Viral Post: ಕಾರು ಖರೀದಿಸಿದ ಬಳಿಕ ಮಾಜಿ ಬಾಸ್ ಮತ್ತು ಮಾಜಿ ಗೆಳತಿಯರಿಗೆ ಥ್ಯಾಂಕ್ಸ್ ಹೇಳಿದ ವ್ಯಕ್ತಿ! ಯಾಕೆ?

ಇಲ್ಲೊಬ್ಬ ವ್ಯಕ್ತಿ ಒಂದು ಹೊಸ ಕಾರು (New Car) ಖರೀದಿಸಿದ ನಂತರ ಲಿಂಕ್ಡ್ಇನ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ತುಂಬಾನೇ ವೈರಲ್ (Viral) ಆಯಿತು. ಆದರೆ ನಂತರ ಆನ್ಲೈನ್ ನಲ್ಲಿ ದೊಡ್ಡ ಚರ್ಚೆಯೇ ನಡೆಯಿತು. ಏಕೆಂದರೆ ಈ ವ್ಯಕ್ತಿ ಹಂಚಿಕೊಂಡ ಪೋಸ್ಟ್ ತುಂಬಾನೇ ಹಾಸ್ಯಾಸ್ಪದ ಮತ್ತು ಗೊಂದಲಮಯವಾಗಿತ್ತು.

ಕಾರು ಖರೀದಿಸಿದ ವ್ಯಕ್ತಿ

ಕಾರು ಖರೀದಿಸಿದ ವ್ಯಕ್ತಿ

  • Share this:

ಮೊದಲೆಲ್ಲಾ ಈ ಲಿಂಕ್ಡ್ಇನ್  (LinkedIn) ಅನ್ನೋದು ಕೇವಲ ಹೊಸ ಹೊಸ ಉದ್ಯೋಗಗಳನ್ನು (Employments) ಹುಡುಕಲು ಮತ್ತು ಸಂಭಾವ್ಯ ಉದ್ಯೋಗದಾತರೊಂದಿಗೆ ಮಾತ್ರ ಸಂಪರ್ಕ ಸಾಧಿಸಲು ಒಂದು ವೇದಿಕೆಯಾಗಿತ್ತು. ಆದರೆ ಈಗ ಆ ಸಮಯ ಬದಲಾಗಿದೆ ಎಂದು ಹೇಳಬಹುದು. ಈಗ, ಜನರು ಈ ವೇದಿಕೆಯಲ್ಲಿ ತಮ್ಮ ವೈಯಕ್ತಿಕ ಕಥೆಗಳನ್ನು ಸಹ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ಸರಿ, ನಾವು ಇದ್ದಕ್ಕಿದ್ದಂತೆ ಇದರ ಬಗ್ಗೆ ಏಕೆ ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ನೀವು ಯೋಚಿಸುತ್ತಿರಬಹುದು. ಇಲ್ಲೊಬ್ಬ ವ್ಯಕ್ತಿ ಒಂದು ಹೊಸ ಕಾರು (New Car) ಖರೀದಿಸಿದ ನಂತರ ಲಿಂಕ್ಡ್ಇನ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ತುಂಬಾನೇ ವೈರಲ್ (Viral) ಆಯಿತು. ಆದರೆ ನಂತರ ಆನ್ಲೈನ್ ನಲ್ಲಿ ದೊಡ್ಡ ಚರ್ಚೆಯೇ ನಡೆಯಿತು. ಏಕೆಂದರೆ ಈ ವ್ಯಕ್ತಿ ಹಂಚಿಕೊಂಡ ಪೋಸ್ಟ್ ತುಂಬಾನೇ ಹಾಸ್ಯಾಸ್ಪದ ಮತ್ತು ಗೊಂದಲಮಯವಾಗಿತ್ತು.


ತಾವೇ ಕೂಡಿಟ್ಟ ಹಣದಲ್ಲಿ ಕಾರು ಖರೀದಿ
ಈಗ ವೈರಲ್ ಆಗಿರುವ ಈ ಪೋಸ್ಟ್ ಅನ್ನು ಮಧುರ್ ಸಿಂಗ್ ಎಂಬ ವ್ಯಕ್ತಿ ಹಂಚಿಕೊಂಡಿದ್ದಾರೆ. ಅವರು ಯಾವುದೇ ಸಾಲ ಅಥವಾ ಕಂತುಗಳಿಲ್ಲದೆ ಅಂತಿಮವಾಗಿ ತಾವೇ ಕೂಡಿಟ್ಟ ಹಣದಲ್ಲಿ ಕಾರನ್ನು ಹೇಗೆ ಖರೀದಿಸಿದರು ಎಂಬುದರ ಬಗ್ಗೆ ಲಿಂಕ್ಡ್ಇನ್ ನಲ್ಲಿ ಹಂಚಿಕೊಂಡಿದ್ದಾರೆ.


ಈ ಒಂದು ಸಾಧನೆ ಮಾಡಿದ ನಂತರ ಅವರು ತಮ್ಮ ಮಾಜಿ ಗೆಳತಿಯರು, ಮಾಜಿ ಬಾಸ್ ಮತ್ತು ಒಬ್ಬ ತರಕಾರಿ ಮಾರುವವನಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಮಧುರ್ ಅವರು ಅದನ್ನು ಹೇಗೆ ಸಾಧಿಸಲು ಸಾಧ್ಯವಾಯಿತು ಎಂದು ಪೋಸ್ಟ್ ನಲ್ಲಿ ವಿವರಿಸಿದರು. ಆದಾಗ್ಯೂ, ಅವರ ಪೋಸ್ಟ್ ಅನ್ನು ಓದಿದ ನಂತರ, ನೆಟ್ಟಿಗರು ಅದರ ಸ್ವರೂಪದ ಬಗ್ಗೆ ಸ್ವಲ್ಪ ಗೊಂದಲಕ್ಕೊಳಗಾದರು.


ಲಿಂಕ್ಡ್ಇನ್ ನಲ್ಲಿ ಏನು ಬರೆದುಕೊಂಡಿದ್ದರು 
"ನಾನು ಟಾಟಾ ಟಿಯಾಗೊ ಕಾರನ್ನು ಖರೀದಿಸಿದ್ದೇನೆ ಎಂದು ಘೋಷಿಸಲು ರೋಮಾಂಚನಗೊಂಡಿದ್ದೇನೆ. ಪೂರ್ತಿ ಹಣವನ್ನು ಪಾವತಿಸಿದ್ದೇನೆ. ಯಾವುದೇ ಸಾಲ ಮಾಡಿಲ್ಲ ಮತ್ತು ಯಾವುದೇ ಕಂತುಗಳಿಲ್ಲದೆ ಕಾರು ಖರೀದಿಸಿದ್ದೇನೆ. ಕಾರು ಖರೀದಿಸಲು ನಾನು ಅನೇಕ ವರ್ಷಗಳ ಕಾಲ ಸ್ವಲ್ಪ ಸ್ವಲ್ಪ ಹಣವನ್ನು ಉಳಿಸಿದೆ. ನಾನು ಸ್ನೇಹಿತರೊಂದಿಗೆ ಪಾರ್ಟಿಗಳಿಗೆ ಹೋಗಲಿಲ್ಲ. ನನ್ನ ಗೆಳತಿ ಅಥವಾ ಹೆಂಡತಿಗಾಗಿ ನಾನು ದುಬಾರಿ ಉಡುಗೊರೆಗಳನ್ನು ಖರೀದಿಸಲಿಲ್ಲ. ನನ್ನ ತಾಯಿ ತರಕಾರಿ ಖರೀದಿಸಲು ನನ್ನನ್ನು ಕಳುಹಿಸಿದರೆ, ನಾನು ತರಕಾರಿ ಮಾರುವವರಲ್ಲಿ ಕೊತ್ತಂಬರಿ ಹಾಗೂ ಮೆಣಸನ್ನು ಉಚಿತವಾಗಿ ನೀಡುವಂತೆ ಕೇಳುತ್ತೇನೆ. ಹೀಗೆ ಅಲ್ಪ ಸ್ವಲ್ಪ ಹಣ ಉಳಿಸುವುದು ನನ್ನ ಗುರಿಯಾಗಿತ್ತು ನನ್ನ ಕನಸು ಈಡೇರುವಂತೆ ಮಾಡಿದ ಆ ಜನರಿಗೆ ಧನ್ಯವಾದ ಹೇಳಿದ್ದೇನೆ” ಎಂದು ಬರೆದಿದ್ದಾರೆ.


ಇದನ್ನೂ ಓದಿ:  Swiggy: ಆರ್ಡರ್​ ಲೇಟಾಯ್ತು ಅಂತ ಗುರ್​ ಅಂತಿದ್ದ ವ್ಯಕ್ತಿ; ಡೆಲಿವರಿ ಬಾಯ್ ಬಂದಾಗ ಮಾತ್ರ ಆಗಿದ್ದೇ ಬೇರೆ!

ನಾನು ರಾತ್ರಿಯಲ್ಲಿ ಸಹ ಹೆಚ್ಚುವರಿ ಪಾಳಿಯಲ್ಲಿ ಕೆಲಸ ಮಾಡಿದೆ. ಕೆಲವೊಮ್ಮೆ ಮೆಕ್ ಡೊನಾಲ್ಡ್ಸ್ ನಲ್ಲಿ ಸಹ ಕೆಲಸ ಮಾಡುತ್ತಿದ್ದೆ, ಕೆಲವೊಮ್ಮೆ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಟ್ಯೂಷನ್ ಗಳನ್ನು ಸಹ ನೀಡುತ್ತಿದ್ದೆ. ಅಂತಿಮವಾಗಿ ಕಠಿಣ ಪರಿಶ್ರಮವು ಫಲ ನೀಡಿದೆ ಎಂದು ಹೇಳಬಹುದು. ಎಲ್ಲಾ ಉಳಿತಾಯಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ನನ್ನ ಪೋಷಕರು, ನನ್ನ ಮಾಜಿ ಬಾಸ್ ಗಳು, ಮಾಜಿ ಮತ್ತು ಪ್ರಸ್ತುತ ಗೆಳತಿಯರಿಗೆ ಮತ್ತು ಕೊನೆಯದಾಗಿ ನನ್ನನ್ನು ಯಾವಾಗಲೂ ಬೆಂಬಲಿಸಿದ ಎಲ್ಲಾ ತರಕಾರಿ ಮಾರುವವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಮಧುರ್ ಸಿಂಗ್ ತಮ್ಮ ಕಥೆಯನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ. ಅವರು ಕಾರಿನೊಂದಿಗೆ ಪೋಸ್ ನೀಡುತ್ತಿರುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.

ಪೋಸ್ಟ್ ನೋಡಿ ನೆಟ್ಟಿಗರ ಕಾಮೆಂಟ್ ಹೀಗಿತ್ತು
ಈ ಪೋಸ್ಟ್ 20 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಗಳಿಸಿದೆ. ಸಿಂಗ್ ಅವರ ಪೋಸ್ಟ್ ವ್ಯಂಗ್ಯವಾಗಿದೆಯೇ ಅಥವಾ ಗಂಭೀರವಾಗಿದೆಯೇ ಎಂದು ನೆಟ್ಟಿಗರು ಖಚಿತವಾಗಿಲ್ಲ ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅನೇಕ ಕಾಮೆಂಟ್ ಗಳನ್ನು ಮಾಡಿದ್ದಾರೆ.


"ನನ್ನ ಪ್ರಶ್ನೆ ಎಂದರೆ ನೀವು ಮಾಜಿ ಗೆಳತಿ ಮತ್ತು ಪತ್ನಿಯನ್ನು ಉಲ್ಲೇಖಿಸಿದ್ದೀರಿ ಮತ್ತು ಮಾಜಿ ಮತ್ತು ಪ್ರಸ್ತುತ ಗೆಳತಿಯನ್ನು ಮತ್ತೆ ಮತ್ತೆ ಉಲ್ಲೇಖಿಸಿದ್ದೀರಿ. ನಿಮ್ಮ ಜೀವನದಲ್ಲಿ ಎಷ್ಟು ಮಹಿಳೆಯರು ಆಗಮಿಸಿದ್ದಾರೆ? ಮುಂದೆ ಏನೋ ಒಂದು ನಿಮಗೆ ಕಾದಿದೆ ಎಂಬುದು ನನ್ನ ಊಹೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.


ಇದನ್ನೂ ಓದಿ:  Kannada: ವಿದೇಶಿ ಪ್ರಜೆಗಳ ಕನ್ನಡ ಕಲಿಯುವ ಪ್ರಯತ್ನ; ವೈರಲ್ ಆಗ್ತಿದೆ ಸುಂದರ ವಿಡಿಯೋ

ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ಲಿಂಕ್ಡ್ಇನ್ ನಲ್ಲಿ ಇತ್ತೀಚೆಗೆ ವ್ಯಂಗ್ಯಭರಿತ ಪೋಸ್ಟ್ ಯಾವುದು ಮತ್ತು ಗಂಭೀರವಾದ ಪೋಸ್ಟ್ ಯಾವುದು ಅಂತ ಗುರುತಿಸುವುದು ಕಷ್ಟವಾಗುತ್ತಿದೆ" ಎಂದು ಹೇಳಿದ್ದಾರೆ.

Published by:Ashwini Prabhu
First published: