Viral Story: ಪಾರ್ಸೆಲ್ ಮೇಲೆ ಮೊಬೈಲ್ ಸಂಖ್ಯೆ ಬರೆಯಬೇಡಿ! ಈ ಯುವತಿಗೆ ಎದುರಿಸಿದ ಸಮಸ್ಯೆಯೇ ಇದಕ್ಕೆ ದೊಡ್ಡ ಉದಾಹರಣೆ!

Parcel: ಮನೆಯಲ್ಲಿ ಯಾರು ಇಲ್ಲದೇ ಹೋದಾಗ ಪಾರ್ಸೆಲ್​ ಕೊಡುವಾತ ನೆರೆ ಮನೆಯವನ ಬಳಿ ಯುವತಿಯ ಪಾರ್ಸೆಲ್​ ಕೊಟ್ಟು ಅವರಿಗೆ ತಲುಪಿಸವಂತೆ ಹೇಳಿ ಹೋಗಿದ್ದಾನೆ. ಇಲ್ಲಿಂದ ಯುವತಿಗೆ ಸಮಸ್ಯೆ ಎದುರಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ದೂರದ ಊರಿನಲ್ಲಿದ್ದ ಮಗನಿಗೆ, ಮಗಳಿಗೆ ಪೋಷಕರು ಪಾರ್ಸೆಲ್ (Parcel)​ ಕಳಿಹಿಸುವುದುಂಟು. ಕೆಲವೊಮ್ಮ ಪಾರ್ಸೆಲ್​ ಸರಿಯಾದ ವಿಳಾಸ ತಲುಪಲೆಂದು ಅದರ ಮೇಲೆ ಫೋನ್ ನಂಬರ್ (Phone Number)​, ಮನೆಯ ವಿಳಾಸ (Address) ಬರೆದು ಕಳುಹಿಸುತ್ತಾರೆ. ಅದರಂತೆ ಯುವತಿಯೊಬ್ಬಳು ಪಾರ್ಸೆಲ್​ ಒಂದರ ಮೇಲೆ ತನ್ನ ಫೋನ್​ ನಂಬರ್​ ಬರೆಯುವ ಮೂಲಕ ಸಮಸ್ಯೆಗೆ ಒಳಗಾಗಿದ್ದಾಳೆ. ಅಷ್ಟಕ್ಕೂ ಏನಾಗಿದೆ ಗೊತ್ತಾ? ಈ ಸ್ಟೋರಿ ಓದಿ..

    ಮನೆಯಲ್ಲಿ ಯಾರು ಇಲ್ಲದೇ ಹೋದಾಗ ಪಾರ್ಸೆಲ್​ ಕೊಡುವಾತ ನೆರೆ ಮನೆಯವನ ಬಳಿ ಯುವತಿಯ ಪಾರ್ಸೆಲ್​ ಕೊಟ್ಟು ಅವರಿಗೆ ತಲುಪಿಸವಂತೆ ಹೇಳಿ ಹೋಗಿದ್ದಾನೆ. ಇಲ್ಲಿಂದ ಯುವತಿಗೆ ಸಮಸ್ಯೆ ಎದುರಾಗಿದೆ. ಬ್ರಿಟನ್​ ಮೂಲದ ಈ ಯುವತಿಳೆ ವೃತ್ತಿಯಲ್ಲಿ ನರ್ಸ್​ ಆಗಿದ್ದು, ದೈನಂದಿನಂತೆ ಆಸ್ಪತ್ರೆಗೆ ಕರ್ತವ್ಯಕ್ಕೆ ಹೋಗಿದ್ದಾಳೆ. ಈ ಸಮಯದಲ್ಲಿ ಪಾರ್ಸೆಲ್​ ವಿತರಕ ಮನೆಗೆ ಬಂದಿದ್ದನು. ಮನೆಯಲ್ಲಿ ಯಾರು ಇಲ್ಲವೆಂದು ನೆರೆಮನೆಯಲ್ಲಿ ವಾಸಿಸುವ ಜಿಹಾದ್ ಖಾನ್‌ಗೆ ಪಾರ್ಸೆಲ್ ಕೊಟ್ಟು ಹೋಗಿದ್ದಾನೆ. ನರ್ಸ್​ಗೆ ಪಾರ್ಸೆಲ್​ ತಲುಪಿಸುವಂತೆ ಹೇಳಿದ್ದಾನೆ. ಆದರೆ ಜಿಹಾ್ದ್​ ಖಾನ್ ಪಾರ್ಸೆಲ್​ ಮೇಲಿನ ನಂಬರ್​ನಿಂದ ನರ್ಸ್​ಗೆ ಕಿರುಕುಳ ನೀಡಲು ಆರಂಭಿಸಿದನು.

    ನಿರಂತರವಾಗಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ!

    23 ವರ್ಷದ ಎಲೀನರ್ ಮ್ಯಾಡಿಸನ್ ಎಂಬಾಕೆ ಆನ್‌ಲೈನ್‌ನಲ್ಲಿ ಕೆಲವು ಪುಸ್ತಕಗಳನ್ನು ಆರ್ಡರ್ ಮಾಡಿದ್ದಳು. ಪ್ಯಾಕೇಜ್ ಮ್ಯಾಂಚೆಸ್ಟರ್‌ನ ಸಾಲ್ಫೋರ್ಡ್‌ನಲ್ಲಿರುವ ಆಕೆಯ ಮನೆಗೆ ತಲುಪಿದಾಗ ಅವಳು ಅಲ್ಲಿ ಇರಲಿಲ್ಲ. ನಂತರ ಡೆಲಿವರಿ ಬಾಯ್ ತನ್ನ ಹತ್ತಿರದ ಮನೆಯಲ್ಲಿ ವಾಸಿಸುತ್ತಿದ್ದ 46 ವರ್ಷದ ಜಿಹಾದ್ ಖಾನ್‌ಗೆ ಪ್ಯಾಕೇಜ್ ಹಸ್ತಾಂತರಿಸಿದ್ದಾನೆ. ನಂತರ, ಎಲೀನರ್ ಅವರು ಮನೆಗೆ ತಲುಪುವ ವೇಳೆ ಜಿಹಾದ್​ ಖಾನ್ ಬಳಿ ಇದ್ದ ಪ್ಯಾಕೇಜ್ ತೆಗೆದುಕೊಂಡು ಮನೆಗೆ ಬಂದರು. ಅಂದಿನಿಂದ ಆಕೆಗೆ ನಿರಂತರವಾಗಿ ಅಶ್ಲೀಲ ಸಂದೇಶಗಳು ಬರಲಾರಂಭಿಸಿತು.

    ಆತನಿಗೆ ಪೊಲೀಸರ ಭಯವಿರಲಿಲ್ಲ!

    ಜಿಹಾದ್​ ಖಾನ್ ನರ್ಸ್‌ಗೆ  ಅಶ್ಲೀಲ ಸಂದೇಶ ಕಳುಹಿಸುವುದನ್ನು ಮುಂದುವರಿಸಿದನು. ಮಾತ್ರವಲ್ಲದೆ ಎಲೀನರ್ ಅನ್ನು ಪ್ರೀತಿಸುತ್ತಿರುವುದಾಗಿ ಹೇಳುತ್ತಿದ್ದನು. ಇನ್ನು ಕೆಲವೊಮ್ಮೆ ಅವನು ಎಲೀನರ್ಗೆ ರಾತ್ರಿ ಕಳೆಯಲು ಹಣವನ್ನು ನೀಡುತ್ತಾನೆಂದು ಹೇಳಿದ್ದನು.

    ಇದನ್ನು ಓದಿ: Old Car: ಹಳೇ ಕಾರ್ ಮತ್ತೆ ರೋಡಿಗೆ..ಡೀಸೆಲ್ ಕಾರ್​​ಗೆ ಹೊಸಾ ರೂಪ ಕೊಡ್ತಿದೆ ಸರ್ಕಾರ!

    ಇದರಿಂದ ಬೇಸರಗೊಂಡ ಎಲೀನರ್ ಪೊಲೀಸರಿಗೆ ದೂರು ನೀಡುವುದಾಗಿ ಹೆದರಿಸಿದಳು. ಆದರೆ ಆರೋಪಿ ಖಾನ್ ಏನನ್ನೂ ಕೇಳಲು ಸಿದ್ಧನಿರಲಿಲ್ಲ. ಕೆಲವು ದಿನಗಳವರೆಗೆ ಜಿಹಾದ್​ ಖಾನ್​ ಉಪಟಳ ಮುಂದುವರಿಸಿದನು. ನಂತರ ಇದ್ದಕ್ಕಿದ್ದಂತೆ ಸಂದೇಶಗಳು ಬರುವುದನ್ನು ನಿಲ್ಲಿಸಿದವು.



    ನ್ಯಾಯಾಲಯ ಆರೋಪಿಯನ್ನು ಜೈಲಿಗೆ ಕಳುಹಿಸಿದೆ

    ಎಲೀನರ್ ಮ್ಯಾಡಿಸನ್ ಈ ಬಗ್ಗೆ ಮಾತನಾಡಿದ್ದು,  'ಕೆಲವು ದಿನಗಳ ಮೌನದ ನಂತರ, ಒಂದು ದಿನ ನೆರೆಹೊರೆಯವನಾದ ಜಿಹಾದ್ ಖಾನ್ ಆಕೆಗೆ ಅಶ್ಲೀಲ ಫೋಟೋವನ್ನು ಕಳುಹಿಸಿದ್ದಾನೆ ಮತ್ತು ಅಶ್ಲೀಲ ಕಾಮೆಂಟ್ ಕೂಡ ಬರೆದಿದ್ದನು. ಇದು ನನ್ನ ಮನಸ್ಸನ್ನು ಮುರಿಯಿತು. ಈ ವ್ಯಕ್ತಿ ಹೀಗೆ ಸುಧಾರಿಸಿಕೊಳ್ಳುವುದಿಲ್ಲ ಎಂದು ನಾನೇ ಅಂದುಕೊಂಡೆ. ನಂತರ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೆ. ದೂರಿನ ಮೇರೆಗೆ ಪೊಲೀಸರು ಖಾನ್‌ನನ್ನು ಬಂಧಿಸಿದ್ದಾರೆ. ಖಾನ್ ಅವರನ್ನು ಕಿರುಕುಳ ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ನ್ಯಾಯಾಲಯ ಶಿಕ್ಷೆ ವಿಧಿಸಿ ಜೈಲಿಗೆ ಕಳುಹಿಸಿತು.

    ಇದನ್ನು ಓದಿ: Viral Story: ಗಂಡನಿಗೆ ವಿಚ್ಛೇದನ ನೀಡಿ ನಾಯಿಯನ್ನು ಮದುವೆಯಾದ 47 ವರ್ಷದ ಮಹಿಳೆ!

    ಮೊಬೈಲ್ ಸಂಖ್ಯೆ ತೆಗೆಯುವ ಅಭಿಯಾನ

    ಈ ಘಟನೆಯ ನಂತರ, ನರ್ಸ್ ಮ್ಯಾಡಿಸನ್ ಅವರು ಇರುವ ಸ್ಥಳ ಮತ್ತು ಫೋನ್ ಸಂಖ್ಯೆಗಳನ್ನು ಬದಲಾಯಿಸಿದರು. ಇದೀಗ ಅವರು ಪಾರ್ಸೆಲ್ ಮೇಲೆ ಮೊಬೈಲ್ ನಂಬರ್ ಪ್ರಿಂಟ್ ಮಾಡಬೇಡಿ ಎಂಬ ಅಭಿಯಾನ ನಡೆಸುತ್ತಿದ್ದಾರೆ. ಈ ಕುರಿತು ಅರ್ಜಿಯನ್ನೂ ಸಲ್ಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಾರ್ಸೆಲ್​ ಸ್ವೀಕರಿಸುವವರ ವಿಳಾಸದೊಂದಿಗೆ, ಸ್ವೀಕರಿಸುವವರ ಸಂಪರ್ಕ ವಿವರಗಳನ್ನು ಸಹ ಪಾರ್ಸೆಲ್‌ನಲ್ಲಿ ಮುದ್ರಿಸಲಾಗುತ್ತದೆ. ಇದರಿಂದಾಗಿ ವಿತರಣೆಯಲ್ಲಿ ಯಾವುದೇ ಸಮಸ್ಯೆ ಕಂಡುಬಂದಲ್ಲಿ ಸಂಬಂಧಪಟ್ಟ ವ್ಯಕ್ತಿಯನ್ನು ಸಂಪರ್ಕಿಸಬಹುದು ಅದಕ್ಕಾಗಿಯೇ ಅವರು ನಂಬರ್ ಪ್ರಿಂಟ್ ಮಾಡಬೇಡಿ ಎಂಬ ಅಭಿಯಾನವನ್ನು ನಡೆಸುತ್ತಿದ್ದಾರೆ.
    Published by:Harshith AS
    First published: