Viral Video: ಮಳೆಯಿಂದಾದ ಸಮಸ್ಯೆ ನಡುವೆಯೂ ಹಣ ಸಂಪಾದಿಸಿದ ವ್ಯಕ್ತಿ!

ಇಲ್ಲೊಬ್ಬ ವ್ಯಕ್ತಿ ಇದ್ದಾರೆ ನೋಡಿ, ಆತ ಪಾದಚಾರಿಗಳಿಗೆ ಜಲಾವೃತಗೊಂಡ ರಸ್ತೆಯನ್ನು ದಾಟಲು ಕಷ್ಟವಾಗುತ್ತಿದ್ದಾಗ ಮರದಿಂದ ಮಾಡಿದಂತಹ ಒಂದು ತಳ್ಳುಗಾಡಿಯನ್ನು ಅವರಿಗೆ ರಸ್ತೆ ದಾಟಿಸಲು ತಂದಿರುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.

ಜಲಾವೃತಗೊಂಡ ರಸ್ತೆ ದಾಟಲು ತಳ್ಳುಗಾಡಿ ಬಳಕೆ

ಜಲಾವೃತಗೊಂಡ ರಸ್ತೆ ದಾಟಲು ತಳ್ಳುಗಾಡಿ ಬಳಕೆ

 • Share this:
  ಕೆಲವೊಬ್ಬರು ತಮಗೆ ಬಂದ ಸಮಸ್ಯೆಯನ್ನು (Problem) ಮತ್ತು ಅದರ ಅನಾನುಕೂಲತೆಯನ್ನು (Inconvenience) ದೂಷಿಸುತ್ತಾ ಸಮಯ ವ್ಯರ್ಥ ಮಾಡಿದರೆ, ಇನ್ನೂ ಕೆಲವರು ಆ ಅನಾನುಕೂಲತೆಯನ್ನು ಹೇಗೆ ಅನುಕೂಲತೆಯಾಗಿ ಪರಿವರ್ತಿಸಿಕೊಳ್ಳಬೇಕು ಅಂತ ಯೋಚಿಸುತ್ತಾರೆ. ಇದನ್ನೇ ಅಲ್ಲವೇ ಜಾಣತನ ಅಂತ ಹೇಳೋದು, ಸಮಸ್ಯೆ ಇರುವುದು ಗೊತ್ತಾದ ಮೇಲೆ ಆ ಸಮಸ್ಯೆಗೆ ಪರಿಹಾರ ಹುಡುಕುವುದು ಬುದ್ದಿಜೀವಿಯಾದ ಮನುಷ್ಯನ (Man) ಮೊದಲ ಕೆಲಸ. ಹೀಗೆ ಕೆಲವರು ಎಂತಹದೇ ಸ್ಥಿತಿಯಲ್ಲೂ ಸಹ ಅನುಕೂಲತೆಯನ್ನು ಹುಡುಕುತ್ತಾರೆ ಮತ್ತು ಅವರ ಒಳ್ಳೆಯದಕ್ಕೆ ಸಂದರ್ಭವನ್ನು ಉಪಯೋಗಿಸಿಕೊಳ್ಳುತ್ತಾರೆ. ಈ ವ್ಯಕ್ತಿ (Person) ತನ್ನ ಸಮಯವನ್ನು (Time) ಹೇಗೆ ಅನುಕೂಲತೆಗೆ ತಕ್ಕ ಬಳಸಿಕೊಂಡಿದ್ದಾರೆ ನೋಡಿ

  ಈಗಂತೂ ಮಳೆಗಾಲ ಅಂತ ಎಲ್ಲರಿಗೂ ಗೊತ್ತು ಮತ್ತು ಎಲ್ಲೆ ನೋಡಿದರೂ ಮಳೆ ನೀರು ನಿಂತಿರುವುದನ್ನು ನಾವು ನೋಡಬಹುದು. ಮಾನ್ಸೂನ್ ನಲ್ಲಿ ಸಾಮಾನ್ಯವಾಗಿ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿರುತ್ತವೆ ಮತ್ತು ಇದು ನೀವು ಬಹುತೇಕ ದೇಶಗಳಲ್ಲಿ ಕಾಣುವ ಸಾಮಾನ್ಯವಾದ ದೃಶ್ಯ.

  ಜಲಾವೃತಗೊಂಡ ರಸ್ತೆ ದಾಟಲು ತಳ್ಳುಗಾಡಿ ಬಳಕೆ
  ಹೀಗೆ ಜಲಾವೃತಗೊಂಡ ರಸ್ತೆಗಳಲ್ಲಿ ಓಡಾಡುವುದು ಎಂದರೆ ಪಾದಚಾರಿಗಳಿಗೆ ಒಂದು ದೊಡ್ಡ ಕಷ್ಟಕರವಾದ ಕೆಲಸ. ಇತ್ತೀಚೆಗೆ ಬೆಂಗಳೂರಿನ ಜನರು ನಗರದ ಪ್ರವಾಹ ಪೀಡಿತ ಬೀದಿಗಳಲ್ಲಿ ಸಂಚರಿಸಲು ಟ್ರ್ಯಾಕ್ಟರ್ ಗಳು ಮತ್ತು ಬುಲ್ಡೋಜರ್ ಗಳನ್ನು ಬಳಸಿದ್ದನ್ನು ನಾವೆಲ್ಲಾ ನೋಡಿದ್ದೇವೆ.

  ಇದನ್ನೂ ಓದಿ: Girl's Campaign: ಶಾಲೆ ವಿರುದ್ಧವೇ ಸಿಡಿದೆದ್ದ ವಿದ್ಯಾರ್ಥಿನಿ! ಬಾಲಕಿಯರ ಮಾನ ಕಾಪಾಡಲು ಅಭಿಯಾನ

  ಈಗ, ಇಲ್ಲೊಬ್ಬ ವ್ಯಕ್ತಿ ಇದ್ದಾರೆ ನೋಡಿ, ಆತ ಪಾದಚಾರಿಗಳಿಗೆ ಜಲಾವೃತಗೊಂಡ ರಸ್ತೆಯನ್ನು ದಾಟಲು ಕಷ್ಟವಾಗುತ್ತಿದ್ದಾಗ ಮರದಿಂದ ಮಾಡಿದಂತಹ ಒಂದು ತಳ್ಳುಗಾಡಿಯನ್ನು ಅವರಿಗೆ ರಸ್ತೆ ದಾಟಿಸಲು ತಂದಿರುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.

  ಪ್ರವಾಹ ಪೀಡಿತ ರಸ್ತೆಯನ್ನು ದಾಟಲು ಸಹಾಯ ಮಾಡುವ ವಿಡಿಯೋವೊಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಆದಾಗ್ಯೂ, ಆ ವ್ಯಕ್ತಿಯು ಅದನ್ನು ಉಚಿತವಾಗಿ ಮಾಡುತ್ತಿಲ್ಲ ಮತ್ತು ಭಾರಿ ಮಳೆಯಿಂದ ಉಂಟಾಗುವ ಅನಾನುಕೂಲತೆಯನ್ನು ತಪ್ಪಿಸಲು ಜನರಿಗೆ ಸಹಾಯ ಮಾಡಲು ಜನರಿಂದ ಹಣವನ್ನು ಸಹ ತೆಗೆದುಕೊಳ್ಳುತ್ತಿದ್ದಾನೆ.

  ವಿಡಿಯೋದಲ್ಲಿ ಏನಿದೆ?
  ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ರೆಡ್ಡಿಟ್ ನಲ್ಲಿ ಗುರುವಾರದಂದು ಬಿಎಲ್ಫೋಂಜೊ ಎಂಬ ಬಳಕೆದಾರರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ ನೀಲಿ ಟೀ ಶರ್ಟ್ ಧರಿಸಿದ ವ್ಯಕ್ತಿಯು ಮಳೆಯ ಸಮಯದಲ್ಲಿ ರಸ್ತೆ ದಾಟಲು ಸಹಾಯ ಮಾಡಲು ಇಬ್ಬರು ಪಾದಚಾರಿಗಳಿಂದ ಹಣವನ್ನು ಸಂಗ್ರಹಿಸುವುದನ್ನು ನಾವು ನೋಡಬಹುದು. ಆ ವ್ಯಕ್ತಿಯು ತನ್ನ ಹಣವನ್ನು ಒಂದು ಬಾಟಲಿಯಲ್ಲಿ ಹಾಕಿ ನಂತರ ಇಬ್ಬರು ವ್ಯಕ್ತಿಗಳನ್ನು ಆ ಗಾಡಿಯಲ್ಲಿ ಹತ್ತಿಸಿಕೊಂಡು ರಸ್ತೆಯ ಇನ್ನೊಂದು ಬದಿಗೆ ಸಾಗಿಸುತ್ತಾನೆ.

  [embed]https://www.reddit.com/r/Damnthatsinteresting/comments/xfd5xs/to_earn_money_during_inconvenience/?utm_source=share&utm_medium=web2x&context=3[/embed]

  ವಿಡಿಯೋದಲ್ಲಿ, ಜನರು ವ್ಯಕ್ತಿಯ ಮರದ ಗಾಡಿಯ ಮೇಲೆ ನಿಂತುಕೊಂಡು ರಸ್ತೆಯನ್ನು ದಾಟಲು ತಮ್ಮ ಸರದಿಗಾಗಿ ಕಾಯುತ್ತಿರುವುದನ್ನು ಸಹ ನಾವು ನೋಡಬಹುದು. ಅವನು ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ ಜನರಿಗೆ ಆ ರಸ್ತೆಯನ್ನು ದಾಟಲು ಸಹಾಯ ಮಾಡುತ್ತಿರುವುದನ್ನು ನಾವು ನೋಡಬಹುದು. ಒಬ್ಬರನ್ನು ಆ ಕಡೆ ರಸ್ತೆಗೆ ಬಿಟ್ಟ ನಂತರ ಆ ವ್ಯಕ್ತಿಯು ತನ್ನ ಮರದ ಗಾಡಿಯ ಮೇಲೆ ಇನ್ನೂ ಇಬ್ಬರು ವ್ಯಕ್ತಿಗಳನ್ನು ಹತ್ತಿಸಿಕೊಳ್ಳುತ್ತಾನೆ ಮತ್ತು ಎದುರಿನ ರಸ್ತೆಗೆ ಬಿಟ್ಟು ಬರುತ್ತಾನೆ.

  ಈ ವಿಡಿಯೋ ತುಣುಕಿನಲ್ಲಿ, ಅನೇಕ ವಾಹನಗಳು ಆ ಜಲಾವೃತಗೊಂಡ ರಸ್ತೆಯಲ್ಲಿ ಹಾಗೆ ನಿಲ್ಲದೆಯೇ ಹೋಗುತ್ತಿರುವುದನ್ನು ನಾವು ನೋಡಬಹುದು.

  ಪೋಸ್ಟ್ ಗೆ ಹೆಚ್ಚು ಅಪ್ವೋಟ್ ಬಂದಿವೆ
  "ಅನಾನುಕೂಲತೆಯ ಸಮಯದಲ್ಲಿಯೂ ಹಣ ಸಂಪಾದನೆ" ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋ ಹಂಚಿಕೊಂಡಾಗಿನಿಂದ, ಇದು ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  ಇದು ಕೇವಲ ಒಂದೇ ದಿನದಲ್ಲಿ 55,000ಕ್ಕೂ ಹೆಚ್ಚು ಅಪ್ವೋಟ್ ಗಳನ್ನು ಗಳಿಸಿದೆ ಮತ್ತು 800ಕ್ಕೂ ಹೆಚ್ಚು ರೆಡ್ಡಿಟ್ ಬಳಕೆದಾರರು ಪೋಸ್ಟ್ ಗೆ ಕಾಮೆಂಟ್ ಸಹ ಮಾಡಿದ್ದಾರೆ.

  ಇದನ್ನೂ ಓದಿ:  Viral Video: ಮಲಗಿರುವ ಸಿಂಹಿಣಿಯನ್ನು ಕೆಣಕಿದ ಸಿಂಹ; ಬಳಿಕ ಏನಾಯ್ತು? ಈ ವಿಡಿಯೋ ನೋಡಿ

  ಒಬ್ಬ ಬಳಕೆದಾರರು ವಿಡಿಯೋ ನೋಡಿ "ವ್ಯವಹಾರದ ಮೊದಲ ನಿಯಮ: ಜನರ ಅಗತ್ಯವನ್ನು ಕಂಡುಕೊಳ್ಳಿ ಮತ್ತು ಅದನ್ನು ಪೂರೈಸಿ" ಎಂದು ಹೇಳಿದರು. ಇನ್ನೊಬ್ಬರು "ವ್ಯವಹಾರದ ಎರಡನೇ ನಿಯಮ: ಸಮಸ್ಯೆಯನ್ನು ಸೃಷ್ಟಿಸಿ ಮತ್ತು ಪರಿಹಾರವನ್ನು ಮಾರಾಟ ಮಾಡಿ” ಎಂದು ಬರೆದಿದ್ದಾರೆ.
  Published by:Ashwini Prabhu
  First published: