Viral Story: ಒಂದಲ್ಲಾ, ಎರಡಲ್ಲಾ, ಏಕಕಾಲದಲ್ಲಿ 9 ಮಹಿಳೆಯರನ್ನು ವಿವಾಹವಾದ ವ್ಯಕ್ತಿ! ಹರಕೆ ಕಟ್ಟಿಕೊಂಡಿದ್ದನೋ ಹೇಗೆ?

Viral Photo: ಭಾರತದಲ್ಲಿ, ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗುವುದಕ್ಕೆ ವಿರೋಧವಿದೆ ಮತ್ತು ಹಿಂದೂ ಧರ್ಮದಲ್ಲಿ ಇದು ಕಾನೂನುಬಾಹಿರವಾಗಿದೆ. ಆದರೆ ಇತ್ತೀಚಿಗೆ ವಿದೇಶ ವ್ಯಕ್ತಿಯೋರ್ವ ಒಂದೇ ಮಂಟಪದಲ್ಲಿ ಏಕಕಾಲದಲ್ಲಿ 9 ಮಹಿಳೆಯರನ್ನು ಮದುವೆಯಾಗಿದ್ದಾನೆ. ಈ ವಿಶಿಷ್ಟ ವಿವಾಹದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಆರ್ಥರ್ ಮತ್ತು ಹೆಂಡತಿಯರು

ಆರ್ಥರ್ ಮತ್ತು ಹೆಂಡತಿಯರು

 • Share this:
  ಭಾರತೀಯರ ಮದುವೆ (Indian Wedding) ಉಳಿದೆಲ್ಲ ದೇಶಗಳಲ್ಲಿ ನಡೆಯುವ ವಿವಾಹಕ್ಕಿಂತ ವಿಭಿನ್ನ. ಇಲ್ಲಿ ಮದುವೆಗಳನ್ನು ಸಾಕಷ್ಟು ಪ್ಲಾನಿಂಗ್‌ನೊಂದಿಗೆ ಮಾಡಲಾಗುತ್ತದೆ. ಶಾಸ್ತ್ರ ಮತ್ತು ಸಮಾಜದಲ್ಲಿನ ಸ್ಥಾನಮಾನಕ್ಕೆ ಸಂಬಂಧಿಸಿ ವಿವಾಹವನ್ನು ಅಚ್ಚುಕಟ್ಟಾಗಿ ನೆರವೇರಿಸಲಾಗುತ್ತದೆ. ಭಾರತದಲ್ಲಿ, ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗುವುದಕ್ಕೆ ವಿರೋಧವಿದೆ ಮತ್ತು ಹಿಂದೂ ಧರ್ಮದಲ್ಲಿ (Hindu Culture) ಇದು ಕಾನೂನುಬಾಹಿರವಾಗಿದೆ. ಆದರೆ ಇತ್ತೀಚಿಗೆ ವಿದೇಶ ವ್ಯಕ್ತಿಯೋರ್ವ ಒಂದೇ ಮಂಟಪದಲ್ಲಿ ಏಕಕಾಲದಲ್ಲಿ 9 ಮಹಿಳೆಯರನ್ನು ಮದುವೆಯಾಗಿದ್ದಾನೆ. ಈ ವಿಶಿಷ್ಟ ವಿವಾಹದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ

  ಬ್ರೆಜಿಲ್ ನ (Brazil) ಸಾವೊ ಪಾಲೊದಲ್ಲಿ ಈ ವಿಚಿತ್ರ ಮದುವೆ ನಡೆದಿದೆ. ಆರ್ಥರ್ ಎಂಬಾತ ಅಲ್ಲಿನ ಚರ್ಚ್‌ನಲ್ಲಿ ಪಾದ್ರಿಯ ಸಮ್ಮುಖದಲ್ಲಿ 9 ಮಹಿಳೆಯರನ್ನು ವ್ಯಕ್ತಿಯೋರ್ವ ವಿವಾಹವಾಗಿದ್ದಾನೆ. ಬ್ರೆಜಿಲಿಯನ್ ಮಾಡೆಲ್ಗಳ ಮೇಲಿನ ಪ್ರೀತಿಗಾಗಿ ವಿವಾಹವಾಗಿದ್ದಾನೆ. ಈ ಮದುವೆಗೆ ಮುಂಚಿತವಾಗಿ, ಆರ್ಥರ್ ಅವರು ಲುವಾನಾ ಕಝಕಿಯನ್ನು ವಿವಾಹವಾದರು. ಅವರೊಂದಿಗೆ ಇತ್ತೀಚೆಗೆ ಹನಿಮೂನ್​​ ಅನಂದಿಸಿದ್ದರು. ಆದರೆ ಹನಿಮೂನ್​ನಿಂದ ಹಿಂತಿರುಗಿ ಬಂದ ನಂತರ, ಆರ್ಥರ್ ಹಲವು ಮಹಿಳೆಯರನ್ನು ಮದುವೆಯಾಗಬೇಕು ಎಂದು ನಿರ್ಧರಿಸಿದರು. ಆರ್ಥರ್​ ಮೊಲ ಹೆಂಡತಿಯೂ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದರು. ಅದರಂತೆಯೇ ಏಕಕಾಲದಲ್ಲಿ ಆರ್ಥರ್​ 9 ಮಹಿಳೆಯರನ್ನು ವಿವಾಹವಾದರು.  ಆರ್ಥರ್ ಮತ್ತು ಅವರ ಮೊದಲ ಹೆಂಡತಿ ಕೆಲವು ಸಮಯದ ಹಿಂದೆ ತಮ್ಮ ಹನಿಮೂನ್ ಚಿತ್ರಗಳ ಕಾರಣದಿಂದ ಚರ್ಚೆಯಾಗಿದ್ದರು. ದಂಪತಿಗಳು ತಮ್ಮ ಹನಿಮೂನ್ ಅನ್ನು ಫ್ರಾನ್ಸ್‌ನ ವಿವಾದಿತ ಕ್ಯಾಪ್ ಡಿ'ಆಗ್ಡೆ ಸ್ಥಳದಲ್ಲಿ ಆಚರಿಸಿದರು. ಈ ಸ್ಥಳದಲ್ಲಿ, ಜನರು ಬಟ್ಟೆ ಇಲ್ಲದೆ, ಮಾಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತಿರುಗುತ್ತಾರೆ. ದಂಪತಿಗಳು ತಮ್ಮ ಬೆತ್ತಲೆ ಹನಿಮೂನ್ ಅನ್ನು ಆಚರಿಸಿದರು ಮತ್ತು ಅದರ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದೀಗ 9 ಮಹಿಳೆಯರನ್ನು ಏಕಕಾಲದಲ್ಲಿ ಮದುವೆಯಾಗುವ ಮೂಲಕ ಚರ್ಚೆಯಲ್ಲಿದ್ದಾರೆ.

  Read Also: Axon 30 Ultra Space: 18GB RAM ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್​ಫೋನ್ ಇದು! ನವೆಂಬರ್ 25ಕ್ಕೆ ಮಾರುಕಟ್ಟೆಗೆ

  ಮದುವೆಯಾಗಲು ಅನುಮತಿ ನೀಡಿದ ಮೊದಲ ಪತ್ನಿ

  ಆರ್ಥರ್‌ನ ಮೊದಲ ಹೆಂಡತಿಗೆ ಪತಿ 9 ಜನರನ್ನು ಮದುವೆಯಾಗಿರುವುದಕ್ಕೆ ಯಾವುದೇ ತೊಂದರೆ ಇಲ್ಲವಂತೆ. ಲುವಾನಾ ಕಝಕಿ ಈ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆರ್ಥರ್ ಹೇಳುವಂತೆ ಪ್ರೀತಿ ಉಚಿತವಾದದ್ದು, ಅದನ್ನು ಹಂಚಿಕೊಳ್ಳಬೇಕು. ಅದು ಯಾವುದಕ್ಕೂ ಸೀಮಿತವಾಗಬಾರದು ಎನ್ನುತ್ತಾರೆ ಆರ್ಥರ್​.  ಲಾಕ್‌ಡೌನ್ ಸಮಯದಲ್ಲಿ, ವಯಸ್ಕರ ಸೈಟ್ ಓನ್ಲಿ ಫ್ಯಾನ್ಸ್‌ನಲ್ಲಿ ಖಾತೆಯನ್ನು ರಚಿಸುವ ಮೂಲಕ ಲಕ್ಷ ಹಣವನ್ನು ಗಳಿಸಲು ಪ್ರಾರಂಭಿಸಿದಾಗ ಈ ದಂಪತಿಗಳು ಇದ್ದಕ್ಕಿದ್ದಂತೆ ಬೆಳಕಿಗೆ ಬಂದರು. ಬೇರೆಯವರಿಗೆ ಲೈಂಗಿಕ ಕ್ರಿಯೆಗೆ ಪ್ರೇರೇಪಿಸುವ ಮೂಲಕ ಹಣ ಸಂಪಾದಿಸುತ್ತಿದ್ದೇವೆ ಎಂದು ಈ ಜೋಡಿ ಬಹಿರಂಗಪಡಿಸಿದ್ದರು. ಇದೀಗ ಆರ್ಥರ್​ 9 ಮದುವೆ ಆಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
  Published by:Harshith AS
  First published: