ಮನುಷಿ ಚಿಲ್ಲರ್​ 2017ರ ವಿಶ್ವ ಸುಂದರಿಯಾಗಲು ಕಾರಣವೇನು ಗೊತ್ತಾ? ಬಯಲಾಯ್ತು ಗುಟ್ಟು!

news18
Updated:October 10, 2018, 4:20 PM IST
ಮನುಷಿ ಚಿಲ್ಲರ್​ 2017ರ ವಿಶ್ವ ಸುಂದರಿಯಾಗಲು ಕಾರಣವೇನು ಗೊತ್ತಾ? ಬಯಲಾಯ್ತು ಗುಟ್ಟು!
news18
Updated: October 10, 2018, 4:20 PM IST
ನ್ಯೂಸ್​ 18 ಕನ್ನಡ

ಹರ್ಯಾಣ(ಅ.10): 2017ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಮನುಷಿ ವಿಜೇತರಾಗಿದ್ದರು. ಈ ಮೂಲಕ ಮಿಸ್​ ವರ್ಲ್ಡ್​ ಕಿರೀಟವನ್ನು ಮುಡಿಗೇರಿಸಿಕೊಂಡ 6 ನೇ ಭಾರತೀಯರೆಂಬ ಖ್ಯಾತಿಗೆ ಪಾತ್ರರಾಗಿದ್ದರು. 108 ದೇಶಗಳ ಸ್ಪರ್ಧಿಗಳಲ್ಲಿ ವಿಜೇತೆಯಾದ ಮನುಷಿ ದಿನ ಬೆಳಗಾಗುತ್ತಿದ್ದಂತೆಯೇ ಮನೆ ಮಾತಾಗಿದ್ದರು. ಆದರೆ ಇವೆಲ್ಲದರ ನಡುವೆ ಅವರೇ ಯಾಕೆ ವಿಶ್ವಸುಂದರಿ ಸ್ಪರ್ಧೆಯಲ್ಲಿ ವಿಜೇತರಾದರು? ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಸದ್ಯ ವಿಡಿಯೋ ಒಂದು ವೈರಲ್​ ಆಗುತ್ತಿದ್ದು, ಈ ವಿಡಿಯೋದಲ್ಲಿ ಅವರೇ ಏಕೆ ವಿಶ್ವಸುಂದರಿ ಆದರು ಎಂಬ ಗುಟ್ಟು ರಟ್ಟಾಗಿದೆ.

ಹೌದು 108 ದೇಶಗಳ ಮಾಡೆಲ್​ಗಳು ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರನ್ನೆಲ್ಲಾ ಹಿಂದಿಕ್ಕಿದ ಭಾರತೀಯ ನಾರಿ ವಿಜೇತೆಯಾಗಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಆದರೆ ಅವರ ಈ ಪಯಣದಲ್ಲಿ ನಿರ್ಣಾಯಕರು ಅವರನ್ನೇ ವಿಶ್ವಸುಂದರಿಯಾಗಿ ಘೋಷಿಸಲು ಹೆಚ್ಚು ಒತ್ತು ನೀಡಿದ್ದು ಕೊನೆಯ ಸುತ್ತಿನಲ್ಲಿ ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ.

ಹೌದು ಎಲ್ಲಾ ಸುತ್ತುಗಳನ್ನು ಎದುರಿಸಿ ಮನುಷಿ ಚಿಲ್ಲರ್​ ಸೇರಿದಂತೆ ಒಟ್ಟು ಐವರು ಸುಂದರಿಯರು ಫೈನಲ್​ ರೌಂಡ್​ಗೆ ತಲುಪಿದ್ದರು. ಈ ವೇಳೆ ಐವರಿಗೂ ನಿರ್ಣಾಯಕರು ಪ್ರಶ್ನೆಗಳನ್ನು ಕೇಳಿದ್ದು, ಇವರಲ್ಲಿ ಮನುಷಿ ನೀಡಿದ್ದ ಉತ್ತರ ಅಲ್ಲಿದ್ದ ನಿರ್ಣಾಯಕರು ಮಾತ್ರವಲ್ಲದೇ ಪ್ರತಿಯೊಬ್ಬರ ಮನವನ್ನೂ ಗೆದ್ದಿತ್ತು.ಮನುಷಿಗೆ ಕೇಳಿದ್ದ ಏನು?

ಯಾವ ವೃತ್ತಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಾಮರ್ಥ್ಯ ಹೊಂದಿದೆ ಮತ್ತು ಯಾಕೆ?
Loading...ಈ ಪ್ರಶ್ನೆಗೆ ಯಾವುದೇ ತೊಡಕುಗಳಿಲ್ಲದೆ ಉತ್ತರಿಸಿದ್ದ ಮನುಷಿ ನನ್ನ ಪ್ರಕಾರ ಒಬ್ಬ ತಾಯಿ ಅತಿ ಹೆಚ್ಚು ಗೌರವ ಪಡೆಯುತ್ತಾರೆ. ಸಂಭಾವನೆ ವಿಚಾರಕ್ಕೆ ಬಂದರೆ ಆಕೆ ಎಲ್ಲರಿಗಿಂತಲೂ ಮಿಗಿಲು. ಆಕೆ ನೀಡುವ ಪ್ರೀತಿ, ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನಗೆ ನನ್ನ ತಾಯಿಯೇ ಬಹುದೊಡ್ಡ ಪ್ರೇರಣೆ. ಜಗತ್ತಿನ ಎಲ್ಲಾ ತಾಯಂದಿರೂ ತಮ್ಮ ಮಕ್ಕಳಿಗಾಗಿ ತಮ್ಮ ಖುಷಿಯನ್ನೇ ತ್ಯಾಗ ಮಾಡುತ್ತಾರೆ. ಹೀಗಾಗಿ ಅತಿ ಹೆಚ್ಚು ಸಂಭಾವನೆ, ಗೌರವ ಹಾಗೂ ಪ್ರೀತಿ ಪಡೆಯಬೇಕಾದ ವೃತ್ತಿ ಎಂದರೆ ಅದು ತಾಯಿ. ಎಂದಿದ್ದರು.
ಮನುಷಿಯವರ ಈ ಉತ್ತರ ಅಂದು ಅಲ್ಲಿ ನೆರೆದಿದ್ದ ಎಲ್ಲರ ಮನ ಗೆದ್ದಿತ್ತು. ಭಾರತೀಯ ನಾರಿ ಅಂದು ಎಲ್ಲಾ ದೇಶಗಳೆದುರು ಭಾರತೀಯ ಸಂಸ್ಕೃತಿ ಹಾಗೂ ತಾಯಿಯ ಮಹತ್ವವನ್ನು ಎತ್ತಿ ಹಿಡಿದಿದ್ದರು. ಈ ಮೂಲಕ ವಿಶ್ವಸುಂದರಿ ಕಿರೀಟ ಪಡೆಯುವಲ್ಲಿ ಸಫಲರಾಗಿದ್ದರು. ಸದ್ಯ ಈ ವಿಡಿಯೋ ಮತ್ತೊಮ್ಮೆ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.
First published:October 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...