• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಹೆಂಡತಿಗೆ ಡಿವೋರ್ಸ್ ಕೊಟ್ಟೆ ಅನ್ನೋ ಖುಷಿಗೆ ಬಂಗಿ ಜಂಪಿಂಗ್ ಮಾಡಿದ ವ್ಯಕ್ತಿ, ಆದರೆ ಆಗಿದ್ದೇ ಬೇರೆ

Viral Video: ಹೆಂಡತಿಗೆ ಡಿವೋರ್ಸ್ ಕೊಟ್ಟೆ ಅನ್ನೋ ಖುಷಿಗೆ ಬಂಗಿ ಜಂಪಿಂಗ್ ಮಾಡಿದ ವ್ಯಕ್ತಿ, ಆದರೆ ಆಗಿದ್ದೇ ಬೇರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಲ್ಲೊಬ್ಬ ವ್ಯಕ್ತಿ ತಾನು ತನ್ನ ಹೆಂಡತಿಯಿಂದ ಬೇರ್ಪಟ್ಟಿದ್ದೇನೆ ಅಂತ ಖುಷಿಗೆ ಬಂಗಿ ಜಂಪಿಂಗ್ ಗೆ ಹೋಗಿದ್ದಾನೆ ನೋಡಿ. ಆದರೆ ಹಾಗೆ ಬಂಗಿ ಜಂಪಿಂಗ್ ಗೆ ಹೋದ ಆತ ಮಾಡಿಕೊಂಡ ಅವಾಂತರವನ್ನು ನೀವು ನೋಡಿದ್ರೆ ಒಂದು ಕ್ಷಣ ಶಾಕ್ ಆಗ್ತೀರಾ.

  • Share this:

ಮೊದಲೆಲ್ಲಾ ಗಂಡ-ಹೆಂಡತಿ (Husband-Wife) ಇಬ್ಬರು ಖುಷಿ ಖುಷಿಯಾಗಿ ಸಂಸಾರ ನಡೆಸಿದರೆ ಸಾಕು, ದಂಪತಿಗಳ (Couple) ಮಧ್ಯೆ ಯಾವುದೇ ಚಿಕ್ಕ-ಪುಟ್ಟ ವಿಷಯಗಳಿಗೆ ಜಗಳ ಆಗಬಾರದು ಅಂತ ವಿವಾಹಿತರು ಅಂದುಕೊಳ್ಳುತ್ತಿದ್ದರು. ಆದರೆ ಈಗ ಇತ್ತೀಚಿನ ದಿನಗಳಲ್ಲಿ ಈ ಮದುವೆಗಳು, ಸಂಸಾರ ಎಂಬುದು ನೀರಿನ ಮೇಲಿನ ಗುಳ್ಳೆಯಂತೆ ಆಗಿವೆ. ಹೌದು.. ನಾವು ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಇತ್ತೀಚೆಗೆ ಕೆಲವು ದಂಪತಿಗಳು ತಾವು ತಮ್ಮ ಸಂಗಾತಿಯೊಂದಿಗೆ ಬೇರ್ಪಟ್ಟಿದ್ದೇವೆ ಎಂದರೆ ಅವರಿಂದ ವಿಚ್ಛೇದನ ಪಡೆದಿದ್ದೇವೆ ಅಂತ ನೋವು ಪಡುವ ಬದಲಿಗೆ ಖುಷಿಯಾಗಿರುವ ರೀತಿಯ ಪೋಸ್ಟ್ ಗಳು ಹಾಕುವುದನ್ನು ನೋಡುತ್ತಿದ್ದೇವೆ.


ಹೌದು, ಇತ್ತೀಚೆಗೆ ಒಬ್ಬ ಮಹಿಳೆ ತಾನು ತನ್ನ ಗಂಡನಿಂದ ಡಿವೋರ್ಸ್ ಪಡೆದಿದ್ದೇನೆ ಅಂತ ‘ನಾನು ಡಿವೋರ್ಸ್ ಪಡೆದಿದ್ದೇನೆ’ ಅಂತ ಫೋಟೋಶೂಟ್ ಮಾಡಿಸಿಕೊಂಡಿರುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು.


ಕೆಲವು ಪುರುಷರು ಸಹ ಹೆಂಡತಿಯ ಸಹವಾಸ ಬಿಟ್ಟುಹೋದರೆ ಸಾಕಪ್ಪಾ ಅನ್ನೋರು ಇದ್ದಾರೆ. ಆದರೆ ಇಲ್ಲಿ ಎಲ್ಲರಿಗೂ ತಮ್ಮದೇ ಆದ ಸಮಸ್ಯೆಗಳು ಮತ್ತು ಕಾರಣಗಳು ಇದ್ದೇ ಇರುತ್ತವೆ. ಹಾಗಾಗಿ ಇಲ್ಲಿ ಇದು ತಪ್ಪು, ಇದು ಸರಿ ಅನ್ನೋ ವಾದಕ್ಕೆ ಅಥವಾ ನಿರ್ಣಯಕ್ಕೆ ನಾವು ಇಳಿಬೇಕಾಗಿಲ್ಲ.


ಇದನ್ನೂ ಓದಿ: ವಿಮಾನದಲ್ಲೂ ಬಹಳ ಗಲೀಜು ಮಾಡ್ತಾರಂತೆ ಪ್ರಯಾಣಿಕರು, ಗಗನಸಖಿಯಿಂದ ರಹಸ್ಯ ಮಾಹಿತಿ ಬಹಿರಂಗ


ತನ್ನ ಹೆಂಡತಿಯಿಂದ ಡಿವೋರ್ಸ್ ಪಡೆದಿರುವ ಖುಷಿಗೆ ಬಂಗಿ ಜಂಪಿಂಗ್


ಇಲ್ಲೊಬ್ಬ ವ್ಯಕ್ತಿ ಸಹ ತಾನು ತನ್ನ ಹೆಂಡತಿಯಿಂದ ಬೇರ್ಪಟ್ಟಿದ್ದೇನೆ ಅಂತ ಖುಷಿಗೆ ಬಂಗಿ ಜಂಪಿಂಗ್ ಗೆ ಹೋಗಿದ್ದಾನೆ ನೋಡಿ. ಆದರೆ ಹಾಗೆ ಬಂಗಿ ಜಂಪಿಂಗ್ ಗೆ ಹೋದ ಆತ ಮಾಡಿಕೊಂಡ ಅವಾಂತರವನ್ನು ನೀವು ನೋಡಿದರೆ ಒಂದು ಕ್ಷಣ ಶಾಕ್ ಆಗ್ತೀರಾ.


ಬಂಗಿ ಜಂಪಿಂಗ್ ಗೆ ಹೋದ ಈ ವ್ಯಕ್ತಿ ತನ್ನ ಮೈಗೆ ಕಟ್ಟಿಕೊಂಡ ಹಗ್ಗ ಕಟ್ ಆಗಿ ಕುತ್ತಿಗೆ ಮುರಿದುಕೊಂಡು 70 ಅಡಿ ಕೆಳಗೆ ಬಿದ್ದಿದ್ದಾರೆ. ಈ ವರ್ಷದ ಫೆಬ್ರವರಿ 11 ರಂದು ಬ್ರಿಡ್ಜ್ ಸ್ವಿಂಗ್ ನಲ್ಲಿ ಭಾಗವಹಿಸಲು ಬ್ರೆಜಿಲ್ ನ ಕ್ಯಾಂಪೊ ಮ್ಯಾಗ್ರೊಗೆ ತೆರಳಿದ್ದ 22 ವರ್ಷದ ರಾಫೆಲ್ ಡಾಸ್ ಸ್ಯಾಂಟೋಸ್ ಟೋಸ್ಟಾ, ಹಗ್ಗ ಕಟ್ ಆದ ನಂತರ ಕೆಳಕ್ಕೆ ಬಿದ್ದು ತೀವ್ರವಾಗಿ ಗಾಯ ಮಾಡಿಕೊಂಡಿದ್ದಾರೆ.


ಸಾಂದರ್ಭಿಕ ಚಿತ್ರ


ತಮ್ಮ ಡಿವೋರ್ಸ್ ಮತ್ತು ಈ ಘಟನೆ ಬಗ್ಗೆ ಏನ್ ಹೇಳ್ತಾರೆ ನೋಡಿ ಈ ವ್ಯಕ್ತಿ


"ನಾನು ಯಾವಾಗಲೂ ತುಂಬಾ ಶಾಂತ ವ್ಯಕ್ತಿಯಾಗಿದ್ದೇನೆ, ಆದರೆ ಇತ್ತೀಚೆಗೆ ನಮ್ಮ ಸಂಸಾರದಲ್ಲಿ ಕೆಲವು ವಿಷಯಗಳು ಬದಲಾದವು. ಆದ್ದರಿಂದ ನನ್ನ ಹೆಂಡತಿಯಿಂದ ವಿಚ್ಛೇದನೆ ಪಡೆದ ನಂತರ ಈಗ ನಾನು ನನ್ನ ಜೀವನವನ್ನು ಸಾಧ್ಯವಿರುವ ಎಲ್ಲಾ ರೀತಿಯಿಂದಲೂ ಆನಂದಿಸಲು ಬಯಸಿದ್ದೆ.



ನಾನು ಜೀವನದಲ್ಲಿ ತುಂಬಾನೇ ಸಾಹಸಮಯ ಕೆಲಸಗಳನ್ನು ಮಾಡಲು ಇಷ್ಟಪಡುತ್ತೇನೆ. ನಾನು ನನ್ನ ಜೀವಕ್ಕೆ ಎಂದಿಗೂ ಬೆಲೆ ಕೊಟ್ಟಿಲ್ಲ" ಎಂದು ಅವರು ಹೇಳಿದರು. "ಇಂತಹ ಘಟನೆಗಳು ನಾವು ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸುತ್ತವೆ ಮತ್ತು ದೇವರಿಗೆ ಮತ್ತು ನಮಗೆ ಜೀವನದಲ್ಲಿ ಸಿಕ್ಕ ಖುಷಿಗೆ ಕೃತಜ್ಞರಾಗಿರುತ್ತೀರಿ.


ನಾನು ಮೊದಲು ನನ್ನ ಜೀವದ ಬಗ್ಗೆ ಅಷ್ಟಾಗಿ ಕಾಳಜಿ ವಹಿಸುತ್ತಿರಲಿಲ್ಲ ಎಂದಲ್ಲ, ಆದರೆ ನಾನು ಅದನ್ನು ಈ ದೃಷ್ಟಿಕೋನದಿಂದ ನೋಡಿರಲಿಲ್ಲ. ನನ್ನ ಜೀವನ ಎಂದಿಗೂ ಒಂದೇ ರೀತಿಯಲ್ಲಿ ಇರುವುದಿಲ್ಲ ಅಂತ ನಾನು ಅರಿತುಕೊಂಡೆ. ಜೀವಂತವಾಗಿದ್ದಕ್ಕಾಗಿ ನಾನು ದೇವರಿಗೆ ತುಂಬಾನೇ ಕೃತಜ್ಞನಾಗಿರಬೇಕು” ಎಂದು ಹೇಳಿದರು.




ಇವರು ಹಗ್ಗ ಕಟ್ ಆಗಿ ಕೆಳಕ್ಕೆ ಬಿದ್ದಾಗ ಮಿಲಿಟರಿ ಪೊಲೀಸ್ ಏರ್ ಆಪರೇಷನ್ಸ್ ಬೆಟಾಲಿಯನ್ ನ ವೈದ್ಯಕೀಯ ತಂಡವು ಟೋಸ್ಟಾ ಅವರನ್ನು ಮೇಲಕ್ಕೆ ತಂದಿತು ಮತ್ತು ನಂತರದಲ್ಲಿ ಅವರನ್ನ ಹೆಲಿಕಾಪ್ಟರ್ ನಲ್ಲಿ ಕ್ಯಾಂಪೊ ಲಾರ್ಗೊದ ರೋಸಿಯೋ ಆಸ್ಪತ್ರೆಗೆ ಸೇರಿಸಿತು. ಅವರು ಈಗ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆಗೆ ಒಳಪಟ್ಟಿದ್ದಾರೆ.


ಈ ಹಿಂದೆ ಸಹ ಇಂತಹದೇ ಒಂದು ಘಟನೆ ನಡೆದಿತ್ತು


ಈ ಹಿಂದೆ ಸಹ ಥೈಲ್ಯಾಂಡ್ ನಲ್ಲಿ ಪ್ರವಾಸಿಗನೊಬ್ಬ ಬಂಗಿ ಜಂಪಿಂಗ್ ಮಾಡಲು ಹೋಗಿ, ಹಗ್ಗ ಕಟ್ ಆಗಿ ಕೆಳಗಿರುವ ನೀರಿಗೆ ಬಿದ್ದಿದ್ದನು. ಆದರೆ ಪ್ರಾಣಕ್ಕೆ ಏನೂ ಹಾನಿ ಆಗಿರಲಿಲ್ಲ, ಚಿಕ್ಕ ಪುಟ್ಟ ಗಾಯಗಳೊಂದಿಗೆ ಎಸ್ಕೇಪ್ ಆಗಿದ್ದರು. ಆ ಭಯಾನಕ ವೀಡಿಯೋ ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

top videos
    First published: