ಗೆಳತಿಯನ್ನು ಭೇಟಿ ಮಾಡೋಕೆ ಹೋದ, ದಾರಿಯಲ್ಲಿ ಏನೋ ಆಗಿ ಖಾಸಗಿ ಅಂಗವೇ ಕಟ್! ಆಗಿದ್ದೇನು?

Horrific Accident: ಅಪಘಾತದಿಂದ ಆತನ ಕುತ್ತಿಗೆ, ದವಡೆ, ಸೊಂಟ, ಮೂಗು ಮುರಿದಿದೆ. ಖಾಸಗಿ ಭಾಗಕ್ಕೂ ಘಾಸಿಯಾಗಿತ್ತು. ತಕ್ಷಣವೇ ಅಪಘಾತದಿಂದ ಸಾವು ಬದುಕಿನ ಹೋರಾಟದಲ್ಲಿರುವ ಪೌಲ್​ನನ್ನು ಸ್ಥಳಿಯರು ಆಸ್ಪತ್ರೆ ಸೇರಿಸಿದ್ದರು. ಆದರಲ್ಲಾಗಲೇ ಆತ ಕೋಮಾಗೆ ಜಾರಿದ್ದನು.

(Photo: Google)

(Photo: Google)

 • Share this:
  ಗೆಳತಿಯ ಭೇಟಿಗಾಗಿ ವಾಹನ ಚಲಾಯಿಸಿದ ಪ್ರಿಯಕರ ಕೊನೆಗೆ ಸೇರಿದ್ದು ಆಸ್ಪತ್ರೆ. ಆದರೆ ತಾನು ಇಷ್ಟ ಪಡುವ ಪ್ರೇಯಸಿಯನ್ನು ಒಂದು ಬಾರಿ ನೋಡ ಬೇಕು ಎಂದು ಕಿಲೋ ಮೀಟರ್​ಗಟ್ಟಲೆ ಕಾರು ಚಲಾಯಿಸಿದ ಪ್ರಿಯಕರ ಮಾಡಿದ ಒಂದು ತಪ್ಪಿಗೆ ಬದುಕಿದ್ದೇ ದೊಡ್ಡ ದುರಂತವಾದರೆ. ತನ್ನ ಖಾಸಗಿ ಭಾಗವೇ (Private Part) ಕಳೆದುಕೊಳ್ಳಬೇಕಾದ ಪರಿಸ್ಥಿತಿ ಆತನಿಗೆ ಎದುರಾಯ್ತು. ಅಷ್ಟಕ್ಕೂ ಆತನ ಮಾಡಿದ ದೊಡ್ಡ ತಪ್ಪೇನು ಗೊತ್ತಾ? ಈ ಸ್ಟೋರಿ ಓದಿ.

  ವಾಹನ ಚಲಾಯಿಸುವಾಗ ಎಷ್ಟೇ ಜಾಗರೂಕರಾಗಿದ್ದರು ಸಾಲದು. ಸರಿಯಾದ ನಿಯಮ ಪಾಲಿಸಿಕೊಂಡು ವಾಹನ ಚಲಾಯಿಸಿದರು ಎದುರಿಂದ ಬರುವ ವಾಹನ ಸವಾರನ ಸ್ಥಿತಿ ಹೇಗಿರತ್ತೆ ಮತ್ತು ಹೇಗೆ ಚಲಾಯಿಸುತ್ತಾನೆ ಎಂಬುದು ಯಾರಿಗೆ ಗೊತ್ತು. ಹಾಗಾಗಿ ನಮ್ಮ ಜಾಗರೂಕತೆಯಲ್ಲಿ ವಾಹನ ಚಲಾಯಿಸಿದರೆ ಸಂಭಂವಿಸಬಹುದಾದ ದೊಡ್ಡ ದುರಂತವನ್ನು ತಪ್ಪಿಸಬಹುದು. ಆದರೆ ಇಲ್ಲೊಬ್ಬ ಪ್ರಿಯಕರ ವಾಹನ ಚಲಾಯಿಸುವಾಗಲೇ ತಪ್ಪು ಮಾಡಿದ್ದಾನೆ. ಹಾಗಾಗಿ ಆತನ ತನ್ನ ಖಾಸಗಿ ಭಾಗವನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.

  ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ (Drink And Drive) ಎಂದು ಎಷ್ಟು ಬಾರಿ ಜಾಗರೂಕತೆ ಸಾರಿದರು. ನಿಯಮವನ್ನು ಮೀರಿ ವಾಹನ ಚಲಾಯಿಸುವವರು ಅದೆಷ್ಟೋ ಮಂದಿ ಇದ್ದಾರೆ. ಅದರಂತೆ 29 ವರ್ಷದ ಪೌಲ್​ ಬೆರ್ರಿ ಕೂಡ ಮಾಡಿದ್ದು ಅದೇ ತಪ್ಪು. ಅಮಲು ನೆತ್ತಿಗೆ ಏರುವಷ್ಟು ಕುಡಿದು ವಾಹನ ಚಲಾಯಿಸಿದ್ದಾನೆ. ಆತ ಕುಡಿಯುದಕ್ಕೂ ಮುನ್ನ ಗೆಳತಿಯನ್ನು ಭೇಟಿ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದನ್ನು. ಅದರ ನಡುವೆ ಒಂದು ಪೆಗ್​ ಒಳಗೆ ಸೇರಿಸಿ ಕಾರಿನ  ಸ್ಟೇರಿಂಗ್​ ಹಿಡಿದಿದ್ದಾನೆ.

  ಅಮೆರಿಕದಲ್ಲಿ (America) ನಡೆದ ಘಟನೆ ಇದಾದರು, ಪೌಲ್​ ಬೆರ್ರಿ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಾನೆ. ವರದಿಯ ಪ್ರಕಾರ, ವಾಹನ ಮಿತಿ ವೇಗವಾಗಿ ಸಾಗುತ್ತಿದ್ದಂತೆ ಪೌಲ್​ ನಿದ್ರೆಗೆ ಜಾರಿದ್ದಾನೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಕಾರಿನಿಂದ ಎಸೆಯಲ್ಪಟ್ಟ ಪೌಲ್​ ರಸ್ತೆಗೆ ಬಿದ್ದಿದ್ದಾನೆ. ಆತನ ಮೇಲೆ ಕಾರು ಬಂದು ಬಿದ್ದಿದೆ.

  ಅಪಘಾತದಿಂದ ಆತನ ಕುತ್ತಿಗೆ, ದವಡೆ, ಸೊಂಟ, ಮೂಗು ಮುರಿದಿದೆ. ಖಾಸಗಿ ಭಾಗಕ್ಕೂ ಘಾಸಿಯಾಗಿತ್ತು. ತಕ್ಷಣವೇ ಅಪಘಾತದಿಂದ ಸಾವು ಬದುಕಿನ ಹೋರಾಟದಲ್ಲಿರುವ ಪೌಲ್​ನನ್ನು ಸ್ಥಳಿಯರು ಆಸ್ಪತ್ರೆ ಸೇರಿಸಿದ್ದರು. ಆದರಲ್ಲಾಗಲೇ ಆತ ಕೋಮಾಗೆ ಜಾರಿದ್ದನು.

  ಜೀವ ಉಳಿಸಲು ಶತ ಪ್ರಯತ್ನ ಮಾಡಿದ ವೈದ್ಯರು ಬದುಕಿಸುವ ಮೂಲಕ ಸಫಲರಾದರು. ಆದರೆ ಪೌಲ್​ ಖಾಸಗಿ ಭಾಗಕ್ಕೆ ಬಲವಾದ ಏಟು ಬಿದ್ದ ಕಾರಣ ಜೀವ ಉಳಿಯುವುದು ಕಷ್ಟವೆಂದು ಮನಗಂಡರು. ಕೊನೆಗೆ ಖಾಸಗಿ ಅಂಗವನ್ನು ತೆಗೆಯ ಬೇಕಾಗಿ ಬಂತು.

  Read Also: ಮತ್ತೆ ಗರ್ಭಿಣಿಯಾದ TikTok​ ಸ್ಟಾರ್​ ಮ್ಯಾಡ್​ಮಾಮ್​; 36 ವರ್ಷಕ್ಕೆ 12ನೇ ಭಾರಿ ಪ್ರೆಗ್ನೆಂಟ್​ ಆದ ಮಹಾತಾಯಿ

  ಕೋಮಾದಲ್ಲಿದ್ದ ಪೌಲ್​ 5 ವಾರಗಳ ನಂತರ ಕಣ್ಣು ತೆರೆದನು. ಆಸ್ಪತ್ರೆಯ ಹಾಸಿಗೆ ಮೇಲೆ ಬಿದ್ದಿರುವ ಪೌಲ್​ಗೆ ಬದುಕಿರುವುದೇ ಸಂತೋಷ ಒಂದೆಡೆಯಾದರೆ ಖಾಸಗಿ ಭಾಗವೇ ಹೋಯ್ತು ಎಂಬ ದುಃಖ ಇನ್ನೊಂದೆಡೆ. ತಾನು ಬದುಕಿದ್ದು ಪ್ರಯೋಜನವಿಲ್ಲವೆಂದುಕೊಂಡ ಪ್ರಿಯಕರಿನಿಗೆ ಪ್ರೇಯಸಿದ ಮಾತುಗಳು ಬದುಕಬೇಕು ಎಂಬ ಛಲ ಹುಟ್ಟಿಸಿತು.

  ಅಪಘಾತದಿಂದ ಚೇತರಿಸಿಕೊಂಡ ಪೌಲ್​ ಆರೋಗ್ಯವಾಗಿದ್ದರು. ಮನಸಲ್ಲೊಂದು ಬೇಸರವಿದೆ. ಹೀಗಿರುವಾಗ ಶಿಶ್ನ ಕಸಿ ಮಾಡುವ ವಿಚಾರ ಆತನಿಗೆ ತಿಳಿಯುತ್ತದೆ. ಆದರೆ ಅಮೆರಿಕದಲ್ಲಿ ವಾಸಿಸುವ ಪೌಲ್​ಗೆ ದಕ್ಷಿಣ ಆಫ್ರಿಕಾದಲ್ಲಿ ಶಿಶ್ನ ಕಸಿ ಮಾಡುವುದು ಗೊತ್ತಾಗಿ ಕೊನೆಗೆ ವಿಚಾರಿಸುತ್ತಾನೆ. ಆದರೆ ದುಬಾರಿ ವೆಚ್ಚವಾಗುತ್ತದೆ ಎಂದು ಗೊತ್ತಾಗಿ ಸುಮ್ಮನಾಗುತ್ತಾನೆ. ಸದ್ಯ ಗೆಳತಿಯ ಜೊತೆಗೆ ಅಮೆರಿಕದಲ್ಲಿ ಸಂತೋಷವಾಗಿದ್ದಾನೆ.

  Read Also: Makeup to Shampoo: ಮಹಿಳೆಯರೇ ಎಚ್ಚರ… ವರ್ಷಕ್ಕೆ ಇದರಿಂದ 1 ಲಕ್ಷ ಜನರು ಸಾಯುತ್ತಿದ್ದಾರಂತೆ!

  ಕುಡಿದು ವಾಹನ ಚಲಾಯಿಸುವ ಬಗ್ಗೆ ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರು, ಅದಕ್ಕೆ ತಕ್ಕ ಕಾನೂನು ಹೊರಡಿಸಿದರು. ಜನರು ಮಾತ್ರ ಒಂದು ಬಾಟಲಿ ಎಣ್ಣೆಗಾಗಿ ಹಾಹಾಕಾರವಿಟ್ಟು ವಾಹನ ಚಲಾಯಿಸುತ್ತಾರೆ. ಎಷ್ಟೋ ಕಿಲೋ ಮೀಟರ್​ಗಟ್ಟಲೆ ಕುಡಿದು ಚಲಾಯಿಸುವವರಿದ್ದಾರೆ. ಅದರಂತೆ ಪೌಲ್​ ಮಾಡಿದ ಒಂದು ತಪ್ಪು ಇಂದು ಆತನಿಗೆ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.
  Published by:Harshith AS
  First published: