ಬಿಲ್ ಗೇಟ್ಸ್ ಮಗಳ ಐಶಾರಾಮಿ ಬದುಕು, ಹೇಗಿದೆ ಗೊತ್ತಾ ಈಕೆಯ ಸಿರಿಯ ಲೈಫ್​ಸ್ಟೈಲ್?

ಕೇವಲ ಶ್ರೀಮಂತ ಪೋಷಕರ ಮಗಳು ಮಾತ್ರ ಅಲ್ಲ, ಆಕೆ ಪ್ರತಿಭಾನ್ವಿತ ಕುದುರೆ ಸವಾರಳು ಕೂಡಾ ಹೌದು. ಕುದುರೆ ಸವಾರಿಯ ಸ್ಪರ್ಧೆಗಳಲ್ಲೂ ಭಾಗವಹಿಸುವ ಜೆನಿಫರ್​ಗೆ ವಯಸ್ಸು ಕೇವಲ 25. ಈ ಸ್ಪರ್ಧೆಗಳಲ್ಲಿ ಗೆದ್ದು ಸಾವಿರಾರು ಡಾಲರ್​ ಗಳನ್ನು ಬಹುಮಾನವಾಗಿ ಪಡೆದಿದ್ದಾಳೆ. ಹಾಗಂತ ಆಕೆ ಕೇವಲ ಕುದುರೆ ಸವಾರಿ ಮಾಡೋದಿಲ್ಲ, ಅವುಗಳ ವ್ಯಾಪಾರದಲ್ಲೂ ತೊಡಗಿಕೊಂಡಿದ್ದಾಳೆ. 

ಜೆನಿಫರ್ ಗೇಟ್ಸ್

ಜೆನಿಫರ್ ಗೇಟ್ಸ್

  • Share this:
ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹಿರಿಯ ಮಗಳು ಜೆನಿಫರ್​ ಈಗ ಭಾರೀ ಚರ್ಚೆಯಲ್ಲಿದ್ದಾಳೆ. ಕೇವಲ ಶ್ರೀಮಂತ ಪೋಷಕರ ಮಗಳು ಮಾತ್ರ ಅಲ್ಲ, ಆಕೆ ಪ್ರತಿಭಾನ್ವಿತ ಕುದುರೆ ಸವಾರಳು ಕೂಡಾ ಹೌದು. ಕುದುರೆ ಸವಾರಿಯ ಸ್ಪರ್ಧೆಗಳಲ್ಲೂ ಭಾಗವಹಿಸುವ ಜೆನಿಫರ್​ಗೆ ವಯಸ್ಸು ಕೇವಲ 25. ಈ ಸ್ಪರ್ಧೆಗಳಲ್ಲಿ ಗೆದ್ದು ಸಾವಿರಾರು ಡಾಲರ್​ ಗಳನ್ನು ಬಹುಮಾನವಾಗಿ ಪಡೆದಿದ್ದಾಳೆ. ಹಾಗಂತ ಆಕೆ ಕೇವಲ ಕುದುರೆ ಸವಾರಿ ಮಾಡೋದಿಲ್ಲ, ಅವುಗಳ ವ್ಯಾಪಾರದಲ್ಲೂ ತೊಡಗಿಕೊಂಡಿದ್ದಾಳೆ.  ಉನ್ನತ ಮಟ್ಟದ ಸ್ಪರ್ಧೆಗಳ ಮೂಲಕ ಕುದುರೆ ಸವಾರಿಯ ಸ್ಪರ್ಧೆಯನ್ನು ಆಯೋಜಿಸುತ್ತಾಳೆ ಕೂಡಾ.

ಕಳೆದ ವರ್ಷದ ಆರಂಭದಲ್ಲಿ ಜೆನಿಫರ್ ನಯೆಲ್ ನಾಸರ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಮಾಂಟಾನಾದ ಸ್ಕಿ ಲಾಡ್ಜ್ ಒಂದರಲ್ಲಿ ನಯೆಲ್ ಜೆನಿಫರ್​ಗೆ ಪ್ರೊಪೋಸ್ ಮಾಡಿದ್ದಾನೆ. ನಯೆಲ್ ತಂದೆ ತಾಯಿ ಈಜಿಪ್ಟ್ ಮೂಲದವರಾಗಿದ್ದು ಆತ ಕುವೈತ್​ನಲ್ಲಿ ಬೆಳೆದಿದ್ದಾನೆ. ಈಜಿಪ್ಟಿಯನ್ ಶೋ ಜಂಪಿಂಗ್ ತಂಡದಲ್ಲಿ ಈತನೂ ಪ್ರೊಫೆಶನಲ್ ಶೋ ಜಂಪರ್ ಆಗಿದ್ದಾನೆ. ಈ ತಂಡ 2021 ಜುಲೈ-ಆಗಸ್ಟ್​ನಲ್ಲಿ ನಡೆಯಲಿರುವ ಟೋಕ್ಯೋ ಒಲಿಂಪಿಕ್ಸ್​​ನಲ್ಲಿ ಭಾಗವಹಿಸಲಿದೆ.

ಜೆನಿಫರ್ ಗೇಟ್ಸ್ ವೈದ್ಯೆಯಾಗಲು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಆದರೆ ಆಕೆಯ ಐಶಾರಾಮಿ ಬದುಕಿನ ಪರಿಚಯವಾಗಬೇಕಿದ್ದರೆ ಆಕೆಯ ಇನ್ಸ್ಟಾಗ್ರಾಮ್ ಖಾತೆಯನ್ನೊಮ್ಮೆ ನೀವು ನೋಡಬೇಕು.

ಪ್ರಿಯಕರ ನಯೆಲ್​ನೊಂದಿಗೆ ಜೆನಿಫರ್ ಕ್ಯಾಥರಿನ್ ಗೇಟ್ಸ್


ಇಂಥಾ ಐಶಾರಾಮಿ ಬದುಕು ನಡೆಸುತ್ತಿರುವ ಜೆನಿಫರ್ ನೋಡಿ ಎಂಥವರಿಗಾದರೂ ಹೊಟ್ಟೆಕಿಚ್ಚಾಗಬಹುದು. ಇತ್ತೀಚೆಗಷ್ಟೇ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ವಿಚ್ಛೇದನೆ ಪಡೆದಿರುವ ಬಗ್ಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ಪೋಷಕರು ಬೇರೆಯಾದ ಸಂದರ್ಭ ತಮಗೆಲ್ಲಾ ಬಹಳ ಕಷ್ಟಕಾಲ ಎಂದು ಜೆನಿಫರ್ ತಿಳಿಸಿದ್ದರು.
Published by:Soumya KN
First published: