• Home
  • »
  • News
  • »
  • trend
  • »
  • Viral Video: ಈ ಮುದ್ದು ನಾಯಿ ಮರಿಗಳ ಕ್ಯೂಟ್ ವಿಡಿಯೋ ನೋಡಿ! ನಿಮ್ಮ ದಿನದ ಚಿಂತೆಯೆಲ್ಲ ಮಾಯ ಆಗತ್ತೆ

Viral Video: ಈ ಮುದ್ದು ನಾಯಿ ಮರಿಗಳ ಕ್ಯೂಟ್ ವಿಡಿಯೋ ನೋಡಿ! ನಿಮ್ಮ ದಿನದ ಚಿಂತೆಯೆಲ್ಲ ಮಾಯ ಆಗತ್ತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಎಲ್ಲರ ಕೈಯಲ್ಲೂ ಸ್ಮಾರ್ಟ್ ಪೋನ್ ಇರುವ ಈ ಯುಗದಲ್ಲಿ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಅಥವಾ ತಮ್ಮ ಸುತ್ತ ಮುತ್ತಲೂ ನಡೆಯುವ ವಿಶೇಷ ಘಟನೆಗಳನ್ನು ವಿಡಿಯೋ ಮಾಡುವುದರ ಮೂಲಕ ವಿಡಿಯೋಗಳನ್ನು ವೈರಲ್ ಮಾಡುತ್ತಲೆ ಇರುತ್ತಾರೆ. ಈಗ ಇಲ್ಲೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಆ ವೈರಲ್ ವಿಡಿಯೋದಲ್ಲಿ ಅಂತಹ ವಿಶೇಷತೆ ಏನಿತ್ತು? ಎಂಬುದರ ಬಗ್ಗೆ ಕುತೂಹಲವಿದ್ದರೆ ಮುಂದೆ ಓದಿ.

ಮುಂದೆ ಓದಿ ...
  • Share this:

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿರುವ ವಿಡಿಯೋಗಳು ಹೆಚ್ಚೆಂದೆ ಹೇಳಬಹುದು. ದಿನಪೂರ್ತಿ ಒಂದಲ್ಲ ಒಂದು ವಿಷಯದ ವಿಡಿಯೋ ಸೋಷಿಯಲ್ ಮೀಡಿಯಾದ ಟ್ರೇಂಡಿಂಗ್ ಅಲ್ಲಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿರುತ್ತದೆ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಪೋನ್ (Smart Phone) ಇರುವ ಈ ಯುಗದಲ್ಲಿ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಅಥವಾ ತಮ್ಮ ಸುತ್ತ ಮುತ್ತಲೂ ನಡೆಯುವ ವಿಶೇಷ ಘಟನೆಗಳನ್ನು ವಿಡಿಯೋ ಮಾಡುವುದರ ಮೂಲಕ ವಿಡಿಯೋಗಳನ್ನು ವೈರಲ್ ಮಾಡುತ್ತಲೆ ಇರುತ್ತಾರೆ. ಈಗ ಇಲ್ಲೊಂದು ವಿಡಿಯೋ (Video) ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಆ ವೈರಲ್ ವಿಡಿಯೋದಲ್ಲಿ ಅಂತಹ ವಿಶೇಷತೆ ಏನಿತ್ತು? ಎಂಬುದರ ಬಗ್ಗೆ ಕುತೂಹಲವಿದ್ದರೆ ಮುಂದೆ ಓದಿ.


ತಾಯಿ ನಾಯಿ ಮತ್ತು ಮರಿಗಳ ನಡುವಿನ ಅವಿನಾಭಾವ ಸಂಬಂಧ
ಒಂದು ಮಗುವಿನ ಸಂಪೂರ್ಣ ಜವಬ್ದಾರಿ ಯಾರದು ಹೇಳಿ ನೋಡೋಣ? ಮತ್ಯಾರು ಅಂತೀರಾ? ಅದರ ಷೋಷಕರೇ ಮಗುವಿನ ಸಂಪೂರ್ಣ ಜವಬ್ದಾರಿ ಹೊರುತ್ತಾರೆ. ಅದು ಯಾವಾಗಲೂ ನಡೆದುಕೊಂಡ ಬಂದ ಸಾಮಾನ್ಯ ವಿಷಯವಾಗಿದೆ. ಮಕ್ಕಳನ್ನು ರಕ್ಷಿಸುವುದು ಎಲ್ಲ ಪೋಷಕರ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬ ಪೋಷಕರು ತಮ್ಮ ಚಿಕ್ಕಮಕ್ಕಳ ಬಗ್ಗೆ ಸಾಧ್ಯವಾದಷ್ಟು ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಮಕ್ಕಳಿಗೆ ಅಗತ್ಯವಾಗಿ ಬೇಕಾಗುವ ಎಲ್ಲವನ್ನು ಒದಗಿಸಲು ತಮ್ಮ ಎಲ್ಲ ಸಾಮರ್ಥ್ಯವನ್ನು ಸಹ ಬಳಸುತ್ತಾರೆ ಎಂಬ ಮೂಲಭೂತ ಕ್ರಮವೇ ವೈರಲ್ ಆಗಿರುವ ವಿಡಿಯೋದಲ್ಲಿ ಚಿತ್ರಣಗೊಂಡಿದೆ.ಈ ಥೀಮ್ ಅನ್ನು ಇರಿಸಿಕೊಂಡು ವಿಡಿಯೋ ಮಾಡಿದ್ದು, ಅದನ್ನು ಫೇಮಸ್ ಸೋಷಿಯಲ್ ಮೀಡಿಯಾ ಆದ ಇನ್ಸಾಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಇದಕ್ಕೆ ನೆಟ್ಟಿಗರು ಪ್ರಶಂಶೆಯ ಕಮೆಂಟ್ ಗಳನ್ನು ಹರಿದು ಬಿಡುತ್ತಿದ್ದಾರೆ. ಈ ವಿಡಿಯೋದಲ್ಲಿ ಒಂದು ನಾಯಿಯು ಕಳೆದು ಹೋಗಿರುತ್ತದೆ. ಆ ದಾರಿ ತಪ್ಪಿದ ನಾಯಿಯು ಹೇಗೆ ತನ್ನ ಸಾಕುದಾರನ ಸಂಪರ್ಕಕ್ಕೆ ಬರುತ್ತದೆ? ಮತ್ತು ಆ ನಾಯಿಯು ತನ್ನನ್ನು ಹಿಂಬಾಲಿಸಲು ಸಾಕುದಾರರಿಗೆ ಹೇಗೆ ಸಂಕೇತಿಸುತ್ತದೆ ಎಂಬುದನ್ನು ತೋರಿಸುವ ಅತ್ಯಂತ ವಿಶಿಷ್ಟವಾದ ವಿಡಿಯೋದ ಮೊದಲ ಭಾಗ ಇದರ ಮೂಲಕ ತೆರೆಯುತ್ತದೆ.


ಇದನ್ನೂ ಓದಿ: Photography: ಇರುವೆಯ ಮುಖದ ಫೋಟೋಗೆ ಸಿಕ್ತು ಮೊದಲ ಬಹುಮಾನ: ಇದು ಸಾಮಾನ್ಯ ಚಿತ್ರವಲ್ಲ!


ಆ ನಾಯಿಯು ಸಿಕ್ಕ ಮೇಲೆ ಅದು ಮನೆಗೆ ವಾಪಸ್ ಆದಾಗ ಆ ತಾಯಿ ನಾಯಿಗೋಸ್ಕರ ಸಾಕಷ್ಟು ನಾಯಿಮರಿಗಳು ಕಾಯುತ್ತಿರುವುದು ನೋಡಿ ಒಂದು ಕ್ಷಣ ವೀಕ್ಷಕರೂ ಭಾವುಕರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ವಿಡಿಯೋವನ್ನು "ನಾವೆಲ್ಲರೂ ಈ ನಾಯಿ ಮರಿಗಳಿಗೆ ಸೂಕ್ತ ಜೀವನದ ಅವಕಾಶವನ್ನು ನೀಡೋಣ. ದತ್ತು ವಿವರಗಳಿಗಾಗಿ ನನಗೆ ಡಿಎಂ ಮಾಡಿ" ಎಂಬ ಶೀರ್ಷಿಕೆಯನ್ನು ನೀಡಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಶೇಷವಾದ ವೈರಲ್ ವಿಡಿಯೋವನ್ನು ಕರಮ್ ಅಜಿತ್ ಸಿಂಗ್ (@karam_ajit) ಎಂಬ ವ್ಯಕ್ತಿ ನಾಯಿ ಮರಿ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಆದ ಇನ್ಸಾಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.


ಈ ವಿಡಿಯೋ ಎಷ್ಟೂ ಲೈಕ್ ಪಡೆದಿದೆ?
ಇದೇ ವರ್ಷ ಸೆಪ್ಟೆಂಬರ್ 28 ರಂದು ಪೋಸ್ಟ್ ಮಾಡಲಾದ ಈ ವೀಡಿಯೊ ಈಗಾಗಲೇ 52,500 ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ. ಈ ವಿಡಿಯೋ ಬಗ್ಗೆ ನೆಟ್ಟಿಗರು ಭರಪೂರ ಮೆಚ್ಚುಗೆಯನ್ನು ನೀಡುತ್ತಿದ್ದಾರೆ. ಒಬ್ಬ ಸೋಷಿಯಲ್ ಮೀಡಿಯಾ ಬಳಕೆದಾರರು "ಡ್ಯಾಮ್.. ಆ ನಾಯಿ ಮರಿಗಳು ತುಂಬಾ ಸುಂದರವಾಗಿವೆ" ಎಂದು ಕಾಮೆಂಟ್ ಮಾಡಿದ್ದಾರೆ.


ಮತ್ತೊಬ್ಬ ಬಳಕೆದಾರರು "ಈ ವಿಡಿಯೋವನ್ನು ನೋಡಿದರೆ ಗೊತ್ತಾಗುತ್ತೆ ಪ್ರಾಣಿಗಳಲ್ಲಿ ಅದೆಂಥಹ ಶುದ್ಧ ಪ್ರೀತಿ ಇರುತ್ತದೆ ಎಂದು ತಿಳಿಯುತ್ತೆ" ಎಂದು ಕಮೆಂಟ್ ಮಾಡಿದರೆ ಮತ್ತೊಬ್ಬ ಬಳಕೆದಾರರು "ಈ ವಿಡಿಯೋ ನನ್ನ ದಿನವನ್ನು ವಿಶೇಷವನ್ನಾಗಿಸಿದೆ" ಎಂದು ಕಮೆಂಟ್ ಬರೆದುಕೊಂಡಿದ್ದಾರೆ.


ಇದನ್ನೂ ಓದಿ:  Viral Video: ಅಖಾಡಕ್ಕೆ ಇಳಿದ್ರೆ ನಾನೂ ಕೂಡ ಫುಟ್‌ ಬಾಲ್ ಪ್ಲೇಯರ್! ಕ್ಯೂಟ್ ನಾಯಿಯ ಮಸ್ತ್ ಆಟದ ವಿಡಿಯೋ ನೀವೂ ನೋಡಿ


ಈಗೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ನಾಯಿ ಮರಿಗಳ ವಿಶೇಷ ವಿಡಿಯೋಗಳು ವೈರಲ್ ಆಗ್ತಿವೆ. ಅದರಲ್ಲಿ ಈ ವಿಡಿಯೋ ನಾಯಿ ತಾಯಿ ಮತ್ತು ನಾಯಿ ಮರಿಗಳ ನಡುವಿನ ಅವಿನಾಭಾವ ಸಂಬಂಧವನ್ನು ಚಿತ್ರಿಸಿರುವ ವಿಶೇಷ ವಿಡಿಯೋ ಆಗಿರುವುದರಿಂದ ನೆಟ್ಟಿಗರ ಚಪ್ಪಾಳೆ ಈ ವಿಡಿಯೋಗೆ ಸಿಕ್ಕಿದೆ.

Published by:Ashwini Prabhu
First published: