• Home
  • »
  • News
  • »
  • trend
  • »
  • ‌Viral Story: ಆನೆಮರಿಯನ್ನು ರಕ್ಷಿಸಿದ ಪುಟ್ಟ ಬಾಲಕಿ, ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಫುಲ್‌ ವೈರಲ್

‌Viral Story: ಆನೆಮರಿಯನ್ನು ರಕ್ಷಿಸಿದ ಪುಟ್ಟ ಬಾಲಕಿ, ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಫುಲ್‌ ವೈರಲ್

ಆನೆಮರಿ ಮತ್ತು ಬಾಲಕಿ

ಆನೆಮರಿ ಮತ್ತು ಬಾಲಕಿ

ಇಲ್ಲೊಂದು ಪುಟ್ಟ ಬಾಲಕಿಯೊಬ್ಬಳು ಕೆಸರು ಗದ್ದೆಯಿಂದ ಆನೆ ಮರಿಯೊಂದನ್ನು ರಕ್ಷಿಸುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿದೆ. ಇದನ್ನು ನೋಡಿ ಜನರು ಈಕೆಯ ಧೈರ್ಯಕ್ಕೆ ಮೆಚ್ಚಲೇಬೇಕು ಎಂದಿದ್ದಾರೆ.

  • Share this:

    ಇತ್ತೀಚಿಗೆ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ನಂಟು ಹೆಚ್ಚಾಗುತ್ತಿದೆ. ಅದರಲ್ಲೂ ಈಗ ಆನ್‌ಲೈನ್‌ನಲ್ಲಂತೂ ಇನ್ನೂ ಹೆಚ್ಚಾಗುತ್ತಿದೆ. ಇದಲ್ಲದೆ ಮಕ್ಕಳಿಗೆ ಪ್ರಾಣಿ, ಪಕ್ಷಿಗಳೆಂದರೆ ಸಾಕು ತುಂಬಾನೇ ಪ್ರೀತಿ ಮಾಡ್ತಾರೆ. ಈ ರೀತಿಯ ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಮನರಂಜನೆಯ ವಿಡಿಯೋಗಳು ಬಹಳಷ್ಟು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿವೆ. ಇದನ್ನು ನೋಡುವಂತಹ ವೀಕ್ಷಕರು ಪ್ರೇರಣೆಗೊಂಡು ಇನ್ನಷ್ಟು ಪ್ರಾಣಿಗಳ ಮೇಲೆ ಪ್ರೀತಿಯನ್ನು ಬೆಳೆಸುತ್ತಾರೆ. ಪ್ರಾಣಿಗಳು ಮತ್ತು ಜನರು ಎಷ್ಟು ಚೆನ್ನಾಗಿ ಬೆರೆಯುತ್ತಾರೆ ಎಂಬುದನ್ನು ಪ್ರದರ್ಶಿಸುವ ಅನೇಕ ವಿಡಿಯೋಗಳಿವೆ ಮತ್ತು ಅದರಲ್ಲೂ ಪ್ರಾಣಿಗಳು ಮತ್ತು ಮನುಷ್ಯರು ಪರಸ್ಪರ ಜೀವವನ್ನು ಉಳಿಸಲು ಸಹಾಯ ಮಾಡಿದ ಹಲವಾರು ನಿದರ್ಶನಗಳಿವೆ. 


    ಇಲ್ಲೊಂದು ಪುಟ್ಟ ಬಾಲಕಿಯೊಬ್ಬಳು ಕೆಸರು ಗದ್ದೆಯಿಂದ ಆನೆ ಮರಿಯೊಂದನ್ನು ರಕ್ಷಿಸುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿದೆ. ಇದನ್ನು ಕಂಡಂತಹ ಜನರು ಬಹಳಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.


    ಐಎಫ್‌ಎಸ್‌ ಅಧಿಕಾರಿಯ ಟ್ವಿಟರ್‌ ಪೋಸ್ಟ್


    ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಗುರುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಆ ಹುಡುಗಿಯ ಬಗ್ಗೆ ಒಂದಿಷ್ಟು ಮೆಚ್ಚುಗೆಯನ್ನು ಬರಹದ ರೂಪದಲ್ಲಿ ಪೋಸ್ಟ್‌ ಮಾಡಿದ್ದಾರೆ.‌


    ಇದನ್ನೂ ಓದಿ: ಟಿಂಡರ್, ಬಂಬಲ್‌ನಂತಹ ಡೇಟಿಂಗ್ ಆ್ಯಪ್‌ಗಳಲ್ಲಿ ಮಹಿಳೆಯರದ್ದೇ ಮೇಲುಗೈ


    ಏನಿದೆ ಈ ವಿಡಿಯೋದಲ್ಲಿ?


    36 ಸೆಕೆಂಡುಗಳ ಈ ವಿಡಿಯೋದಲ್ಲಿ ಗ್ರಾಮೀಣ ರಸ್ತೆ ಮತ್ತು ಕಬ್ಬಿನ ಗದ್ದೆಯ ನಡುವೆ, ಮರಿ ಆನೆ ಮಣ್ಣಿನ ಕಂದಕದಲ್ಲಿ ಸಿಲುಕಿಕೊಂಡಿದೆ. ನಂತರ  ಎಳೆಯ ಹುಡುಗಿ ಆನೆಮರಿಯನ್ನು ಕಂದಕದಿಂದ ಮೇಲಕ್ಕೆತ್ತಲು ಪ್ರಯತ್ನಿಸುತ್ತಾ ಇರುತ್ತಾಳೆ ಮತ್ತು ಕೆಸರಿನಿಂದ ಆನೆಮರಿ ಹೊರಬರಲು ಸಹಾಯ ಮಾಡುತ್ತಾಳೆ.


    https://twitter.com/i/status/1585667786831192065


    ಆನೆಯನ್ನು ಮೇಲಕ್ಕೆತ್ತಲು ಈ ಪುಟ್ಟ ಬಾಲಕಿ ಕಷ್ಟ ಪಡುತ್ತಿರುವುದನ್ನು ಈ ವಿಡಿಯೋದಲ್ಲಿ ನಾವು ಗಮನಿಸಬಹುದು. ಅಂತಿಮವಾಗಿ ಸತತ ಪ್ರಯತ್ನದಿಂದ ಕೆಸರಿನಿಂದ ಆನೆಮರಿಯನ್ನು ತೆಗೆಯುವಲ್ಲಿ ಯಶಸ್ವಿಯಾಗುತ್ತಾಳೆ. ಈವಿಡಿಯೋ ದ ಕೊನೆಯ ಕ್ಷಣಗಳಲ್ಲಿ ತನ್ನ ಸೊಂಡಿಲು ಎತ್ತುವುದನ್ನು ನೋಡಬಹುದು, ಬಹುಶಃ ಹುಡುಗಿಯ ಪ್ರಯತ್ನಕ್ಕೆ ಈ ಆನೆಮರಿ ಧನ್ಯವಾದ ಸಲ್ಲಿಸುತ್ತಿರಬಹುದು.


    ಇದನ್ನೂ ಓದಿ: ಮರೆತು ಹೋಯಿತೆ ಮೊಬೈಲ್ ಪಾಸ್‌ವರ್ಡ್? ಟೆನ್ಷನ್‌ ಬಿಡಿ, ಹುಡುಕುವ ಟಿಪ್ಸ್ ಇಲ್ಲಿದೆ ನೋಡಿ


    ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್


    ಇದಲ್ಲದೆ ಈ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಾಗಿನಿಂದ, ವೀಡಿಯೊ 80 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಮತ್ತು 6 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ. ಕೇವಲ ಒಂದೇ ದಿನದಲ್ಲಿ 645 ಬಳಕೆದಾರರು ಪೋಸ್ಟ್ ಅನ್ನು ತಮ್ಮ ಸಹಪಾಠಿಗಳಿಗೆ ಶೇರ್‌ ಮಾಡಿಕೊಂಡಿದ್ದಾರೆ. ಇಲ್ಲಿ  ಆನೆಯ ಜೀವವನ್ನು ಉಳಿಸುವಲ್ಲಿ ಹುಡುಗಿಯ ಪ್ರಯತ್ನವನ್ನು ಹಲವಾರು ವೀಕ್ಷಕರು ಧನ್ಯವಾದ ಹೇಳಿದ್ದಾರೆ.


    ಈ ವಿಡಿಯೋದಿಂದ ಹಲವಾರು ಪ್ರೇರಣೆಗೊಂಡಿದ್ದಾರೆ. ಅಲ್ಲದೆ ಆನೆಮರಿಯನ್ನು ರಕ್ಷಿಸಿದ ಹುಡುಗಿಗೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿ ಆ ಪುಟ್ಟ ಹುಡುಗಿಯನ್ನು ಹಾರೈಸಿದ್ದಾರೆ.


    ಇದನ್ನೂ ಓದಿ: ಮೆಟಾದ ವರ್ಚ್ಯೂಯಲ್ ಜಗತ್ತಿನ ಅನುಭವ ಬಿಚ್ಚಿಟ್ಟ ವ್ಯಕ್ತಿ, ನೀವೂ ಒಂದು ಸುತ್ತು ಹಾಕಿ ಬನ್ನಿ


    ಇದು ಈಗಿನ ಟ್ರೆಂಡಿಗ್‌ನಲ್ಲಿರುವ ವಿಡಿಯೋ ಆಗಿದ್ದು ಸೋಷಿಯಲ್‌ ಮೀಡಿಯಾದಲ್ಲಿಈಗಲೂ ಹರಿದಾಟುತ್ತಿದೆ. ಹಾಗೇ ಇದರಲ್ಲಿ ಕಾಣಿಸಿಕೊಂಡ ಹುಡುಗಿಯನ್ನು ಕುರಿತು ಬಹಳಷ್ಟು ಜನ ಕಮೆಂಟ್‌ ಮಾಡಿದ್ದಾರೆ. ಅದ್ರಲ್ಲೂ ಒಬ್ಬರೂ " ಈ ಪುಟ್ಟ ಆನೆಗೆ ಸಹಾಯ ಮಾಡಿದಕ್ಕಾಗಿ ಧನ್ಯವಾದಗಳು. ಹೀಗೆ ಒಬ್ಬರಿಗೊಬ್ಬರು ಪರಸ್ಪರವಾಗಿ ಸಹಾಯಮಾಡುತ್ತಿರಬೇಕು." ಎಂದು ಕಾಮೆಂಟ್‌ ಮಾಡಿದ್ದಾರೆ.


    ಆದರೆ ಕೆಲವೊಂದು ಪ್ರಾಣಿಗಳು ಈ ರೀತಿ ಇರಲ್ಲ. ಆದ್ದರಿಂದ ಯಾವುದೇ ಕಾಡುಪ್ರಾಣಿಗಳನ್ನು ರಕ್ಷಿಸಲು ಹೋಗುವಾಗ ಎಚ್ಚರದಿಂದ ಹೋಗಬೇಕು.

    Published by:Precilla Olivia Dias
    First published: