Triple Marriage: ‘ಮೂವರು ಹೆಂಡತಿಯರ ಮುದ್ದಿನ ಗಂಡ’, ಇದು ಸಹೋದರಿಯರ ಪ್ರೇಮ್​ ಕಹಾನಿ

ಆಫ್ರಿಕಾದ ಕಾಂಗೋ ದೇಶದ ನಿವಾಸಿಯೊಬ್ಬರು ಏಕಕಾಲಕ್ಕೆ ತ್ರಿವಳಿ ಸಹೋದರಿಯರನ್ನು ಮದುವೆಯಾಗಿದ್ದಾರೆ. ತ್ರಿವಳಿ ಸಹೋದರಿಯರು ವ್ಯಕ್ತಿಗೆ ಮದುವೆಯಾಗುವುದಾಗಿ ತಿಳಿಸಿದ್ದರು.

ತ್ರಿವಳಿ ಸಹೋದರಿಯರನ್ನು ಒಟ್ಟಿಗೆ ಮದುವೆಯಾದ ವ್ಯಕ್ತಿ

ತ್ರಿವಳಿ ಸಹೋದರಿಯರನ್ನು ಒಟ್ಟಿಗೆ ಮದುವೆಯಾದ ವ್ಯಕ್ತಿ

 • Share this:
  ಮದುವೆಯ (Marriage) ಬಾಂಧವ್ಯ ಜನ್ಮ ಜನ್ಮಾಂತರದ್ದು. ಮನೆಯಲ್ಲಿ (Home) ಅಕ್ಕ ಅಥವಾ ತಂಗಿಯ ಮದುವೆ ಇದೆ ಅಂದರೆ ಸಾಕು ಹರ್ಷವೋ ಹರ್ಷ. ಭಾರತೀಯ ಮದುವೆಗಳಲ್ಲಿ ಅಕ್ಕನ, ತಂಗಿಯ ಗಂಡನನ್ನು ಭಾವ ಎಂದು ಕರೆಯಲಾಗುತ್ತದೆ. ಅಳಿಯನಿಗೆ ಭಾರೀ ಗೌರವ ಸಲ್ಲಿಸಲಾಗುತ್ತದೆ. ಹೆಂಡತಿಯ ತಂಗಿ ಅಥವಾ ಅಕ್ಕನನ್ನು ಸೊಸೆಯಾಗಿ ಕಾಣುತ್ತಾರೆ. ಏಕಪತ್ನಿ, ಏಕಪತಿ ಪಧ್ಧತಿಗೆ ಹೆಚ್ಚು ಪ್ರಾಧಾನ್ಯತೆ ಇದೆ. ಆದರೆ ಇಲ್ಲೊಂದು ದೇಶದಲ್ಲಿ (Country) ಒಂದೇ ಕುಟುಂಬದ 3 ಸಹೋದರಿಯರು (Triple Sisters) ಒಂದೇ ಯುವಕನಿಗೆ ಪ್ರಪೋಸ್ ಮಾಡಿದ್ದಾರೆ. ಒಂದೇ ಮನೆಯ ಮೂವರು ಸಹೋದರಿಯರು ತನಗೆ ಪ್ರಪೋಸ್ ಮಾಡಿದ್ದು ಕಂಡು ಯುವಕ ಅಚ್ಚರಿಗೆ ಒಳಗಾಗಿದ್ದಾನೆ. ಸದ್ಯ ಎಲ್ಲಾ ಮೂವರನ್ನೂ ವಿವಾಹವಾಗಿದ್ದಾನೆ.

  ತ್ರಿವಳಿ ಸಹೋದರಿಯನ್ನು ಯುವಕ ಮದುವೆಯಾಗಿದ್ದು, ಭಾರೀ ವೈರಲ್ ಆಗಿದೆ. ಮೂವರು ಸಹೋದರಿಯರು, ಯುವಕನನ್ನು ಮದುವೆಯಾಗುವುದಾಗಿ ತಿಳಿಸಿದ್ದರು. ಯುವಕನ ಎದುರು ಮೂವರು ಮದುವೆ ಬಗ್ಗೆ ಸ್ವತಃ ಪ್ರಸ್ತಾಪ ಮುಂದಿಟ್ಟಿದ್ದರು. ಮೂವರೂ ಅವನನ್ನು ಇಷ್ಟಪಟ್ಟಿದ್ದರು. ಮದುವೆಯಾಗಿ ತುಂಬಾ ಸಂತೋಷಪಟ್ಟಿದ್ದಾರೆ. ಈ ಬಗ್ಗೆ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

  ಮೂರು ಮಹಿಳೆಯರನ್ನು ಮದುವೆಯಾದ ಪುರುಷ:

  ಮೂವರು ಮಹಿಳೆಯರನ್ನು ಮದುವೆಯಾಗಿರುವ ಈ ಪುರುಷ ಈಗ ಸುದ್ದಿಯಲ್ಲಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಅವರು ಮೂರು ಮಹಿಳೆಯರನ್ನು ಒಟ್ಟಿಗೆ ಮದುವೆಯಾಗಿದ್ದಾರೆ. ಮತ್ತು ಒಂದೇ ದಿನದಲ್ಲಿ ಮದುವೆಯಾಗಿದ್ದಾರೆ. ಎಲ್ಲಾ ಮೂರು ಮಹಿಳೆಯರು ತ್ರಿವಳಿಗಳು ಅಂದರೆ ಒಟ್ಟಿಗೆ ಜನಿಸಿದ  ಒಂದೇ ಮನೆಯ ಸಹೋದರಿಯರು ಆಗಿದ್ದಾರೆ.

  ಇದನ್ನೂ ಓದಿ: ಇವರು ಒಬ್ಬರಲ್ಲ, ಇಬ್ಬರು! ತಮಿಳುನಾಡಲ್ಲಿ ಅವಳಿ 'ಸಿಂಗಂ'ಗಳ ಹವಾ!

  ಈ ವ್ಯಕ್ತಿ ಆಫ್ರಿಕಾದ ಕಾಂಗೋ ದೇಶದ ನಿವಾಸಿಯಾಗಿದ್ದಾರೆ. ಮೂವರು ತ್ರಿವಳಿ ಸಹೋದರಿಯರನ್ನು ಮದುವೆಯಾಗಿರುವ ಈತನ ಹೆಸರು ಲುವಿಜೋ ಎಂದು ಗುರುತಿಸಲಾಗಿದೆ. ತ್ರಿವಳಿ ಸಹೋದರಿಯರು ಲುವಿಜೊಗೆ ಏಕಕಾಲಕ್ಕೆ, ಒಟ್ಟಿಗೆ ಮದುವೆ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪ ಮುಂದಿಟ್ಟಿದ್ದರು ಎಂದು ವರದಿಯಾಗಿದೆ.

  ತ್ರಿವಳಿ ಸಹೋದರಿಯರನ್ನು ಒಟ್ಟಿಗೆ ಮದುವೆಯಾದ ವ್ಯಕ್ತಿ

  ಲುವಿಜೊ ಮೂವರು ಸಹೋದರಿಯರನ್ನು ಒಟ್ಟಿಗೆ ಮದುವೆ ಆಗುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ತನ್ನ ಮೂರು ಮದುವೆಗಳ ಬಗ್ಗೆ, ಲುವಿಜೊ ಆಫ್ರಿಮ್ಯಾಕ್ಸ್ ಇಂಗ್ಲಿಷ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

  "ನಾನು ಕನಸು ಕಾಣುತ್ತಿರುವಂತೆ ಭಾಸವಾಗುತ್ತಿದೆ." ಮೂವರು ಸಹೋದರಿಯರನ್ನು ಒಟ್ಟಿಗೆ ಮದುವೆಯಾಗಿದ್ದೇನೆ. ಸದ್ಯ ಮೂವರು ಹೆಂಡತಿಯರು ಕೂಡ ಈ ಮದುವೆಯಿಂದ ತುಂಬಾ ಸಂತೋಷವಾಗಿದ್ದಾರೆ ಎಂದು ಲುವಿಜೋ ಹೇಳಿದ್ದಾರೆ.

  ಮದುವೆಯಾಗಿ ಖುಷಿಯಾಗಿದ್ದೇವೆ ಎಂದ ತ್ರಿವಳಿ ಸಹೋದರಿಯರು

  nypost.com ನ ವರದಿಯ ಪ್ರಕಾರ, ಲುವಿಜೊ ಮೊದಲು ನಟಾಲಿಯನ್ನು ಭೇಟಿಯಾದರು. ನಟಾಲಿ ನಂತರ ತನ್ನ ಸಹೋದರಿಯರಾದ ನಾಡೆಗೆ (ನಾಡೆಗೆ) ಮತ್ತು ನತಾಶಾ (ನತಾಶಾ) ಅವರನ್ನು ಭೇಟಿ ಮಾಡಿದರು. ಭೇಟಿಯ ನಂತರ ನಟಾಲಿಯ ಸಹೋದರಿಯರು ಕೂಡ ಲುವಿಜೋನನ್ನು ಪ್ರೀತಿಸುತ್ತಿದ್ದರು. ತ್ರಿವಳಿ ಸಹೋದರಿಯರು  ಲುವಿಜೊಗೆ ಪ್ರಪೋಸ್ ಮಾಡಿದ್ದು, ಮದುವೆಗೆ ಒಟ್ಟಿಗೆ ಪ್ರಸ್ತಾಪ ಇಟ್ಟಿದ್ದರು.

  ಅಫ್ರಿಮ್ಯಾಕ್ಸ್ ಇಂಗ್ಲಿಷ್‌ನೊಂದಿಗೆ ಮಾತನಾಡುತ್ತಾ, ನಾವು ಮೂವರು ತ್ರಿವಳಿ ಸಹೋದರಿಯರು ಲುವಿಜೋನನ್ನು ಮದುವೆಯಾಗಲು ಬಯಸಿದ್ದಾಗಿ ಹೇಳಿದ್ದೆವು. ಆಗ ಅವರು ಆಘಾತಕ್ಕೊಳಗಾದರು. ಏಕೆಂದರೆ ಅವನು ಈಗಾಗಲೇ ನಮ್ಮೆಲ್ಲರನ್ನು ಪ್ರೀತಿಸುತ್ತಿದ್ದನು. ಹೀಗಾಗಿ ಮದುವೆಯನ್ನು ನಿರಾಕರಿಸಲು ಸಾಧ್ಯವಾಗಲಿಲ್ಲ. ನಾವು ಮೂವರೂ ಕೂಡ ಲುವಿಜೊನನ್ನು ಪ್ರೀತಿಸುತ್ತಿದ್ದೆವು ಎಂದು ತ್ರಿವಳಿ ಸಹೋದರಿಯರು ಹೇಳಿದ್ದಾರೆ.

  ಪೋಷಕರು ಮದುವೆಗೆ ಒಪ್ಪಲಿಲ್ಲ

  ಈ ಸಂಬಂಧದಿಂದ ನಮ್ಮ ಕುಟುಂಬ ಸದಸ್ಯರು ಸಂತೋಷ ಪಟ್ಟಿಲ್ಲ ಎಂದು ಲುವಿಜೊ ಹೇಳಿದ್ದಾರೆ. ಲುವಿಜೊ ಪ್ರಕಾರ- 'ನನ್ನ ಹೆತ್ತವರಿಗೆ ನಾನು ಏನು ಮಾಡುತ್ತಿದ್ದೇನೆಂದು ಅರ್ಥವಾಗುತ್ತಿಲ್ಲ. ಈ ಬಹುಪತ್ನಿತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಅವರು ಮದುವೆಯಲ್ಲಿ ಭಾಗವಹಿಸಲಿಲ್ಲ.

  ಇದನ್ನೂ ಓದಿ: ಬಂದ ಕರೆಗಳನ್ನು ಸ್ವೀಕರಿಸದೆ, ಒಳ್ಳೆ ಸುದ್ದಿ ಮಿಸ್ ಮಾಡಿಕೊಂಡಿದ್ದ ಲೇಡಿ.. ಎಂತಹ ಲಾಟರಿ ಹೊಡೆದಿದೆ ನೋಡಿ

  ಇತರರು ಏನೇ ಅಂದುಕೊಂಡರೂ ಮೂವರನ್ನೂ ಮದುವೆಯಾಗಲು ನನಗೆ ಸಂತೋಷವಾಗಿದೆ ಎನ್ನುತ್ತಾರೆ ಲುವಿಜೊ. ಪ್ರೀತಿಗೆ ಮಿತಿಯಿಲ್ಲ ಎಂದು ನಾನು ಹೇಳಬಲ್ಲೆ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವ್ಯಕ್ತಿಯ ಮದುವೆ ಬಗ್ಗೆ ಜನ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ.
  Published by:renukadariyannavar
  First published: