Viral Video: ಶರ್ಟ್ ಹಾಗೂ ಲುಂಗಿ ಧರಿಸಿ ರಸ್ತೆಮಧ್ಯೆ ಪ್ರಭುದೇವ ಹಾಡಿಗೆ ಡ್ಯಾನ್ಸ್; ಸೋಶಿಯಲ್ ಮೀಡಿಯಾದಲ್ಲಿ ಈಗ ಸಿಕ್ಕಾಪಟ್ಟೆ ಫೇಮಸ್

ಈ ವಿಡಿಯೋದಲ್ಲಿ ಸುಮಾರು 50 ವರ್ಷದ ವ್ಯಕ್ತಿಯೋರ್ವ ಪ್ರಭುದೇವ ಅವರ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿರುವುದನ್ನು ನೀವು ನೋಡಿದರೆ ನಿಜವಾಗಿಯೂ ಆಶ್ಚರ್ಯ ಪಡುತ್ತೀರಿ. ಆ ವಿಡಿಯೋ ಇದೀಗ ಇಂಟರ್ನೆಟ್‍ನಲ್ಲಿ ಜನರ ಮನಸ್ಸು ಗೆದ್ದಿದೆ ಎಂದರೆ ತಪ್ಪಾಗಲಾರದು. ಈ ವಿಡಿಯೋ ವೈರಲ್ ಆಗಿದ್ದು ಇಂಟರ್ನೆಟ್ ಬಳಕೆದಾರರು ಇದಕ್ಕೆ ಸಾಕಾಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಪ್ರಭುದೇವ ಹಾಡಿಗೆ ಡ್ಯಾನ್ಸ್ ಮಾಡಿದ ವ್ಯಕ್ತಿ

ಪ್ರಭುದೇವ ಹಾಡಿಗೆ ಡ್ಯಾನ್ಸ್ ಮಾಡಿದ ವ್ಯಕ್ತಿ

  • Share this:
ಈ ವಿಡಿಯೋದಲ್ಲಿ (Video) ಸುಮಾರು 50 ವರ್ಷದ ವ್ಯಕ್ತಿಯೋರ್ವ ಪ್ರಭುದೇವ (Prabhu Deva) ಅವರ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ (Dance) ಮಾಡಿರುವುದನ್ನು ನೀವು ನೋಡಿದರೆ ನಿಜವಾಗಿಯೂ ಆಶ್ಚರ್ಯ ಪಡುತ್ತೀರಿ. ಆ ವಿಡಿಯೋ ಇದೀಗ ಇಂಟರ್ನೆಟ್‍ನಲ್ಲಿ ಜನರ ಮನಸ್ಸು ಗೆದ್ದಿದೆ ಎಂದರೆ ತಪ್ಪಾಗಲಾರದು. ಈ ವಿಡಿಯೋ ವೈರಲ್ ಆಗಿದ್ದು ಇಂಟರ್ನೆಟ್ (Internet) ಬಳಕೆದಾರರು ಇದಕ್ಕೆ ಸಾಕಾಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ತೆಲಗು ನಟ ರಾಚ ರವಿ ಹಾಗೂ ಖ್ಯಾತ ಕ್ರಿಕೇಟ್ ಆಟಗಾರ ಸಂಜು ಸ್ಯಾಮ್ಸನ್ ಸೇರಿದಂತೆ ಹಲವಾರು ಸೆಲೆಬ್ರೆಟಿಗಳು (Celebrity) ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಭುದೇವ ಹಾಡಿಗೆ ಡ್ಯಾನ್ಸ್ ಮಾಡಿದ ವ್ಯಕ್ತಿ ವಿಡಿಯೋ ವೈರಲ್
ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು “ಚಿಕು ಬುಕು ರೈಲೆ” ಎಂಬ ಖ್ಯಾತ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನರ ಪ್ರೀತಿ ಹಾಗೂ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ಒಂದು ವಾರದ ಹಿಂದೆಯಷ್ಟೆ ಇನ್ ಸ್ಟಾಗ್ರಾಂ ಅಲ್ಲಿ ಹಂಚಿಕೆಯಾಗಿದ್ದ ಈ ವಿಡಿಯೋ ಈಗಾಗಲೇ 13 ಮಿಲಿಯನ್ ಅಷ್ಟು ವೀಕ್ಷಣೆ ಕಂಡಿದೆ.


View this post on Instagram


A post shared by Raj Kumar (@rajkumar.984045)
ಈ ವೈರಲ್ ವಿಡಿಯೋ ಐಕಾನಿಕ್ ಸ್ಟಾರ್ ಪ್ರಭುದೇವ ನಟಿಸಿರುವ 1993 ರಲ್ಲಿ ತೆರೆಕಂಡ “ಜೆಂಟಲ್ ಮ್ಯಾನ್” ಚಿತ್ರದ ಹಾಡಿಗೆ ಮಧ್ಯ ವಯಸ್ಸಿನ ವ್ಯಕ್ತಿ ಒಬ್ಬರು ಹೆಜ್ಜೆ ಹಾಕಿರುವುದನ್ನು ತೋರಿಸುತ್ತದೆ. ಈ ವ್ಯಕ್ತಿಯು ಆ ಹಾಡಿಗೆ ಅದ್ಭುತವಾಗಿ ಹೆಜ್ಜೆಹಾಕಿದ್ದು 49 ವರ್ಷದ ಸಿನಿಮಾ ನಿರ್ದೇಶಕ ಹಾಗೂ ನೃತ್ಯ ನಿರ್ದೇಶಕ ರಮೇಶ್ ಅಣ್ಣ ಅವರ ಶೈಲಿಯಲ್ಲಿ ಕುಣಿದಿರುವುದು ಇಲ್ಲಿ ವಿಶೇಷ. ಲುಂಗಿ ಹಾಗೂ ಶರ್ಟ್ ಧರಿಸಿ ಈ ವ್ಯಕ್ತಿಯು ಮಧ್ಯ ರಸ್ತೆಯಲ್ಲಿ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾನೆ. ಅದಲ್ಲದೆ ಈತ ಮೂನ್ ವಾಕ್ ಸಹ ಮಾಡಿದ್ದು ಜನರಲ್ಲಿ ಅಶ್ಚರ್ಯ ಉಂಟು ಮಾಡಿದೆ. ಈತ ಕುಣಿಯುತ್ತಿದ್ದರೆ ಅವನ ಇಬ್ಬರು ಸ್ನೇಹಿತರು ಕೈಕಟ್ಟಿ ನಿಂತು ಆತನ ಡ್ಯಾನ್ಸ್ ಅನ್ನು ನೋಡುತ್ತಿದ್ದಾರೆ.

ಇದನ್ನೂ ಓದಿ: Dog Lover: ನಿತ್ಯ 120 ನಾಯಿಗಳಿಗೆ ಅಡುಗೆ ಮಾಡಿ ಬಡಿಸುತ್ತಾರೆ 90ರ ವೃದ್ದೆ! ವಿಡಿಯೋ ವೈರಲ್

ಈ ವಿಡಿಯೋ ಹಂಚಿಕೆಯಾದ ಸಮಯದಿಂದ ಲಕ್ಷಗಟ್ಟಲೆ ಲೈಕ್ಸ್ ಹಾಗೂ ವೀಕ್ಷಣೆಯನ್ನು ಪಡೆದಿದೆ ಮತ್ತು ಹಲವಾರು ಸಾಮಾಜಿಕ ಜಾಲತಾಣಗಳ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ವಿಡಿಯೋ ಅನ್ನು ಗಮನಿಸಿ ಹಲವಾರು ಸೆಲೆಬ್ರೆಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅದರಲ್ಲಿ ತೆಲಗು ನಟ ರಾಚ ರವಿ ಮತ್ತು ಖ್ಯಾತ ಕ್ರಿಕೇಟ್ ಆಟಗಾರ ಸಂಜು ಸ್ಯಾಮ್ಸನ್ ಪ್ರಮುಖರು. ರಾಚ ರವಿ ಬೆಂಕಿ ಹಾಗೂ ಹೃದಯದ ಇಮೋಜಿ ಹಾಕುವ ಮೂಲಕ ಈ ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿದರೆ ಸಂಜು ಸ್ಯಾಮ್ಸನ್ ನಗುತ್ತಿರುವ ಮುಖದ ಇಮೋಜಿ ಹಾಕಿ ಪ್ರತಿಕ್ರಿಯಿಸಿದ್ದಾರೆ.

ಇದೇ ರೀತಿ ಪ್ರತಿಕ್ರಿಯಿಸಿರುವ ಕೆಲ ವ್ಯಕ್ತಿಗಳ ಕಾಮೆಂಟ್ಸ್ ಗಳು ಇಲ್ಲಿವೆ:
“ಅಂಕಲ್ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ”, “ವಯಸ್ಸು ಎಂಬುದು ಕೇವಲ ಸಂಖ್ಯೆ ಅಷ್ಟೆ”, ಒಬ್ಬ ನೃತ್ಯಗಾರ ಎಷ್ಟೇ ವಯಸ್ಸಾದರೂ ನೃತ್ಯಗಾರನೆ”, “ಇವನೊಬ್ಬ ಅದ್ಭುತ ನೃತ್ಯಗಾರ” ಹೀಗೆಂದು ಆ ಡ್ಯಾನ್ಸ್ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಡಿಯೋ ನೋಡಿದ ನಂತರ ನಿಜವಾಗಿಯು ಅನಿಸುವುದೇನೆಂದರೆ ಕಲೆಗೆ ವಯಸ್ಸು, ವ್ಯಕ್ತಿ, ಊರು ಎಂಬ ಯಾವ ಭೇದ ಭಾವ ಇರುವುದಿಲ್ಲ, ಈ ವಯಸ್ಸಿನಲ್ಲೂ ಆ ವ್ಯಕ್ತಿ ಯುವಕರೇ ಆಶ್ಚರ್ಯ ಪಡುವ ರೀತಿಯಲ್ಲಿ ನೃತ್ಯಮಾಡಿ ಅನೇಕ ಜನರ ಮನಸ್ಸನ್ನು ಗೆದ್ದಿದ್ದಾರೆ ಹಾಗೂ ವಯಸ್ಸು ಎಂಬುದು ಕೇವಲ ಸಂಖ್ಯೆ ಎಂಬುದನ್ನು ನಿರೂಪಿಸಿದ್ದಾರೆ.

ಇದನ್ನೂ ಓದಿ:  Marriage Agreement: ನವವಧು ಹೇಳಿದ್ದಕ್ಕೆ ಒಪ್ಪಂದಕ್ಕೆ ಸಹಿ ಹಾಕಿದ! ಆಮೇಲೆ ಓದಿ ನೋಡಿದ್ರೆ ಶಾಕ್

ಇದರ ನಡುವೆ ಮತ್ತೊಂದು ವಿಡಿಯೋ ವೈರಲ್ ಆಗಿತ್ತು, ಕರ್ನಾಟಕದ ದೂಧ್ ಸಾಗರ್ ಫ಼ಾಲ್ಸ್ ಬಳಿ ಬೈಕ್ ಸವಾರರ ತಂಡವೊಂದು ಮಧ್ಯ ದಾರಿಯಲ್ಲಿ ಗಾಡಿಗಳನ್ನು ನಿಲ್ಲಿಸಿ ಲಾರಿಯ ಹಾರ್ನ್ ಶಬ್ಧಕ್ಕೆ ನಾಗಿನ್ ಡ್ಯಾನ್ಸ್ ಮಾಡಿದ್ದರು. ಅವರ ನೃತ್ಯದ ವಿಡಿಯೋ ಅತೀ ಬೇಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿತ್ತು. ಪ್ರವಾಸಕ್ಕೆಂದು ಬಂದಿದ್ದ ಅವರು ಮೈಮರೆತು ಮಧ್ಯ ದಾರಿಯಲ್ಲಿ ಡ್ಯಾನ್ಸ್ ಮಾಡಿರುವುದನ್ನು ನೆಟ್ಟಿಗರು ಅವರ ಖಾತೆಗಳಲ್ಲೂ ಸಹ ಹಂಚಿಕೊಂಡು ನಾವು ಪ್ರವಾಸಕ್ಕೆ ಇಂತಹ ತಂಡದ ಜೊತೆ ಹೋದರೆ ಸಂತಸದಿಂದ ಇರಬಹುದು ಎಂದು ಬರೆದು ಕೊಂಡಿದ್ದರು.
Published by:Ashwini Prabhu
First published: