದೇಯೂ ಇರಬಹುದು. ಅದಕ್ಕೆ ಕಾರಣ, ಚಂದ್ರ ತನ್ನ ಸೌಂದರ್ಯ ಕಳೆದುಕೊಳ್ಳುತ್ತಿರುವುದು.

ಹೌದು..! ಹೀಗೊಂದು ಆಘಾತಕಾರಿ ವಿಚಾರವನ್ನು ನಾಸಾ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಅವರು ಹೇಳುವ ಪ್ರಕಾರ ಚಂದ್ರನಲ್ಲಿ ನಿರಂತರವಾಗಿ ಭೂಕಂಪಗಳು ಸಂಭವಿಸುತ್ತಿವೆಯಂತೆ. ಹಾಗಾಗಿ ದಿನ ಕಳೆದಂತೆ ಚಂದ್ರನ ಗಾತ್ರ ಕ್ಷೀಣಿಸುತ್ತಿದ್ದು, ಹೊಳಪು ಕೂಡ ಕುಗ್ಗುತ್ತಿದೆ ಎನ್ನುವ ಅಘಾತಕಾರಿ ಸಂಶೋಧನೆಯ ವಿವರಗಳನ್ನು ನೀಡುತ್ತಿದ್ದಾರೆ ವಿಜ್ಞಾನಿಗಳು.

ಚಂದ್ರನ ಮೇಲ್ಮೈ ಹಾಗೂ ಬದಲಾಗುತ್ತಿರುವ ವಾತಾವರಣ ಕುರಿತ 12,000 ಫೋಟೋಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.  ಕಳೆದ 70 ಲಕ್ಷ ವರ್ಷಗಳಲ್ಲಿ ಚಂದ್ರನ ಒಟ್ಟಾರೆ ಮೇಲ್ಮೈ 150 ಅಡಿ ಕುಗ್ಗಿದೆ. ಭೂಕಂಪ ಸಂಭವಿಸಿದಾಗ ಚಂದ್ರನ ಮೇಲ್ಮೈ ಶಾಖ ಕಡಿಮೆ ಆಗುತ್ತದೆ. ಇದು ಚಂದ್ರನ ಕಾಂತಿ ಕ್ಷೀಣಿಸಲು ಮೂಲ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಭೂಮಿಯ ಒಂದು ದಿನ ಚಂದ್ರನ ಮೇಲಿನ 14 ದಿನಗಳಿಗೆ ಸಮ: ಚೀನಾ ವಿಜ್ಞಾನಿಗಳ ಅನ್ವೇಷಣೆ

ಚಂದ್ರನಲ್ಲಿ ಭೂಕಂಪಗಳು ಸಂಭವಿಸುತ್ತಿರುವ ವಿಚಾರವನ್ನು 1960-70ರ ಅವಧಿಯಲ್ಲೇ ವಿಜ್ಞಾನಿಗಳು ಪತ್ತೆ ಹಚ್ಚಿದ್ದರು. ತದನಂತರ ಈ ಕುರಿತು ನಿರಂತರ ಅಧ್ಯಯನ ನಡೆಯುತ್ತಲೇ ಇದೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಲು ವಿಜ್ಞಾನಿಗಳು ನಿರ್ಧರಿಸಿದ್ದಾರೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'
First published:May 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ